ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಜನಪ್ರಿಯ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಜಾಗ್ವಾರ್ ತನ್ನ ಎಕ್ಸ್ಇ ಮತ್ತು ಎಕ್ಸ್ಎಫ್ ಕಾರುಗಳ ಇಂಜೀನಿಯಮ್ ಪೆಟ್ರೋಲ್ ಆವೃತ್ತಿಯನ್ನು ಬಿಡಗಡೆ ಮಾಡಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಇಂಜೀನಿಯಮ್ ಡೀಸೆಲ್ ಆವೃತ್ತಿಗಳು ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಹೊಸ ಎಂಜಿನ್ ಆಯ್ಕೆ ನೀಡಲಾಗಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಐಷಾರಾಮಿ ಸೆಡಾನ್ ಸರಣಿಯಲ್ಲಿ ಡೀಸೆಲ್ ಮಾದರಿಗಳಿಗಿಂತ ಪೆಟ್ರೋಲ್ ಮಾದರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಜಾಗ್ವಾರ್ ಸಂಸ್ಥೆಯು ತನ್ನ ಎಕ್ಸ್ಇ ಮತ್ತು ಎಕ್ಸ್ಎಫ್ ಕಾರುಗಳ ಇಂಜೀನಿಯಮ್ ಪೆಟ್ರೋಲ್ ಆವೃತ್ತಿಗಳನ್ನು ಪರಿಚಯಿಸಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಜಾಗ್ವಾರ್ ಸಂಸ್ಥೆಯ ಎಂಜಿನ್‍ಗಳು ಅಲ್ಯುಮಿನಿಯಂನಿಂದ ತಯಾರುಗೊಂಡಿದ್ದು, ಇದು ಉತ್ತಮ ದಕ್ಷತೆ ಮತ್ತು ವಿದ್ಯುತ್ ವಿತರಣೆಯಲ್ಲಿ ಸಹಾಯ ಮಾಡುತ್ತದೆ. ಇಂಜೀನಿಯಮ್ ಪೆಟ್ರೋಲ್ ಎಂಜಿನ್ ಸಹ ಪೇಟೆಂಟ್ ವೇರಿಯೆಬಲ್ ವೇಲ್ವ್ ಟೈಮಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದು, ಎಂಜಿನ್ ತಾಪಮಾನ ತಗ್ಗಿಸುವಲ್ಲಿ ಅತ್ಯುತ್ತಮ ಗುಣಗಳನ್ನು ಹೊಂದಿವೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಕಾರಿನ ವಿಶೇಷತೆಗಳು

ಹೊಸದಾಗಿ 2.0 ಲೀಟರ್ ಇಂಜೀನಿಯಮ್ ಪೆಟ್ರೋಲ್ ಎಂಜಿನ್‌ನೊಂದಿಗೆ 197ಬಿಹೆಚ್‍ಪಿ ಮತ್ತು 247 ಬಿಹೆಚ್‍ಪಿ ಮಾದರಿಗಳಲ್ಲಿ ಲಭ್ಯವಿದ್ದು, ಇದನ್ನು 8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಇದು 'ಜಾಗ್ವಾರ್ ಸೀಕ್ವೆಷನಲ್ ಶಿಫ್ಟ್' ಮತ್ತು 'ಆಲ್ ಸರ್ಫೇಸ್ ಪ್ರೋಗ್ರೆಸ್ ಕಂಟ್ರೋಲ್' 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೊತೆಗೆ ಜೋಡಿಸಲಾಗಿದ್ದು, ಜಾಗ್ವಾರ್ XE & XF ನಲ್ಲಿ ಇಂಜೀನಿಯಮ್ ಪೆಟ್ರೋಲ್ ಇಂಜಿನ್‍ಗಳು ಟ್ವಿನ್-ಸ್ಕ್ರಾಲ್ ಟರ್ಬೊಗಳನ್ನು ಹೊಂದಿವೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಜೊತೆಗೆ ಇದು ಆರ್‌ಪಿಎಂ ವ್ಯಾಪ್ತಿಯಲ್ಲೂ ಗರಿಷ್ಟ ಟಾರ್ಕ್ ನೀಡಲು ಟ್ಯೂನ್ ಮಾಡಲಾಗಿದ್ದು, ಐಷಾರಾಮಿ ಸೆಡಾನ್ ಪ್ರಿಯರಿಗೆ ಹೊಸ ಚಾಲಾನಾ ಅನುಭವ ಒದಗಿಸಲಿವೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಜಾಗ್ವಾರ್ ಎಕ್ಸ್ಇ, ಎಕ್ಸ್ಇ ಪ್ಯುರ್ ಮತ್ತು ಎಕ್ಸ್ಎಫ್ ಪ್ರೆಸ್ಟೀಜ್ ಕಾರುಗಳು 197ಬಿಹೆಚ್‍ಪಿ ಟ್ಯೂನಿಂಗ್ ಅನ್ನು ಪಡೆದಿರಲಿದ್ದು, ಜಾಗ್ವಾರ್ ಎಕ್ಸ್ಇ ಮತ್ತು ಎಕ್ಸ್ಎಫ್ ಪೋರ್ಟ್‍‍ ಫೋಲಿಯೊ ಕಾರುಗಳು ಮಾತ್ರ 247 ಬಿಹೆಚ್‍ಪಿ ಟ್ಯೂನಿಂಗ್ ಅನ್ನು ಪಡಿದಿರಲಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾದ ಜಾಗ್ವಾರ್ ಎಕ್ಸ್‌ಇ ಮತ್ತು ಎಕ್ಸ್ಎಫ್

ಕಾರಿನ ಬೆಲೆಗಳು

ಪ್ರಸ್ಥುತ ದೆಹಲಿಯ ಎಕ್ಸ್ ಶೋರಂ ಪ್ರಕಾರ ಎಕ್ಸ್ಇ ರೂ 35.99 ಲಕ್ಷಕ್ಕೆ, ಎಕ್ಸ್ಎಫ್ ರೂ 46.60 ಲಕ್ಷಕ್ಕೆ, ಎಫ್-ಫೇಸ್ ರೂ 60.02 ಲಕ್ಷಕ್ಕೆ, ಎಕ್ಸ್ ಜೆ ರೂ 1.01 ಕೋಟಿಗೆ ಮತ್ತು ಎಫ್‌ಟೈಪ್ ಕಾರುಗಳು 1.34 ಕೋಟಿಗೆ ಖರೀದಿಸಬಹುದಾಗಿದೆ.

Most Read Articles

Kannada
English summary
Jaguar XE & XF Ingenium Petrol Launched In India At Rs 35.99 Lakh & Rs 49.80 Lakh, Respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X