ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ ನೋಡಿ..

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಸಿಯಾಜ್ ಕಾರನ್ನು 2016ರಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಮತ್ತೆ ಸಂಸ್ಥೆಯು ಮಾರುಕಟ್ಟೆಯು ಹೊಸ ವೈಶಿಷ್ಟ್ಯತೆಗಳು ಮತ್ತು ಹೊಸ ಎಂಜಿನ್ ಅನ್ನು ತಮ್ಮ ಸಿಯಾಜ್ ಕಾರಿನ ಪೇಸ್‍‍ಲಿಫ್ಟ್ ಕಾರನ್ನು ಬಿಡುಗದೆಗೊಳಿಸಲು

By Rahul Ts

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಸಿಯಾಜ್ ಕಾರನ್ನು 2016ರಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಮತ್ತೆ ಸಂಸ್ಥೆಯು ಮಾರುಕಟ್ಟೆಯು ಹೊಸ ವೈಶಿಷ್ಟ್ಯತೆಗಳು ಮತ್ತು ಹೊಸ ಎಂಜಿನ್ ಅನ್ನು ತಮ್ಮ ಸಿಯಾಜ್ ಕಾರಿನ ಪೇಸ್‍‍ಲಿಫ್ಟ್ ಕಾರನ್ನು ಬಿಡುಗದೆಗೊಳಿಸಲು ಸಜ್ಜಾಗಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಈ ಹಿಂದೆಯೆ ನಾವು ಹೊಸ ಸಿಯಾಜ್ ಕಾರುಗಳು ಇದೇ ವರ್ಷದ ಕೊನೆಯ ತ್ರೈಮಾಸಿನ ಅವದಿಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹೇಳಿದ್ದೆವು. ಆದರೆ ಈಗ ಕಾರಿನ ಬಗ್ಗೆ ಖಚಿತವಾದ ಮಾಹಿತಿಯು ಲಭ್ಯವಾಗಿದೆ. ಸಿಯಾಜ್ ಫೇ‍‍ಸ್‍ಲಿಫ್ಟ್ ಕಾರುಗಳು ಆಗಸ್ಟ್ ಮೊದಲನೆಯ ವಾರದಲ್ಲಿ ಬಿಡುಗಡೆಯಾಗಲಿದ್ದು, ಜುಲೈ ತಿಂಗಳಿನಲ್ಲಿ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಗೊಳಿಸಲಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಹೊಸ ಎಂಜಿನ್ ಅನ್ನು ವಿನ್ಯಾಸಗೊಳಿಸಿರುವುದು ಮಾರುತಿ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಪ್ರಮುಖ ಬದಲಾವಣೆಯಾಗಿದ್ದು, ಬಿಡುಗಡೆಗು ಮುನ್ನ ದೇಶದ ಪ್ರಮುಖ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವ ವೇಳೆ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿರಲಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಈ ಬಾರಿ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿವೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಯಾಜ್ ಕಾರುಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‍‌ಗಳಲ್ಲಿ ಲಭ್ಯವಿದ್ದು, ವರದಿಗಳ ಪ್ರಕಾರ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ 1.3-ಲೀಟರ್ ಡಿಸೇಲ್ ಎಂಜಿನ್ ಬದಲಾಗಿ 1.5-ಲಿಟರ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗುತ್ತಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಇದರ ಜೊತೆಗೆ ಮಾರುತಿ ಸುಜುಕಿ ಸಂಸ್ಥೆಯು ಇದೇ ಮೊದಲ ಬಾರಿಗೆ ಕೆ15-ಸೀರಿಸ್ ಪೆಟ್ರೋಲ್ ಎಂಜಿನ್ ಬಳಕೆ ಮಾಡುತ್ತಿದ್ದು, ಇದು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲಿ ಬಳಕೆಯಾಗುತ್ತಿರುವ ಅತಿ ವಿನೂತನ ಎಂಜಿನ್ ಮಾದರಿ ಎಂದು ಹೇಳಲಾಗುತ್ತಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಆದ್ರೆ ದೇಶಿಯ ಕೆ15-ಸೀರಿಸ್ ಅತಿವಿನೂತನ ಮಾದರಿಯಾಗಿರಲಿದ್ದು, ಸದ್ಯ ಮಾರಾಟವಾಗುತ್ತಿರುವ ಕೆ14 ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚಿನ ಪವರ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ. ಹೀಗಾಗಿ ಹೊಸ ಪೆಟ್ರೋಲ್ ಎಂಜಿನ್‌ ಮಾದರಿಯು 103-ಬಿಎಚ್‌ಪಿ ಮತ್ತು 138-ಎನ್ಎಂ ಉತ್ಪಾದಿಸಬಲ್ಲವು.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಇನ್ನು ಡಿಸೇಲ್ ಎಂಜಿನ್‌ ಉನ್ನತೀಕರಣಕ್ಕೂ ವಿಶೇಷ ಒತ್ತು ನೀಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು 1.3-ಲೀಟರ್ ಡಿಸೇಲ್ ಯುನಿಟ್ ಬದಲಾಗಿ 1.5-ಲೀಟರ್ ಎಂಜಿನ್ ಬದಲಾಯಿಸುವ ಯೋಜನೆ ಹೊಂದಿದ್ದು, ಸದ್ಯಕ್ಕೆ 1.3-ಲೀಟರ್ ಡಿಸೇಲ್ ಎಂಜಿನ್ ಮಾದರಿಯನ್ನೇ ಬಿಡುಗಡೆಗೊಳಿಸಿ ಅವುಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಬೈ ಸುಜುಕಿ(ಎಸ್‌ಹೆಚ್‌ವಿಎಸ್) ತಂತ್ರಜ್ಞಾನ ಅಳವಡಿಸಲಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಹೊಸದಾಗಿ ಸಿಯಾಜ್ ಕಾರುಗಳು ಹೊರಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ. ಮರುವಿನ್ಯಾಸಗೊಳಿಸಲಾಗಿರುವ ಬಂಪರ್, ಹೊಸ ಗ್ರಿಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಸೆಂಟರ್ ಏರ್ ಡ್ಯಾಮ್ ಅನ್ನು ಪಡೆದುಕೊಂಡಿರಲಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಸಿಯಾಜ್ ಫೇಸ್‍ಲಿಫ್ಟ್ ಕಾರುಗಳು 16 ಇಂಚಿನ ಅಲಾಯ್ ಚಕ್ರಗಳು, ಹಿಂಭಾಗದಲ್ಲಿ ರೀವ್ಯಾಂಪ್ಡ್ ಬಂಪರ್, ಹೊಸ ಟೈಲ್ ಗೇಟ್ ಕ್ಲಸ್ಟರ್ ಮತ್ತು ಹೊಸ ಟೈಲ್ ಗೇಟ್ ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಅಪ್‍‍ಮಾರ್ಕೆಟ್ ಡ್ಯಾಶ್‍‍ಬೋರ್ಡ್, ಸೀಟ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇನ್ನು ಹೊಸದಾಗಿ ಬಿಡುಗಡೆಗೊಳ್ಳುವ ಕಾರುಗಳು ಎಲೆಕ್ಟ್ರಿಕ್ ಸನ್‍ರೂಫ್, ಅಡಿಶನಲ್ ಸೇಫ್ಟಿ ಫೀಚರ್ಸ್ ಹಾಗು ಇನ್ನಿತರೆ ಆಯ್ಕೆಗಳನ್ನು ಪಡೆಯಲಿದೆ.

ಮಾರುತಿ ಸುಜುಕಿ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ ಇಲ್ಲಿದೆ..

ಇನ್ನು ಕಾರಿನ ಬೆಲೆಯ ಬಗ್ಗೆ ಯಾವುದೆ ಖಚಿತ ಮಾಹಿತಿಯು ಲಭ್ಯವಾಗಿಲ್ಲವಾದರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8 ರಿಂದ 12 ಲಕ್ಷದ ವರೆಗು ಇರಬಹುದೆಂದು ಎಂದಾಜಿಸಲಾಗಿದ್ದು, ಹೋಂಡಾ ಸಿಟಿ, ಹ್ಯುಂಡೈ ವರ್ನಾ, ವೋಲ್ಕ್ಸ್ ವ್ಯಾಗನ್ ವೆಂಟೊ ಮತ್ತು ಸ್ಕೋಡಾ ರ್‍ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
Maruti Ciaz Facelift 2018 Launch Time Frame Confirmed.
Story first published: Friday, May 18, 2018, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X