ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

By Praveen Sannamani

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಹೆಚ್ಚುತ್ತಿರುವ ಅಗ್ನಿ ಅವಘಡಗಳನ್ನು ತಪ್ಪಿಸಲು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಆಗುಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಗ್ಗಿಸಬಹುದಲ್ಲದೇ ಅಮಾಯಕ ಜೀವಗಳನ್ನು ಉಳಿಸಬಹುದಾದ ವ್ಯವಸ್ಥೆ ಇದಾಗಿದೆ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಮಾಹಿತಿಗಳ ಪ್ರಕಾರ, ಕೆಎಸ್‌ಆರ್‌ಟಿಸಿ ಸಂಸ್ಥೆಯ ಮೊದಲ ಹಂತವಾಗಿ ಪ್ರೀಮಿಯಂ ಲಗ್ಷುರಿ ಬಸ್‌ಗಳಲ್ಲಿ ಹೆಚ್ಚುತ್ತಿರುವ ಅಗ್ನಿಅವಘಡಗಳನ್ನು ಅರಿಯಬಲ್ಲ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಫ್‌ಡಿಎಸ್ಎಸ್ ಸೌಲಭ್ಯ ಜೋಡಣೆ ಮಾಡಲು ಮುಂದಾಗಿದ್ದು, ಇದು ಆಗಬಹುದಾದ ಅಗ್ನಿ ದುರಂತಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ಎಫ್‌ಡಿಎಸ್ಎಸ್(ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ) ಯನ್ನು ಬಳಕೆ ಮಾಡುವ ಮೂಲಕ ಅಗ್ನಿಅವಘಡಗಳನ್ನು ಪರಿಣಾಮಕಾರಿ ತಗ್ಗಿಸಲಾಗುತ್ತಿದ್ದು, ಇದು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಅಳುವಡಿಸುವುದರಿಂದ ಆಗಬಹುದಾದ ಹತ್ತಾರು ಅಗ್ನಿ ದುರಂತಗಳನ್ನು ತಪ್ಪಿಸಬಹುದು.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಎಫ್‌ಡಿಎಸ್ಎಸ್ ಹೇಗೆ ಕಾರ್ಯನಿರ್ವಹಿಸುತ್ತೆ?

ಎಫ್‌ಡಿಎಸ್ಎಸ್ ಸೌಲಭ್ಯವು ಎಂಜಿನ್ ಮತ್ತು ಚಾರ್ಸಿ ಕೆಳಭಾಗ ಸೇರಿದಂತೆ ಬಸ್ಸಿನ ಯಾವುದೇ ಭಾಗದಲ್ಲೂ ಅಧಿಕ ಮಟ್ಟದ ಶಾಖ ಕಂಡುಬಂದಲ್ಲಿ ತಕ್ಷಣವೇ ಚಾಲಕನ ಬಳಿ ಜೋಡಿಸಲಾಗಿರುವ ಕಂಟ್ರೊಲ್ ಬಾಕ್ಸ್‌ಗೆ ಮಾಹಿತಿ ರವಾನೆ ಮಾಡುವುದಲ್ಲದೇ ಎಚ್ಚರಿಕೆಯ ಶಬ್ದ ಹೊರಡಿಸುತ್ತೆ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಆ ತಕ್ಷಣವೇ ಸುರಕ್ಷಿತವಾಗಿ ರಸ್ತೆ ಬದಿ ಬಸ್ ನಿಲುಗಡೆ ಮಾಡಲು ಇದು ಸಹಕಾರಿಯಾಗಲಿದ್ದು, ಈ ಮೂಲಕ ಪ್ರಯಾಣಿಕರನ್ನು ಅಗ್ನಿ ಅವಘಡದಲ್ಲಿ ಸಿಲುಕುವುದನ್ನ ತಪ್ಪಿಸಬಹುದಾಗಿದೆ. ಜೊತೆಗೆ ಬಸ್‌ನಲ್ಲಿ ಕಾಣುವ ಬೆಂಕಿ ಅವಘಡ ಪ್ರಾಥಮಿಕ ಹಂತದಲ್ಲೇ ಗೊತ್ತಾಗುವುದರಿಂದ ಅದನ್ನು ಕೆಲವೇ ನಿಮಿಷಗಳಲ್ಲಿ ನಂದಿಸಲು ಅನುಕೂಲಕರವಾಗಲಿದೆ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಮೊನ್ನೆಯಷ್ಟೇ ನಡೆದ ಅಪಘಾತವೊಂದರ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷೆತೆಗೆ ಆದ್ಯತೆ ನೀಡುವಂತೆ ಮಹತ್ವದ ಸೂಚನೆ ನೀಡಿದ್ದು, ಇದರಲ್ಲಿ ಗಂಭೀರ ಸ್ವರೂಪದ ಪ್ರಕರಣವಾಗಿರುವ ಅಗ್ನಿ ದುರಂತಗಳಿಗೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗಿದೆ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಹಿಂದೆ ಇಸ್ರೇಲ್ ಪ್ರವಾಸದ ವೇಳೆ ಅಲ್ಲಿನ ಆಡಳಿತ ಮತ್ತು ನಾಗರಿಕ ಸೇವೆಗಳ ಬಗೆಗೆ ಮಾಹಿತಿ ಕಲೆಹಾಕುತ್ತಿರುವಾಗ ಇದರ ಬಗ್ಗೆಯು ಅಲ್ಲಿಯೇ ತಿಳಿದುಕೊಂಡಿದ್ದರೂ. ಅದೇ ರೀತಿಯಾಗಿ ಅದನ್ನು ತಮ್ಮ ಆಡಳಿತ ಅವಧಿಯಲ್ಲಿ ಜಾರಿ ತಂದಿರುವುದು ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಕಳೆದ 15 ದಿನಗಳ ಹಿಂದಷ್ಟೇ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಐರಾವತ ಸ್ಲೀಪರ್ ಕೋಚ್‌ ಬಸ್‌ ಒಂದರಲ್ಲಿ ಆಕಸ್ಮಿಕ ಅಗ್ನಿಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗಂಭೀರ ಚಿಂತನೆ ನಡೆಸಿತ್ತು. ಆಗ ನೆನಪಿಗೆ ಬಂದಿದ್ದೇ ಇಸ್ರೇಲ್ ಪ್ರವಾಸ ವೇಳೆ ಅಲ್ಲಿ ಮಾಹಿತಿ ಪಡೆದಿದ್ದ ಎಫ್‌ಡಿಎಸ್ಎಸ್ ಸೌಲಭ್ಯ ಇದೀಗ ರಾಜ್ಯದ ಬಸ್‌ಗಳಲ್ಲೂ ಅಳವಡಿಕೆಯಾಗುತ್ತಿರುವ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ವಿದೇಶಿಗಳಲ್ಲಿ ಇದಕ್ಕೆ ಭಾರೀ ಬೇಡಿಕೆ

ಹೌದು, ವಾಹನಗಳ ಸುರಕ್ಷೆತೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಸ್ವಿಡನ್, ಇಸ್ರೇಲ್, ಜರ್ಮನ್ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲಿ ಸಾರ್ವಜನಿಕ ವಾಹನಗಳಲ್ಲಿ ಅಷ್ಟೇ ಅಲ್ಲದೇ ಪರ್ಸನಲ್ ವಾಹನಗಳಲ್ಲೂ ಎಫ್‌ಡಿಎಸ್ಎಸ್ ಅಳವಡಿಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಜೊತೆಗೆ ದೇಶದಲ್ಲಿ ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳು ಸಹ ತಮ್ಮ ಐಷಾರಾಮಿ ಬಸ್‌ಗಳಲ್ಲಿ ಈ ಸೌಲಭ್ಯವನ್ನು ಅಳವಡಿಸಿಕೊಳ್ಳುತ್ತಿದ್ದು, ,ಸರ್ಕಾರಿ ಬಸ್‌ಗಳಲ್ಲಿ ಎಫ್‌ಡಿಎಸ್ಎಸ್ ಅಳವಡಿಕೆ ಮಾಡುತ್ತಿರುವ ಕೆಎಸ್ಆರ್‌ಟಿಸಿ ಸಂಸ್ಥೆಯೇ ದೇಶದಲ್ಲಿ ಮೊದಲ ಎಂದ್ರೆ ತಪ್ಪಾಗುವುದಿಲ್ಲ.

Source: economictimes

ಬಸ್‌ಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಕೆಎಸ್ಆರ್‌ಟಿಸಿಯಿಂದ ಮಹತ್ವದ ಯೋಜನೆ

ಈ ಸಂಬಂಧ ಖಾಸಗಿ ಸಂಸ್ಥೆಗಳಿಂದ ಹೊಸ ಸುರಕ್ಷಾ ಸೌಲಭ್ಯ ಅಳವಡಿಕೆಗೆ ಟೆಂಡರ್ ಕರೆಯಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿರುವ ಸಾವಿರಾರು ಪ್ರೀಮಿಯಂ ಬಸ್‌ಗಳಲ್ಲಿ ಈ ಹೊಸ ವ್ಯವಸ್ಥೆಯನ್ನ ನಾವು ನೋಡಬಹುದಾಗಿದೆ.

Kannada
Read more on ksrtc bus auto news auto facts
English summary
KSRTC luxury buses to have fire-detection systems.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more