ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಕಿಯಾ ಮೋಟಾರ್ಸ್ 2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶನಗೊಳಿಸಿದೆ.

By Rahul

ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆಯಾದ ಕಿಯಾ ಮೋಟಾರ್ಸ್ 2018ರ ಆಟೋ ಎಕ್ಸ್ ಪೋ ದಲ್ಲಿ ತನ್ನ ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶನಗೊಳಿಸಿದೆ. 2017ರಲ್ಲಿ ನಡೆದ ಡೆಟ್ರಾಯ್ಟ್ ಆಟೊ ಷೋನಲ್ಲಿ ಮೊದಲ ಬಾರಿಗೆ ಸ್ಟಿಂಗರ್ ಜಟಿ ಕಾರನ್ನು ಅನಾವರಣಗೊಳಿಸಲಾಗಿತ್ತು.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಜಗತ್ತಿನ 8ನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿದ್ದು, ಮೊದಲ ಹಂತದಲ್ಲೇ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮತ್ತು ಸ್ಪೋರ್ಟಿ ಕಾರುಗಳನ್ನು ಹೊರತರುತ್ತಿದೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಕಿಯಾ ಸ್ಟಿಂಗರ್ ಜಿಟಿ ವಿಶೇಷತೆಗಳು

2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 2.2-ಲೀಟರ್ ಟರ್ಬೋ ಚಾರ್ಜ್ಡ್ ಡಿಸೆಲ್ ಎಂಜಿನ್ ಮತ್ತು 3.3-ಲೀಟರ್ ಟ್ವಿನ್ ಟರ್ಬೋ ವಿ6 ಪೆಟ್ರೋಲ್ ಎಂಜಿನ್ ಮಾದರಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಇದರಲ್ಲಿ 2.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯು 244-ಬಿಹೆಚ್‌ಪಿ ಮತ್ತು 353-ಟಾರ್ಕ್ ಉತ್ಪಾದಿಸಲಿದ್ದು, 2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 197-ಬಿಹೆಚ್ ಪಿ ಮತ್ತು 440-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಹಾಗೆಯೇ ಸ್ಟಿಂಗರ್ ಜಿಟಿ 3.3-ಲೀಟರ್ ಟ್ವಿನ್ ಟರ್ಬೋಚಾರ್ಜ್ ಮಾದರಿಯು 365-ಬಿಹೆಚ್‌ಪಿ ಮತ್ತು 510-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 4.7 ಸೆಕೆಂಡುಗಳಲ್ಲಿ 100ಕಿಮಿ ವೇಗ ಪಡೆದುಕೊಳ್ಳುತ್ತವೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಕಿಯಾ ಸ್ಟಿಂಗರ್ ಕಾರು ಹ್ಯುಂಡೈನ ಗೆನೆಸಿಸ್ ಕಾರ್ ಮಾದರಿಯ ಹಾಗೆಯೇ 4,831ಎಂಎಂ ಉದ್ದ, 1,869ಎಂಎಂ ಅಗಲ ಮತ್ತು 1,400ಎಂಎ ಎತ್ತರವನ್ನು ಪಡೆದಿದ್ದು ಕಾರಿನ ವೀಲ್-ಬೇಸ್ 2,906ಎಂಎಂ ಉದ್ದವಿದೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಕಿಯಾ ಸ್ಟ್ರಿಂಗರ್ ಜಿಟಿ ವಿನ್ಯಾಸ

ಕಿಯಾ ಸ್ಟ್ರಿಂಗರ್ ಜಿಟಿ ಎಲ್ಇಡಿ ಹೆಡ್ ಲೈಟ್ ಹಾಗೂ ಬಂಪರ್ ಕೇಂದ್ರಗಳಲ್ಲಿ ವಿಶಾಲವಾದ ಏರ್ ಡ್ಯಾಮ್ ಸೆಂಟರ್ ಅನ್ನು ಒಳಗೊಂಡಿದೆ. ಉಬ್ಬಿದ ಬಾನೆಟ್ ಎರಡೂ ಬದಿಯಲ್ಲಿಯೂ ಏರ್ ವೆಂಟ್ಸ್ ಅನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಕಾರಿನ ನೋಟವನ್ನು ಮತ್ತು ಟರ್ಷಿಮೋ ಸೆಡಾನ್ ಮಿಚಿಲಿನ್ ಬದಿಗಳಲ್ಲಿ 19 ಇಂಚಿನ ಅಲಾಯ್ ಚಕ್ರಗಳ ಶಾಡ್ ಒಂದಿಗೆ 225/40(ಮುಂಬಾಗ) ಮತ್ತು 255/35(ಹಿಂಬಾಗ)ವನ್ನು ಅಳವಡಿಸಲಾಗಿದೆ. ಕಾರಿನ ಹೊಂಬದಿಯ ಕೊನೆಯಲ್ಲಿ ಟೈಲ್ ಪೈಪ್ ಗಳನ್ನು ಮತ್ತು ವಿಶಿಷ್ಟವಾದ ಎಲ್ಇಡಿ ಲೈಟ್ ಅನ್ನು ಪಡೆದುಕೊಂಡಿದೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಮುಂಭಾಗದಲ್ಲಿ ಬಾಗಿದ ಮತ್ತು ಸುತ್ತುವರಿಯಲ್ಪಟ್ಟ ಬಕೆಟ್ ಸೀಟುಗಳನ್ನು ಪಡೆದಿದ್ದು, ಹಿಂಭಾಗದಲ್ಲಿ ಮೂವರು ವಯಸ್ಕರು ಅರಾಮವಾಗಿ ಕೂರಬಹುದಾದ ಸೀಟನ್ನು ಅಳವಡಿಸಲಾಗಿದೆ. ಸೀಟುಗಳ ಮೇಲ್ಬಾಗವನ್ನು ಸುಧಾರಿತ ಲೆದರ್ ಕವರ್ ಹೊದಿಸಲಾಗಿದೆ.

ಆಟೋ ಎಕ್ಸ್ ಪೋ 2018: ಸ್ಟಿಂಗರ್ ಜಿಟಿ ಕಾರನ್ನು ಪ್ರದರ್ಶಿಸಿದ ಕಿಯಾ ಮೋಟಾರ್ಸ್

ಇನ್ನು ಸ್ಟ್ರಿಂಗರ್ ಜಿಟಿ ಕಾರುಗಳಲ್ಲಿ ಸ್ಯಾಟ್‌ಲೈಟ್ ನಾವಿಗೇಷನ್ ನೊಂದಿಗೆ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್ ಪ್ಲೆ ಒದಗಿಸಲಾಗಿದ್ದು, ಹರ್ಮಾನ್/ಕರ್ಡಾನ್ 15-ಸ್ಪೀಕರ್ ಆಡಿಯೊ ಸೆಟಪ್ ಈ ಕಾರು ಹೊಂದಿರಲಿದೆ. ಜೊತೆಗೆ ಸುರಕ್ಷತೆಗಾಗಿ 7 ಏರ್ ಬ್ಯಾಗ್, ಎಬಿಸಿ, ಇಎಸ್ ಸಿ, ಹಿಲ್ ಸ್ಟಾರ್ಟ್ ಅಸ್ಸಿಸ್ಟ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಜೋಡಣೆಯಿದೆ.

Most Read Articles

Kannada
Read more on kia motors auto expo 2018
English summary
Auto Expo 2018: Kia Stinger GT Showcased In India.
Story first published: Wednesday, February 7, 2018, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X