ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಕಳೆದ 2 ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿರುವ ಹ್ಯುಂಡೈ ಮೋಟಾರ್ ಇಂಡಿಯಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸುತ್ತಿದೆ.

By Rahul Ts

ಕಳೆದ 2 ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿರುವ ಹ್ಯುಂಡೈ ಮೋಟಾರ್ ಇಂಡಿಯಾ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸುತ್ತಿದ್ದು, ಬಿಡುಗಡೆಯಾಗಲಿರುವ 9 ಕಾರುಗಳು ಯಾವವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಸ್ಯಾಂಟ್ರೋ

ಈ ಹಿಂದಿನಿಂದಲೇ ತನ್ನ ಸ್ಯಾಂಟ್ರೋ ಮೂಲಕ ಜನಪ್ರಿಯತೆ ಸಾಧಿಸಿರುವ ಹ್ಯುಂಡೈ ಇದೀಗ ಸ್ಯಾಂಟ್ರೋ ಫೇಸ್‌ಲಿಫ್ಟ್ ಹೊರತರುತ್ತಿದ್ದು ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗೊಳ್ಳಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಐ10 ಕಾರಿನ ಪ್ಲಾಟ್‍ಫಾರ್ಮ್ ಅಡಿ ಅಭಿವೃದ್ಧಿಯಾಗುತ್ತಿರುವ ಸ್ಯಾಂಟ್ರೋ ಫೇಸ್‌ಲಿಫ್ಟ್‌ಗಳು ಹೊಸದಾಗಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಸಂಸ್ಥೆಯಲ್ಲಿ ಮೊದಲ ಬಾರಿಗೆ ಎಎಮ್‍ಟಿ ಆಯ್ಕೆಯನ್ನು ಪಡೆಯುವ ಕಾರು ಇದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಕಾರ್ಲಿನೊ ಕಾಂಪ್ಯಾಕ್ಟ್ ಎಸ್‍ಯುವಿ

ಹ್ಯುಂಡೈ ಸಂಸ್ಥೆಯ ಮತ್ತೊಂದು ಹೊಸ ಕಾರು ಕಾರ್ಲಿನೊ ಕಾಂಪ್ಯಾಕ್ಟ್ ಎಸ್‍ಯುವಿ ಬಗ್ಗೆ ಮಾಹಿತಿಯು ಸೋರಿಕೆಯಾಗಿದ್ದು, ಮೊದಲ ಬಾರಿಗೆ ಈ ಕಾರು 2016ರ ಆಟೋ ಎಕ್ಸ್ ಪೋನಲ್ಲಿ ಪರಿಕಲ್ಪನೆಯನ್ನು ಪ್ರದರ್ಶಿಸಲಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಒಂದು ವೇಳೆ ನಿಗದಿತ ಅವಧಿಯಲ್ಲಿ ಈ ಕಾರು ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುತಿ ವಿಟಾರ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಕ್ರೆಟಾ ಫೇಸ್‍ಲಿಫ್ಟ್

ಈಗಾಗಲೇ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿರುವ ಕ್ರೆಟಾ ಕಾರುಗಳು ಫೇಸ್‍ಲಿಫ್ಟ್ ಆವೃತ್ತಿಯೊಂದಿಗೆ ಮರುಬಿಡುಗಡೆಯಾಗುತ್ತಿದ್ದು, ಹಳೆಯ ಮಾದರಿಗಿಂತ ಸಾಕಷ್ಟು ಭಿನ್ನವಾಗಿವೆ ಎನ್ನಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಮುಂಭಾಗದಲ್ಲಿ ಹೊಸ ವಿನ್ಯಾಸ, ಎವಿಎನ್ ಡಿಸ್ಪ್ಲೇ ಮತ್ತು ಎಲೆಕ್ಟ್ರಿಕ್ ಸನ್‍ರೂಫ್ ಅನ್ನು ಪಡೆಯಲಿದ್ದು, ತನ್ನ ಹಿಂದಿನ ಮಾದರಿಯ ಎಂಜಿನ್ ಸಾಮರ್ಥ್ಯವನ್ನೇ ಮುಂದುವರಿಸುವ ಮೂಲಕ ಇಂಧನ ದಕ್ಷತೆಗೆ ಒತ್ತು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಹೊಸ ಗ್ರ್ಯಾಂಡ್ ಐ10

ಭಾರತೀಯ ಮಾರುಕಟ್ಟೆಯಲ್ಲಿ ಐ10 ಬಿಡುಗಡೆ ನಂತರ ಹೆಚ್ಚು ಸದ್ದು ಮಾಡಿತ್ತು. ಈಗ ಸ್ವಿಫ್ಟ್ ಕಾರು ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ ನಂತರ ಹ್ಯುಂಡೈ ಸಂಸ್ಥೆಯು ಕೂಡಾ ಗ್ರ್ಯಾಂಡ್ ಐ10 ಕಾರನ್ನು ಮರುವಿನ್ಯಾಸಗೊಳಿಸಿ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲು ಯೋಚಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಹೊಸ ಎಕ್ಸ್‌ಸೆಂಟ್

ಮಾರುತಿ ಸುಜುಕಿ ಸಂಸ್ಥೆಯು ಹೊಸ ಡಿಜೈರ್ ಕಾರಿನ ಬಿಡುಗಡೆಯ ನಂತರ ಎಕ್ಸ್ ಸೆಂಟ್ ಕಾರಿನ ಮಾರಾಟವು ಕಡಿಮೆಯಾಗಿದ್ದು, ಈ ಹಿನ್ನೆಲೆ ಹ್ಯುಂಡೈ ಸಂಸ್ಥೆಯು ಹೊಸದಾಗಿ ಎಕ್ಸ್ ಸೆಂಟ್ ಕಾರನ್ನು ಪುನರುತ್ತಾನಗೊಳಿಸಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಟಸ್ಕನ್ ಫೇಸ್‍ಲಿಫ್ಟ್

ಹ್ಯುಂಡೈ ತನ್ನ ಟಸ್ಕನ್ ಫೇಸ್‍ಲಿಫ್ಟ್ ಕಾರನ್ನು ತಯಾರಿಸಿದ್ದು, ವಿದೇಶಿಗಳಲ್ಲಿ ಟಿಸ್ಟಿಂಗ್ ಮಾಡುವಾಗ ಕಾಣಿಸಿಕೊಂಡಿದೆ. ಈ ಕಾರನ್ನು ಸಂಸ್ಥೆಯು ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಿವುದಾಗಿ ಹೇಳಿಕೊಂಡಿದ್ದು, ಮಾರುಕಟ್ಟೆಯಲ್ಲಿ ಜೀಪ್ ಕಾಂಪಸ್ ಕಾರಿಗೆ ಪೈಪೋಟಿಯನ್ನು ನೀಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಕೋನಾ ಇವಿ

ಸದ್ಯಕ್ಕೆ ಭಾರತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚಾಗಿದ್ದು, ಎಲ್ಲಾ ಸಂಸ್ಥೆಗಳಂತೆಯೇ ಹ್ಯುಂಡೈ ಸಂಸ್ಥೆ ಕೂಡಾ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ತನ್ನ ಕೋನಾ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ತಯಾರು ಮಾಡುತಿದ್ದು, ಹೊಸ ವಿನ್ಯಾಸದೊಂದಿಗೆ ಕಾಣಿಸಿಕೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಸಂಸ್ಥೆಯ 9 ಹೊಸ ಕಾರುಗಳು ಯಾವವು ಗೊತ್ತಾ?

ಕೊನಾ ಎಲೆಕ್ಟ್ರಿಕ್ ಕಾರುಗಳು ಎರಡು ಮಾದರಿಗಳಲ್ಲಿ ತಯಾರಾಗಲಿದ್ದು, 39.2 ಕಿಲೋವ್ಯಾಟ್ಸ್ ಮತ್ತು 64 ಕಿಲೋವ್ಯಾಟ್ಸ್ ಬ್ಯಾಟರಿ ಆಯ್ಕೆ ಹೊಂದಿರಲಿದ್ದು, 240 ಕಿಲೋಮೀಟರ್ ಮತ್ತು 390 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆಯಲಿವೆ ಎನ್ನಲಾಗಿದೆ.

Most Read Articles

Kannada
Read more on hyundai cars
English summary
new Hyundai cars & SUVs for India revealed.
Story first published: Saturday, March 17, 2018, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X