ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ಮಹೀಂದ್ರಾ ಸಂಸ್ಥೆಯು ಕರ್ನಾಟಕ ಸರ್ಕಾರಕ್ಕೆ 50 ಎಲೆಕ್ಟ್ರಿಕ್ ಕಾರುಗಳನ್ನು ಹಸ್ತಾಂತರ ಮಾಡುವ ಮೂಲಕ ಇ ಮೊಲಿಬಿಟಿ ಪ್ರಚಾರಕ್ಕಾಗಿ ಬೃಹತ್ ಯೋಜನೆ ರೂಪಿಸಿದೆ.

By Praveen

ಸಿಲಿಕಾನ್ ಸಿಟಿ ಬೆಂಗಳೂರು ಸದ್ಯ ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಬಳಕೆ ಮಾಡುತ್ತಿರುವ ನಗರಗಳ ಪೈಕಿ ಮೊದಲ ಸ್ಥಾನದಲ್ಲಿದ್ದು, ಇದೇ ಉದ್ದೇಶದಿಂದ ಮಹೀಂದ್ರಾ ಸಂಸ್ಥೆಯು ಕರ್ನಾಟಕ ಸರ್ಕಾರಕ್ಕೆ 50 ಎಲೆಕ್ಟ್ರಿಕ್ ಕಾರುಗಳನ್ನು ಹಸ್ತಾಂತರ ಮಾಡುವ ಮೂಲಕ ಇ ಮೊಲಿಬಿಟಿ ಪ್ರಚಾರಕ್ಕಾಗಿ ಬೃಹತ್ ಯೋಜನೆ ರೂಪಿಸಿದೆ.

ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ಬೆಂಗಳೂರು ಮೂಲದ ಭಾಗೀರಥಿ ಗ್ರೂಪ್ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ 50 ವೆರಿಟೊ ಸೆಡಾನ್ ಎಲೆಕ್ಟ್ರಿಕ್ ಕಾರುಗಳನ್ನು ಹಸ್ತಾಂತರಿಸುವ ಮೂಲಕ ಇ ಮೊಲಿಬಿಟಿ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೊರಿದೆ.

Recommended Video

New Maruti Swift Launch: Price; Mileage; Specifications; Features; Changes
ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ವಿಧಾನಸೌಧದ ಮುಂಭಾಗದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಇ ಮೊಲಿಬಿಟಿ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೊರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಆರ್.ವಿ.ದೇಶಪಾಂಡೆ, ಭವಿಷ್ಯ ವಾಹನಗಳ ಕುರಿತು ಅಭಿಯಾನ ಆರಂಭಿಸಿರುವ ಮಹೀಂದ್ರಾ ಸಂಸ್ಥೆ ದಿಟ್ಟಹೆಜ್ಜೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ಇನ್ನು ಕರ್ನಾಟಕದಲ್ಲಿ ಇ ಮೊಲಿಬಿಟಿ ಸಂಶೋಧನೆ ಮತ್ತು ಯಶಸ್ವಿಗಾಗಿ 5 ವರ್ಷಗಳ ಅವಧಿಗೆ ಬರೋಬ್ಬರಿ 400 ಕೋಟಿ ಬಂಡವಾಳ ಹೂಡಿಕೆ ಮಾಡಿರುವ ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು, ಮುಂಬರುವ ದಿನಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಗುರಿಹೊಂದಿದೆ.

ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳ ವಿಭಾಗದ ಸಿಇಒ ಮಹೇಶ್ ಬಾಬು, ಇ ಮೊಲಿಬಿಟಿ ಜಾಗೃತಿ ಕಾರ್ಯಕ್ರಮಕ್ಕಾಗಿ ಕರ್ನಾಟಕ ಸರ್ಕಾರದ ಜೊತೆಗೂಡಿರುವುದು ಹರ್ಷ ತಂದಿದ್ದು, ಭವಿಷ್ಯದಲ್ಲಿ ಕರ್ನಾಟಕವು ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಮಾರುಕಟ್ಟೆಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ಇದಷ್ಟೇ ಅಲ್ಲದೇ ವೆರಿಟೊ ಇವಿ ಕಾರುಗಳ ಜೊತೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲೆಕ್ಟ್ರಿಕ್ ರಿಕ್ಷಾಗಳನ್ನು ಜಾಗೃತಿ ಕಾರ್ಯಕ್ರಮಕ್ಕಾಗಿ ಬಳಕೆ ಮಾಡಿಕೊಂಡಿರುವ ಮಹೀಂದ್ರಾ ಮತ್ತು ಭಾಗೀರಥಿ ಗ್ರೂಪ್ ಸಂಸ್ಥೆಗಳು, ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗೆ ಹೊಸ ಆಯಾಮ ನೀಡಲಿವೆ.

ಇ ಮೊಲಿಬಿಟಿ ಪ್ರಚಾರಕ್ಕಾಗಿ ಮಹೀಂದ್ರಾದಿಂದ 50 ಎಲೆಕ್ಟ್ರಿಕ್ ಕಾರುಗಳ ಹಸ್ತಾಂತರ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿರುವ ಏಕೈಕ ಸಂಸ್ಥೆ ಅಂದ್ರೆ ಅದು ಮಹೀಂದ್ರಾ ಮಾತ್ರ. ಇತ್ತೀಚೆಗೆ ಟಾಟಾ ಮೋಟಾರ್ಸ್ ಸಂಸ್ಥೆ ಕೂಡಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಆರಂಭಿಸಿದ್ದು, ಪರಿಸರ ಮಾಲಿನ್ಯ ತಡೆಯಲು ಎಲೆಕ್ಟ್ರಿಕ್ ಕಾರುಗಳು ಬಹುಮುಖ್ಯ ಪಾತ್ರವಹಿಸುವ ಭರವಸೆ ಹೊತ್ತು ರಸ್ತೆಗಿಳಿಯುತ್ತಿವೆ.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

Most Read Articles

Kannada
English summary
Mahindra Electric Delivers First Batch Of 50 eVerito Electric Vehicles Promoting eMobility Awareness.
Story first published: Saturday, February 17, 2018, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X