ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮೈಲಿಗಲ್ಲುಗಳನ್ನು ಹುಟ್ಟುಹಾಕುತ್ತಿದ್ದು, ಇದೀಗ ಜನಪ್ರಿಯ ಆಲ್ಟೋ ಮಾರಾಟದಲ್ಲಿ ದಾಖಲೆ ಬರೆದಿದೆ.

By Praveen Sannamani

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮೈಲಿಗಲ್ಲುಗಳನ್ನು ಹುಟ್ಟುಹಾಕುತ್ತಿದ್ದು, ಇದೀಗ ಜನಪ್ರಿಯ ಆಲ್ಟೋ ಮಾರಾಟದಲ್ಲಿ ದಾಖಲೆ ಬರೆದಿದೆ.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾರಾಟ ದಾಖಲೆ ಕಾಣುತ್ತಿರುವ ಆಲ್ಟೋ ಕಾರುಗಳು, ಬಿಡುಗಡೆ ನಂತರ ಇದುವರೆಗೆ ಬರೋಬ್ಬರಿ 35 ಲಕ್ಷ ಕಾರುಗಳು ಮಾರಾಟವಾಗಿರುವ ಬಗ್ಗೆ ಮಾರುತಿ ಸುಜುಕಿ ಮಾಹಿತಿ ಬಿಡುಗಡೆ ಮಾಡಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಕೈಗೆಟುಕುವ ಬೆಲೆ ಮತ್ತು ಉತ್ತಮ ಕಾರ್ಯಕ್ಷಮತೆ ಹಿನ್ನೆಲೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಆಲ್ಟೋ ಕಾರುಗಳು ಮಾರಾಟದಲ್ಲಿ ಸಮನ್ವಯತೆ ಸಾಧಿಸಿದ್ದು, ಬಿಡುಗಡೆಯಾದ ಹೊಸದರಲ್ಲಿ ಇದ್ದ ಬೇಡಿಕೆ ಪ್ರಮಾಣ ಇವತ್ತಿಗೆ ಅದೇ ಪ್ರಮಾಣದಲ್ಲಿರುವುದೇ ಅದರ ಜನಪ್ರಿಯತೆಗೆ ಸ್ಪಷ್ಟ ಉದಾಹರಣೆ.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಮೊದಲ ಬಾರಿಗೆ ಬಿಡುಗಡೆಗೊಂಡ ಆಲ್ಟೋ ಮಾದರಿಗೂ ಮತ್ತು ಪ್ರಸ್ತುತ ಆಲ್ಟೋ ಮಾದರಿಗಳ ಮಧ್ಯೆ ಸಾಕಷ್ಟು ಬದಲಾವಣೆಗಳಿದ್ದು, ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್ಟೋ ಕಾರುಗಳ ವಿನ್ಯಾಸದಲ್ಲೂ ಸಹ ಬದಲಾವಣೆ ತರಲಾಗಿದೆ.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಇದೇ ಕಾರಣಕ್ಕೆ ಗ್ರಾಹಕ ಬೇಡಿಕೆಯ ಪ್ರಮಾಣವು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಲೇ ಇದ್ದು, ಹಿರಿಯ ಗ್ರಾಹಕರಿಂದ ಹಿಡಿದು ಯುವ ಸಮುದಾಯದವರು ಒಂದೇ ರೀತಿಯಾಗಿ ಇಷ್ಟಪಡುವ ಕಾರು ಮಾದರಿ ಇದಾಗಿದೆ ಎನ್ನಬಹುದು.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಎಂಜಿನ್ ಸಾಮರ್ಥ್ಯ

800 ಸಿಸಿ ಮತ್ತು 1000 ಸಿಸಿ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಆಲ್ಟೋ ಕಾರುಗಳು ಖರೀದಿಗೆ ಲಭ್ಯವಿದ್ದು, 800 ಸಿಸಿ ಎಂಜಿನ್ ಮಾದರಿಯು 47 ಬಿಎಚ್‌ಪಿ, 69 ಬಿಎಚ್‌ಪಿ ಉತ್ಪಾದಿಸಿದಲ್ಲಿ 1000 ಸಿಸಿ ಮಾದರಿಯು 69 ಬಿಎಚ್‌ಪಿ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳು ಆಯ್ಕೆ ರೂಪದಲ್ಲಿ ಲಭ್ಯವಿದ್ದು, ಪ್ರಿಮಿಯಂ ವೈಶಿಷ್ಟ್ಯತೆಗಳಿಂದಾಗಿ ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಇದೊಂದು ಅತ್ಯುತ್ತಮ ಕಾರು ಮಾದರಿ ಎನ್ನಬಹುದು.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಬಿಎಸ್ 6 ನತ್ತ ಮಹತ್ವದ ಹೆಜ್ಜೆ

ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಇತ್ತೀಚೆಗಷ್ಟೇ ಬಿಎಸ್-3 ವಾಹನಗಳು ನಿಷೇಧಗೊಂಡ ಬಳಿಕ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಗುಣಮಟ್ಟದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದೆ. ಜೊತೆಗೆ 2020ರ ವೇಳಗೆ ಬಿಎಸ್ 4 ಕೂಡಾ ನಿಷೇಧಗೊಳ್ಳಲಿದ್ದು, ಈ ಹಿನ್ನೆಲೆ ವಾಹನ ಉತ್ಪಾದಕರು ಬಿಎಸ್ 6 ವಾಹನ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದಾರೆ.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಮಾರುತಿ ಸುಜುಕಿ ಸಹ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಕಾರು ಮಾದರಿಗಳ ಉತ್ಪಾದನೆಗೆ ಮಹತ್ವದ ಯೋಜನೆ ರೂಪಿಸಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಎಸ್ 6 ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಲ್ಲಿ ಜನಪ್ರಿಯ ಆಲ್ಟೋ ಕಾರು ಮಾದರಿಯನ್ನು ಮೊದಲ ಹಂತದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಕಾರು ಮಾರಾಟದಲ್ಲಿ ದಾಖಲೆ ಸೃಷ್ಠಿಸಿದ ಮಾರುತಿ ಸುಜುಕಿ ಆಲ್ಟೋ

ಮೂಲಗಳ ಪ್ರಕಾರ ಬಿಎಸ್ 4 ಗಿಂತ ಬಿಎಸ್ 6 ಸೌಲಭ್ಯ ಹೊಂದಿರುವ ಕಾರುಗಳ ಬೆಲೆ ಪ್ರಸ್ತುತ ಮಾದರಿಗಳ ಬೆಲೆಗಿಂತ 20ರಿಂದ 30 ಸಾವಿರ ಹೆಚ್ಚಾಗಲಿವೆ ಎಂಬ ಮಾಹಿತಿ ಇದ್ದು, ಇದರ ಜೊತೆಗೆ ಪ್ರತಿ ಕಾರು ಮಾದರಿಯೂ ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯನ್ನು ಹೊಂದಿರಲಿವೆ ಎನ್ನವಾಗಿದೆ.

Most Read Articles

Kannada
English summary
Maruti Alto Becomes Best-Selling Car In India — Crosses 35 Lakh Sales Milestone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X