ಫೆಕ್ಸ್-ಫ್ಯೂಲ್ ವಾಹನಗಳ ಅಭಿವೃದ್ಧಿಗೆ ಕೈಜೋಡಿಸಿದ ವೊಲ್ವೋ ಮತ್ತು ಫೋಕ್ಸ್‌ವ್ಯಾಗನ್..!

Written By:

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ಗೆ ಪರ್ಯಾಯವಾಗಿ ಎಥಾನಲ್ ಮತ್ತು ಮೆಥಾನಲ್‌ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆಗೆ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆಗಳಾದ ವೊಲ್ವೋ ಮತ್ತು ಫೋಕ್ಸ್‌ವ್ಯಾಗನ್ ಕೈಜೋಡಿಸಿವೆ.

To Follow DriveSpark On Facebook, Click The Like Button
ಫೆಕ್ಸ್-ಫ್ಯೂಲ್ ವಾಹನ ಅಭಿವೃದ್ಧಿ ಮಾಡಲಿವೆ ವೊಲ್ವೋ-ಫೋಕ್ಸ್‌ವ್ಯಾಗನ್

ಎಥನಾಲ್ ಮತ್ತು ಮೆಥಾನಲ್ ಬಳಕೆ ಮಾಡುವ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ಬಳಕೆ ತಗ್ಗಿಸಲು ಹೊಸ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರವು ವಿನೂತನ ರೀತಿಯ ಸಾರಿಗೆ ಬಸ್‌ಗಳನ್ನು ಪರಿಚಯಿಸಲಿದೆ.

ಫೆಕ್ಸ್-ಫ್ಯೂಲ್ ವಾಹನ ಅಭಿವೃದ್ಧಿ ಮಾಡಲಿವೆ ವೊಲ್ವೋ-ಫೋಕ್ಸ್‌ವ್ಯಾಗನ್

ಈ ಹಿನ್ನೆಲೆ ಮಹತ್ವದ ಯೋಜನೆ ಸಿದ್ಧಪಡಿಸಿರುವ ಕೇಂದ್ರ ಭೂ ಸಾರಿಗೆ ಇಲಾಖೆಯು ವೊಲ್ಪೋ ಮತ್ತು ಫೋಕ್ಸ್‌ವ್ಯಾಗನ್ ಜೊತೆ ಚರ್ಚೆ ನಡೆಸಿದ್ದು, ಬೃಹತ್ ಯೋಜನೆಗೆ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ.

ಫೆಕ್ಸ್-ಫ್ಯೂಲ್ ವಾಹನ ಅಭಿವೃದ್ಧಿ ಮಾಡಲಿವೆ ವೊಲ್ವೋ-ಫೋಕ್ಸ್‌ವ್ಯಾಗನ್

ಈ ಬಗ್ಗೆ ಮಾತನಾಡಿರುವ ಸಚಿವ ನೀತಿನ್‌ ಗಡ್ಕರಿ, ಮುಂಬರುವ ದಿನಗಳಲ್ಲಿ ವೊಲ್ಪೋ ಮತ್ತು ಫೋಕ್ಸ್‌ವ್ಯಾಗನ್ ನೇತೃತ್ವದಲ್ಲಿ ಎಥಾನಲ್ ಮತ್ತು ಮೆಥಾನಲ್ ಅನಿಲ ಉಪಯೋಗಿಸಬಹುದಾದ ಬಸ್ ಮಾದರಿಗಳು ಬಿಡುಗಡೆಯಾಗಲಿವೆ ಎಂದಿದ್ದಾರೆ.

ಫೆಕ್ಸ್-ಫ್ಯೂಲ್ ವಾಹನ ಅಭಿವೃದ್ಧಿ ಮಾಡಲಿವೆ ವೊಲ್ವೋ-ಫೋಕ್ಸ್‌ವ್ಯಾಗನ್

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಮುಂಬೈ ಮತ್ತು ಪುಣೆ ನಡುವೆ 50 ವಿನೂತನ ಬಸ್‌ಗಳು ಎಥಾನಲ್ ಮತ್ತು ಮೆಥಾನಲ್ ಅನಿಲ ಬಳಕೆಯೊಂದಿಗೆ ಸೇವೆ ಆರಂಭಿಸಿದ್ದು, ಇದಕ್ಕಾಗಿ 100 ಕೋಟಿ ಖರ್ಚು ಮಾಡಲಾಗುತ್ತಿದೆ.

ಫೆಕ್ಸ್-ಫ್ಯೂಲ್ ವಾಹನ ಅಭಿವೃದ್ಧಿ ಮಾಡಲಿವೆ ವೊಲ್ವೋ-ಫೋಕ್ಸ್‌ವ್ಯಾಗನ್

ಇನ್ನು ಎಥಾನಲ್ ಮತ್ತು ಮೆಥಾನಲ್ ಅನಿಲ ಬಳಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅತಿಯಾದ ಅವಲಂಬನೆ ತಗ್ಗಲಿದ್ದು, ವೊಲ್ಪೋ ಮತ್ತು ಫೋಕ್ಸ್‌ವ್ಯಾಗನ್ ಅಭಿವೃದ್ಧಿ ಪಡಿಸುವ ವಾಹನಗಳು ಭಾರತದಲ್ಲಿ ಜನಪ್ರಿಯತೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Volvo And Volkswagen Ready To Provide Flex-Fuel Vehicles.
Story first published: Thursday, June 29, 2017, 18:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark