ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

Written By:

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ವರ್ಷ ಟಿಗ್ವಾನ್ ಎಸ್‌ಯುವಿ ಕಾರಿನ ಜೊತೆ ಈ ಹೊಸ ಸೆಡಾನ್ ಕಾರಿನ ಪರಿಚಯದೊಂದಿಗೆ ಫೋಕ್ಸ್‌ವ್ಯಾಗನ್ ಭಾರತದಲ್ಲಿ ಎರಡು ಪ್ರಮುಖ ಕಾರುಗಳನ್ನು ಉಡಾವಣೆ ಮಾಡಿದೆ ಎನ್ನಬಹುದು.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಪಸಾಟ್ ಕಾರು ಭಾರತದಲ್ಲಿ ಕೇವಲ ಡೀಸೆಲ್ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ ಮತ್ತು ಕಂಫರ್ಟ್‌ಲೈನ್ & ಹೈಲೈನ್ ಎಂಬ ಎರಡು ಟ್ರಿಮ್ ಆಯ್ಕೆಯಲ್ಲಿ ಈ ಸೆಡಾನ್ ಮಾರಾಟ ಮಾಡಲಾಗುತ್ತಿದೆ. ಈ ಹೊಚ್ಚ ಹೊಸ ಫೋಕ್ಸ್‌ವ್ಯಾಗನ್ ಪಸಾಟ್ ಕಾರು ರೂ. 29.99 ಲಕ್ಷ ಎಕ್ಸ್ ಶೋರೂಂ(ಇಂಡಿಯಾ)ಬೆಲೆಯಲ್ಲಿ ಲಭ್ಯವಿದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಹೊಸ ಫೋಕ್ಸ್‌ವ್ಯಾಗನ್ ಪಸಾಟ್, 4,767 ಮಿ.ಮೀ ಉದ್ದವಾಗಿದೆ, 1,832 ಮಿ.ಮೀ ಅಗಲವಾಗಿದೆ ಮತ್ತು 1,456 ಮಿ.ಮೀ ಎತ್ತರವಾಗಿದೆ ಹಾಗು ಪಸಾಟ್ ಕಾರಿನ ವೀಲ್ ಬೇಸ್ 2,786 ಮಿ.ಮೀ ಉದ್ದವಾಗಿದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

2017 ಫೋಕ್ಸ್‌ವ್ಯಾಗನ್ ಪಸಾಟ್ ಕಾರು 2.0 ಲೀಟರ್ ಟರ್ಬೊಚಾರ್ಜ್ಡ್ ಡೀಸಲ್ ಎಂಜಿನ್ ಆಯ್ಕೆ ಹೊಂದಿದ್ದು, ಈ ಎಂಜಿನ್ 3,600-4,000 ಆರ್‌ಪಿಎಂನಲ್ಲಿ 174.5 ಬಿಎಚ್‍ಪಿ ಮತ್ತು 1,500-3,500 ಆರ್‌ಪಿಎಂನಲ್ಲಿ 350 ಎನ್ಎಂ ಟಾರ್ಕ್‌ ಉತ್ಪಾದಿಸುತ್ತದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಫೋಕ್ಸ್‌ವ್ಯಾಗನ್ ಪಸಾಟ್ ಕಾರಿನ ಎಂಜಿನ್ 6 ಸ್ಪೀಡ್ ಡಿಎಸ್‌ಜಿ ಡುಯಲ್ ಕ್ಲಚ್ ಸ್ವಯಂಚಾಲಿತ ಗೇರ್ ಬಾಕ್ಸ್‌ನೊಂದಿಗೆ ಸಂಯೋಜಿತವಾಗಿದೆ ಮತ್ತು ಲಿಟರಿಗೆ 17.42 ಕಿಲೋಮೀಟರ್ ಮೈಲೇಜ್ ಹಿಂತಿರುಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಎಲೆಕ್ಟ್ರಾನಿಕ್ ಚಾಲಿತ ಹಿಂಬದಿಯ ಬೂಟ್ ಜಾಗದಲ್ಲಿ 586 ಲೀಟರಿನಷ್ಟು ಶೇಖರಣಾ ಪ್ರಮಾಣವನ್ನು ಈ ಕಾರು ಹೊಂದಿದೆ ಹಾಗು ಹಿಂಬದಿಯ ಸೀಟುಗಳನ್ನು ಮುಚ್ಚುವ ಮೂಲಕ ಈ ಸ್ಥಳವನ್ನು 1,152 ಲೀಟರ್‌ಗಳಿಗೆ ವಿಸ್ತರಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ನೂತನ ಫೋಕ್ಸ್‌ವ್ಯಾಗನ್ ಪಸಾಟ್ ಕಾರು ಹೆಚ್ಚು ತೀಕ್ಷ್ಣ ಮತ್ತು ಆಕ್ರಮಣಕಾರಿಯಾಗಿದೆ ಮತ್ತು ಸಮಗ್ರ ಡಿಎಲ್ಆರ್‌ಗಳು ಮತ್ತು ನಯಗೊಳಿಸಿದ ಎಲ್ಇಡಿ ಹೆಡ್ ಲೈಟ್‌ಗಳು ಟ್ರಿಪಲ್ ಸ್ಲ್ಯಾಟ್ ಮುಂಭಾಗದ ಗ್ರಿಲ್ಲನ್ನು ಸುತ್ತುವರೆದಿವೆ ಹಾಗು ಎರಡೂ ಬದಿಯಲ್ಲಿ ಕ್ರೋಮ್ ಸರೌಂಡ್‌ನೊಂದಿಗೆ ಫಾಗ್ ದೀಪಗಳನ್ನು ಮುಂಭಾಗದ ಬಂಪರ್ ಒಳಗೊಂಡಿದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಪಸಾಟ್ ಕಾರಿನ ಒಳಗೆ, ಕಪ್ಪು ಬಣ್ಣ ಪಡೆದ ಚರ್ಮದ ಆವರಣವನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳು ಪೈನ್ ಅಥವಾ ಬೂದಿ ಮರದಲ್ಲಿ ನಿರ್ಮಾಣ ಮಾಡಲಾದ ಅಲಂಕಾರಿಕ ಆಯ್ಕೆಗಳನ್ನು ಒಳಗೊಂಡಿದ್ದು, ಇದು ಕಾರಿಗೆ ಪ್ರೀಮಿಯಂ ನೋಟ ನೀಡುವಲ್ಲಿ ಸಫಲವಾಗಿದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಪಸಾಟ್ ಕಾರು, 12.3-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಬ್ಲೂಟೂತ್‌ನಂತಹ ಸಂಪರ್ಕ ಆಯ್ಕೆಗಳನ್ನು ಪಡೆದ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆತಿಥ್ಯವನ್ನು ಹೊಂದಿದೆ ಮತ್ತು ಪಾರ್ಕಿಂಗ್ ಕ್ಯಾಮರಾ ಸೌಲಭ್ಯ ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಈ ಕಾರಿನ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ದೊಡ್ಡದಾದ ಪನೋರಮಿಕ್ ಸನ್ರೂಫ್, 3-ವಲಯದಲ್ಲಿ ಹವಾಮಾನ ನಿಯಂತ್ರಣ, ಮೆಮೊರಿ ಕಾರ್ಯ ಪಡೆದ ಮುಂಭಾಗದ ಆಸನಗಳು, ಎಲೆಕ್ಟ್ರಾನಿಕ್ ಸಹಾಯದಿಂದ ಹೊಂದಾಣಿಕೆ ಮಾಡಬಹುದಾದ ಚಾಲಕನ ಆಸನವನ್ನು ಈ ಕಾರು ಪಡೆಯುತ್ತದೆ.

ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಸುರಕ್ಷತೆಯ ವಿಷಯದಲ್ಲಿ, ಹೊಸ ವಿಡಬ್ಲ್ಯೂ ಪಸಾಟ್ ಕಾರಿನಲ್ಲಿ ಒಂಬತ್ತು ಗಾಳಿಚೀಲಗಳು, ಎಬಿಎಸ್, ಎಎಸ್ಆರ್ ಮತ್ತು ಇಡಿಎಲ್‌ ಜೊತೆ ಹಿಲ್ ಸ್ಟಾರ್ಟ್ ಅಸಿಸ್ಟೆನ್ಸ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ.

Volkswagen Launches Tenth Anniversary Special Editions | In Malayalam - DriveSpark മലയാളം
ಫೋಕ್ಸ್‌ವ್ಯಾಗನ್ ಪಸಾಟ್ ಭಾರತದಲ್ಲಿ ಬಿಡುಗಡೆ: ಬೆಲೆ ರೂ. 29.99 ಲಕ್ಷ

ಹೊಸ ಫೋಕ್ಸ್‌ವ್ಯಾಗನ್ ಪಸಾಟ್ ವೈಶಿಷ್ಟ್ಯಗಳ ಜೊತೆ ಸ್ಪರ್ದಾತ್ಮಕ ಬೆಲೆಯಲ್ಲಿ ಬಿಡುಗಡೆಗೊಂಡಿದ್ದು, ಇದು ಹೋಂಡಾ ಅಕಾರ್ಡ್, ಟೊಯೊಟಾ ಕ್ಯಾಮ್ರಿ ಮತ್ತು ಸ್ಕೋಡಾ ಸುಪರ್ಬ್ ನಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

English summary
Volkswagen Passat launched in India. Prices for the new Volkswagen Passat start at an introductory price of Rs 29.99 lakh ex-showroom (India) and the new sedan is the second major launch from VW in India this year after the Tiguan SUV.
Story first published: Tuesday, October 10, 2017, 15:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark