ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಹೊಸ ಯೋಜನೆಯೊಂದನ್ನು ರೂಪಿಸಿರುವ ಹೋಂಡಾ ಇಂಡಿಯಾ ಸಂಸ್ಥೆಯು 2020ರ ಒಳಗಾಗಿಯೇ ಬಿಎಸ್ 6 ಎಂಜಿನ್ ಜೊತೆ ಹೊಸ ಚಾಲನಾ ಸೌಲಭ್ಯಗಳನ್ನು ಪರಿಚಯಿಸುವ ತವಕದಲ್ಲಿದೆ.

By Praveen Sannamani

2020ರ ವೇಳೆಗೆ ಭಾರತೀಯ ಆಟೋ ಉದ್ಯಮದಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳ ಉತ್ಪಾದನೆ ಮತ್ತು ಮಾರಾಟ ಕಡ್ಡಾಯವಾಗಿರಲಿದ್ದು, ಈ ಸಂಬಂಧ ಹೊಸ ಯೋಜನೆಯೊಂದನ್ನು ರೂಪಿಸಿರುವ ಹೋಂಡಾ ಇಂಡಿಯಾ ಸಂಸ್ಥೆಯು 2020ರ ಒಳಗಾಗಿಯೇ ಬಿಎಸ್ 6 ಎಂಜಿನ್ ಜೊತೆ ಹೊಸ ಚಾಲನಾ ಸೌಲಭ್ಯಗಳನ್ನು ಪರಿಚಯಿಸುವ ತವಕದಲ್ಲಿದೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಕಳೆದ ಏಪ್ರಿಲ್ 1ರಿಂದ ಬಿಎಸ್ 3 ವಾಹನಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು ಬಿಎಸ್ 4 ಮೇಲ್ಪಟ್ಟ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟಕ್ಕೆ ಆದೇಶಿಸಿದ್ದು, 2020ರ ವೇಳೆಗೆ ಬಿಎಸ್ 6 ವೈಶಿಷ್ಟ್ಯತೆಗಳನ್ನು ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟಕ್ಕೆ ಅವಕಾಶ ನೀಡಲಿದೆ. ಹೀಗಾಗಿ ಡೀಸೆಲ್ ಮಾದರಿಯನ್ನು ಉನ್ನತಿಕರಿಸುತ್ತಿರುವ ಹೋಂಡಾ ಸಂಸ್ಥೆಯು ಹೊಸ ಕಾರುಗಳಲ್ಲಿ ಸಿವಿಟಿ ಆಯ್ಕೆಯನ್ನು ಸಹ ನೀಡುತ್ತಿದೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಹೀಗಾಗಿ ಡೆಡ್‌ ಲೈನ್‌ಗೂ ಮುನ್ನವೇ ಹೊಸ ಮಾದರಿಯ ವಾಹನಗಳನ್ನು ಪರಿಚಯಿಸಲು ಮುಂದಾಗಿರುವ ಹೋಂಡಾ ಇಂಡಿಯಾ ಸಂಸ್ಥೆಯು ಮೊದಲ ಹಂತವಾಗಿ ಡೀಸೆಲ್ ಕಾರುಗಳನ್ನು ಬಿಎಸ್ 6 ವೈಶಿಷ್ಟ್ಯತೆಗಳೊಂದಿಗೆ ಉನ್ನತಿಕರಿಸುತ್ತಿದೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಏನಿದು ಬಿಎಸ್ 6?

ಹೌದು... ಇದು ಪ್ರತಿಯೊಬ್ಬರಿಗೂ ಮನಸ್ಸಿನಲ್ಲೂ ಮೂಡಬಹುದಾದ ಸಾಮಾನ್ಯ ಪ್ರಶ್ನೆ. ಯಾಕಂದ್ರೆ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳು ಪರಿಸರಕ್ಕೆ ಪೂರಕವಾದ ವೈಶಿಷ್ಟ್ಯತೆಗಳನ್ನು ಹೊಂದಿರುವುದಲ್ಲದೇ ಮಾಲಿನ್ಯ ನಿಯಂತ್ರಣಕ್ಕಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತವೆ. ಈ ಹಿನ್ನೆಲೆ ಇಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಇನ್ನು ಯುರೋಪ ರಾಷ್ಟ್ರಗಳಲ್ಲಿ ಯುರೋ 6 ಎಂಜಿನ್ ಪ್ರೇರಿತ ವಾಹನಗಳು ಈಗಾಗಲೇ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 2020ರ ವೇಳೆಗೆ ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳು ಬಿಎಸ್ 6 ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಿವೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಈ ಹಿನ್ನೆಲೆ ಬಿಎಸ್ 6 ವಾಹನಗಳ ಉತ್ಪಾದನೆ ಮೇಲೆ ಆಸಕ್ತಿ ತೋರಿಸಿರುವ ಹೋಂಡಾ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಡೀಸೆಲ್ ಎಂಜಿನ್ ಕಾರುಗಳನ್ನು ಬಿಎಸ್ 6 ಗೆ ಉನ್ನತಿಕರಿಸುವ ಮಹತ್ಪದ ಯೋಜನೆಗೆ ಚಾಲನೆ ನೀಡುತ್ತಿದೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಇದಲ್ಲದೇ ಸಿ ಸೆಗ್ಮೆಂಟ್ ಡಿಸೇಲ್ ಕಾರು ಮಾದರಿಗಳಲ್ಲಿ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗೂ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೇ ಕಾರಣಕ್ಕೆ ಮೊನ್ನೆಯಷ್ಟೇ ಬಿಡುಗಡೆಯಾದ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲೂ ಹೊಸ ಸಿವಿಟಿ ಆಯ್ಕೆ ನೀಡಲಾಗಿದೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಈ ಬಗ್ಗೆ ಮಾತನಾಡಿರುವ ಹೋಂಡಾ ಇಂಡಿಯಾ ಆಡಳಿತ ನಿರ್ದೇಶಕ ರಾಜೇಶ್ ಗೋಯಲ್, ಡಿಸೇಲ್ ಮಾದರಿಗಳಲ್ಲಿ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳಿಗೆ ಉತ್ತಮ ಬೇಡಿಕೆಯಿದ್ದು, ಇದೀಗ ಅಮೇಜ್ ನಂತರ ಸಿಟಿ ಸೆಡಾನ್ ಕಾರುಗಳಲ್ಲೂ ಹೊಸ ಆಯ್ಕೆ ನೀಡುವ ಯೋಜನೆಯಿದೆ ಎಂದಿದ್ದಾರೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಹೀಗಾಗಿ ಹೊಸ ಆಯ್ಕೆಯನ್ನು 2019ರ ಮೊದಲ ತ್ರೈಮಾಸಿಕ ಅವಧಿಯೊಳಗೆ ನೀಡುವ ಭರವಸೆ ನೀಡಿರುವ ಹೋಂಡಾ ಸಂಸ್ಥೆಯು ಹೊಸ ಕಾರುಗಳ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆಗಳು ಕೂಡಾ ಇವೆ.

ಸಿಟಿ ಸೆಡಾನ್ ಕಾರುಗಳಲ್ಲಿ ಡೀಸೆಲ್ ಸಿವಿಟಿ ಪರಿಚಯಿಸಲಿದೆ ಹೋಂಡಾ..

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2020ರ ವೇಳೆಗೆ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಹೊಸದೊಂದು ನಿಯಮವು ಜಾರಿಯಾಗಲಿದ್ದು, ಬಿಎಸ್ 6 ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಬರಲಿದೆ. ಹೀಗಾಗಿ ಭವಿಷ್ಯ ವಾಹನಗಳ ಉತ್ಪಾದನೆ ಮೇಲೆ ಹೋಂಡಾ ಇಂಡಿಯಾ ಸಂಸ್ಥೆಯು ಹೆಚ್ಚು ಉತ್ಸುಕವಾಗಿದೆ ಎನ್ನಬಹುದು.

Most Read Articles

Kannada
Read more on sedan
English summary
Honda City Diesel CVT In The Works — More Details Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X