ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಕೆಯುವಿ100 ಡೀಸೆಲ್ ಆವೃತ್ತಿಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಆವೃತ್ತಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದು, ಹೊಸ ಕಾರು ಬಿಡುಗಡೆಗೊಳಿಸುವ ಸಂಬಂಧ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸುತ್ತಿದೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಮಹೀಂದ್ರಾ ಸಂಸ್ಥೆಯೇ ಈ ಬಗ್ಗೆ ಸುಳಿವು ನೀಡಿದ್ದು, ಸದ್ಯದಲ್ಲೇ ಡೀಸೆಲ್ ಎಎಂಟಿ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಕೆಯುವಿ100 ಆವೃತ್ತಿಗಳು ಎಎಂಟಿ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಇನ್ನು ಮಾರುಕಟ್ಟೆ ಖರೀದಿಗೆ ಲಭ್ಯವಾಗಿರುವ ಕೆಯುವಿ100 ನೆಕ್ಸ್ಟ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆ2, ಕೆ2 ಪ್ಲಸ್, ಕೆ4 ಪ್ಲಸ್, ಕೆ6 ಪ್ಲಸ್, ಕೆ8 ಎಂಬ ವಿವಿಧ ಮಾದರಿಗಳು ಖರೀದಿಗೆ ಲಭ್ಯವಿವೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಜೊತೆಗೆ ಅತ್ಯುತ್ತಮ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಕೆಯುವಿ100 ನೆಕ್ಸ್ಟ್ ಮಾದರಿಗಳು ಆರಂಭಿಕವಾಗಿ ರೂ.4.76 ಲಕ್ಷಕ್ಕೆ ಹಾಗೂ ಉನ್ನತ ಕಾರು ಮಾದರಿಯು ರೂ.7.83 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಬಿಡುಗಡೆಯಾಗಲಿರುವ ಡೀಸೆಲ್ ವರ್ಷನ್ ಎಎಂಟಿ ವರ್ಷನ್‌ಗಳು ಇದಕ್ಕಿಂತಲೂ ತುಸು ದುಬಾರಿ ಎನ್ನಿಸಲಿವೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಎಂಜಿನ್ ಸಾಮರ್ಥ್ಯ

ಕೆಯುವಿ100 ನೆಕ್ಸ್ಟ್ ಆವೃತ್ತಿಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಮಾದರಿಗಳು 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಗಳು 77-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಕ್ರೋಮ್ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್‌ಇಡಿ ಡಿಆರ್‌ಎಲ್ಎಸ್, ಕ್ಲಿಯರ್ ಲೆನ್ಸ್ ಟೈಲ್‌ಮ್ಯಾಪ್, ಡ್ಯುಯಲ್ ಏರ್‌ಬ್ಯಾಗ್, ಅಲಾಯ್ ಚಕ್ರಗಳನ್ನು ಹೊಂದಿರುವುದು ಖರೀದಿಗೆ ಉತ್ತಮವಾಗಿದೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಆದ್ರೆ ಪ್ರಸ್ತತ ಮಾರುಕಟ್ಟೆಯಲ್ಲಿ ಡೀಸೆಲ್ ವರ್ಷನ್‌ಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳಿಗೆ ಬೇಡಿಕೆ ಕಂಡುಬರುತ್ತಿದ್ದು, ಇದೇ ಕಾರಣಕ್ಕೆ ಹೊಸ ಮಾದರಿಯ ಕಾರುಗಳನ್ನು ಹೊರತರುತ್ತಿರುವ ಮಹೀಂದ್ರಾ ಸದ್ಯದಲ್ಲೇ ಎಎಂಟಿ ವರ್ಷನ್ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಇನ್ನೊಂದು ಪ್ರಮುಖ ವಿಚಾರವೆಂದರೆೇ, ಎಎಂಟಿ ಆವೃತ್ತಿ ಬಿಡುಗಡೆ ನಂತರ ಮುಂದಿನ ವರ್ಷ ಇದೇ ಆವೃತ್ತಿಯನ್ನು ಎಲೆಕ್ಟ್ರಿಕ್ ವರ್ಷನ್‌ಗಳು ಕೂಡಾ ಲಭ್ಯವಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಬೇಡಿಕೆ ಪಡೆಯುವ ನೀರಿಕ್ಷೆಯಲ್ಲಿದೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

2018ರ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕೆಯುವಿ100 ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಕಳೆದ ಕೆಲ ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಮಹೀಂದ್ರಾ ಹೊಸ ಎಂಪಿವಿ ಕಾರಿನ ಅಧಿಕೃತ ಹೆಸರನ್ನು ಬಹಿರಂಗಗೊಳಿಸುವ ಸಂದರ್ಭದಲ್ಲೇ ಹೊಸ ಎಲೆಕ್ಟ್ರಿಕ್ ಕಾರಿನ ಮಾಹಿತಿಯನ್ನ ಸಹ ಹಂಚಿಕೊಂಡಿತ್ತು.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಸದ್ಯ ಮಹೀಂದ್ರಾ ಸಂಸ್ಥೆಯು ಇ ವೆರಿಟೊ ಸೆಡಾನ್ ಮತ್ತು e2o ಪ್ಲಸ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಮುಂಬರುವ 5 ವರ್ಷಗಳಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿದೆಯೆಂತೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

210ಎಹೆಚ್ ಲಿಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಕೆಯುವಿ100 ಇವಿ ಕಾರುಗಳಲ್ಲಿ 48ಸಿಸಿ ಸಾಮರ್ಥ್ಯದ ಮೋಟಾರ್ ಸಹ ಜೋಡಣೆ ಮಾಡಲಾಗಿದ್ದು, ಪ್ರತಿ ಚಾರ್ಜಿಂಗ್‌ಗೆ 350 ಕಿಮಿ ಮೈಲೇಜ್ ನೀಡಬಲ್ಲ ಗುಣ ಹೊಂದಿದೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಇದರಿಂದ ಮಹೀಂದ್ರಾ ಬಿಡುಗಡೆಗೊಳಿಸಲಿರುವ ಕೆಯುವಿ100 ಇವಿ ಕಾರುಗಳು ಭಾರತದಲ್ಲಿ ಜನಪ್ರಿಯತೆ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಇದೇ ವರ್ಷದ ಕೊನೆಯಲ್ಲಿ ಇಲ್ಲವೇ 2019ರ ಆರಂಭದಲ್ಲಿ ಈ ಹೊಸ ಕಾರುಗಳು ಖರೀದಿಗೆ ಲಭ್ಯವಾಗುವುದು ಖಚಿತವಾಗಿದೆ.

ಸದ್ಯದಲ್ಲೇ ಮಹೀಂದ್ರಾ ಕೆಯುವಿ100 ಡೀಸೆಲ್ ವರ್ಷನ್‌ಗಳಲ್ಲಿ ಎಎಂಟಿ ಸೌಲಭ್ಯ

ಒಟ್ಟಿನಲ್ಲಿ ಎಬಿಎಸ್, ಇಬಿಡಿ, 7-ಇಂಚಿನ ಟಚ್ ಸ್ಕ್ರಿನ್ ಇನ್ಪೋಟೈನ್‌ಮೆಂಟ್ ವ್ಯವಸ್ಥೆ ಇರಿಸಿರುವುದು ಕೆಯುವಿ100 ನೆಕ್ಸ್ಟ್ ಡಿಸೇಲ್ ಎಎಂಟಿ ವರ್ಷನ್‌ಗಳ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಲಿದ್ದು, ಡಿಸೇಲ್ ಆವೃತ್ತಿಗಳಲ್ಲಿ ಎಎಂಟಿ ಬಳಕೆಗೆ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿರುವ ಹಲವು ಕಾರುಗಳು ಈ ನಿಟ್ಟಿನಲ್ಲಿ ಬಿಡುಗಡೆಯ ಹಂತದಲ್ಲಿವೆ.

Most Read Articles

ಎಂಪಿವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಮಹೀಂದ್ರಾ ಮರಾಜೊ ಕಾರಿನ ಚಿತ್ರಗಳಿಗಾಗಿ ಈ ಫೋಟೋ ಗ್ಯಾಲರಿ ನೋಡಿ.

Kannada
Read more on mahindra suv new car
English summary
Mahindra To Introduce KUV100 Diesel-AMT — Launch Soon.
Story first published: Thursday, September 27, 2018, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X