ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಭಾರತೀಯ ಆಟೋ ಉದ್ಯಮದಲ್ಲಿ ಈಗಾಗಲೇ ಜನಪ್ರಿಯತೆ ಹೊಂದಿರುವ ಹ್ಯುಂಡೈ ಸ್ಯಾಂಟ್ರೋ ಕಾರುಗಳು ಇದೇ ತಿಂಗಳು 28ರಂದು ಮತ್ತಷ್ಟು ಹೊಸತನದೊಂದಿಗೆ ಮರಳಿ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದ್ದು, ಈ ಹಿಂದಿಗಿಂತಲೂ ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವುದು ಖಚಿತವಾಗಿದೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರುಗಳನ್ನು ಸದ್ಯ ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಹ್ಯುಂಡೈ ಸಂಸ್ಥೆಯು ಎಂಜಿನ್ ಕಾರ್ಯಕ್ಷಮತೆ ಬಗೆಗೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದ್ದು, ಹ್ಯುಂಡೈ ಸಂಸ್ಥೆಯು ತನ್ನ ಎಂಟ್ರಿ ಲೆವಲ್ ಇಯಾನ್ ಕಾರುಗಳನ್ನು ಸ್ಧಗಿತಗೊಳಿಸಿ ಸ್ಯಾಂಟ್ರೋ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ವಿನೂತನವಾದ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರುವ ಸಾಧ್ಯತೆಗಳಿದ್ದು, ಇದೇ ತಿಂಗಳು ಅಕ್ಟೋಬರ್ 9ರಂದು ಹ್ಯುಂಡೈ ಸಂಸ್ಥೆಯು ಹೊಸ ಸ್ಯಾಂಟ್ರೋ ಕಾರಿನ ಅಧಿಕೃತ ಹೆಸರನ್ನು ಬಹಿರಂಗಗೊಳಿಸಲು ವೇದಿಕೆ ಸಿದ್ದಗೊಳಿಸಿದೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಈಗಾಗಲೇ ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ ಎಂಬ ಮಾಹಿತಿ ದೊರೆತಿದೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಮಾಹಿತಿಗಳ ಪ್ರಕಾರ ಹೊಸ ಕಾರು ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಸೆಲೆರಿಯೊ ಕಾರುಗಳಿಂತಲೂ ಉತ್ತಮ ವೀಲ್ಹ್ ಬೆಸ್ ಹೊಂದಿದ್ದು, ಹೊಸ ಸ್ಯಾಂಟ್ರೋ ಕಾರುಗಳು 3610ಎಂಎಂ ಉದ್ದ, 1645ಎಂಎಂ ಅಗಲ, 1560ಎಂಎಂ ಎತ್ತರ ಮತ್ತು 160ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿರಲಿದೆಯೆಂತೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಜೊತೆಗೆ ಹೊಸ ಸ್ಯಾಂಟ್ರೋ ಕಾರುಗಳು ಏರಾ, ಮ್ಯಾಗ್ಮಾ, ಸ್ಪೋರ್ಟ್ಜ್, ಸ್ಪೋರ್ಟ್ಜ್(o) ಮತ್ತು ಆಸ್ಟ್ರಾ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಾಗಲಿದ್ದು, ಪ್ರತಿ ಮಾದರಿಯಲ್ಲೂ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಹ್ಯುಂಡೈ ಭರವಸೆ ನೀಡಿದೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಅಲಾಯ್ ಚಕ್ರಗಳು, ಪಾರ್ಕಿಂಗ್ ಸೆನ್ಸಾರ್, ಎಸಿ ವೆಂಟ್ಸ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಎಂಜಿನ್ ಸಾಮರ್ಥ್ಯ

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು 1.1 ಲೀಟರ್ ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವು ಆಯ್ಕೆ ರೂಪದಲ್ಲಿ ದೊರೆಯಲಿವೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಕಾರಿನ ಬೆಲೆಗಳು(ಅಂದಾಜು)

ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷ ಕಾರು ಮಾದರಿಯಾಗಿ ಹೊಸ ಸಂಚಲನ ಸೃಷ್ಠಿಸಲಿರುವ ಸ್ಯಾಂಟ್ರೋ ಕಾರುಗಳು ಆರಂಭಿಕವಾಗಿ ರೂ. 3.50 ಲಕ್ಷದಿಂದ ಟಾಪ್ ಎಂಡ್ ಮಾದರಿಗಳಿಗೆ ರೂ. 4.20 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಈ ಮೂಲಕ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ಪೈಪೋಟಿ ನೀಡಲಿರುವ ಹ್ಯುಂಡೈ ಸಂಸ್ಥೆಯು ಆಲ್ಟೊ 800, ಸೆಲೆರಿಯೊ, ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ ಕಾರುಗಳ ಮಾರಾಟಕ್ಕೆ ಟಕ್ಕರ್ ನೀಡಲಿದೆ.

ಕ್ವಿಡ್, ಸೆಲೆರಿಯೋ ಕಾರುಗಳಿಂತಲೂ ಅತ್ಯುತ್ತಮವಾಗಿರಲಿದೆ ಹೊಸ ಸ್ಯಾಂಟ್ರೋ ಕಾರು

ಹಾಗೆಯೇ ಎಂಟ್ರಿ ಲೆವಲ್ ಕಾರು ಮಾದರಿಯಾಗಿರುವ ಸ್ಯಾಂಟ್ರೋಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಪರಿಚಯಿಸಲಿರುವ ಹ್ಯುಂಡೈ ಸಂಸ್ಥೆಯು ದೇಶದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುತ್ತಿದ್ದು, ಅಕ್ಟೋಬರ್ 9ರಂದು ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿವೆ.

Source: Gaadiwaadi

Most Read Articles

Kannada
Read more on hyundai santro
English summary
2019 Hyundai Santro Car Key Details Leaked in Online.
Story first published: Wednesday, October 3, 2018, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X