ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಸದ್ಯ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಬಳಕೆಗಾಗಿ ಹಲವು ಯೋಜನೆ ರೂಪಿಸಲಾಗುತ್ತಿದ್ದು, ಈ ಮಧ್ಯೆ ಹೊಸ ಸಂಶೋಧನೆಯೊಂದು ಪರಿಸರಕ್ಕೆ ಪೂರಕ ಎಂದು ಹೇಳಲಾಗುತ್ತಿರುವ ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತಲೂ ಹೆಚ್ಚು ಮಾರಕವಾಗಿವೆ ಎನ್ನುವ ಮಾಹಿತಿ ಹೊರಹಾಕಿದೆ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಹೌದು, ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಸಂದರ್ಭದಲ್ಲೇ ಹೊಸ ಸಂಶೋಧನೆಯೊಂದು ಎಲೆಕ್ಟ್ರಿಕ್ ಕಾರುಗಳಿಂದ ಪರಿಸರ ಮತ್ತಷ್ಟು ತರಿಕ್ತ ಪರಿಣಾಮ ಬೀರಬಹುದು ಎನ್ನುವ ಅಂಶವನ್ನು ಪತ್ತೆಹಚ್ಚಿವೆ. ಹಾಗಾದ್ರೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳು ಪರಿಸರದ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಮುಂದಿನ ಸ್ಲೈಡರ್‌ನಲ್ಲಿ ತಿಳಿಯಿರಿ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 2030ರ ವೇಳೆಗೆ ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳು ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳನ್ನು ನಿಷೇಧ ಮಾಡಿ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಯೋಜನೆ ರೂಪಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಹೊಸ ಸಂಶೋಧನೆ ಒಂದು ಇದಕ್ಕೆ ವಿರುದ್ಧವಾದ ವರದಿಯೊಂದನ್ನು ನೀಡುತ್ತಿದೆ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಜಾಗತಿಕವಾಗಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳನ್ನು ನಿಷೇಧಗೊಳಿಸಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಯೋಜನೆಗೆ ಈಗಾಗಲೇ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆ ರೂಪಿಸುವತ್ತ ಕಾರ್ಯೋನ್ಮುಖವಾಗಿದ್ದು, ಹೊಸ ಸಂಶೋಧನೆ ಮಾತ್ರ ಈ ಮಹತ್ವದ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಆದ್ರೆ, ವಾಸ್ತವಾಂಶವನ್ನು ಪರಾಮರ್ಶೆ ಮಾಡಿದ್ದಲ್ಲಿ ಹೊಸ ಸಂಶೋಧನಾ ಅಭಿಪ್ರಾಯಗಳು ಸತ್ಯ ಎನ್ನಿಸಲಿದ್ದು, ಡಿಸೇಲ್ ಮತ್ತು ಪೆಟ್ರೋಲ್ ಕಾರುಗಳನ್ನು ನಿಷೇಧ ಮಾಡಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಮಹತ್ವದ ಯೋಜನೆಯ ಜಾರಿಗೂ ಮುನ್ನ ಈ ಬಗ್ಗೆ ಚಿಂತನೆ ಮಾಡಲೇಬೇಕಾದ ಅವಶ್ಯಕತೆಯಿದೆ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

2030ರ ವೇಳೆಗೆ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವ ಬಗ್ಗೆ ಈ ಹಿಂದೆಯೇ ಮಾತನಾಡಿದ್ದ ಮರ್ಸಿಡಿಸ್ ಬೆಂಝ್ ಇಂಡಿಯಾ ಸಿಇಒ ರೋನಾಲ್ಡ್ ಫೋಲ್ಗರ್ "ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳು ಭವಿಷ್ಯದಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಠಿಸಲಿವೆ" ಎಂದಿದ್ದರು.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಇದಕ್ಕೆ ಪೂರಕ ಎನ್ನುವಂತೆ ಹೊಸ ಸಂಶೋಧನೆ ಕೂಡಾ ಎಲೆಕ್ಟ್ರಿಕ್ ಕಾರುಗಳ ಬಳಕೆ ಬಗ್ಗೆ ಅಪಸ್ವರ ಎತ್ತಿದ್ದು, ಸದ್ಯ ಬಳಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲೇ ಕೆಲವು ಮಾರ್ಪಾಡುಗಳನ್ನು ತರುವುದು ಒಂದೇ ಮಾಲಿನ್ಯ ಸಮಸ್ಯೆಗೆ ಪರಿಹಾರ ಎಂದಿದೆ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಇದಕ್ಕೆ ಕಾರಣ, ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ವಿದ್ಯುತ್ ಉತ್ಪಾದನೆಗಾಗಿ ಶೇ.60 ರಷ್ಟು ಕಲ್ಲಿದ್ದಲು ಗಣಿಗಳನ್ನೇ ಅವಲಂಬಿಸಿದ್ದು, ಪರಿಸ್ಥಿತಿ ಹೀಗಿರುವಾಗ ಎಲೆಕ್ಟ್ರಿಕ್ ಕಾರುಗಳಿಗೆ ಶಕ್ತಿ ಒದಗಿಸಲು ಇದು ಇನ್ನಷ್ಟು ಹೆಚ್ಚಾಗುವುದಲ್ಲಿ ಯಾವುದೇ ಸಂದೇಹವಿಲ್ಲ.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಇದರಿಂದಾಗಿ ಪರಿಸರ ಮಾಲಿನ್ಯ ಹೆಚ್ಚಳವಾಗುದಲ್ಲದೇ ಭವಿಷ್ಯದ ಇಂಧನ ಮೂಲಗಳ ಮೇಲೂ ಹೊಡೆತ ಬೀಳುವುದಲ್ಲದೇ, ಪರಿಸರ ಮತ್ತಷ್ಟು ನಾಶವಾಗುವುದರಲ್ಲಿ ಎಲೆಕ್ಟ್ರಿಕ್ ಕಾರುಗಳು, ಎಲೆಕ್ಟ್ರಿಕ್ ಬಸ್‌ಗಳ ಕೊಡುಗೆ ದೊಡ್ಡದಾಗಲಿದೆ ಎನ್ನುವುದು ಹೊಸ ಸಂಶೋಧನೆಯ ಅಭಿಪ್ರಾಯ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಆದರೂ ಈ ಮಹತ್ವದ ಯೋಜನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ರೋನಾಲ್ಡ್ ಫೋಲ್ಗರ್, ಪರಿಸರಕ್ಕೆ ಪೂರಕವಾಗಿ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಎಲೆಕ್ಟ್ರಿಕ್ ಶಕ್ತಿಯನ್ನು ಒದಗಿಸಿದ್ದಲ್ಲಿ ಮಾತ್ರವೇ ಈ ಮಹತ್ವದ ಯೋಜನೆ ಅರ್ಥಪೂರ್ಣವಾಗಲಿದೆ ಎಂದಿದ್ದರು.

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಹೀಗಾಗಿ ಎಲೆಕ್ಟ್ರಿಕ್ ಕಾರುಗಳ ಯೋಜನೆ ಬಗೆಗೆ ಅಪಸ್ವರ ಎತ್ತಿರುವ ಹೊಸ ಸಂಶೋಧನೆಯ ಮಹತ್ವದ ವಿಚಾರಗಳು ಇದೀಗ ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದ್ದು, ಒಂದು ಸಂಶೋಧನೆಯ ವಿಚಾರಗಳು ನಿಜವಾಗಿದ್ದಲ್ಲಿ ಎಲೆಕ್ಟ್ರಿಕ್ ಕಾರುಗಳಿಂತ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳೇ ವಾಸಿ ಎನ್ನಬಹುದು.

MOST READ: ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು

ಡೀಸೆಲ್, ಪೆಟ್ರೋಲ್ ಕಾರುಗಳಿಂತ ಎಲೆಕ್ಟ್ರಿಕ್ ಕಾರುಗಳೇ ಪರಿಸರಕ್ಕೆ ಹೆಚ್ಚು ಮಾರಕವೇ?

ಹಾಗಾದ್ರೆ ಎಲೆಕ್ಟ್ರಿಕ್ ಕಾರುಗಳ ಕುರಿತಾದ ಈ ಸಂಶೋಧನೆಯ ಅಂಶಗಳು ನಿಜಕ್ಕೂ ಪರಿಸರದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಾ? ಇದಕ್ಕೆ ನಿಮ್ಮ ಸಹಮತ ಇದೆಯಾ? ತಪ್ಪದೇ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ..

Most Read Articles

ಪ್ರತಿ ಚಾರ್ಜ್‌ಗೆ 469 ಕಿ.ಮಿ ಮೈಲೇಜ್ ನೀಡಬಲ್ಲ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ಫೋಟೋ ಗ್ಯಾಲರಿ..!

Kannada
Read more on electric cars evergreen
English summary
Electric cars polluting more than conventional cars new research report.
Story first published: Friday, October 19, 2018, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X