ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಎಸ್-ಕ್ರಾಸ್ ಕಾರಿನ ಫೇಸ್‍ಲಿಫ್ಟ್ ಮಾದರಿಯಲ್ಲು 2017ರಲ್ಲಿ ಬಿಡುಗಡೆಗೊಳಿಸಿದ್ದು, ಕಳೆದ ತಿಂಗಳಷ್ಟೆ ಕಾರಿನ ಮಾರಾಟದ ಬೆಲೆಯನ್ನು ಹೆಚ್ಚಿಸಲಾಯಿತು. ಪ್ರಸ್ಥುತ ಈ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 8.85 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಹೊಸ ವೈಶಿಷ್ಟ್ಯತೆಗಳನ್ನು ಪಡೆದು ಬೆಲೆ ಏರಿಕೆಯಾದ ನಂತರವು ಈ ಕಾರನ್ನು ಕೊಳ್ಳಲು ಗ್ರಾಹಕರು ಮುಂದಾಗುತ್ತಿದ್ದಾರೆ. ಬಿಡುಗಡೆಗೊಂಡಾಗಿನೊಂದಲೂ, ನೆಕ್ಸಾ ಶೋರಂನಲ್ಲಿ ಮಾತ್ರ ಲಭ್ಯವಿರುವ ಈ ಕಾರು ಸುಮಾರು 1 ಲಕ್ಷಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಟವನ್ನು ಕಂಡಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್ ಲಿಫ್ಟ್ ಕಾರು, ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವಿವಿಧ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ ಹಾಗು ನೆಕ್ಸಾ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಈ ಕಾರಿನ ಮಾರಾಟವಾಗಲಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನಲ್ಲಿ ಹೊಸದಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಜೊತೆಗೆ ಡ್ಯುಯಲ್ ಫ್ರಂಟ್ ಏರ್‍‍ಭ್ಯಾಗ್ಸ್, ಎಬಿಡಿ‍ನೊಂದಿಗೆ ಇಬಿಡಿ, ಐಎಸ್ಒ‍ಫಿಕ್ಸ್ ಚೈಲ್ಡ್ ಸೀಟ್ ಮೌಂತ್ಸ್ ಮತ್ತು ಸೀಟ್ ಬೆಲ್ಟ್ ಟೆಂಷನರ್‍‍ಗಳನ್ನು ಪಡೆದುಕೊಳ್ಳಲಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಇನ್ನು ಎಸ್-ಕ್ರಾಸ್ ಕಾರಿನ ಮಿಡ್ ಸ್ಪೆಕ್ ಡೆಲ್ಟಾ ಕಾರಿನಲ್ಲಿ ಹೆಚ್ಚುವರಿಯಾಗಿ ಎಂಜಿನ್ ಸ್ಟಾರ್ಟ್, ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ವಿದ್ಯುತ್‍‍ನಿಂದ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ಒಆರ್‍‍ವಿಎಮ್‍ ಅನ್ನು ಒದಗಿಸಲಾಗಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ನವೀನ ಮಾದರಿಯ ಎಸ್-ಕ್ರಾಸ್ ಹೊಸ ರೀತಿಯ ತಂತುಕೋಶ, ಪ್ರೊಜೆಕ್ಟರ್ ಹೆಡ್‌ಲೈಟ್, ಪರಿಷ್ಕರಿಸಿದ ಬಂಪರ್ ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಕ್ಲಸ್ಟರ್ ಟ್ವಿಕಡ್ ಮತ್ತು ಮರುವಿನ್ಯಾಸಗೊಳಿಸಲಾದ ಸ್ಪೋರ್ಟ್ಸ್ ಬಂಪರ್ ಕಾಣಬಹುದಾಗಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಈ ಹೊಸ ಮಾರುತಿ ಸುಜುಕಿ ಸಂಸ್ಥೆಯ ಈ ಫೇಸ್ ಲಿಫ್ಟ್ ಕಾರು ಹೊಸ ಮಿಶ್ರಲೋಹದ ಚಕ್ರಗಳು, ಸಂಯೋಜಿತ ತಿರುವು ಸೂಚಕಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಓಆರ್‌ವಿಎಂಗಳನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಈ ಕಾರಿನ ವಿನ್ಯಾಸವು ಈ ಹಿಂದಿನ ಮಾದರಿಗಿಂತ ಹೆಚ್ಚು ವಿಶೇಷತೆಗಳನ್ನು ಪಡೆದುಕೊಂಡಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಕಾರಿನ ಒಳಭಾಗವು ಹೆಚ್ಚು ಕ್ರೋಮ್ ಅಂಶಗಳ ಅಳವಡಿಕೆಯೊಂದಿಗೆ ಬರಲಿದ್ದು, ಕಾರಿನ ಡ್ಯಾಶ್‌ಬೋರ್ಡ್, ಸೀಟ್‌ಗಳು ಮತ್ತು ಉಪಕರಣಗಳು ಯಾವುದೇ ರೀತಿಯ ಬದಲಾವಣೆಗಳನ್ನು ಪಡೆದುಕೊಳ್ಳುವುದಿಲ್ಲ ಎನ್ನಬಹುದು.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಇನ್ನು ಅಪ್ಡೇಟ್‌ಗೊಳಿಸಲಾದ ಈ ಪ್ರೀಮಿಯಂ ಕ್ರಾಸ್ಒವರ್ ಫೇಸ್‌ಲಿಫ್ಟ್ ಕಾರಿನಲ್ಲಿ ಹೊಸದಾಗಿ ಆಂಡ್ರಾಯ್ಡ್ ಆಟೊ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ ಇರುವಂತಹ ಇನ್ಫೋಟೈನ್ಮೆಂಟ್ ಪರದೆ ವ್ಯವಸ್ಥೆ ನೋಡಬಹುದು.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರು 1.3-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಯಾಗಿದೆ. 5 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಸ್ಟ್ಯಾಂಡರ್ಡ್ ಆಯ್ಕೆಯಾಗಿದೆ ಮತ್ತು ಸ್ವಯಂಚಾಲಿತ ರೂಪಾಂತರವನ್ನು ಈ ಕಾರಿನಲ್ಲಿ ನೀಡಲಾಗಿಲ್ಲ ಹಾಗು ಮಾರುತಿ ಸುಜುಕಿ 1.6 ಲೀಟರ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ.

ದಾಖಲೆಯ ಮಾರಾಟ ಕಂಡ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು

ಹೊಸ ಮಾರುತಿ ಎಸ್-ಕ್ರಾಸ್ ನೆಕ್ಸಾ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಕ್ಯಾಫೀನ್ ಬ್ರೌನ್, ಪ್ರೀಮಿಯಂ ಸಿಲ್ವರ್ ಮತ್ತು ಗ್ರಾನೈಟ್ ಗ್ರೇ ಎಂಬ ಐದು ಅದ್ಭುತ ಬಣ್ಣಗಳಲ್ಲಿ ಬಿಡುಗಡೆಯಾಗಿದೆ ಹಾಗು ಈ ಕಾರು ಹ್ಯುಂಡೈ ಕ್ರೆಟಾ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರುಗಳೊಂದಿಗೆ ಸ್ಪರ್ಧೆ ನೀಡಲಿದೆ.

Most Read Articles

Kannada
English summary
Maruti S-Cross Achieves 1 Lakh Sales Milestone.
Story first published: Thursday, October 25, 2018, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X