ರೋಡಿಗಿಳಿದ ಹೈಬ್ರಿಡ್ ಟೊಯೊಟಾ ಪ್ರಯಸ್; ಆರಂಭಿಕ ಬೆಲೆ ರೂ.38.96 ಲಕ್ಷ

Written By:

ಟೊಯೊಟಾ ಪ್ರಯಸ್ ನೂತನ ಆವೃತ್ತಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೈಬ್ರಿಡ್ ಪ್ರಯಸ್ ಕಾರಿನ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 38.96 ಲಕ್ಷಕ್ಕೆ ಲಭ್ಯವಿದ್ದು, ಭಾರತದಲ್ಲಿ Z8 ಮಾದರಿ ಮಾತ್ರ ಲಭ್ಯವಿದೆ.

ರೋಡಿಗಿಳಿದ ಹೈಬ್ರಿಡ್ ಟೊಯೊಟಾ ಪ್ರಯಸ್; ಆರಂಭಿಕ ಬೆಲೆ 38.96 ಲಕ್ಷ

ಆಕ್ರಣಮಕಾರಿ ಆಕಾರ ಹೊಂದಿರುವ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು, 1.8-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ವಿದ್ಯುತ್ ಚಾಲಿತ ಮೋಟಾರ್ ಹೊಂದಿರುವ ಟೊಯೊಟಾ ಪ್ರಯಸ್ 132ಬಿಎಚ್‌ಪಿ ಉತ್ಪಾದಿಸುತ್ತದೆ. ಸಿವಿಟಿ ಗೇರ್‌ಬಾಕ್ಸ್ ಹೊಂದಿರುವ ಈ ಕಾರು ಪ್ರತಿ ಲೀಟರ್‌ಗೆ 26.27ಕಿಮಿ ಮೈಲೇಜ್ ನೀಡುತ್ತದೆ.

ರೋಡಿಗಿಳಿದ ಹೈಬ್ರಿಡ್ ಟೊಯೊಟಾ ಪ್ರಯಸ್; ಆರಂಭಿಕ ಬೆಲೆ 38.96 ಲಕ್ಷ

ಟಿಎನ್‌ಜಿಎ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಹೊಂದಿರುವ 2017 ಟೊಯೊಟಾ ಪ್ರಯಸ್, ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಳಿಸಲಾಗಿದೆ. ಶಾರ್ಪ್ ಲುಕ್ ಹೊಂದಿರುವ ಪ್ರಯಸ್, ಆ್ಯಂಗುಲರ್ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಡಿಸೈನ್ ಕಾರಿನ ಅಂದವನ್ನು ಹೆಚ್ಚಿಸಿದೆ. ಅಲ್ಲದೇ ಕಾರಿನ ಮೇಲ್ಛಾವಣಿಯ ಹೊಸ ರೂಪ ಗ್ರಾಹಕರ ಗಮನಸೆಳೆಯುವಂತೆ ಮಾಡಿದೆ.

ರೋಡಿಗಿಳಿದ ಹೈಬ್ರಿಡ್ ಟೊಯೊಟಾ ಪ್ರಯಸ್; ಆರಂಭಿಕ ಬೆಲೆ 38.96 ಲಕ್ಷ

ಕಾರಿನ ಇಂಟಿರಿಯರ್ ಡಿಸೈನ್ ಅದ್ಭುತವಾಗಿದ್ದು, ಸೆಡಾನ್ ಮಾದರಿಯಲ್ಲಿ ಲೆದರ್ ತಲೆದಿಂಬು ಆಕರ್ಷಕವಾಗಿವೆ. ಕಾರಿನಲ್ಲೇ ಎಲ್ಲ ಮಾಹಿತಿ ನೀಡಬಲ್ಲ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಇದ್ದು, ಜೆಬಿಎಲ್ 10-ಸ್ಪೀಕರ್ ಆಡಿಯೋ ಹೊಂದಿದೆ. ತಲೆ ಮೇಲ್ಭಾಗದಲ್ಲಿ ಡಿಸ್‌ಪೈ ಇದ್ದು, ಹವಾನಿಯಂತ್ರಿತ ವ್ಯವಸ್ಥೆಯಿದೆ.

ರೋಡಿಗಿಳಿದ ಹೈಬ್ರಿಡ್ ಟೊಯೊಟಾ ಪ್ರಯಸ್; ಆರಂಭಿಕ ಬೆಲೆ 38.96 ಲಕ್ಷ

ನೂತನ ಪ್ರಯಸ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಕಾರಿನಲ್ಲಿ ಒಟ್ಟು 7 ಸುರಕ್ಷಾ ಏರ್‌ಬ್ಯಾಗ್‌ಗಳಿದ್ದು, ಎಬಿಎಸ್ ವ್ಯವಸ್ಥೆ ಹೊಂದಿದೆ. ಸ್ಟಾಬಿಲಿಟಿ ಕಂಟ್ರೋಲರ್ ಮತ್ತು ಟ್ರಾಕ್ಷನ್ ಕಂಟ್ರೋಲರ್ ವ್ಯವಸ್ಥೆಯಿದೆ.ಇದರಿಂದಾಗಿ ಟೊಯೊಟಾ ಪ್ರಯುಸ್ ಗ್ರಾಹಕರ ಮನಗೆಲ್ಲುವ ವಿಶ್ವಾಸ ಹೊಂದಿದೆ.

ರೋಡಿಗಿಳಿದ ಹೈಬ್ರಿಡ್ ಟೊಯೊಟಾ ಪ್ರಯಸ್; ಆರಂಭಿಕ ಬೆಲೆ 38.96 ಲಕ್ಷ

ಪರಿಸರ ಪೂರಕ ವ್ಯವಸ್ಥೆಗಳನ್ನು ಹೊಂದಿರುವ ಪ್ರಯುಸ್ ಭಾರತದಲ್ಲಿ ಜನಪ್ರಿಯತೆ ಪಡೆಯುವ ಸಾಧ್ಯತೆಗಳಿದ್ದು, ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

ಟೊಯೊಟಾ ಪ್ರಯಸ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಟೊಯೊಟಾ toyota
English summary
Fourth-Generation Toyota Prius Launched In India. The all-new Toyota Prius Hybrid sedan features a new design and a revised powertrain.
Story first published: Thursday, February 16, 2017, 11:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark