ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ನಮ್ಮ ಬೆಂಗಳೂರು ನಗರದಲ್ಲಿನ ಫುಟ್‍ಪಾತ್‍ಗಳ ಮೇಲೆ ಜನರೆ ಓಡಾಡಲು ಕಷ್ಟವಾಗುತ್ತಿರುವ ಸಮಯದಲ್ಲಿ, ಈ ಬೈಕ್ ಸವಾರರು ತವು ತಲುಪಬೇಕಾದ ಜಾಗವನ್ನ ಬೇಗ ತಲುಪಲು ಫುಟ್‍ಪಾತ್‍ನ ಮೇಲೆ ಹೋಗುತ್ತಾರೆ. ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರು ಇಂತವರಿಗೆ ಪಾಠ ಕಲಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆಗಳು ಕಾಮನ್, ಹಾಗಂತ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಬೇಗ ತಲುಪಬೇಕಾದ ಸ್ಥಳವನ್ನ ತಲುಪಲು ತಪ್ಪು ಮಾರ್ಗಗಳನ್ನು ಹಿಡಿದು, ಅದೇ ಸಮಯದಲ್ಲಿ ಅಕ್ಕಸ್ಮಾತ್ ಆಗಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕರೆ ದಂಡ ವಿಧಿಸುತ್ತಾರೆ ಅಥವಾ ಮಾಡಿದ ತಪ್ಪನ್ನೇ ಪದೇ ಪದೇ ಮಾಡಿದರೆ ವಾಹನ ಸೀಜ್ ಆಗುತ್ತೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ನೀವು ಎಂದಾದರು ಟ್ರಾಫಿಕ್ ಜಾಸ್ತಿ ಇದೆ ಎಂದು ರಸ್ತೆ ಬಿಟ್ಟು ಫುಟ್‍ಪಾತ್‍ನ ಮೇಲೆ ಬೈಕ್ ಚಲಾಯಿಸಿದ್ದೀರಾ.? ಅಥವಾ ಇನ್ನು ಇದೇ ಕೆಲಸವನ್ನ ಮಾಡುತ್ತಿದ್ದೀರಾ.? ಹಾಗಾದರೆ ಅದನ್ನು ತಕ್ಷಣವೇ ಬಿಡಿ, ಯಾಕಂದ್ರೆ ಫುಟ್‍ಪಾತ್‍ನ ಮೇಲೆ ಬೈಕ್ ಚಲಾಯಿಸುವ ಸಮಯದಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕರೆ ರೂ.1000 ದಂಡ ಗ್ಯಾರಂಟಿ ಬೀಳುತ್ತೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಹೌದು, ನಗರದಲ್ಲಿ ಹೆಚ್ಚುತ್ತಿರುವ ಫುಟ್‍ಪಾತ್ ರೈಡರ್‍‍ಗಳಿಗೆ ಬುದ್ಧಿ ಕಲಿಸಲು ಟ್ರಾಫಿಕ್ ಪೊಲೀಸರು ಮಹತ್ವದ ನಿರ್ಧಾರವನ್ನು ತೆಗೆದುಕೊಂದಿದ್ದಾರೆ. ಫುಟ್‍ಪಾತ್‍ನ ಮೇಲೆ ವಾಹನ ಚಾಲಾಯಿಸುವವರನ್ನು ಕಂಡರೆ ಅವರಿಗೆ 6 ತಿಂಗಳ ಜೈಲು ವಾಸ ಮತ್ತು ಅಥವಾ ರೂ.1000 ದಂಡ ವಿಧಿಸಬೇಕು ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಬೇಕು ಎಂಬ ನಿರ್ಣಯವನ್ನು ಜಾರಿ ಮಾಡಿದ್ದಾರೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಫುಟ್‍ಪಾತ್‍ನ ಮೇಲೆ ಗಾಡಿ ಓಡಿಸಿದರೆ ಅದು ತಪ್ಪೆಂದು ನಮಗೂ ತಿಳಿದಿದೆ, ಆದನ್ನು ನೀವು ಹೇಳುವ ಅವಶ್ಯಕತೆ ಇಲ್ಲವೆಂದು ನಿಮ್ಮ ಮನಸ್ಸಿನಲ್ಲಿ ಬರಬಹುದು. ಆದರೆ ನಗರದಲ್ಲಿ ಇದನ್ನು ತಿಳಿಯದೆಯೆ ಹಲವರು ಇದೇ ತಪ್ಪನ್ನು ಪದೇ ಪದೇ ಮಾಡುತ್ತಲೇ ಇದ್ದಾರೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಫುಟ್‍ಪಾತ್‍ನ ಮೇಲೆ ಬೈಕ್ ಚಲಾಯಿಸುವವರಿಗೆ ಪದೇ ಪದೇ ಎಚ್ಚರಿಕೆಯನ್ನು ನೀಡಿ, ನಮ್ಮ ಟ್ರಾಫಿಕ್ ಪೊಲೀಸರುಗು ಸಾಕಾಗೊಗಿದೆ. ಆದ್ದರಿಂದಲೆ ಇವರಿಗೆ ತಕ್ಕ ಶಿಕ್ಷೆಯನ್ನು ನೀಡಲು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಇಷ್ಟು ದಿನ ನಾವು ಪುಟ್‍ಪಾತ್‍ನ ಮೇಲೆ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರನ್ನ ತಡೆದು ನಾವು ಕೇವಲ ಎಚ್ಚರಿಕೆಯನ್ನು ನೀಡಿ ಸುಮ್ಮನಾಗುತ್ತಿದ್ದೆವು ಆದ್ರೆ ಇನ್ನು ಮುಂದೆ ಹೀಗೆ ನಾವು ಮಾಡುವುದಿಲ್ಲ, ಪ್ರತ್ಯೇಕವಾಗಿ ಇಂತಹ ಘಟನೆಯಲ್ಲಿ ಸಿಕ್ಕಿಕೊಂಡವರನ್ನು ಕಾನೂನು ಬದ್ಧವಾಗಿ ಶಿಕ್ಷಿಸಲಾಗುತ್ತದೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಫುಟ್‍ಪಾತ್‍ನ ಮೇಲೆ ವಾಹನ ಸವಾರಿ ಮಾಡುವುದನ್ನು ಕಂಡಲ್ಲಿ ಅಂತವರನ್ನು ಐಪಿಸಿ ಸೆಕ್ಷನ್ 179 ಕಾಯ್ದೆಯ ಪ್ರಕಾರ ತಪ್ಪಿತಸ್ಥರಿಗೆ ಆರು ತಿಂಗಳು ಜೈಲು ವಾಸ ನೀಡಲು ನಾವು ನಿರ್ಧರಿಸಿದ್ದೇವೆ ಮತ್ತು ಅವರ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸುತ್ತೇವೆ. ಈ ಹೊಸ ನಿರ್ಣಯವನ್ನು ಉಲ್ಲಂಘಿಸಿದವರ ಕನಿಷ್ಠ 500 ಮಂದಿಯನ್ನು ಹಿಡಿಯಲು ನಾವು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದೇವೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಈಗಾಗಲೆ ನಗರದಲ್ಲಿ ಸುಮಾರು 250 ತಪ್ಪಿತಸ್ತರನ್ನು ನಾವು ಹಿಡಿದುಕೊಂಡಿದ್ದೇವೆ, ಮತ್ತು ಶೀಘ್ರವೇ ಇನ್ನು ಕೆಲವು ಪ್ರಮುಖ ರಸ್ತೆಗಳಲ್ಲಿ ಈ ಡ್ರೈವ್ ಅನ್ನು ಶುರು ಮಾಡಿದ್ದೆವೆ. ಮತ್ತು ಈ ಉಲ್ಲಂಘನೆಯು 1988 ಮೋಟಾರ್ ವೆಹಿಕಲ್ ಆಕ್ಟ್ ಸೆಕ್ಷನ್ 184ರ ಪ್ರಕಾರ ಟ್ರಾಫಿಕ್ ನಿಯಮಗಳನ್ನು ಮೀರಿ ನಗರದಲ್ಲಿ ವಾಹನ ಚಲಾಯಿಸುವ ಕಾಯ್ದೆಯ ಅಡಿಯಲ್ಲಿ ಅವರ ಮೇಲೆ ಕೇಸ್ ಹಾಕಲಾಗುತ್ತದೆ ಎಂದು ಟ್ರಾಫಿಕ್ ಹೆಚ್ಚುವರಿ ಆಯುಕ್ತರಾದ ಹರಿಶೇಕರನ್ ಪಿ ಅವರು ಹೇಳಿಕೊಂಡಿದ್ದಾರೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಇವುಗಳಲ್ಲದೇ ನಗರದಲ್ಲಿ ಟ್ರಾಫಿಕ್ ನಿಯಮಗ ಬಗ್ಗೆ ಜನರಿಗೆ ತಿಳಿಹೇಳಲು ಒಂದು ಜಾಗೃತಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಪಬ್ಲಿಕ್ ಐ ಆಪ್

ಟ್ರಾಫಿಕ್ ನಿಯಮನ್ನ ಪಾಲಿಸದೆ ಇರುವವರನ್ನು ಪೊಲೀಸರು ಮಾತ್ರವಲ್ಲದೇ ನಾಗರೀಕರು ಸಹ ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ಮತ್ತು ವಾಹನದ ಚಿತ್ರಗಳನ್ನು 'ಪಬ್ಲಿಕ್ ಐ'ಎಂಬ ಮೊಬೈಲ್ ಆಪ್‍ನ ಮುಖಾಂತರ ಪೊಲೀಸರಿಗೆ ತಿಳಿಸಲು 2015ರಲ್ಲಿಯೆ ಬಿಡುಗಡೆಗೊಳಿಸಲಾಯಿತು.

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ದೇಶದಲ್ಲೆಡೆ ಡಿಜಿಟಲ್ ಮಯವಾಗುತ್ತಿರುವ ಕಾರಣ, ಅದನ್ನು ತಪ್ಪು ದಾರಿಯಲ್ಲಿ ಮಾತ್ರ ಬಳಸದೇ ಇಂತಹ ಉತ್ತಮ ಕೆಲಸಗಳನ್ನು ಮಾಡಲು ಪೊಲೀಸರು ಸಹ ಸಾಮಾಜಿಕ ಜಾಲತಾಣಗಳ ಕಡೆ ಒಲವು ತೋರಿದ್ದಾರೆ.

MOST READ: ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

ಫುಟ್‍ಪಾತ್ ಮೇಲೆ ಗಾಡಿ ಚಲಾಯಿಸುವಾಗ ಸಿಕ್ಕಕೊಂಡ್ರೆ ಶಿಕ್ಷೆ ಗ್ಯಾರಂಟಿ..

ಈ ನಿಟ್ಟಿನಲ್ಲಿ ಫುಟ್‍‍ಪಾತ್‍ನ ಮೇಲೆ ಆಗಲಿ ಅಥವಾ ಟ್ರಾಫಿಕ್ ನಿಯವನ್ನು ಉಲ್ಲಂಗಿಸಿ ಪಾದಚಾರಿಗಳಿಗಾಗಲಿ ಮತ್ತು ಇನ್ನಿತರೆ ಸವಾರರಿಗೆ ಕಿರಿಕಿರಿ ಮಾಡಿದ್ದಲ್ಲಿ, ನೀವು ಕೂಡಾ ಪಬ್ಲಿಕ್ ಐ ಆಯ್‍ನ ಮುಖಾಂತರ ತಕ್ಷಣವೇ ಪೊಲೀಸರಿಗೆ ಸಂದೇಶವನ್ನು ರವಾನಿಸಿ.

Source: Bangaloremirror

Most Read Articles

Kannada
English summary
Footpath riders, your time is up
Story first published: Thursday, November 22, 2018, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X