ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಸ್ಯಾಂಟ್ರೋ ಕಾರು ಬಿಡುಗಡೆಗೊಂಡು 20 ವರ್ಷವಾದ್ರು ಇನ್ನು ಕೂಡಾ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮಹತ್ತರ ಬದಲಾವಣೆಯೊಂದಿಗೆ ಮತ್ತೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಬಿಡುಗಡೆಗೊಂಡು ಕೇವಲ ವಾರದಲ್ಲಿ 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಟಾಪ್ 10ರ ಕಾರು ಮಾರಾಟ ಪಟ್ಟಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ನಿರ್ಮಾಣದ ಡಿಜೈರ್, ಆಲ್ಟೊ, ಸ್ವಿಫ್ಟ್, ವ್ಯಾಗನ್ ಆರ್, ಬಲೆನೊ ಮತ್ತು ಬ್ರೆಝಾ ಕಾರು ಮೊದಲ ಆರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದು, ತದನಂತರದಲ್ಲಿ ಹ್ಯುಂಡೈ ನಿರ್ಮಾಣ ಗ್ರಾಂಡ್ ಐ10, ಐ20, ಕ್ರೆಟಾ ಕಾರುಗಳು ಸ್ಥಾನ ಪಡೆದಿವೆ. ಹಾಗೆಯೇ 10ನೇ ಸ್ಥಾನಕ್ಕಾಗಿ ಹೋಂಡಾ ಮತ್ತು ಮಹೀಂದ್ರಾ ಸಂಸ್ಥೆಗಳು ಪೈಪೋಟಿ ನಡೆಸುತ್ತಿವೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಆದ್ರೆ ಹೊಚ್ಚ ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿರುವ ವಿನೂತನ ಸ್ಯಾಂಟ್ರೋ ಕಾರು ಮಾರುತಿ ಸುಜುಕಿಯ ಪ್ರಮುಖ ಮೂರು ಕಾರುಗಳ ಮಾರಾಟ ಪ್ರಮಾಣವನ್ನು ಹಿಂದಿಕ್ಕುವ ಸಾಧ್ಯತೆಗಳಿದ್ದು, ಟಾಪ್ 3 ಅಥವಾ ಟಾಪ್ 4 ಸ್ಥಾನವನ್ನು ತನ್ನದಾಸಿಕೊಳ್ಳುವ ತವಕದಲ್ಲಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಈಗಾಗಲೇ ದೇಶಾದ್ಯಂತ ಸ್ಯಾಂಟ್ರೋ ಕಾರುಗಳ ಮಾರಾಟ ಪ್ರಕ್ರಿಯೆ ಚಾಲನೆ ನೀಡಲಾಗಿದ್ದು, ನವೆಂಬರ್ 2ಕ್ಕೆ ಬಿಡುಗಡೆಯಾಗಲಿರುವ ಕಾರುಗಳ ಮಾರಾಟ ಪ್ರಮಾಣದ ಪಟ್ಟಿಯಲ್ಲಿ ಹೊಸ ಸ್ಯಾಂಟ್ರೋ ಯಾವ ಮಟ್ಟಿಗೆ ಜನಪ್ರಿಯತೆ ಸಾಧಿಸಿವೆ ಎನ್ನುವುದು ಬಹಿರಂಗವಾಗಲಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಇನ್ನು ಬಿಡುಗಡೆಯಾಗಿರುವ ಹೊಸ ಸ್ಯಾಂಟ್ರೋ ಕಾರು ಐದು ಪ್ರಮುಖ ವೆರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಸೌಲಭ್ಯಗಳಿಗೆ ಅನುಗುಣವಾಗಿ ಡಿ-ಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟ್ರಾ ವೆರಿಯೆಂಟ್‌‌ಗಳೊಂದಿಗೆ ಸಿಎನ್‌ಜಿ ಇಂಧನ ಆಯ್ಕೆಯನ್ನು ಕೂಡಾ ನೀಡಲಾಗಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಹಳೆಯ ಮಾದರಿಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಸ್ಯಾಂಟ್ರೋ ಕಾರಿನ ಬೆಲೆಗಳು (ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು - ಬೆಲೆಗಳು

ಡಿಲೈಟ್ - ರೂ. 3,89,900

ಎರಾ -ರೂ. 4,24,900

ಮ್ಯಾಗ್ನಾ -ರೂ. 4,57,900

ಮ್ಯಾಗ್ನಾ ಎಎಂಟಿ -ರೂ.5,18,900

ಸ್ಪೋರ್ಟ್ಜ್ -ರೂ. 4,99,900

ಸ್ಪೋರ್ಟ್ಜ್ ಎಎಂಟಿ -ರೂ.5,64,900

ಆಸ್ಟ್ರಾ -ರೂ.5,45,900

ಮ್ಯಾಗ್ನಾ ಸಿಎನ್‌ಜಿ -ರೂ.5,23,900

ಸ್ಪೋರ್ಟ್ಜ್ ಸಿಎನ್‌ಜಿ -ರೂ.5,64,900

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಹಾಗೆಯೇ ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರು ಒಳಭಾಗದ ವಿನ್ಯಾಸಗಳು ಸಹ ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್‌ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ಡ್ಯುಯಲ್ ಥೀಮ್ ಡ್ಯಾಶ್ ಬೋರ್ಡ್, ಡೋರ್ ಟ್ರಿಮ್, ಗ್ರಾಂಡ್ ಐ10 ಮಾದರಿಯಲ್ಲಿ ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವೀಲ್ಹ್, ಸಿಲ್ವರ್ ಅಕ್ಸೆಂಟ್ ಮತ್ತು ಹಿಂಬದಿಯ ಪ್ರಯಾಣಿಕರಿಗೂ ಪ್ರತ್ಯೇಕ ಎಸಿ ವೆಂಟ್ಸ್ ನೀಡಲಾಗಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಎಂಜಿನ್ ಸಾಮರ್ಥ್ಯ

ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

MOST READ: ಶಾಕಿಂಗ್ ನ್ಯೂಸ್: 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ವರ್ಷ ಮೇಲ್ಪಟ್ಟ ಪೆಟ್ರೋಲ್ ಕಾರುಗಳು ಬ್ಯಾನ್

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಮೈಲೇಜ್

ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಪೆಟ್ರೋಲ್ ಎಂಜಿನ್ ಸ್ಯಾಂಟ್ರೋ ಕಾರುಗಳು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಹೊಂದಿರುವ ಸ್ಯಾಂಟ್ರೋ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ಗರಿಷ್ಠ ಮೈಲೇಜ್ ನೀಡಲಿವೆ.

ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಮತ್ತೆ ಲಗ್ಗೆಯಿಟ್ಟ ಹೊಸ ಸ್ಯಾಂಟ್ರೋ

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮೆರಾ, ಸ್ಪೀಡ್ ಸೆಸ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯಗಳನ್ನು ನೀಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿವೆ.

Most Read Articles

Kannada
English summary
Hyundai Santro 2018 Enters Top 10 Selling Cars List In India.
Story first published: Tuesday, October 30, 2018, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X