ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

By Praveen Sannamani

ಮೊದಲೆಲ್ಲಾ ವಾಹನ ಪರವಾನಗಿಯ ಪತ್ರಗಳು ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆಗಳಿದ್ದವು. ಆದ್ರೆ ಇದೀಗ ಆ ಪರಿಸ್ಥಿತಿ ಬದಲಾಗುವ ಸಮಯ ಬಂದಿದೆ. ಇದಕ್ಕೆ ಕಾರಣ ಇಷ್ಟು ದಿನಗಳ ಕಾಲ ನೆನೆಗುದಿಗೆ ಬಿದ್ದಿದ್ದ ಡಿಜಿ ಲಾಕರ್ ಯೋಜನೆಗೆ ಕೇಂದ್ರ ಸರ್ಕಾರವು ಮರುಜೀವ ನೀಡಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಹೌದು, ವಾಹನಗಳ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ ಈ ಹಿಂದೆ ದೇಶಾದ್ಯಂತ 'ಡಿಜಿ ಲಾಕರ್‌' ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದರೂ ಬಹುತೇಕ ಕಡೆ ಹೊಸ ಯೋಜನೆಯ ಬಳಕೆಗೆ ಮಾನ್ಯತೆ ಇಲ್ಲವಾಗಿತ್ತು. ಆದ್ರೆ ಇದೀಗ ಕೇಂದ್ರ ಸಾರಿಗೆ ಇಲಾಖೆಯು ಡಿಜಿಟಲ್ ಲಾಕರ್‌ಗೆ ಮಾನ್ಯತೆ ನೀಡುವ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಡಿಜಿ ಲಾಕರ್ ಅಪ್ಲಿಕೇಷನ್‌ಗೆ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಇನ್ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ವಾಹನಗಳ ದಾಖಲೆಗಳನ್ನು ಕೇಳಿದರೆ ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸುವ ದಂಡಾಸ್ತ್ರ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದುದಾಗಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಡಿಜಿಟಲ್ ಲಾಕರ್ ಅಂದ್ರೆ ಏನು?

ನಿಮ್ಮ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಾಡಲು ಇದೊಂದು ಸುರಕ್ಷಿತ ಕ್ರಮವಾಗಿದ್ದು, ಆಧಾರ್ ಕಾರ್ಡ್ ಅಂಕೆಯೊಂದಿಗೆ ಇದನ್ನು ಲಿಂಕ್ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿ ನಿಮಗೆ ಈ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಈ ಮೂಲಕ ನೀವು ನಿಮ್ಮ ಅಮೂಲ್ಯವಾದ ಇ-ದಾಖಲೆಗಳು, ಯುನಿಫಾರ್ಮ್ ರಿಸೋರ್ಸ್ ಐಡೆಂಟಿ ಫೈಯರ್ (ಯು.ಆರ್.ಐ) (ಧ್ವನಿ ಮುದ್ರಿಕೆ, ವಿಡಿಯೋ, ಬರಹ) ಇತ್ಯಾದಿಗಳನ್ನೂ ಇದರಲ್ಲಿ ಶೇಖರಿಸಿಡಬಹುದಾಗಿದ್ದು, ದಾಖಲೆಗಳು ಇಲ್ಲವೆಂದು ಪೊಲೀಸರಿಗೆ ದಂಡ ಕಟ್ಟಬೇಕಾದ ಅನಿವಾರ್ಯತೆ ತಪ್ಪಲಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ನಿಮ್ಮ ಮೊಬೈಲ್‌ನಲ್ಲಿ ಡಿಜಿ ಲಾಕರ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವಾಹನ ಚಾಲನಾ ಪರವಾನಿಗೆ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರಗಳನ್ನು (ಆರ್‍‌ಸಿ) ದಾಖಲೆಗಳನ್ನು ಡಿಜಿ ಲಾಕರ್ ವ್ಯವಸ್ಥೆಗೆ ಅಳವಡಿಸಿ, ಅವು ಮೊಬೈಲ್‍ನಲ್ಲಿ ಲಭ್ಯವಾಗುವಂತೆ ಮಾಡಬಹುದಾಗಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಕಾಗದ ರಹಿತ ಆಡಳಿತ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲೇ ಈ ಯೋಜನೆಯನ್ನು ಜಾರಿ ತಂದಿದ್ದು, ಸರ್ಕಾರಿ ಸಚಿವಾಲಯಗಳಲ್ಲಿ ಮತ್ತು ಆಡಳಿತದ ಒತ್ತಡವನ್ನು ಕಡಿಮೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಆದ್ರೆ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಬಹುತೇಕ ವಾಹನ ಸವಾರರು ಡಿಜಿ ಲಾಕರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ ಡಿಜಿ ಲಾಕರ್ ಹೊಂದಿದ ವಾಹನ ಸವಾರರಿಗೂ ಟ್ರಾಫಿಕ್ ಪೊಲೀಸರು ಕೆಲವು ಬಾರಿಗೆ ಮಾನ್ಯತೆ ಮಾಡದೆ ಇದ್ದಿದ್ದು ಸಹ ಈ ಅಪ್ಲಿಕೇಷನ್ ಬಳಕೆ ಕೆಲವು ವಾಹನ ಸವಾರರು ಹಿಂದೇಟು ಹಾಕುತ್ತಿದ್ದರು.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಇದೇ ಕಾರಣಕ್ಕೆ ಡಿಜಿ ಲಾಕರ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಡಿಜಿ ಲಾಕರ್‌ ಮೂಲಕ ತೋರಿಸುವ ದಾಖಲೆಗಳಿಗೆ ಮಾನ್ಯತೆ ಎನ್ನುವ ಮೂಲಕ ಟ್ರಾಫಿಕ್ ಪೊಲೀಸರ ವಸೂಲಿಗೆ ಬ್ರೇಕ್ ಹಾಕಿದ್ದು, ವಾಹನದ ದಾಖಲೆಗಳನ್ನ ಅಷ್ಟೇ ಅಲ್ಲದೇ ನಿಮ್ಮ ಪ್ಯಾನ್ ಕಾರ್ಡ್, ಮತದಾನ ಗುರುತಿನ ಪತ್ರ, ಪಾಸ್ ಪೋರ್ಟ್, ಜನ್ಮ ದಾಖಲೆ, ಮದುವೆ ದಾಖಲೆ ಸೇರಿದಂತೆ ಕೆಲವು ವ್ಯಯಕ್ತಿಕ ದಾಖಲೆಗಳನ್ನು ಇಲ್ಲಿ ಶೇಖರಿಸಿ ಇಡಬಹುದು.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಖಾತೆ ತೆರೆಯುವುದು ಹೇಗೆ?

ಡಿಜಿ ಲಾಕರ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡ ನಂತರ ನೀವ ಸೈನ್ ಇನ್ ಆಯ್ಕೆ ಕ್ಲಿಕ್ ಮಾಡಿ ಲಾಗಿನ್ ಮಾಡಬೇಕಾಗುತ್ತದೆ. ತದನಂತರ ಇಲ್ಲಿ ನಿಮ್ಮ ಅಧಿಕೃತ ಮೊಬೈಲ್ ನಂಬರ್ ದಾಖಲೆ ಮಾಡಿದ್ದಲ್ಲಿ ಅದೇ ನಂಬರ್‌ಗೆ ಒನ್ ಟೈಮ್ ಪಾಸ್‍ವರ್ಡ್ (ಒಟಿಪಿ) ಬರುವುದಲ್ಲದೇ ಅದೇ ಓಟಿಪಿ ನಂಬರ್ ಅನ್ನು ಬಳಸಿ ಮೊಬೈಲ್ ನಂಬರನ್ನು ಖಚಿತ ಪಡಿಸಿ.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ತದನಂತರ ಡಿಜಿ ಲಾಕರ್ ಆ್ಯಪ್‌ನಲ್ಲಿ ನಿಮ್ಮ ಯೂಸರ್ ನೇಮ್, ಪಾಸ್‍ವರ್ಡ್ ದಾಖಲಿಸಬೇಕಾಗಿದ್ದು, ಪಾಸ್‌ವರ್ಡ್ ನೀಡಿದ ಬಳಿಕ ನಿಮ್ಮ ಆಧಾರ್ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ ಬಲಭಾಗದಲ್ಲಿರುವ ಲಿಂಕ್ ಆಧಾರ್ ಬಟನ್ ಒತ್ತಿ ಆಧಾರ್‌ನ 12 ಸಂಖ್ಯೆಗಳನ್ನು ನಮೂದಿಸಬೇಕು.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಇದಾದ ಬಳಿದ ಕಂಟಿನ್ಯೂ ಕೊಟ್ಟಾಗ ನಿಮ್ಮ ನೋಂದಿತ ಮೊಬೈಲ್ ನಂಬರ್‌ಗೆ ಮತ್ತೊಂದು ಒಟಿಪಿ ನಂಬರ್ ಬರಲಿದ್ದು, ಆ ನಂಬರ್ ದಾಖಲಿಸಿದ್ದಲ್ಲಿ ಆಪ್ ನೋಂದಣಿ ಪೂರ್ಣವಾಗುತ್ತೆ. ಇದಾದ ಬಳಿಕ ನೀವು ಡಿಜಿ ಲಾಕರ್ ಬಳಕೆ ಮಾಡಬಹುದು.

ನಿಮ್ಮ ಬಳಿ ಡಿಜಿ ಲಾಕರ್ ಇದ್ರೆ ಇನ್ಮುಂದೆ ಟ್ರಾಫಿಕ್ ಪೊಲೀಸರಿಗೆ ಹೆದರಬೇಕಿಲ್ಲ...

ಆಪ್‌ನ ಬಲಭಾಗದಲ್ಲಿ ಅಪ್‌ಲೋಡ್ ಬಟನ್ ಒತ್ತಿದ್ದಲ್ಲಿ ಅಲ್ಲಿ ನೀವು ನಿಮ್ಮ ದಾಖಲೆಗಳ ದತ್ತಾಂಶವನ್ನು ಸಂಗ್ರಹ ಮಾಡಬಹುದಾಗಿದ್ದು, ಟ್ರಾಫಿಕ್ ಪೊಲೀಸರು ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲೂ ಈ ಆ್ಯಪ್ ಬಳಕೆ ಮಾಡುವ ಮೂಲಕ ಕಾಗದ ರಹಿತ ವ್ಯವಹಾರ ಮಾಡಬಹುದು.

Most Read Articles

Kannada
English summary
Driving Licence & RC In Digital Formats Valid — Transport Ministry Notifies The States & Police.
Story first published: Monday, August 13, 2018, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X