ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆ ಬಿಎಮ್‍‍ಡಬ್ಲ್ಯೂ ಒಡೆತನದ ಮಿನಿ ತನ್ನ ಹೊಸ ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆ ಬಿಎಮ್‍‍ಡಬ್ಲ್ಯೂ ಒಡೆತನದ ಮಿನಿ ತನ್ನ ಹೊಸ ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದೆ. 3 ಮತ್ತು 5 ಬಾಗಿಲುಗಳನ್ನೊಳಗೊಂಡ 4 ವೇರಿಂಯಂಟ್‍‍ಗಳಲ್ಲಿ ಈ ಕಾರುಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಮಿನಿ ಸಂಸ್ಥೆಯು ತಮ್ಮ ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳು ಮಿನಿ 3-ಡೋರ್ ಕೂಪರ್3, ಮಿನಿ 3-ಡೋರ್ ಕೂಪರ್ ಎಸ್, ಮಿನಿ 5-ಡೋರ್ ಕೂಪರ್ ಡಿ ಮತ್ತು ಮಿನಿ ಕನ್ವರ್ಟಿಬಲ್ ಕೂಪರ್ ಎಸ್ ಎಂಬ ನಾಲ್ಕು ವೇರಿಯಂಟ್‍‍ನಲ್ಲಿ ದೊರೆಯುತ್ತಿದ್ದು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 29.70 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..
Variant Price
3-door Cooper D (Diesel) ₹29,70,000
3-door Cooper S (Petrol) ₹33,20,000
5-door Cooper D (Diesel) ₹35,00,000
Convertible Cooper S (Petrol) ₹37,10,000
ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಕಾರುಗಳು ಸೋಲಾರಿಸ್ ಆರೆಂಜ್, ಎಮರಲ್ಡ್ ಗ್ರೇ, ಸ್ಟಾರ್‍‍ಲೈಟ್ ಬ್ಲೂ, ವೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲೂ, ಮೆಲ್ಟಿಂಗ್ ಸಿಲ್ವರ್, ಮಿಡ್‍‍ನೈಟ್ ಬ್ಲಾಕ್, ಪೆಪ್ಪರ್ ವೈಟ್, ಚಿಲ್ಲಿ ರೆಡ್, ಬಿಟಿಶ್ ರೇಸಿಂಗ್ ಗ್ರೀನ್, ಮೂನ್‍‍ವಾಲ್ಕ್ ಗ್ರೇ, ಕೆರಿಬಿಯನ್ ಆಕ್ವಾ, ಥಂಡರ್ ಗ್ರೇ ಮತ್ತು ಲಗ್ಷುರಿ ಬ್ಲೂ ಎಂಬ 14 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಇನ್ನು ಮಿನಿ ಕೂಪರ್ ಎಸ್ ವೇರಿಯಂಟ್‍‍ಗಳು ಎಲ್ಇಡಿ ಹೆಡ್‍‍ಲೈಟ್, ರಿಯರ್ ಲೈಟ್ಸ್ ಮತ್ತು ರೇಡಿಯೇಟರ್ ಗ್ರಿಲ್‍‍ಗಳನ್ನು ವಿಶೇಷವಾಗಿ ಕಪ್ಪು ಬಣ್ಣದಲ್ಲಿ ಸಜ್ಜುಗೊಳಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

2018ರ ಮಿನಿ ಕೂಪರ್ ಕಾರುಗಳಲ್ಲಿ ಎಲ್ಇಡಿ ಹೆಡ್‍‍ಲೈಟ್‍‍ಗಳನ್ನು ಮರುವಿನ್ಯಾಸಗೊಳಿಸಲಾಗಿದ್ದು, ಹೊಸ ಲೆನ್ಸ್ ಡಿಸೈನ್ ಮತ್ತು ಎಲ್ಇಡಿ ಡಿಆರ್‍ಎಲ್ ಹಾಗು ಎಲ್ಇಡಿ ಇಂಡಿಕೇಟರ್‍‍ಗಳನ್ನು ಪಡೆದುಕೊಂಡಿವೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಮಿನಿ ಸಂಸ್ಥೆಯ ಲೋಗೊವನ್ನು ಎಲ್ಲಾ ವೇರಿಂಟ್ ಕಾರುಗಳ ಬೋನೆಟ್, ಟೈಲ್‍‍ಗೇಟ್, ಸ್ಟೀರಿಂಗ್ ವೀಲ್, ಸೆಂಟ್ರಲ್ ಇನ್ಸ್ಟ್ರೂಮೆಂಟ್ ಡಿಸ್ಪ್ಲೆ ಮತ್ತು ರಿಮೊಟ್ ಕಂಟ್ರೋಲ್‍‍ಗಳ ಮೇಲೆ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ವೈಶಿಷ್ಟ್ಯತೆಗಳು

ಮಿನಿ ಫೇಸ್‍‍ಲಿಫ್ಟ್ ಕಾರುಗಳಲ್ಲಿ 8.8 ಇಂಚಿನ ಟಚ್‍‍ಪ್ಯಾಡ್ ಕಂಟ್ರೋಲರ್‍, ಮಿನಿ ಫೈನ್ಡ್ ಮೇಟ್, ನ್ಯಾವಿಗೇಶನ್ ಸಿಸ್ಟಂ ಪ್ರೊಫೆಶನಲ್, ಮಿನಿ ಕನೆಕ್ಟೆಡ್ ಎಕ್ಸ್ಎಲ್, ವೈರ್‍‍ಲೆಸ್ ಚಾರ್ಜರ್‍‍ನೊಂದಿಗೆ ಟೆಲಿಫೋನಿ ಮತ್ತುಬ್ ಯುಎಸ್‍ಬಿ ಎಮ್ಟರ್‍‍ಫೇಸ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಎಂಜಿನ್ ಸಾಮರ್ಥ್ಯ

ಮಿನಿ 3 ಡೋರ್ ಕೂಪರ್ ಎಸ್ ಮತ್ತು ಕನ್ವರ್ಟಿಬಲ್ ಎಸ್ ಕಾರುಗಳು 2.0 ಲೀಟರ್ 4 ಸಿಲೆಂಡರ್ ಮಿನಿ ಟ್ವಿನ್‍ಪವರ್ ಟರ್ಬೋ ಪೆಟ್ರೋಲ್ ಎಂಜಿನ್ ಸಹಾಯದಿಂದ 192 ಬಿಹೆಚ್‍‍ಪಿ ಮತ್ತು 280ಎನ್ಎಂ ಟಾರ್ಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಇನ್ನು ಮಿನಿ 3 ಡೋರ್ ಕೂಪರ್ ಡಿ ಮತ್ತು 5 ಡೋರ್ ಕೂಪರ್‍ ಕಾರುಗಳು 1.5 ಲೀಟರ್ 3 ಸಿಲೆಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 114ಬಿಹೆಚ್‍‍ಪಿ ಮತ್ತು 270ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳು ಸ್ಟ್ಯಾಂಡರ್ಡ್, ಗ್ರೀನ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‍‍ಗಳನ್ನು ಪಡೆದಿದ್ದು, ಪೆಟ್ರೋಲ್ ವೇರಂಟ್‍‍ನ ಕಾರುಗಳು ಪ್ರತಿ ಗಂಟೆಗೆ 235 ಕಿಲೋಮೀಟರ್ ಟಾಪ್ ಸ್ಪೀಡ್ ಹೊಂದಿದ್ದರೆ ಇನ್ನು ಡೀಸೆಲ್ ವೇರಿಯಂಟ್ ಕಾರುಗಳು ಪ್ರತಿ ಗಂಟೆಗೆ 205 ಕಿಲೋಮೀಟರ್ ವೇಗದ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿವೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಪ್ರಯಾಣಿಕರ ಸುರಕ್ಷತೆಗಾಗಿ ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಫ್ರಂಟ್ ಮತ್ತು ಪ್ಯಾಸೆಂಜರ್ ಏರ್‍‍ಬ್ಯಾಗ್ಸ್, ಬ್ರೇಕ್ ಅಸ್ಸಿಸ್ಟ್, 3 ಪಾಯಿಂಟ್ ಸೀಟ್ ಬೆಲ್ಟ್ಸ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರಾಷ್ ಕಂಟ್ರೋಲ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್, ರನ್-ಫ್ಲ್ಯಾಟ್ ಟೈರ್‍‍ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಿನಿ ಕೂಪರ್ ಫೇಸ್‍ಲಿಫ್ಟ್ ಕಾರುಗಳು..

ಹತ್ತುಹಲವು ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಂಡ ಮಿನಿ ಕೂಪರ್ ಫೇಸ್‍‍ಲಿಫ್ಟ್ ಕಾರುಗಳು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರ್ಸಿಡಿಸ್ ಎ ಕ್ಲಾಸ್ ಮತ್ತು ವೋಲ್ವೊ ವಿ40 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
2018 Mini Cooper facelift launched at Rs 29.70 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X