ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಇಂಧನ ಬೆಲೆಯಲ್ಲಿನ ಏರಿಕೆಯಿಂದಾಗಿ ಕೇವಲ ಜನಸಾಮಾನ್ಯರಿಗಿ ತೊಂದರೆಯಾಗುತ್ತಿದ್ದ ವಿಷಯವು ನಮಗೆ ಈಗಾಗಲೆ ತಿಳಿದಿದೆ. ಈ ಬಿಸಿ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಕೂಡಾ ತಟ್ಟಿದ್ದು, ನಗರದಲ್ಲಿ ಪ್ರಯಾಣಿಸುತ್ತಿರುವ ಹಲವಾರು ಬಿಎಂಟಿಸಿ ಬಸ್‍‍ಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಏರುತ್ತಿರುವ ಇಂಧನ ಬೆಲೆಗಳಿಂದ, ಇಂಧನ ಆಧಾರಿತ ವಾಹನಗಳನ್ನು ದಿನಬಳಕೆಗೆ ಬಳಸುವುದು ಕಷ್ಟಕರವಾಗಿದೆ. ಏಕೆಂದರೆ ಇಂದಿರುವ ಇಂಧನ ಬೆಲೆಯು ನಾಳೆ ಇರುವುದಿಲ್ಲ. ಹೀಗಾಗಿ ಸುಮಾರು 2 ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ನಗರದಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಚಾಲನೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಇದೀಗ ಆಟೋ ಎಕನಾಮಿಕ್‍ಟೈಮ್ಸ್ ಮಾಹಿತಿಗಳ ಪ್ರಕಾರ ಕರ್ನಾಟಕದ ಮುಖ್ಯ ಮಂತ್ರಿಗಳಾದ ಹೆಚ್‍.ಡಿ.ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್‍‍ಗಳ ಚಾಲನೆಯ ಕುರಿತಾಗಿ ಸಾರಿಗೆ ಸಚಿವರಾದ ಡಿಸಿ ತಮ್ಮಣ್ಣ ಮತ್ತು ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ವಿ.ಪೊಣ್ಣುರಾಜ್ ಅವರೊಂದಿನ ಚರ್ಚೆಯ ನಂತರ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ನಾವೀಗಾಲೆ ಎಲೆಕ್ಟ್ರಿಕ್ ಬಸ್ಸುಗಳ ಕುರಿತಾಗಿ ಟಿ.ಎಂ. ವಿಜಯ್ ಭಾಸ್ಕರ್ ಮತ್ತು ಪ್ರಧಾನ ಕಾರ್ಯದರ್ಶಿಯಾದ ಬಿ.ಬಸವರಾಜು ಅವರ ಸಮ್ಮುಖದಲ್ಲಿ ಸಾರಿಗೆ ಇಲಾಖೆಗೆ ಒಂದು ಫೈಲ್ ಅನ್ನು ನೀಡಲಾಗಿದ್ದು, ಇನ್ನು ನಗರದಲ್ಲಿ ವಿದ್ಯುತ್ ಬಸ್ಸುಗಳ ಚಾಲನೆಯ ಕುರಿಗಾಗಿ ಮುಖ್ಯಮಂತ್ರಿಗಳು ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ. ಎಂದು ಬಿಎಂಟಿಸಿ ಅಧಿಕಾರಿಗಳಾದ ವಿಜಯ್ ಭಾಸ್ಕರ್ ಅವರು ಹೇಳಿಕೊಂಡಿದ್ದಾರೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಎಲೆಕ್ಟ್ರಿಕ್ ಬಸ್ಸುಗಳ ಚಾಲನೆಯ ಬಗ್ಗೆ ಬಿಎಂಟಿಸಿ ಸರಿಯಾದ ನಿರ್ಣಯವನ್ನು ತೆಗೆದುಕೊಂಡಿದ್ದರೆ, ಈಗಾಗಲೆ ನಗರದಲ್ಲಿ 80 ಎಲೆಕ್ಟ್ರಿಕ್ ಬಸುಗಳು ಚಲಿಸುತ್ತಿದ್ದವು. ಆದರೆ ತಮ್ಮಣ್ಣ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ಲೀಸ್‍‍ಗೆ ಪಡೆಯುವುದಕ್ಕಿಂತಾ ಅವುಗಳನ್ನು ಸಂಪೂರ್ಣವಾಗಿ ಖರೀದಿಸಿದ್ದರೆ ಉತ್ತಮ ಎಂದು ಹೇಳಿದರಿಂದ ಈ ಕಾರ್ಯವು ಕೊಂಚ ತಡವಾಗಿದೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಆದರೆ ಸಾರಿಗೆ ಸಚಿವರಾದ ತಮ್ಮಣ್ಣರವರ ಈ ಹೇಳಿಕೆಯನ್ನು ಒಪ್ಪಿಕೊಳ್ಳದ ಬಿಎಂಟಿಸಿ, ಎಲೆಕ್ಟ್ರಿಕ್ ಬಸ್ಸುಗಳನ್ನು ಸಂಪೂರ್ಣವಾಗಿ ಖರೀದಿಸಿದ್ದೇ ಆದಲ್ಲಿ ಅದು ಮುಂದೊಂದು ದಿನ ರಾಜ್ಯದ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಕಳೆದ ತಿಂಗಳು ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿಯವರ ಮುಂದೆ ಈ ವಿಷಯ ಬಂದಾಗ, ಪಿಎಂಡಬ್ಲ್ಯೂಡಿ ಮಂತ್ರಿ ಎಚ್.ಡಿ. ರೆವಣ್ಣ ಅವರ ಬೆಂಬಲವನ್ನು ಪಡೆದುಕೊಂಡಿದೆ ಎಂದು ಬಿಎಂಟಿಸಿಯ ವಾದವು ತಿಳಿಸಿದೆ. ಮುಖ್ಯಮಂತ್ರಿ ಕೂಡ ಪೊನ್ನರಾಜನ್ನು ಬೆಂಬಲಿಸಿದ್ದಾರೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಬಿಎಂಟಿಸಿ ಪ್ಲ್ಯಾನ್

2016ರಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸುಗಳ ಖರೀದಿಯು ದುಬಾರಿ ಮತ್ತು ಅವುಗಳನ್ನು ಭಾರತದಲ್ಲಿ ಪರೀಕ್ಷಿಸಲಾಗದ ಕಾರಣ ಅವುಗಳನ್ನು ಲೀಸ್‍ಗೆ ತೀಗೆದುಕೊಳ್ಳಲು ಮುಂದಾಗಿದ್ದರು. ಕೇಂದ್ರ ಸರ್ಕಾರವು ಭಾಗಶಃ-ಹಣಕಾಸು ಮಾಡಲು ಒಪ್ಪಿಕೊಂಡಂತೆ, ಬಿಎಂಟಿಸಿ ನವೆಂಬರ್ 2017 ರಲ್ಲಿ 150 ಎಲೆಕ್ಟ್ರಿಕ್ ಬಸ್‍ಗಳಿಗೆ ಬಿಡ್ ಮಾಡಲಾಗಿತ್ತು.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಈ ಹಿಂದೆ ಗೋಲ್ಡ್ ಸ್ಟೋನ್ ಇನ್ಫ್ರಾಟೆಕ್ ಎಂದು ಕ್ರೆಯಲ್ಪಟ್ಟಿದ್ದ ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‍ಟಕ್ ಎಲೆಕ್ಟ್ರಿಕ್ ಬಸ್ಸುಗಳನ್ನು ತಯರು ಮಾಡುವ ಕಾಂಟ್ರ್ಯಾಕ್ಟ್ ಅನ್ನು ತೆಗೆದುಕೊಂಡಿದ್ದು, 60 ಏಸಿ ಮತ್ತು 20 ನಾನ್-ಏಸಿ ಅಂದರೆ ಒಟ್ಟಾರೆಯಾಗಿ 80 ಎಲೆಕ್ಟ್ರಿಕ್ ಬಸ್ಸುಗಳನ್ನು ತಯಾರು ಮಾಡುವುದಾಗಿ ಹೇಳಲಾಗಿತ್ತು.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಒಪ್ಪಂದದ ಪ್ರಕಾರ ಎಸಿ ಎಲೆಕ್ಟ್ರಿಕ್ ಬಸ್ಸುಗಳಿಗೆ ರೂ.1 ಕೋಟಿ ಮತ್ತು ನಾನ್-ಎಸಿ ಬಸ್ಸುಗಳಿಗೆ ರೂ. 73 ಲಕ್ಷದಲ್ಲಿ ಕೆಂದ್ರ ಸರ್ಕಾರದಿಂದ ಸಬ್ಸಿಸ್ಡಿಯನ್ನು ಉತ್ಪಾದಕರು ಪಡೆಯಬಹುದಾಗಿದ್ದು, ನಿಜವಾದ ಉತ್ಪಾದನಾ ವೆಚ್ಚ 1 ಕೋಟಿ ಮತ್ತು 3 ಕೋಟಿ ರೂಪಾಯಿಗಳಿಗಿಂತಲೂ ಕಡಿಮೆಯಿತ್ತು.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಕೇವಲ ಗುತ್ತಿಗೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆಯುವುದಲ್ಲದೆ ಅವುಗಳ ನಿರ್ವಹಣೆ ಮತ್ತು ಉತ್ಪಾದಕರು ಚಾಲಕರ ವೆಚ್ಚವನ್ನು ಸಹ ಅನುಭವಿಸಬೇಕಾಗಿದೆ. ಬಿಎಂಟಿಸಿಯು ಏಸಿ ಬಸ್‍ಗೆ ಪ್ರತೀ ಕಿಲೋಮೀಟರ್‍‍ಗೆ ರೂ. 60.86 ಮತ್ತು ನಾನ್-ಎಸಿ ಬಸ್‍‍ಗೆ ಪ್ರತೀ ಕಿಲೋಮೀಟರ್‍‍ಗೆ ರೂ.40 ವೆಚ್ಚವನ್ನು ಉತ್ಪಾದಕರಿಗೆ ನೀಡಬೇಕು.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ತೀರ್ಮಾನಿಸಲಾದ ಈ ವೆಚ್ಚಗಳಲ್ಲಿ ಕಂಡಕ್ಟರ್‍‍ಗಳ ಮತ್ತು ವಿದ್ಯುತ್ ಬಳಕೆಯ ಶುಲ್ಕವನ್ನು ಸಹ ಇದರಲ್ಲಿ ಸೇರಿಸಲಾಗಿದ್ದು, ಪ್ರತೀ ದಿನವು ಒಂದೊಂದು ಬಸ್ ಸುಮಾರು 20 ಕಿಲೋಮೀಟರ್ ಚಲಿಸುವ ಹಾಗೆ ವಿನ್ಯಾಸ ಮಾಡಲಾಗುತ್ತಿದೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ನಾನ್-ಎಸಿ ಆಧಾರದ ಬಿಎಂಟಿಸಿ ಬಸ್ ಅನ್ನು ನಿರ್ವಹಿಸುವ ವೆಚ್ಚವು ಪ್ರತಿ ಕಿ.ಮಿಗೆ 55 ರೂ. ಮತ್ತು ಎಸಿ ಆಧಾರಿತ ಚಾಲನೆಯಲ್ಲಿರುವ ಬಸ್ಸಿನ ವೆಚ್ಚವು ಪ್ರತಿ ಕಿ.ಮಿಗೆ 85 ರೂ. ಆಗಿರುತ್ತದೆ. ಡೀಸೆಲ್ ಬಸ್‍ಗಳಿಗೆ ಹೋಲಿಸಿದಾಗ ವಿದ್ಯುತ್ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್ಸುಗಳು ಅಗ್ಗವಾಗುತ್ತವೆ ಹಾಗು ಹೆಚ್ಚು ಆದಾಯ ಗಳಿಸುವುದರ ಜೊತೆಗೆ, ಬಸ್ಸುಗಳು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

ಇನ್ನು ನಗರದ ಯಾವ ಯಾವ ಪ್ರದೇಶಗಳಲ್ಲಿ ಈ ಎಲೆಕ್ಟ್ರಿಕ್ ಬಸ್ಸುಗಳು ಸಂಚರಿಸಲಿದೆ ಎಂಬ ಮಾಹಿತಿಯು ಲಭ್ಯಾವಿರಲ್ಲದ್ದಿದ್ದು, ಮುಖ್ಯಮಂತ್ರಿಯವರು ನಿರ್ಣಯವನ್ನು ತೆಗೆದುಕೊಂಡ ನಂತರವೇ ಬಿಎಂಟಿಸಿ ಅಧಿಕಾರಿಗಳು ಈ ಕುರಿತಾದ ಮಾಹಿತಿಯನ್ನು ಬಹಿತಂಗಗೊಳಿಸಲಿದ್ದಾರೆ.

Most Read Articles

Kannada
English summary
CM to decide on BMTC’s 80 electric bus procurement.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more