ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಹ್ಯುಂಡೈ ಇಂಡಿಯಾ ಸಂಸ್ಥೆಯು ಮುಂಬರುವ ದೀಪಾವಳಿ ಹೊತ್ತಿಗೆ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರುಗಳನ್ನು ವಿನೂತನ ಡಿಸೈನ್‌ನೊಂದಿಗೆ ಬಿಡುಗಡೆಯ ಸುಳಿವು ನೀಡಿದ್ದು, ಇದೀಗ ಹೊಸ ಕಾರಿಗೆ ಮರುನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

By Praveen Sannamani

ಹೌದು, ಹ್ಯುಂಡೈ ಸಂಸ್ಥೆಗೆ ಜನಪ್ರಿಯತೆ ತಂದು ಕೊಟ್ಟಿದ್ದ ಸ್ಯಾಂಟ್ರೋ ಕಾರುಗಳು ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಉದ್ದೇಶದಿಂದ ಭಾರೀ ಬದಲಾವಣೆಯೊಂದಿಗೆ ಮರು ಬಿಡುಗಡೆಗಾಗಿ ಸಿದ್ದವಾಗಿದ್ದು, ಸ್ಯಾಂಟ್ರೋ ಕಾರುಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಮುಂದಾಗಿರುವ ಹ್ಯುಂಡೈ ಸಂಸ್ಥೆಯು ಸ್ಯಾಂಟ್ರೋ ಬದಲಾಗಿ ಗ್ರಾಹಕರನ್ನು ಸೆಳೆಯುವಂತಹ ಹೊಸ ಹೆಸರಿಗಾಗಿ ಹುಡುಕಾಟ ನಡೆಸಿದೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಇದಕ್ಕಾಗಿಯೇ ಕಾರು ಪ್ರಿಯರಿಗೆ ಹೊಸ ಅವಕಾಶ ನೀಡಿರುವ ಹ್ಯುಂಡೈ ಸಂಸ್ಥೆಯು ಚೆಂದದ ಹೆಸರನ್ನು ಸೂಚಿಸುವವರಿಗೆ ಉಚಿತವಾಗಿ ಹೊಸ ಕಾರನ್ನು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದು, ನೀವು ಕೂಡಾ ಸ್ಯಾಂಟ್ರೋ ಹೊಸ ಕಾರಿಗೆ ಆಟೋ ಉದ್ಯಮಕ್ಕೆ ಸಂಬಂಧಪಟ್ಟಂತೆ ಅಂದದ ಹೆಸರನ್ನ ಸೂಚಿಸಬಹುದು.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಭಾಗಿಯಾಗಿ ಬಹುಮಾನ ಗೆಲ್ಲಿ.!

ಹ್ಯುಂಡೈ ಸಂಸ್ಥೆಯು ಹೊಸ ಸ್ಯಾಂಟ್ರೋ ಕಾರಿಗೆ ಅಂದದ ಹೆಸರು ಸೂಚಿಸಲು "ಹ್ಯುಂಡೈ ನಾಮಕರಣ" ಎಂಬ ಅಭಿಯಾನ ಆರಂಭಿಸಿದ್ದು, ಇದಿನಿಂದಲೇ ಆರಂಭವಾಗಿರುವ ಹೊಸ ಅಭಿಯಾನವು ಸೆಪ್ಟೆಂಬರ್ 25ರ ತನಕ ಹೊಸ ಹೆಸರು ಸೂಚಿಸಲು ಅವಕಾಶ ನೀಡದೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಹ್ಯುಂಡೈ ಸಂಸ್ಥೆಯು ಹೊಸ ಹೆಸರುಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವಿಕಾರ ಮಾಡಲು ಪ್ರತ್ಯೇಕವಾದ ಆಯ್ಕೆಯನ್ನೇ ನೀಡಿದ್ದು, ಜೊತೆಗೆ ವಾಟ್ಸಾಪ್ ಸಂಖ್ಯೆ 8652000377, 8652000388 ಅಥವಾ 8652000399 ಮೂಲಕವು ಸ್ಯಾಂಟ್ರೋ ಕಾರಿಗೆ ಹೊಸ ಹೆಸರನ್ನು ಸೂಚಿಸಬಹುದು.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಸೆಪ್ಟೆಂಬರ್ 25ರ ತನಕವು ಹೆಸರು ಸೂಚಿಸಲು ಅವಕಾಶವಿದ್ದು, ಇವುಗಳಲ್ಲಿ ಆಯ್ದ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ತದನಂತರ ಅಕ್ಟೋಬರ್ 4 ರಂದು ನಡೆಯಲಿರುವ ಹೊಸ ಕಾರಿನ ನಾಮಕರಣ ಕಾರ್ಯಕ್ರಮದಲ್ಲಿ ಲಕ್ಕಿ ಡ್ರಾ ಮೂಲಕ ಅಂತಿಮ ಹೆಸರನ್ನ ಆಯ್ದುಕೊಳ್ಳಲಾಗುತ್ತದೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಲಕ್ಕಿ ವಿನ್ನರ್‌ಗೆ ಹೊಸ ಕಾರಿನ ಬೆಸ್ ವೆರಿಯೆಂಟ್ ಉಡುಗೊರೆಯಾಗಿ ಸಿಗಲಿದ್ದು, ಇನ್ನುಳಿದ ಶಾರ್ಟ್ ಲಿಸ್ಟ್ ಅದೃಷ್ಟಶಾಲಿಗಳಿಗೂ ವಿವಿಧ ಬಹುಮಾನಗಳು ಸಿಗಲಿವೆ. ನಿಮ್ಮಲ್ಲೂ ಆಟೋ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯವಿದ್ದಲ್ಲಿ ನೀವು ಕೂಡಾ ಪ್ರಯತ್ನ ಮಾಡಬಹುದು. ಇದರಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಹ್ಯುಂಡೈ ಸಂಸ್ಥೆಯ ಅಭಿಯಾನದಲ್ಲಿ ಒಂದೇ ನಂಬರ್ ಮೂಲಕ ಹಲವು ಹೆಸರುಗಳನ್ನು ಸೂಚಿಸುವ ಅವಕಾಶವಿದೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಇನ್ನು ಕಡಿಮೆ ಬಜೆಟ್‌ನಲ್ಲಿ ಸಿಗಬಹುದಾದ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ. ಆದರೇ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸದಿರಲು ಹ್ಯುಂಡೈ ನಿರ್ಧರಿಸಿದೆ ಎನ್ನಲಾಗಿದೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ (ಅಂದಾಜು)

ಸ್ಯಾಂಟ್ರೊ ಹೊಸ ಕಾರುಗಳನ್ನ ದೀಪಾವಳಿ ಹೊತ್ತಿಗೆ ಬಿಡುಗೊಳಿಸುವ ಬಗ್ಗೆ ಮಾಹಿತಿಗಳಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3.90 ಲಕ್ಷದಿಂದ 4.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೊಸ ಸ್ಯಾಂಟ್ರೋ ಕಾರನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಲು ಇಲ್ಲೊಂದು ಸುವರ್ಣಾವಕಾಶ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಆವೃತ್ತಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಸ್ಯಾಂಟ್ರೋ ಕಾರುಗಳಿಗೆ ಮರುನಾಮಕರಣ ಮಾಡಲು ಮುಂದಾಗಿರುವ ಹ್ಯುಂಡೈ ನಿರ್ಧಾರವು ಸ್ವಾಗತಾರ್ಹ. ಹೀಗಾಗಿ ಕಾರು ಪ್ರಿಯರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದಾಗಿದ್ದು, ನೀವು ಕೂಡಾ ವಿನೂತನ ಹೆಸರು ಕಳುಹಿಸಿ ಅದೃಷ್ಟಶಾಲಿಯಾಗಿದ್ದರೆ ನಿಮಗೂ ಕೂಡಾ ಉಚಿತವಾಗಿ ಒಂದು ಕಾರು ಸಿಗಬಹುದು.

Most Read Articles

Kannada
Read more on hyundai santro hatchback
English summary
Hyundai Announces Naming Campaign For The AH2 Hatchback.
Story first published: Friday, August 17, 2018, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X