ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ನಿರ್ಮಾಣದ ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಸೆಡಾನ್, ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ವಿಭಾಗದಲ್ಲಿ ತನ್ನದೇ ಆದ ಮಾರಾಟ ದಾಖಲೆಯನ್ನು ಹೊಂದಿದೆ. ಈ ಹಿನ್ನೆಲೆ ದೇಶಿಯ ಮಾರುಕಟ್ಟೆಯ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಇದೀಗ ಹೊಸ ಕಾರು ಉತ್ಪನ್ನ ಒಂದನ್ನು ಪರಿಚಯಿಸುತ್ತಿದೆ.
ಸದ್ಯ ಎಸ್‌ಯುವಿ ವಿಭಾಗದಲ್ಲಿ ಇಕೋಸ್ಪೋರ್ಟ್ ಮತ್ತು ಎಂಡೀವರ್ ಕಾರು ಆವೃತ್ತಿಗಳು ಫೋರ್ಡ್ ಕಾರು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಯುರೋಪ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೂಗಾ ಎಸ್‌ಯುವಿ ಕಾರನ್ನು ಭಾರತಕ್ಕೂ ಪರಿಚಯಿಸುತ್ತಿದೆ.


ಈ ಮೂಲಕ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿರುವ ಮಧ್ಯಮ ಗಾತ್ರದ ಜೀಪ್ ಕಂಪಾಸ್ ಮಾದರಿಗಳನ್ನು ಹಿಂದಿಕ್ಕುವ ಉದ್ದೇಶ ಹೊಂದಿದ್ದು, ಇಕೋ ಸ್ಪೋರ್ಟ್‌ಗಿಂತ ಸ್ವಲ್ಪ ಮಟ್ಟಿಗೆ ಅಧಿಕ ಮತ್ತು ಎಂಡೀವರ್‌ಗಿಂತ ಕೆಳ ದರ್ಜೆಯ ಕಾರು ಇದಾಗಿರಲಿದೆ.
ಎಂಜಿನ್ ವೈಶಿಷ್ಟ್ಯತೆ
ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಕೂಗಾ ಆವೃತ್ತಿಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿವೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಕೂಗಾ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಚಾರ್ಜ್ಡ್ ಸೌಲಭ್ಯ ಪಡೆಯಲಿದೆ.
ಇದಲ್ಲದೇ 5 ಸೀಟರ್ ಸೌಲಭ್ಯ ಹೊಂದಿರುವ ಕೂಗಾ ಎಸ್‌ಯುವಿಯು ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ರಿಲ್ ವೀಲ್ಹ್ ಡ್ರೈವ್ ಸಿಸ್ಟಂ ಅಳವಡಿಕೆ ಹೊಂದಿರುವ ಆಪ್ ರೋಡಿಂಗ್ ಪ್ರಿಯರನ್ನು ಸೆಳೆಯದೆ ಇರಲಾರದು.
Trending On DriveSpark Kannada:
ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!
ನಿಯಂತ್ರಣ ತಪ್ಪಿ ಭೀಕರ ಅಪಘಾತ- ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್ ಆಗಿದ್ದು ಹೇಗೆ?
ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?
ಬಿಡುಗಡೆ ಯಾವಾಗ?
ವರದಿಗಳ ಪ್ರಕಾರ ಕೂಗಾ ಪ್ರಿಮಿಯಂ ಎಸ್‌ಯುವಿ ಮಾದರಿಯು ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಕಾರು ನೀರಿಕ್ಷೆ ಮಾಡುವ ಭಾರತೀಯ ಗ್ರಾಹಕರಿಗೆ ಇಂದೊಂದು ಅತ್ಯತ್ತಮ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬೆಲೆ (ಅಂದಾಜು)
ಕೂಗಾ ಕಾರಿನ ಬೆಲೆಗಳ ಬಗ್ಗೆ ನಿಖರ ಮಾಹಿತಿ ಇಲ್ಲವಾದ್ರೂ ಭಾರತೀಯ ಗ್ರಾಹಕರನ್ನು ಸೆಳೆಯಲು ಬರುತ್ತಿರುವ ಹೊಸ ಕಾರು ರೂ.12 ಲಕ್ಷದಿಂದ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
ಪ್ರತಿಸ್ಪರ್ಧಿಗಳು
ಸದ್ಯ ಪ್ರಿಮಿಯಂ ಎಸ್‌ಯುವಿಗಳಲ್ಲಿ ಮುಂಚೂಣಿಯಲ್ಲಿರುವ ಜೀಪ್ ಕಂಪಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಆವೃತ್ತಿಗಳಿಗೆ ಕೂಗಾ ಕಾರು ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಲ್ಲಿದೆ.
ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ನಿರ್ಮಾಣದ ಕಾರುಗಳು ಉತ್ತಮ ಜನಾಭಿಪ್ರಾಯ ಹೊಂದಿದ್ದು, ಇಂಧನ ಕಾರ್ಯಕ್ಷಮತೆಯಲ್ಲೂ ಗ್ರಾಹಕರ ನಂಬಿಕೆ ಗಳಿಸಿವೆ. ಇದೇ ಕಾರಣಕ್ಕೆ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಫೋರ್ಡ್ ವಿದೇಶಿ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ ಕೂಗಾ ಮುಂದುವರಿದ ಆವೃತ್ತಿಯನ್ನು ಭಾರತಕ್ಕೂ ಪರಿಚಯಿಸುತ್ತಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark