ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಜಾಗತಿಕ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ತಮ್ಮ ಐಷಾರಾಮಿ ಕಾರು ತಯಾರಿಕೆ ಇಂದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬ್ರಿಟೀಶ್ ವಾಹನ ತಯಾರಕ ಸಂಸ್ಥೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಈ ಕಾರು ನೀಡುವ ಐಷಾರಾಮಿ

By Rahul Ts

ಜಾಗತಿಕ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ತಮ್ಮ ಐಷಾರಾಮಿ ಕಾರು ತಯಾರಿಕೆ ಇಂದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬ್ರಿಟೀಶ್ ವಾಹನ ತಯಾರಕ ಸಂಸ್ಥೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಈ ಕಾರು ನೀಡುವ ಐಷಾರಾಮಿ ಸೌಲತ್ತುಗಳಿಗೆ ಇದು ಪ್ರಖ್ಯಾತವಾಗಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ವಿಶೇಷವೆಂದರೆ ವಿವಿಧ ದೇಶದ ವಾಹನ ತಯಾರಕ ಸಂಸ್ಥೆಗಳು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ನಕಲುಗಳನ್ನು ತಯಾರಿಸುತ್ತಿವೆ. ಈಗಾಗಲೆ ಈ ಕಾರಿನ ವಿನ್ಯಾಸವನ್ನು ಕಾಪಿ ಮಾಡಿ ಮಾರಾಟ ಮಾದುತ್ತಿದೆ ಚೀನಾ. ಆದರೆ ಇದೀಗಾ ರಷ್ಯಾ ಕೂಡಾ ಫ್ಯಾಂಟಮ್ ಕಾರಿನ ನಕಲನ್ನು ತಯಾರಿಸಿರುವುದು, ನೋಡಿಗರಲ್ಲಿ ಕುತೂಹಲವನ್ನು ಉಂಟು ಮಾಡಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಹೌದು, ಸುಮಾರು 8 ಕೋಟಿಗೆ ಬೆಲೆಬಾಳುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ನಕಲು ಮಾದಿ ರಷ್ಯಾದ ವಾಹನ ತಯಾರಕ ಸಂಸ್ಥೆಯಾದ ಔರಸ್ ತಮ್ಮ್ ಸೆನಾಟ್ ಮತ್ತು ಸೆನಾಟ್ ಲಿಮೋಸಿನ್ ಕಾರುಗಳನ್ನು ಮಾಸ್ಕೊ ಮೋಟರ್ ಶೋನಲ್ಲಿ ಬಿಡುಗಡೆಗೊಳಿಸಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಈ ವಾಹನವನ್ನು ರಷ್ಯಾದ ಸೆಂಟ್ರಲ್ ಸೈಂಟಿಫಿಕ್ ರಿಸರ್ಚ್ ಆಟೋಮೊಬೈಲ್ ಮತ್ತು ಆಟೊಮೋಟಿವ್ ಎಂಜಿನ್ ಇನ್ಸ್ಟಿಟ್ಯೂಟ್‍ನ ಔರಸ್ ಸಂಸ್ಥೆಯು ತಯಾರಿ ಮಾಡಲಾಗಿದೆ. ಇದೇ ಕಂಪೆನಿಯು ಇತ್ತೀಚೆಗೆ ವ್ಲಾದಿಮಿರ್ ಪುಟಿನ್ ಅವರ ಹೊಸ ಅಧ್ಯಕ್ಷೀಯ ಲಿಮೋಸೈನ್ ಅನ್ನು ಕೂಡಾ ತಯಾರು ಮಾಡಿತು. ಇದು ಪೂರ್ಣ ಪ್ರಮಾಣದ ಶಸ್ತ್ರಸಜ್ಜಿತ ಆವೃತ್ತಿಯಾಗಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಸೆನಾಟ್ ಕಾರು 5630ಎಂಎಂ ಉದ್ದ ಮತ್ತು 3300ಎಂಎಂ ನ ವ್ಹೀಲ್‍‍ಬೇಸ್ ಅನ್ನು ಹೊಂದಿದ್ದು, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು 5762ಎಂಎಂ ಉದ್ದ ಮತ್ತು 3552ಎಂಎಂ ಉದ್ದನೆಯ ವ್ಹೀಲ್‍‍ಬೇಸ್ ಅನ್ನು ಹೊಂದಿದೆ. ಔರಸ್‍ನ ಮತ್ತೊಂದು ಕಾರಾದ ಸೆನಾಟ್ ಲಿಮೋಸಿನ್ ಕಾರು ಫ್ಯಾಂಟಮ್ ಎಡಬ್ಲ್ಯೂಬಿ ಕಾರನ್ನು ನಕಲು ಮಾಡಿದ್ದು, ಇದು ಕೂಡಾ 5982ಎಂಎಂ ಉದ್ದ ಮತ್ತು 3772ಎಂಎಂ ನ ವ್ಹೀಲ್‍‍ಬೇಸ್ ಅನ್ನು ಹೊಂದಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಔರಸ್ ತಯಾರು ಮಾಡಿದ ಕಾರಿನಲ್ಲಿ ವಿದ್ಯುತ್ ಮೋಟರ್‍‍ನಿಂದ ಬ್ಯಾಕ್ಅಪ್ ಮಾಡಲ್ಪಟ್ಟ 4.4-ಲೀಟರ್ ವಿ8 ಸೇರಿದಂತೆ ಎರಡು ವಿಭಿನ್ನ ಎಂಜಿನ್ ಆಯ್ಕೆಗಳಿವೆ. ಈ ಎಂಜಿನ್ 590 ಬಿಹೆಚ್‍‍ಪಿಯನ್ನು ಉತ್ಪಾದಿಸುತ್ತದೆ ಮತ್ತು ಒಂಬತ್ತು-ಸ್ಪೀಡ್ ಆಟೋಮ್ಯಾತಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ ಸಂಪರ್ಕ ಹೊಂದಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಇದಲ್ಲದೇ 6.6 ಲೀಡತ್ ವಿ12 ಏಂಜಿನ್ ಆಯ್ಕೆಯನ್ನು ಕೂಡಾ ಹೊಂದಿದ್ದು, ಇದು 848ಬಿಹೆಚ್‍‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸುತ್ತದೆ. ಮತ್ತು ವಿಶೇಷವೆಂದರೆ ಈ ಕಾರಿನಲಿ ಆಲ್-ವ್ಹೀಲ್-ಡ್ರೈವ್ ಅನ್ನು ಒದಗಿಸಲಾಗಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಕಾರಿನ ಒಳಭಾಗದಲ್ಲಿ ಐಷಾರಾಮಿ ಲುಕ್ ಅನ್ನು ನೀಡಲಾಗಿದ್ದು, ಹಿಂಬದಿಯ ಪ್ರಯಾಣಿಗೆ 45 ಡಿಗ್ರಿಯ ಹಿಂಭಾಗದ ಆಸನಗಳನ್ನು ಒಳಾಂಗಣದಲ್ಲಿ ಕೇಂದ್ರೀಕರಿಸಲಾಗಿದೆ. ಅದಲ್ಲದೇ ಇದರಲ್ಲಿ ಫ್ರಿಡ್ಜ್ ಮತ್ತು ಔರಸ್ ಬ್ರ್ಯಾಂಡ್‍‍ನ ಲೆದರ್‍‍ನಿಂಡ ಸಜ್ಜುಗೊಳಿಸಲಾದ ಫೋಲ್ಡ್-ಔಟ್ ಟೇಬಲ್‍‍ಗಳನ್ನು ಅಳವಡಿಸಲಾಗಿದೆ.

ರಷ್ಯಾದ ಕಂಪೆನಿಯೊಂದು ತಯಾರು ಮಾಡಿದ ರೋಲ್ಸ್ ರಾಯ್ಸ್ ಫ್ಯಾಂಟಮ್‍‍ನ ನಕಲು ಹೇಗಿದೆ ನೋಡಿ..

ಇದರಲ್ಲಿನ ಅಗಲವಾದ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನು ಲೆದರ್, ವಿಡ್ ಟ್ರಿಮ್ ಮತ್ತು ಮೆಟಾಲಿಕ್ ಆಕ್ಸೆಂಟ್ಸ್ ನೊಂದ ಸಜ್ಜುಗೊಳಿಸಲಾಗಿದೆ. ಈ ಕಾರಿನ ಬೆಲೆಯ ಕುರಿತು ಇನ್ನು ಮಹಿತಿ ಲಭ್ಯವಾಗಲಿಲ್ಲವಾದರೂ, ಮಾಹಿತಿಗಳ ಪ್ರಕಾರ ಬೆಂಟ್ಲಿ ಮತ್ತು ರೋಲ್ಸ್ ರಾಯ್ಸ್ ಕಾರಿಗಿಂತ ಶೇಕಡ 20ರಷ್ಟು ಕಡಿಮೆ ಇರಲಿದೆ.

Most Read Articles

Kannada
English summary
After China, Russia builds a COPYCAT Rolls-Royce Phantom.
Story first published: Saturday, September 1, 2018, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X