ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ- ಹೋಂಡಾ ಮತ್ತು ಮಾರುತಿ ಸುಜುಕಿಯಿಂದ ಭಾರೀ ಡಿಸ್ಕೌಂಟ್

By Rahul Ts

ದೀಪಾವಳಿ ಮತ್ತು ದಸರಾ ಹಬ್ಬಗಳಿಗಾಗಿ ಬಹಳಷ್ಟು ಮಂದಿ ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲಿ ಕೆಲವರು ಹಬ್ಬವನ್ನು ಆಚರಣೆ ಮಾಡಲು ಕಾಯುತ್ತಿದ್ದಾರೆ, ಇನ್ನು ಕೆಲವರು ಹೊಸ ವಾಹನವನ್ನು ತಮ್ಮ ಮನೆಗೆ ಕೊಂಡೊಯ್ಯುವ ತವಕದಲ್ಲಿರುತ್ತಾರೆ. ಹೀಗಾಗಿ ಈ ಹಬ್ಬಗಳು ಕೇವಲ ಜನಸಾಮನ್ಯರಿಗಲ್ಲದೇ ಕಾರು ಉತ್ಪಾದಕ ಸಂಸ್ಥೆಗಳು ಕೂಡಾ ತಮ್ಮ ಮಾರಾಟವನ್ನು ಅಧಿಕಗೊಳಿಸಿಕೊಳ್ಳುವ ತವಕದಲ್ಲಿರುತ್ತಾರೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಹೋಂಡಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸುವುದಲದೇ, ಆಕರ್ಷಕ ಆಫರ್‍‍ಗಳು ಮತ್ತು ಲಂಡನ್ ಹಾಗು ಪ್ಯಾರಿಸ್‍‍ಗೆ ಹೋಗುವ ಸುವರ್ಣ ಅವಕಾಶವನ್ನು ನಿಮಗಾಗಿ ನೀಡುತ್ತಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಹೋಂಡಾ ಕಾರ್ಸ್

ಹೋಂಡಾ ಕಾರ್ಸ್ ಲಿಮಿಟೆಡ್ ಸಂಸ್ಥೆಯು 'ದಿ ಗ್ರೇಟ್ ಹೋಂಡಾ ಫೆಸ್ಟ್' ಎಂಬ ಮೇಳವನ್ನು ಶುರುಮಾಡಲಾಗಿದ್ದು, ಇದು ಸೆಪ್ಟೆಂಬರ್ 1-2018 ರಿಂದ ನವೆಂಬರ್ 7-2018ರ ವರೆಗು ದೇಶದಲ್ಲಿನ ಎಲ್ಲಾ ಅಧಿಕೃತ ಡೀಲರ್‍‍ಗಳಲ್ಲಿ ನಡೆಯಲಿದೆ. ಇದಲ್ಲದೇ ಹೊಸ ಕಾರನ್ನು ಖರೀದಿಸಿದ ಗ್ರಾಹಕರು ಲಕ್ಕಿ ಡ್ರಾ‍ನಲ್ಲಿ ಲಂಡನ್ ಅಥವಾ ಪ್ಯಾರಿಸ್‍‍ಗೆ ಹೋಗುವ ಅವಕಾಶವನ್ನು ಪಡೆದುಕೊಳ್ಳಬಹುದು.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಎಲ್ಲಾ ಬಿಲ್ಲಿಂಗ್ ಮತ್ತು ಡಾಕ್ಯುಮೆಂಟೇಷನ್‍‍ಗಳನ್ನು ನಿಗದಿತ ಸಮಯದಲ್ಲಿ ಪೂರ್ತಿಗೊಳಿಸಿರಬೇಕು. ಈ ಆಫರ್ ಹೋಂಡಾ ಸಂಸ್ಥೆಯ ಬ್ರಿಯೊ, ಜಾಝ್, ಅಮೇಜ್, ಡಬ್ಲ್ಯೂ-ಆರ್‍‍‍ವಿ, ಸಿಟಿ, ಬಿಆರ್‍-ವಿ, ಸಿಆರ್‍-ವಿ ಮತ್ತು ಅಕಾರ್ಡ್ ಹೈಬ್ರೀಡ್ ಕಾರುಗಳನ್ನು ಸೇರಿದಂತೆ ಸಂಸ್ಥೆಯಲ್ಲಿನ್ನ ಎಲ್ಲಾ ಕಾರುಗಳಿಗೆ ಅನ್ವಯಿಸುತ್ತದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

'ದಿ ಗ್ರೇಟ್ ಹೋಂಡಾ ಫೆಸ್ಟ್'ನಲ್ಲಿ ಭಾಗವಹಿಸಲು, ಗ್ರಾಹಕರು ತಮ್ಮ ಹೋಂಡಾ ಕಾರನ್ನು ಖರೀದಿಸಿದ ನಂತರ ನಿರ್ದಿಷ್ಟ ಸಮಯದ ಒಳಗೆ HCIL ವೆಬ್‍‍ಸೈಟ್ www.hondacarindia.comನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈ ಆಫರ್ ಸೆಪ್ಟೆಂಬರ್ 1 ರಿಂದ-ನವೆಂಬರ್ 7 2018ರ ವರೆಗು ಹೊಸ ಕಾರನ್ನು ಖರೀದಿಸಿದ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ರ್‍ಯಾಂಡಮ್ ಕಂಪ್ಯೂಟರ್ ಸೆಲೆಕ್ಷನ್‍ ಆಗಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಈ ಆಫರ್‍‍ಗಳನ್ನು ಹೋಂಡಾ ಸಾಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮಾರಾಟದ ಶ್ರೇಣಿಯನ್ನು ಹೆಚ್ಚಿಸಲು ಮಾಡುತ್ತಿದ್ದು, ಮೇ ತಿಂಗಳಿನಲ್ಲಿ ಬಿಡುಗಡೆಗೊಂಡ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಕಾರುಗಳು ಮಾರಾಟದಲ್ಲಿ ಹೋಂಡಾ ಸಂಸ್ಥೆಯ 20 ವರ್ಷಗಳ ದಾಖಲೆಯನ್ನು ಮರುಸೃಷ್ಠಿ ಮಾಡಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಸುಜುಕಿ

ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ನಷ್ಟ ಉಂಟಾಗಿದೆ. ಇದರಿಂದ ವಾಹನ ತಯಾರಕ ಸಂಸ್ಥೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮಾರಾಟದ ಶ್ರೇಣಿಯನ್ನು ಹೆಚ್ಚಿಸುವ ತವಕದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆ ಕೂಡಾ ತಮ್ಮ ಆಯ್ದ ಕಾರುಗಳ ಮೇಲೆ ಸುಮಾರು ಗರಿಷ್ಠವಾಗಿ ರೂ. 70,000 ಸಾವಿರದ ರಿಯಾಯಿತಿಯನ್ನು ಘೋಷಿಸಿದೆ. ಹಾಗದರೆ ಮಾರುತಿ ಸುಜುಕಿ ಸಂಸ್ಥೆಯು ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿಯನ್ನು ನೀಡುತ್ತಿದೆ ಎಂದು ಕೇಳಗಿನ ಸ್ಲೈಡರ್‍‍ಗಳಲ್ಲಿ ತಿಳಿಯಿರಿ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಆಲ್ಟೋ 800

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಆಲ್ಟೊ 800 ಕಾರಿನ ಮೇಲೆ ಸುಮಾರು ರೂ. 55,000 ಸಾವಿರದ ವರೆಗು ರಿಯಾಯಿತಿಯನ್ನು ನೀಡುತ್ತಿದೆ. ಕಾರಿನ ಎಲ್ಲಾ ವೇರಿಯಂಟ್‍‍ಗಳ ಮೇಲೆ ರೂ.25,000 ಸಾವಿರದ ನಗದು ರಿಯಾಯಿತಿ ಮತ್ತು ರೂ 30,000 ಸಾವಿರದ ಎಕ್ಸ್ಚೇಂಜ್ ಬೋನಸ್ ಅನ್ನು ಪಡೆಯಬಹುದಾಗಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಆಲ್ಟೊ ಕೆ10

ಮಾರುತಿ ಸಂಸ್ಥೆಯು ಮ್ಯನೌವಲ್ ವೇರಿಯಂಟ್ ಆಲ್ಟೊ ಕೆ10 ಕಾರಿನ ಮೇಲೆ ರೂ.22,000 ಸಾವಿರದ ನಗದು ರಿಯಾಯಿತಿ ಮತ್ತು ಎಎಂಟಿ ಕಾರುಗಳ ಮೇಲೆ ರೂ.27,000 ಸವಿರದ ನಗದು ರಿಯಾಯಿತಿಯನ್ನು ನೀಡುತ್ತಿದೆ. ಇದಲ್ಲದೇ ಮ್ಯಾನುವಲ್ ಕಾರುಗಳ ಮೇಳೆ ರೂ. 27,000 ಸಾವಿರ ಮತ್ತು ಎಎಂಟಿ ಕಾರುಗಳ ಮೇಲೆ ರೂ. 35,000 ಸಾವಿರದ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಪ್ರಸ್ಥುತ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ವ್ಯಾಗನಾರ್ ಕಾರುಗಳ ಮ್ಯಾನುವಲ್ ವೇರಿಯಂಟ್‍‍ನ ಮೇಲೆ ರೂ,30,000 ಸಾವಿರ ಮತ್ತು ಎಎಂಟಿ ವೇರಿಯಂಟ್ ಕಾರುಗಳ ಮೇಲೆ ರೂ, 35,000 ಸಾವಿರದ ನಗದು ರಿಯಾಯಿತಿಯನ್ನು ನೀಡುತ್ತಿದೆ. ಸೆಲೆರಿಯೊ ಕಾರುಗಳ ಮೇಲೆ ಗರಿಷ್ಠವಾಗಿ ರೂ. 60,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದೆ. ಸೆಲೆರಿಯೊ ಕಾರಿನ ಮ್ಯಾನುವಲ್ ಮತ್ತು ಸಿಎನ್‍‍ಜಿ ವೇರಿಯಂಟ್ ಕಾರುಗಳ ಮೇಲೆ ರೂ.25,000 ಸಾವಿರ ಮತ್ತು ಎಎಂಟಿ ಕಾರುಗಳ ಮೇಲೆ ರೂ.35,000 ಸಾವಿರದ ನಗದು ರಿಯಾಯಿತಿಯನ್ನು ನೀಡುತ್ತಿದೆ.

MUST READ: ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ಎರ್ಟಿಗಾ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಸುಜುಕಿ ಇಗ್ನಿಸ್

ಇಗ್ನಿಸ್ ಕಾರುಗಳ ಮೇಲೆ ಮಾರುತಿ ಸುಜುಕಿ ಸಂಸ್ಥೆಯ ಕೆಲವು ಡೀಲರ್‍‍ಗಳು ಈ ಕಾರಿನ ಮೇಲೆ ರೂ.55,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಪೆಟೋಲ್ ವೇರಿಯಂಟ್ ಕಾರುಗಳ ಮೇಲೆ ರೂ. 15,000 ಸಿಎನ್‍ಜಿ ವೇರಿಯಂಟ್‍‍ನ ಮೇಲೆ ರೂ.10,000 ನಗದು ರಿಯಾಯಿತನ್ನು ನೀಡಲಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಸ್ವಿಫ್ಟ್

ಸಂಸ್ಥೆಯಲ್ಲಿ ಅಧಿಕವಾಗಿ ಮಾರಾಟಗೊಳ್ಳುತ್ತಿರುವ ಸ್ವಿಫ್ಟ್ ಕಾರಿನ ಮೇಲೆ ಗಮನಾರ್ಹ ರೀತಿಯಲ್ಲಿ ನಿರಾಯಿತಿಯನ್ನು ನೀಡುತ್ತಿದೆ. ಸ್ಪೆಷಲ್ ಎಡಿಷನ್ ಪೆಟ್ರೋಲ್ ಮಾದರಿಯ ಸ್ವಿಫ್ಟ್ ಕಾರುಗಳ ಮೇಲೆ ರೂ.27,000 ಸಾವಿರದ ನಗದು ರಿಯಾಯಿತಿ ಮತ್ತು ಡೀಸೆಲ್ ವೇರಿಯಂತ್ ಕಾರುಗಳಾ ಮೇಲೆ ರೂ.10,000 ಸಾವಿರದ ನಗದು ರಿಯಾಯಿತಿಯನ್ನು ನೀಡಲಾಗಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಸುಜುಕಿ ಬಲೆನೊ

ಎರಡು ವರ್ಷಗಳ ಹಿಂದೆ ಬಿಡುಗಡೆಗೊಂಡ ಬಲೆನೊ ಕಾರುಗಳ ಮೇಲೆ ಸಂಸ್ಥೆಯ ಕೆಲ ಡೀಲರ್‍‍ಗಳು ರೂ.7,000 ಸಾವಿರದ ನಗದು ರಿಯಾಯಿತಿ ಮತ್ತು ರೂ. 15,000 ಸಾವಿರದ ಎಕ್ಸ್ಚೇಂಜ್ ಬೋನಸ್ ಅನ್ನು ನೀಡುತ್ತಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ಮಾರುತಿ ಡೀಜೈರ್

ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಬೆಸ್ಟ್ ಸೆಲ್ಲಿಂಗ್ ಕಾರಾದ ಡಿಜೈರ್ ಸೆಡಾನ್ ಕಾರು ಸ್ವಿಫ್ಟ್ ಕಾರಿನಂತೆಯೆ ರಿಯಾಯಿತಿಯನ್ನು ಪದೆದುಕೊಳ್ಳಲಿದ್ದು, ಕಾರಿನ ಡೀಸೆಲ್ ಮಾಡಲ್‍‍ಗಳ ಮೇಲೆ ರೂ.30,000 ಸಾವಿರದ ಎಕ್ಸ್ಚೇಂಝ್ ಬೋನಸ್ ಅನ್ನು ನೀಡುತ್ತಿದೆ.

ಹಬ್ಬಕ್ಕೆ ಹೊಸ ಕಾರು ಖರೀದಿಸುವವರಿಗೆ ಸುವರ್ಣಾವಕಾಶ.? ನಿಮಗಾಗಿ ಹೋಂಡಾ ಮತ್ತು ಮಾರುತಿ ಸುಜುಕಿ ಇಂದ ಭಾರೀ ಡಿಸ್ಕೌಂಟ್..

ವಿ.ಸೂ : ಮೇಲೆ ಹೇಳಿರುವ ರಿಯಾಯಿತಿ ದರಗಳು ನಗರದಿಂದ ನಗರಕ್ಕೆ ಬದಲಾವಣೇಗಳಾಗುವ ಸಾಧ್ಯತೆಗಳಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ ಹತ್ತಿರದ ಡೀಲರ್‍‍ಗಳ ಬಳಿ ಚರ್ಚಿಸಿದ ನಂತರವೇ ಮುಂದಿನ ವ್ಯವಹಾರ ಕೈಗೊಳ್ಳಿ.

Most Read Articles

Kannada
English summary
Honda and Maruti Suzuki offering massive discounts on cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more