ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

By Praveen Sannamani

ಸದ್ಯ ಆಟೋ ಉದ್ಯಮದಲ್ಲಿ ಎಎಂಟಿ ಕಾರುಗಳಿಗೆ ವಿಶೇಷ ಸ್ಥಾನಮಾನವಿದ್ದು, ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಆಟೋ ಮ್ಯಾಟಿಕ್ ಗೇರ್‍‌ಬಾಕ್ಸ್ ಪ್ರೇರಿತ ಕಾರು ಮಾದರಿಗಳನ್ನು ಮಾರಾಟಮಾಡುವಲ್ಲಿ ಹೊಸ ದಾಖಲೆ ಹುಟ್ಟುಹಾಕಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಕಾರು ಚಾಲನೆಯನ್ನು ಸುಲಭವಾಗಿಸಲು ಕ್ಲಚ್‌ಲೆಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರೇರಿತ ಕಾರುಗಳಿಗೆ ಗ್ರಾಹಕರು ಹೆಚ್ಚಿನ ಒಲವು ತೊರುತ್ತಿದ್ದು, ಭಾರತದಲ್ಲಿ ಕೆಲವು ವರ್ಷಗಳ ಹಿಂದೆಯಷ್ಟೇ ಸೆಲೆರಿಯೊ ಮಾದರಿಯನ್ನು ಬಿಡುಗಡೆಗೊಳಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ವಾಹನೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಎಬ್ಬಿಸಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

2014ರಲ್ಲಿ ಮೊದಲ ಬಾರಿಗೆ ಅಗ್ಗದ ಬೆಲೆಯ ಸೆಲೆರಿಯೊ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವನ್ನು ಒದಗಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದುವರೆಗೆ 3.4 ಲಕ್ಷ ಎಎಂಟಿ ಪ್ರೇರಿತ ವ್ಯಾಗನ್ ಆರ್, ಆಲ್ಟೋ ಕೆ10, ಸ್ವಿಫ್ಟ್, ಡಿಜೈರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ವಿಟಾರಾ ಬ್ರೇಝಾ ಎಎಂಟಿ ಕಾರುಗಳನ್ನು ಮಾರಾಟ ಮಾಡಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಎಎಂಟಿ ಬಳಕೆಯ ವೇಳೆ ಇಂಧನ ದಕ್ಷತೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದುದೇ ಎಎಂಟಿ ಕಾರುಗಳ ಖರೀದಿಗೆ ಹೆಚ್ಚಿನ ಒಲವು ತೊರುತ್ತಿರುವ ಗ್ರಾಹಕರು ಸಂಚಾರ ದಟ್ಟಣೆಯಲ್ಲೂ ಸುರಕ್ಷಿತ ಕಾರು ಚಾಲನೆಗೂ ಇವು ಉತ್ತಮ ಎನ್ನುವುದು ಎಎಂಟಿ ಕಾರುಗಳ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿವೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಇನ್ನು ಇಟಲಿಯ ಮಾಗ್ನೆಟ್ಟಿ ಮರೆಲ್ಲಿ ಪೂರೈಕೆ ಮಾಡುತ್ತಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಂಡುಬರುತ್ತಿದ್ದು, ದೂರದ ಪಯಣವನ್ನು ಹೆಚ್ಚು ಆರಾಮದಾಯಕವಾಗಿಸಲಿದೆ. ಇದಕ್ಕಾಗಿಯೇ ಗ್ರಾಹಕರು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರುಗಳತ್ತ ಹೆಚ್ಚಿನ ಒಲವು ತೊರುತ್ತಿರುವುದು ಹೊಸ ದಾಖಲೆಗೆ ಕಾರಣವಾಗಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಜೊತೆಗೆ ವರದಿಯೊಂದರ ಪ್ರಕಾರ 1986ರ ಫೆರಾರಿ ರೇಸ್ ಕಾರುಗಳಲ್ಲಿ ಇದೇ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಕಡಿಮೆ ವೆಚ್ಚ ತಗುಲುತ್ತಿದ್ದು, ಹೆಚ್ಚು ಅನುಕೂಲಕರವೆನಿಸಿದೆ. ಮಗದೊಂದು ಪ್ರಮುಖ ವೈಶಿಷ್ಟ್ಯವೆಂದರೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೂ ಎಎಂಟಿ ಕಿಟ್ ಆಳವಡಿಸಬಹುದಾಗಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಎಎಂಟಿ ವರ್ಷನ್ ಮ್ಯಾನುವಲ್ ಗೇರ್ ಬಾಕ್ಸ್ ಮೇಲೆ ಅವಲಂಬಿತವಾಗಿದ್ದು, ಆಟೋ ಮೋಡ್‌ನಲ್ಲಿ (ಡ್ರೈವ್) ಸ್ವಯಂಚಾಲಿತವಾಗಿ ಗೇರ್‌ಗಳು ಬದಲಾಗುತ್ತಿರುತ್ತವೆ. ಇದು ಸ್ಪೋರ್ಟ್ಸ್ ಮೋಡ್ (ಮ್ಯಾನುವಲ್) ಸಹ ಪಡೆದುಕೊಂಡಿದ್ದು, ಇಲ್ಲಿ ಚಾಲಕ ಮ್ಯಾನುವಲ್ ಆಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ಲಸ್ (ಗೇರ್ ಹೆಚ್ಚಿಸಲು) ಮತ್ತು ಮೈನಸ್ (ಗೇರ್ ಕಡಿಮೆ ಮಾಡಲು) ನೀಡಲಾಗಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಹೀಗಾಗಿ ವಾಹನ ತಜ್ಞರ ಪ್ರಕಾರ ಎಎಂಟಿ ಬಳಕೆಯು ಚಾಲಕ ಹಾಗೂ ತಯಾರಕರ ದೃಷ್ಟಿಕೋನದಲ್ಲೂ ಹೆಚ್ಚು ಅನುಕೂಲಕರವಾಗಿದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಂಪೂರ್ಣ ವಿಭಿನ್ನ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಇಟಲಿ ಮೂಲದ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಭಾರತಕ್ಕೆ ಎಂಎಂಟಿ ವ್ಯವಸ್ಥೆಯನ್ನು ಒದಗಿಸುತ್ತದೆ. ಸಂಸ್ಥೆಯ ಪ್ರಕಾರ 2020ರ ವೇಳೆಯಾಗುವಾಗ ದೇಶದ 20ರಷ್ಟು ಪ್ರಯಾಣಿಕ ವಾಹನಗಳು ಎಎಂಟಿ ಮಾದರಿಗಳನ್ನು ಒಳಗೊಂಡಿರಲಿವೆ ಎಂಬುವುದು ಸಮೀಕ್ಷೆಯ ಲೆಕ್ಕಾಚಾರವಾಗಿದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಇಂಧನ ದಕ್ಷತೆ

ಎಎಂಟಿ ವರ್ಷನ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಬಳಕೆಯಿಂದಾಗಿ ಶೇಕಡಾ 10ರಷ್ಟು ಇಂಧನ ಕ್ಷಮತೆ ಕಡಿಮೆಯಾಗುತ್ತದೆ.

ಎಎಂಟಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಒಟ್ಟಿನಲ್ಲಿ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರು ಮಾದರಿಗಳ ಮಾರಾಟಕ್ಕೆ ಹೊಸ ನಾಂದಿ ಹಾಡಿದ್ದ ಮಾರುತಿ ಸುಜುಕಿ ಸಂಸ್ಥೆಯ ಸದ್ಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇತರೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಅಗ್ಗದ ಬೆಲೆಯಲ್ಲಿ ಎಎಂಟಿ ಕಾರುಗಳನ್ನು ಮಾರಾಟ ಮಾಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

Most Read Articles

Kannada
English summary
Maruti Suzuki Is The Biggest Seller Of Automatic Cars In India — 3.6 Lakh Automatics Sold In 4 Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X