ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಮುಂಬರುವ ಬೆಳಕಿನ ಹಬ್ಬ ದೀಪಾವಳಿಗೆ ದೇಶದಲ್ಲಿ ಪ್ರಮುಖ ಎಸ್‌ಯುವಿ ಕಾರು ಮಾದರಿಗಳು ಬಿಡುಗಡೆಗೆ ಸಜ್ಜುಗೊಳ್ಳತ್ತಿದ್ದು, ಕಾರು ಪ್ರಿಯರಿಗೆ ಹಬ್ಬದ ಜೊತೆ ಹೊಸ ಕಾರುಗಳು ಮತ್ತಷ್ಚು ಖುಷಿ ನೀಡುವ ತವಕದಲ್ಲಿವೆ.

By Praveen

ಹಿಂದೂ ಸಂಪ್ರದಾಯದ ಪ್ರಕಾರ ಉತ್ಸವ ದಿನಗಳಲ್ಲಿ ಹೊಸ ವಸ್ತುಗಳ ಖರೀದಿಗೆ ಹೆಚ್ಚಿನ ಒತ್ತು ನೀಡುವ ಪರಿಪಾಠ ಇದ್ದು, ಈ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಉತ್ಪಾದನಾ ಸಂಸ್ಥೆಗಳು ಬಿಡುಗಡೆಗೊಳ್ಳಲಿರುವ ಕಾರುಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ತವಕದಲ್ಲಿವೆ.

ಈ ಹಿನ್ನೆಲೆ ದೀಪಾವಳಿಗೆ ಬಿಡುಗಡೆಗೊಳ್ಳಲಿರುವ ಪ್ರಮುಖ ಎಸ್‌ಯುವಿ ಕಾರುಗಳ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಬೆಲೆ ಮತ್ತು ವೈಶಿಷ್ಟ್ಯತೆಗಳು ಕುರಿತಾದ ಸಂಪೂರ್ಣ ವಿವರಣೆಗಳನ್ನು ಇಲ್ಲಿ ನೀಡಲಾಗಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಟಾಟಾ ನೆಕ್ಸನ್

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಟಾಟಾ ನೆಕ್ಸನ್ ಮಾದರಿಯು ದೀಪಾವಳಿಗೆ ಬಿಡುಗಡೆಗೊಳ್ಳಲಿದ್ದು, ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಹೊಸ ರೂಪ ಪಡೆದು ಗ್ರಾಹಕರ ಕೈ ಸೇರುತ್ತಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

1.5-ಲೀಟರ್ ರಿವೋಟೋರ್ಕ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದ್ದು, 6 ರಿಂದ 9 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ. ಜೊತಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಫೋರ್ಡ್ ಇಕೋ ಸ್ಪೋರ್ಟ್, ಮಹೀಂದ್ರಾ ಟಿಯುವಿ300 ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್

2016ರಲ್ಲಿ ಲಾಸ್ ಏಂಜಲೀಸ್‌ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು ಇದೀಗ ಗ್ರಾಹಕರ ಕೈ ಸೇರುತ್ತಿದ್ದು, ಉತ್ಸವ ದಿನಗಳಲ್ಲಿ ಬಿಡುಗಡೆಗೊಳ್ಳುವುದು ಖಚಿತವಾಗಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಎಂಜಿನ್

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿರುವ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಮತ್ತು ಪೆಟ್ರೋಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿವೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು ಮಾರುತಿ ಸುಜುಕಿ ವಿಟಾರಾ ಬ್ರೇಝಾ ಆವೃತ್ತಿಯ ಪ್ರತಿಸ್ಪರ್ಧಿಯಾಗಿದ್ದು, ಬೆಲೆಗಳು 6ರಿಂದ 9 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ರೆನಾಲ್ಟ್ ಕಾಪ್ಟರ್

ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಲು ಸಜ್ಜಾಗಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದೆ ಮತ್ತು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹಾಗು 1.5 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಫೋರ್ ವೀಲ್ಹ್ ಡ್ರೈವಿಂಗ್ ಸೌಲಭ್ಯ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳನ್ನು ಈ ಕಾರು ಪಡೆದುಕೊಳ್ಳಲಿದೆ ಎಂಬ ಉಹಾಪೋಹವಿದ್ದು, ಹೊಸ ಕಾರುಗಳ ಬೆಲೆಗಳು 13 ರಿಂದ 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಸ್ಕೋಡಾ ಕೋಡಿಯಾಕ್

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದನೆ ಸಂಸ್ಥೆಯಾಗಿರುವ ಸ್ಕೋಡಾ ಸಂಸ್ಥೆಯು ಈಗಾಗಲೇ ಹಲವು ಬಗೆಯ ಕಾರು ಮಾದರಿಗಳ ಉತ್ಪಾದನೆಯಲ್ಲಿ ಯಶಸ್ವಿ ಕಂಡಿದ್ದು, ಇದೀಗ ಎಸ್‌ಯುವಿ ಕೊಡಿಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಈ ಹಿನ್ನೆಲೆ ಸೆಪ್ಟೆಂಬರ್ 10ಕ್ಕೆ ಹೊಸ ಕಾರಿನ ಬಿಡುಗಡೆ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಿರುವ ಸ್ಕೋಡಾ, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೊಡಿಯಾಕ್ ಎಸ್‌ಯುವಿಯನ್ನು ಅಭಿವೃದ್ಧಿಗೊಳಿಸುವ ಮೂಲಕ 25ರಿಂದ 30 ಲಕ್ಷಕ್ಕೆ ಬೆಲೆ ನಿಗದಿಗೊಳಿಸಲಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಆಡಿ ಕ್ಯೂ5

ಐಷಾರಾಮಿ ಎಸ್‌ಯುವಿಗಳಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಆಡಿ ಕ್ಯೂ5 ದೀಪಾವಳಿ ಉತ್ಸವ ಮುನ್ನ ಬಿಡುಗಡೆಯಾಗಿದ್ದು, 2ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರನ್ನು ಅಭಿವೃದ್ಧಿಗೊಳಿಸಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಹೀಗಾಗಿ ಹೊಸ ಕಾರು 45 ರಿಂದ 50 ಲಕ್ಷಕ್ಕೆ ಲಭ್ಯವಾಗುವ ನೀರಿಕ್ಷೆಗಳಿದ್ದು, ಬೆಂಝ್ ಜಿಎಲ್‌ಸಿ, ಬಿಎಂಡಬ್ಲ್ಯು ಎಕ್ಸ್3, ವೊಲ್ವೋ ಎಕ್ಸ್‌ಸಿ60 ಮಾದರಿಗಳನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಹೊಸ ಕಾರುನ್ನು ಉತ್ಪಾದನೆ ಮಾಡಲಾಗಿದೆ.

ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ ಹೊಸ ಮಾದರಿಯ ಎಸ್‌ಯುವಿ ಕಾರುಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಮುಖ ಸುದ್ಧಿ ಮೂಲಗಳ ಪ್ರಕಾರ ಮೇಲೆ ನೀಡಲಾಗಿರುವ ಪ್ರಮುಖ ಎಸ್‌ಯುವಿ ಕಾರುಗಳು ಸೆಪ್ಟೆಂಬರ್ ಅಂತ್ಯದಲ್ಲಿ ಮತ್ತು ಅಕ್ಟೋಬರ್ ಪ್ರಾರಂಭದಲ್ಲಿ ಬಿಡುಗಡೆಯಾಗಲಿದ್ದು, ದೀಪಾವಳಿ ಸಂಭ್ರಮಾಚರಣೆಯಲ್ಲಿ ಖರೀದಿಗೆ ಲಭ್ಯವಿರುವುದರಲ್ಲಿ ಯಾವುದೇ ಸಂದೇಹವಿಲ್ಲ.

Most Read Articles

Kannada
English summary
Read in Kannada about 2017 Upcoming Cars & SUVs In India During Diwali.
Story first published: Tuesday, September 5, 2017, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X