ಬೆಂಗಳೂರಿನಲ್ಲಿ ಅಭಿವೃದ್ಧಿಯಾದ ವೊಲ್ವೋ ಮೊದಲ 'ಮೇಡ್ ಇನ್ ಇಂಡಿಯಾ' ಎಕ್ಸ್‌ಸಿ90

Written By:

ಸ್ವೀಡಿಷ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ವೊಲ್ವೊ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಯೋಜನೆ ಅಡಿ ಹೊಸ ಕಾರನ್ನು ಉತ್ಪಾದನೆ ಮಾಡಿದ್ದು, ಹಲವು ವಿಶೇಷತೆ ಕಾರಣವಾಗಿದೆ.

To Follow DriveSpark On Facebook, Click The Like Button
 ಖರೀದಿಗೆ ಲಭ್ಯವಾದ ವೊಲ್ವೋ ಮೊದಲ ಸ್ವದೇಶಿ ಉತ್ಪಾದನಾ ಕಾರು

ಇತ್ತೀಚೆಗೆ ಎಲ್ಲ ಪ್ರಮುಖ ಐಷಾರಾಮಿ ಕಾರುಗಳ ಉತ್ಪಾದನೆಯೂ ದೇಶಿಯ ಮಾರುಕಟ್ಟೆಯಲ್ಲೇ ಅಭಿವೃದ್ಧಿಗೊಳ್ಳುತ್ತಿದ್ದು, ಇದೀಗ ವೊಲ್ವೊ ಸಂಸ್ಥೆಯು ಕೂಡಾ ಬೆಂಗಳೂರಿನ ವೊಲ್ವೊ ಉತ್ಪಾದನಾ ಘಟಕದಲ್ಲಿ ತನ್ನ ಜನಪ್ರಿಯ ಕಾರು ಮಾದರಿ ಎಕ್ಸ್‌ಸಿ90 ಅಭಿವೃದ್ಧಿಗೊಳಿಸಿದೆ.

 ಖರೀದಿಗೆ ಲಭ್ಯವಾದ ವೊಲ್ವೋ ಮೊದಲ ಸ್ವದೇಶಿ ಉತ್ಪಾದನಾ ಕಾರು

ಇದುವರೆಗೆ ಎಂಜಿನ್ ಮತ್ತು ಬಹುತೇಕ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಜೋಡಣೆ ಕಾರ್ಯ ಮಾಡಿ ಮಾರಾಟ ಮಾಡುತ್ತಿದ್ದ ವೊಲ್ವೋ, ಇದೀಗ ಪೂರ್ಣ ಪ್ರಮಾಣದಲ್ಲಿ ಸ್ಪದೇಶಿ ಬಿಡಿಭಾಗಗಳನ್ನೇ ಉಪಯೋಗಿಸಿ ತನ್ನ ಕಾರುಗಳನ್ನು ಉತ್ಪಾದನೆ ಮಾಡಲಿದೆ.

 ಖರೀದಿಗೆ ಲಭ್ಯವಾದ ವೊಲ್ವೋ ಮೊದಲ ಸ್ವದೇಶಿ ಉತ್ಪಾದನಾ ಕಾರು

'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಭಾಗವಾಗಿ ಇಂತದೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿರುವ ವೊಲ್ವೋ ಸಂಸ್ಧೆಯು, ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಿಮಿಯಂ ಐಷಾರಾಮಿ ಕಾರುಗಳ ಮಾರಾಟ ಹೆಚ್ಚಿಸಲು ಹೊಸ ತಂತ್ರಗಳನ್ನು ಅನುಸರಿಸುತ್ತಿದೆ.

 ಖರೀದಿಗೆ ಲಭ್ಯವಾದ ವೊಲ್ವೋ ಮೊದಲ ಸ್ವದೇಶಿ ಉತ್ಪಾದನಾ ಕಾರು

ಸದ್ಯ ಭಾರತದಲ್ಲಿ ಕೆಲವ ಒಂದೇ ಒಂದು ಉತ್ಪಾದನಾ ಘಟಕವನ್ನು ಹೊಂದಿರುವ ವೊಲ್ವೋ ಸಂಸ್ಧೆಯು ಟ್ರಕ್ ಉತ್ಪಾದನಾ ಘಟಕದಲ್ಲೇ ಎಕ್ಸ್‌ಸಿ90 ಕಾರನ್ನು ಅಭಿವೃದ್ಧಿಗೊಳಿಸಿದ್ದು, ಈ ಬಗ್ಗೆ ನಿನ್ನೆಯಷ್ಟೇ ಮಾಧ್ಯಮ ಪ್ರಕಟನೆ ಕೂಡಾ ಹೊರಡಿಸಿದೆ.

 ಖರೀದಿಗೆ ಲಭ್ಯವಾದ ವೊಲ್ವೋ ಮೊದಲ ಸ್ವದೇಶಿ ಉತ್ಪಾದನಾ ಕಾರು

ಇನ್ನು ವೊಲ್ವೋ ಕೈಗೆತ್ತಿಕೊಂಡಿರುವ ಮೇಕ್ ಇನ್ ಇಂಡಿಯಾ ಯೋಜನೆಯಿಂದ ಗ್ರಾಹಕರಿಗೆ ಲಾಭವಾಗಲಿದ್ದು, ಸ್ಪದೇಶಿ ತಂತ್ರಜ್ಞಾನ ಮತ್ತು ಬಿಡಿಭಾಗಗಳ ಬಳಕೆಯಿಂದ ಬೆಲೆಗಳು ಕಡಿಮೆಯಾಗುವುದಲ್ಲದೇ ಉದ್ಯೋಗ ಪ್ರಮಾಣವು ಕೂಡಾ ಹೆಚ್ಚುವ ನೀರಿಕ್ಷೆಯಿದೆ.

 ಖರೀದಿಗೆ ಲಭ್ಯವಾದ ವೊಲ್ವೋ ಮೊದಲ ಸ್ವದೇಶಿ ಉತ್ಪಾದನಾ ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವೊಲ್ವೋ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಯಶಸ್ವಿ ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಇದೀಗ ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ತನ್ನ ಉತ್ಪನ್ನ ಮತ್ತಷ್ಟು ಜನಪ್ರಿಯಗೊಳಿಸುವ ತವಕದಲ್ಲಿದೆ.

Read more on ವೊಲ್ವೋ volvo
English summary
Read in Kannada about Volvo Rolls Out First ‘Made In India’ XC90 From Bangalore Plant.
Story first published: Wednesday, October 11, 2017, 13:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark