ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

By Praveen Sannamani

ಹ್ಯುಂಡೈ ಸಂಸ್ಥೆಯು ಸದ್ಯದಲ್ಲೇ ಹೊಸ ತಲೆಮಾರಿನ ಸ್ಯಾಂಟ್ರೋ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರಿನ ಹೆಸರು ಬದಲಾವಣೆಗೆ ಮುಂದಾಗಿದೆ. ಇದಕ್ಕಾಗಿ ಗ್ರಾಹಕರಿಂದಲೇ ವಿನೂತನ ಕಾರಿಗೆ ಅಂದವಾದ ಹೆಸರು ಕಳುಹಿಸಿ ಬಹುಮಾನ ಪಡೆಯುವ ಆಫರ್ ನೀಡಿದ್ದ ಹ್ಯುಂಡೈ ಸಂಸ್ಥೆಯು ಗ್ರಾಹಕರ ಪ್ರತಿಕ್ರಿಯೆ ಕಂಡು ಬೆರಗಾಗಿದೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಹೌದು, ಹ್ಯುಂಡೈ ಸಂಸ್ಥೆಯು ಕಳೆದ ವಾರವೇ ಹೊಸ ಹೆಸರು ಸೂಚಿಸಿತ್ತು. ಇದಕ್ಕೆ ಅದ್ಭುತ ಪ್ರಕ್ರಿಯೆ ವ್ಯಕ್ತವಾಗಿಲ್ಲದೇ ಬರೋಬ್ಬರಿ 2 ಲಕ್ಷ ಜನ ವಿವಿಧ ಹೆಸರುಗಳನ್ನು ಕಳುಹಿಸಿದ್ದಾರೆ. ಇವುಗಳಲ್ಲಿ ಶೇ.40ರಷ್ಟು ಜನ ಸ್ಯಾಂಟ್ರೋ ಹೆಸರನ್ನೇ ಮರಳಿ ಕಳುಹಿಸಿದ್ದಲ್ಲದೇ ಈ ಹೆಸರನ್ನು ಯಾವುದೇ ಕಾರಣಕ್ಕೂ ಬದಲಿ ಮಾಡದಂತೆ ಮನವಿ ಮಾಡಿರುವ ಬಗ್ಗೆ ಸ್ವತಃ ಹ್ಯುಂಡೈ ಅಧಿಕಾರಿಗಳು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಹೀಗಾಗಿ ಹೊಸ ಕಾರಿನ ಹೆಸರನ್ನು ಮುಂಬರುವ ಅಕ್ಟೋಬರ್ 4ರಂದು ಬಹಿರಂಗಗೊಳಿಸಲು ತೀರ್ಮಾನಿಸಿರುವ ಹ್ಯುಂಡೈ ಸಂಸ್ಥೆಯು ಹೆಸರು ಬದಲಾವಣೆ ಮಾಡಬೇಕೋ ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿದ್ದು, ಈ ಬಗ್ಗೆ ಸದ್ಯದಲ್ಲೇ ಮಹತ್ವದ ನಿರ್ಧಾರ ಪ್ರಕಟಿಸಿದೆ ಎನ್ನಲಾಗಿದೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ಈಗಾಗಲೇ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಸ್ಟಾಟ್ ಟೆಸ್ಟಿಂಗ್ ವೇಳೆ ಉತ್ತಮ ಪ್ರದರ್ಶನ ತೊರುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿರುವುದಲ್ಲದೇ ಎಂಟ್ರಿ ಲೆವಲ್ ಕಾರುಗಳಲ್ಲಿ ಹೊಸ ಟ್ರೆಂಡ್ ಸೃಷ್ಠಿಸಲಿದೆ ಎನ್ನಬಹುದು.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಆದ್ರೆ ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಮೇಲೆ ಭಾರೀ ಪ್ರಮಾಣದ ಮುಸುಕು ಹಾಕಿದ್ದರ ಪರಿಣಾಮ ವಿನ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಾಧ್ಯವಾಗಿಲ್ಲ ಎನ್ನಬಹುದು.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಆದರೂ ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಎಂಜಿನ್ ಪಡೆದುಕೊಳ್ಳುವುದರ ಜೊತೆ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಜೊತೆಗೆ ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ (ಅಂದಾಜು)

ಸ್ಯಾಂಟ್ರೊ ಹೊಸ ಕಾರುಗಳನ್ನ ದೀಪಾವಳಿ ಹೊತ್ತಿಗೆ ಬಿಡುಗೊಳಿಸುವ ಬಗ್ಗೆ ಮಾಹಿತಿಗಳಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3.90 ಲಕ್ಷದಿಂದ 4.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹ್ಯಾಚ್‌ಬ್ಯಾಕ್ ಪ್ರಿಯರ ಆಲ್ ಟೈಮ್ ಫೆವರಿಟ್ 'ಸ್ಯಾಂಟ್ರೋ' ಕಾರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹಲವು ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಆವೃತ್ತಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೋ ಮತ್ತು ರೆನಾಲ್ಟ್ ಕ್ವಿಡ್‌ಗೆ ತೀವ್ರ ಸ್ಪರ್ಧಿಯಾಗಲಿದೆ.

Most Read Articles

Kannada
Read more on hyundai hatchback new car
English summary
'Santro’ Is The Top Favourite Name For Hyundai’s New AH2 Hatchback.
Story first published: Thursday, August 30, 2018, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X