ಇಂಧನಗಳ ಬೆಲೆ 100 ರೂ ದಾಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು..

ದೇಶದಲ್ಲಿ ಇಂಧನಗಳ ಬೆಲೆ ಏರಿಕೆಯು ದೊಡ್ಡ ತಲೆನೋವು ಆಗಿ ಹೋಗಿದೆ. ಈ ಹಿಂದೆಯೇ ನಾವು ಇಂಧನ ಬೆಲೆಗಳು ರೂ.100 ದಾಟುವ ಸಾಧ್ಯತೆಗಳಿಲ್ಲ, ಯಾಕೆಂದ್ರೆ ಪೆಟ್ರೋಲ್ ಬಂಕ್‍‍ಗಳಲ್ಲಿನ ಪ್ರೈಸ್ ಡಿಸ್‌ಫ್ಲೇಗಳು ಮೂರಂಕಿ ತೋರಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ವರದಿ ಮಾಡಿದ್ದೇವು. ಹೀಗಿರುವಾಗಲೇ ಇಂಧನ ಸಂಸ್ಥೆಗಳು ಗ್ರಾಹಕರಿಗೊಂದು ಶಾಕಿಂಗ್ ನ್ಯೂಸ್ ನೀಡಿವೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಹಾದಿಯಲ್ಲಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ರೂ.100 ದಾಟಿದ್ದಲ್ಲಿ ಬೆಲೆಗಳನ್ನು ಪ್ರದರ್ಶನ ಮಾಡಬಹುದಾದ ಡಿಸ್‌ಪ್ಲೈ ಯಂತ್ರಗಳನ್ನು ಜೋಡಣೆ ಮಾಡುತ್ತಿರುವುದು ಕಂಡುಬಂದಿದೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಪೆಟ್ರೋಲ್ ಬೆಲೆ ಮೂರಂಕಿ ದಾಟಿದರೂ ಬೆಲೆಗಳನ್ನು ಪ್ರದರ್ಶಿಸಲು ಸಾಧ್ಯವಾಗುವಂತೆ ಹೊಸ ಡಿಸ್‌ಪ್ಲೇ‌ಗಳನ್ನು ಜೋಡಣೆ ಮಾಡಲಾಗುತ್ತಿದ್ದು, ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೀಘ್ರದಲ್ಲೇ ರೂ 100 ಕ್ಕಿಂತ ಹೆಚ್ಚಾಗಬಹುದು ಎನ್ನಲಾಗುತ್ತಿದೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಭಾರತದಲ್ಲಿ ಹೆಚ್ಚಿನ ಇಂಧನ ಕೇಂದ್ರಗಳು ಮೂರು ಅಂಕಿಯ ಬೆಲೆಗಳನ್ನು ಪ್ರದರ್ಶಿಸಲು ಅಸಮರ್ಥವಾಗಿರುವ ಹಳೆಯ ವಿತರಕಗಳನ್ನು ಹೊಂದಿವೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ ರೂ 99.99 ಹೆಚ್ಚಿಗೆ ಹೋದರೆ ಇದು ಸಮಸ್ಯೆ ಆಗಲಿದೆ. ಆದ್ದರಿಂದ, ಇಂಧನ ಬೆಲೆಗಳು ಲೀಟರ್‌ಗೆ 100ರೂ. ತಲುಪಿದ್ದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ದತೆ ನಡೆಸಲಾಗುತ್ತಿದೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶದಲ್ಲಿನ ಪ್ರಮುಖ ನಗರಗಳಲ್ಲಿ ಸಾರ್ವಕಾಲಿಕ ಮಟ್ಟಕ್ಕೆ ತಲುಪಿವೆ ಮತ್ತು ಪೆಟ್ರೋಲ್ ಬೆಲೆ ಈಗಾಗಲೇ ಕೆಲವು ನಗರಗಳಲ್ಲಿ ರೂ.93ಕ್ಕೆ ತಲುಪಿದೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ತೈಲ ಕಂಪೆನಿಗಳು ಬೆಲೆ ತೋರಿಸುವ ಡಿಸ್‌ಪ್ಲೇ ಯಂತ್ರಗಳನ್ನು ಹೇಗೆ ನವೀಕರಿಸುತ್ತವೆ ಎಂದು ಇನ್ನು ಬಹಿರಂಗಪಡಿಸಿಲ್ಲ. ಆದ್ರೆ ಪ್ರಸ್ತುತ ಎಲ್ಲಾ ಇಂಧನ ಸರಬರಾಜುಗಳು ಕೇಂದ್ರ ಪೂರೈಕೆದಾರರ ಜೊತೆ ಸಂಪರ್ಕ ಹೊಂದಿದ್ದು, ಅವು ದೈನಂದಿನ ಬೆಲೆ ಪರಿಷ್ಕರಣೆಗಳನ್ನು ನವೀಕರಿಸಲಾಗುತ್ತಿದೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಇಂಧನ ಬೆಲೆಗಳ ಏರಿಕೆಗೆ ಪ್ರಮುಖ ಕಾರಣವೆಂದರೆ ಕಚ್ಚಾ ತೈಲಕ್ಕೆ ಹೆಚ್ಚಿನ ಬೇಡಿಕೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪ್ರಭಾವ ಬೀರಿದೆ. ಪ್ರಸ್ತುತ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ.92.35ಪೈಸೆ ಮತ್ತು ಡೀಸೆಲ್‍ ಲೀಟರ್‍‍ಗೆ ರೂ.79.53 ಪೈಸೆಗೆ ಮಾರಾಟವಾಗುತ್ತಿದೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಇದಲ್ಲದೇ ದೇಶಾದ್ಯಂತ ಇಂಧನ ಬೆಲೆಗಳು ಹೆಚ್ಚಿನ ಮಟ್ಟವನ್ನು ತಲುಪಿದ್ದು, ವಾಹನ ಸವಾರರು ಅಷ್ಟೇ ಅಲ್ಲದೇ ಜನಸಾಮಾನ್ಯರಿಗೂ ಇದರ ಬಿಸಿತಟ್ಟಿದೆ. ಹೀಗಿರುವಾಗ ಪೆಟ್ರೋಲ್ ಬಂಕ್‌ಗಳು ಮೂರಂಕಿ ಬೆಲೆ ಪ್ರದರ್ಶಿಸಲು ತಯಾರಾಗುತ್ತಿರುವುದು ವಾಹನ ಸವಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಇದರ ಮಧ್ಯೆ ಯೋಗ ಗುರು ಬಾಬಾ ರಾಮ್‍ದೇವ್ ಅವರು ಅಗ್ಗದ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಾರಾಟ ಮಾಡಲು ಮುಂದಾಗಿದ್ದು, ಬಾಬಾ ಇದಕ್ಕಾಗಿ ಕೆಲವು ಷರತ್ತುಗಳನ್ನು ಹಾಕಿದ್ದಾರೆ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಈ ನಿಟ್ಟಿನಲ್ಲಿ ಯೋಗ ಗುರು ಬಾಬಾ ರಾಮ್‍‍ದೇವ್ ಅವರು ಕೇಂದ್ರ ಸರ್ಕಾರವು ನಮಗೆ ಸಹಕರಿಸುವ ಮೂಲಕ ತೆರಿಗೆಯಲ್ಲಿ ಕೆಲವು ವಿನಾಯ್ತಿ ನೀಡಿದ್ದೆ ಆದಲ್ಲಿ ನಾನು ಒಂದು ಲೀಟರ್‍ ಪೆಟ್ರೋಲ್ ಅನ್ನು ಕೇವಲ ರೂ.35 ರಿಂದ 40ಕ್ಕೆ ಮಾರಲು ಸಿದ್ಧವಿರುದಾಗಿ ಎನ್‍‍ಡಿಟಿವಿ ಯೂತ್ ಕಾಂಕ್ಲೇವ್ ಟುಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಬಾಬಾ ರಾಮ್‍‍ದೇವ್ ಅವರು ತೆಗೆದುಕೊಂಡ ಈ ಸಂಚಲನಾತ್ಮಕ ಹೇಳಿಕೆಯು ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜೊತೆಗೆ ಮೋದಿಯವರು ಜನಸಾಮಾನ್ಯರಿಗೆ ಉಪಯುಕ್ತವಾದ ಎಷ್ಟೊ ಯೋಜನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದ್ರೆ ಮೂರು ತಿಂಗಳಿನಿಂದ ಏರಿಕೆಯಾಗುತ್ತಿರುವ ಇಂಧನದ ಬೆಲೆಯಿಂದಾಗಿ ಜನರು ಗೊಂದಲದಲ್ಲಿದ್ದರು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದಿರುವುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಇಷ್ಟೇ ಅಲ್ಲದೆ ಇಂಧನಗಳ ಮೇಲೆ ಈಗಿರುವ ತೆರಿಗೆಯನ್ನು ತೊಲಗಿಸಿ ಜಿಎಸ್‍‍‍ಟಿ ಅಡಿ ಇಂಧನಗಳನ್ನು ಮಾರಾಟ ತರುವ ಅವಶ್ಯವಿರುದಾಗಿ 'ಎನ್‍‍ಡಿಟಿವಿ' ನಡೆಸಿದ ಯೂತ್ ಕಾಂಕ್ಲೇವ್ ಟುಡೆ ಕಾರ್ಯಕ್ರಮದಲ್ಲಿ ಬಾಬಾ ರಾಮ್‍‍ದೇವ್ ಈ ರೀತಿಯಾಗಿ ಹೇಳಿಕೊಂಡಿದ್ದಾರೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ದೇಶದಲ್ಲಿರುವ ಬಹುತೇಕ ಮಂದಿ ಪ್ರಧಾನಿ ಮೋದಿಯವರ ಕಾರ್ಯವನ್ನು ಮೆಚ್ಚುತ್ತಲೇ ಇದ್ದಾರೆ. ಆದ್ರೆ ಅವರ ಕಾರ್ಯನಿರ್ವಹಣೆಯಲ್ಲಿ ಕೆಲ ಬದಲಾವಣೆ ಅವಶ್ಯಕತೆ ಇದೆ ಎಂದಿರುವ ಬಾಬಾ ರಾಮ್‌ದೇವ್ ಅವರು, ಕಳೆದ 2-3 ತಿಂಗಳಿನಿಂದ ಇಂಧನಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಈಗಲಾದ್ರು ಪ್ರಧಾನಿಯವದು ಎಚ್ಚೆತ್ತುಕೊಳ್ಳದಿದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ತೊಂದರೆಯಾಗಬಹುದು ಎಂದಿದ್ದಾರೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರದ ವೇಳೆ ರಾಮ್‌ದೇವ್ ಮತ್ತು ಇನ್ನಿತರೆ ನಾಯಕರು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಆಕ್ರಮಣ ಮಾಡಿದ್ದನ್ನು ನೆನೆದಿರುವ ಅವರು, ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೂ.35-40 ಕ್ಕೆ ಇಳಿಯಲಿದೆ ಎಂದು ಜನರಿಗೆ ಭರವಸೆ ನೀಡಿದ್ದರು. ಆದ್ರೆ ಇದೀಗ ರಾಷ್ಟ್ರದಲ್ಲಿನ ಪ್ರಮುಖ ನಗರಗಳಲ್ಲಿ ಪೆಟ್ರೋಲ್‍‍ನ ಬೆಲೆಯು ರೂ.90ಕ್ಕೆ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಧನಗಳ ಬೆಲೆ 100 ರೂ ದಾಟ್ಟುತ್ತೆ ಅನ್ನೊದಕ್ಕೆ ಇದೊಂದು ಸುಳಿವು

ಆದ್ರೆ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ನೀಡುವ ಮಾರ್ಗದ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಬಾಬಾ ರಾಮ್‌ದೇವ್ ಹೇಳಿಕೆ ಸಾಕಷ್ಟು ಪರ-ವಿರೋಧ ಕಮೆಂಟ್‌ಗಳು ಕೇಳಿಬರುತ್ತಿದ್ದು, ಒಂದು ವೇಳೆ ರಾಮ್‌ದೇವ್ ಅವರು ರೂ.40ಕ್ಕೆ ಪೆಟ್ರೋಲ್ ಮಾಡಿದ್ದೆ ಆದಲ್ಲಿ ಅದೊಂದು ಅದ್ಭುತ ಎಂದೇ ಹೇಳಬೇಕಾಗುತ್ತೆ.

ದಿನದಿಂದ ದಿನಕ್ಕೆ ಏರಿಕೆಯಾಗಿತ್ತಿರುವ ಇಂಧನದ ಬೆಲೆಯ ವಾಹನ ಸವಾರರಿಗೆ ತಲೆನೋವಾಗಿದ್ದು, ಇದರಿಂದ ಹೊರಬರಲು ಒಂದೇ ಮಾರ್ಗ ಅಂದ್ರೆ ಅದು ವಿದ್ಯುತ್ ವಾಹನಗಳನ್ನು ಬಳಸುವುದು. ಬೆಂಗಳೂರಿನ ಮೂಲದ ಅಥೆರ್ ಸಂಸ್ಥೆಯು ಬಿಡುಗಡೆಗೊಳಿಸಿದ ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಚಿತ್ರಗಳು ಇಲ್ಲಿದೆ ನೋಡಿ...

Most Read Articles

Kannada
Read more on auto news petrol diesel
English summary
Fuel Stations Are Getting Ready To Display Three-Digit Petrol And Diesel Prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more