ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಕಳೆದ ತಿಂಗಳ ಹಿಂದಷ್ಟೇ ಜನಪ್ರಿಯ ಓಮ್ನಿ, ಜಿಪ್ಸಿ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಮುಂದಿನ ಕೆಲವೇ ದಿನಗಳಲ್ಲಿ ಬಂದ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಪ್ರಕಟಿಸಿದೆ. ಭಾರತದಲ್ಲಿ ಮಧ್ಯಮ ವರ್ಗಗಳ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದ ಆಲ್ಟೋ 800 ಕಾರು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ಬಂದ್ ಆಗಲಿಯೆಂತೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಹೌದು, ಮಾರುತಿ ಸುಜುಕಿ ಸಂಸ್ಥೆಯು ತನ್ನ ವಾಹನ ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಮುಂಬರುವ 2019ರಿಂದ ಕಡ್ಡಾಯವಾಗಲಿರುವ ಬಿಎಸ್ 6 ನಿಯಮ ಅನುಸಾರವಾಗಿ ಕಾರುಗಳ ಎಂಜಿನ್ ಮಾದರಿಯನ್ನು ಪರಿಷ್ಕರಣೆ ಮಾಡಬೇಕಿದೆ. ಹೀಗಿರುವಾಗ ಅಗ್ಗದ ಬೆಲೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿಯ ಬಹುಪಾಲು ಕಾರು ಉತ್ಪನ್ನ ಮಾರಾಟಕ್ಕೆ ಸಂಕಷ್ಟ ಎದುರಾಗಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1983ರಲ್ಲಿ ಬಿಡುಗಡೆಗೊಂಡಿದ್ದ ಆಲ್ಟೋ 800 ಕಾರುಗಳು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬೇಡಿಕೆಯ ಕಾರು ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಇತ್ತೀಚೆಗೆ ಆಟೋ ಉದ್ಯಮದಲ್ಲಿ ಬದಲಾಗುತ್ತಿರುವ ಪ್ರಮುಖ ಬೆಳವಣಿಗೆಯಿಂದಾಗಿ ಓಮ್ನಿ, ಜಿಪ್ಸಿ ಮತ್ತು ಆಲ್ಟೋ 800 ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಕುತ್ತು ಬಂದಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಯ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಮಾರಾಟಕ್ಕೆ ಲಭ್ಯವಿರುವ 15ಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಬಹುತೇಕ ಮಾದರಿಗಳು ಜನಪ್ರಿಯತೆ ಸಾಧಿಸಿವೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಆದ್ರೆ ಕಾರುಗಳಲ್ಲಿನ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಂಸ್ಥೆಗೆ ಇದೀಗ ಹಿನ್ನೆಡೆಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜನಪ್ರಿಯ ಕಾರುಗಳೇ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿವೆ ಎಂದ್ರೆ ನೀವು ನಂಬಲೇಬೇಕು.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಕೇಂದ್ರ ಸರ್ಕಾರವು ಮುಂಬರುವ 2019ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾರುತಿ ಸುಜುಕಿಗೆ ಈಗಲೇ ತಳಮಳ ಶುರುವಾಗಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಮಾದರಿ ಎಂದು ಕರೆಯಲಾಗುತ್ತದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ ಸೆಲೆರಿಯೊ, ಇಗ್ನಿಸ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್ ಮತ್ತು ಎಸ್-ಕ್ರಾಸ್ ಕಾರುಗಳು ಮಾತ್ರವೇ ಉತ್ತಮವಾದ ಸುರಕ್ಷಾ ರೇಟಿಂಗ್ ಪಡೆದುಕೊಂಡಿದ್ದು, ಇನ್ನುಳಿದ ಆಲ್ಟೋ 800, ವ್ಯಾಗನ್ ಆರ್, ಒಮ್ನಿ, ಇಕೊ, ಜಿಪ್ಸಿ ಮತ್ತು ರಫ್ತು ಮಾದರಿಯಾದ ಜಿಮ್ನಿ ಕಾರು ರೇಟಿಂಗ್ ಪಾಯಿಂಟ್‌ನಲ್ಲಿ ಸೊನ್ನೆ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿವೆ.

MOST READ: ಕಿಸೆಯಲ್ಲಿ 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಈಗ 4 ಕೋಟಿ ಬೆಲೆಯ ಬೆಂಟ್ಲಿ ಒಡೆಯ

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೋ 800, ವ್ಯಾಗನ್ ಆರ್, ಓಮ್ನಿ ಮತ್ತು ಜಿಪ್ಸಿ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಅಂದ್ರೆ ತಪ್ಪಾಗುವುದಿಲ್ಲ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಕಾರುಗಳು ಮೂಲೆ ಸೇರುವ ಅನಿವಾರ್ಯತೆ ಎದುರಾಗಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಇಲ್ಲವಾದ್ರೆ, ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿದ ನಂತರವೇ ಮಾರಾಟ ಮಾಡಬಹುದಾದ ಅವಕಾಶವಿದ್ದು, ಇದುವರೆಗೆ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ ಖರೀದಿ ಮಾಡಿರುವ ಗ್ರಾಹಕರ ಪರಿಸ್ಥಿತಿ ಉಹಿಸಲು ಅಸಾಧ್ಯ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಯಾಕೆಂದ್ರೆ ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವ ಕಾರುಗಳಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು, ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ವಾಪಸ್ ಪಡೆಯಿರಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಹೀಗಾಗಿಯೇ ಆಲ್ಟೋ 800, ಓಮ್ನಿ ಮತ್ತು ಜಿಪ್ಸಿ ವಾಹನಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸುವ ಮಾರುತಿ ಸುಜುಕಿ ಸಂಸ್ಥೆಯು ಇನ್ನುಳಿದ ಕಾರು ಮಾದರಿಗಳಲ್ಲಿ ಹೆಚ್ಚಿನ ಗುಟ್ಟಮಟ್ಟ ಒದಗಿಸುವತ್ತ ಚಿಂತನೆ ನಡೆಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಆಲ್ಟೋ 800 ಕಾರು ಇತಿಹಾಸದ ಪುಟ ಸೇರಲಿದೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಭಾರತದಲ್ಲಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್ 4 ವಾಹನಗಳ ಮಾರಾಟ ಮುಂದಿನ ವರ್ಷ ಮಧ್ಯಂತರದಲ್ಲಿ ಬಂದ್ ಆಗಲಿದ್ದು, ಬಿಎಸ್ 6 ವಿನ್ಯಾಸವನ್ನು ಹೊಂದಿರುವ ವಾಹನಗಳು ರಸ್ತೆಗಿಳಿಯಲಿವೆ.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಬಿಎಸ್ 6 ವಾಹನಗಳ ಎಂಜಿನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಎಂಜಿನ್ ಮಾದರಿಗಿಂತ ಹೆಚ್ಚಿನ ಮಟ್ಟದ ಗುಣಮಟ್ಟ ಹೊಂದಿರುವುದಲ್ಲದೇ ವಾಹನಗಳಲ್ಲಿ ಹೊಗೆ ಉಗುಳುವ ಪ್ರಮಾಣವು ಸಹ ಸಾಕಷ್ಟು ಕಡಿಮೆ ಇರಲಿದೆ ಎನ್ನಬಹುದು.

ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ- ಇಷ್ಟರಲ್ಲೇ ಆಲ್ಟೋ 800 ಕಾರು ಮಾರಾಟಕ್ಕೆ ಬ್ರೇಕ್..!

ಇದರಿಂದ ಮಾರುತಿ ಸುಜುಕಿ ಸಂಸ್ಥೆಯು ಆಲ್ಟೋ 800 ಕಾರಿನ 796ಸಿಸಿ ಎಂಜಿನ್ ಮಾದರಿಯನ್ನು ಪರಿಷ್ಕಣೆ ಮಾಡಿದರು ಸಹ ಬೆಲೆ ಸಾಕಷ್ಟು ದುಬಾರಿಯಾಗಲಿದ್ದು, ಅದರ ಬದಲಿಗೆ ಆಲ್ಟೋ 800, ಓಮ್ನಿ ಮತ್ತು ಜಿಪ್ಸಿ ವಾಹನಗಳನ್ನು ಬಂದ್ ಮಾಡಿ ಹೊಸ ಉತ್ಪನ್ನಗಳನ್ನು ಹೊರತರುವ ಯೋಜನೆಯಲ್ಲಿದೆ.

Source: CarandBike

Most Read Articles

Kannada
English summary
Maruti Suzuki Alto 800 To Be Discontinued In 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X