ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ದೇಶದಲ್ಲೆಡೆ ಇರುವ ತಮ್ಮ ಎಲ್ಲಾ ಸೇಲ್ಸ್ ಮತ್ತು ಸರ್ವೀಸಿಂಗ್ ಸೆಂಟರ್‍‍ಗಳಲ್ಲಿ ಮಾನ್ಸೂನ್ ಸರ್ವಿಸಿಂಗ್ ಕ್ಯಾಂಪ್ ಅನ್ನು ನಿರ್ವಹಿಸುತ್ತಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ದೇಶದಲ್ಲೆಡೆ ಇರುವ ತಮ್ಮ ಎಲ್ಲಾ ಸೇಲ್ಸ್ ಮತ್ತು ಸರ್ವೀಸಿಂಗ್ ಸೆಂಟರ್‍‍ಗಳಲ್ಲಿ ಮಾನ್ಸೂನ್ ಸರ್ವಿಸಿಂಗ್ ಕ್ಯಾಂಪ್ ಅನ್ನು ನಿರ್ವಹಿಸುತ್ತಿದೆ. ದೇಶವ್ಯಾಪ್ತಿಯಲ್ಲಿರುವ ಮಾರುತಿ ಸುಜುಕಿ ನೆಕ್ಸಾನ್ ಮತ್ತು ಅರೆನಾ ಶೋರಂಗಳಲ್ಲಿ ಜುಲೈ 9 ರಿಂದ 30 ರವರೆಗು ಈ ಕ್ಯಾಂಪ್ ಅನ್ನು ನಡೆಸುತ್ತಿದ್ದಾರೆ.

ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ಮಾನ್ಸೂನ್ ಸರ್ವೀಸ್ ಕ್ಯಾಂಪ್‍‍ನ ಭಾಗವಾಗಿ ಪೂರ್ತಿ ವೆಹಿಕಲ್ ಚೆಕ್-ಅಪ್ ನಡೆಸಲಾಗುತ್ತಿದೆ. ಇಷ್ಟೆ ಅಲ್ಲದೆ ಹಲವು ಬಗೆಯ ಸರ್ವೀಸ್‍‍ಗಳನ್ನು ನೀಡುತ್ತಿದ್ದು ಜೊತೆಗೆ ಈ ಮಳೆಗಾಲದಲಿ ನಿಮ್ಮ ಕಾರು ಚಲಿಸಲು ಅರ್ಹವೆ ಇಲ್ಲವೆ ಎಂಬುದರ ಬಗ್ಗೆ ಕೂಡಾ ಪರೀಕ್ಷಿಸಲಾಗುತ್ತದೆ.

ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ಬ್ರೇಕ್‍‍ಗಳು, ಮಿರರ್‍‍ಗಳು, ಬ್ಯಾಟರಿ, ಎಲೆಕ್ಟ್ರಿಕ್ ಸಿಸ್ಟಮ್, ಟೈರ್‍‍ಗಳು ಹಾಗು ಕಾರಿನ ಇನ್ನಿತರೆ ಪ್ರಧಾನ ವಿಭಾಗಗಳನ್ನು ಮಾರುತಿ ಸುಜುಕಿ ಪರೀಕ್ಷಿಸಲಾಗುತ್ತಿದ್ದು, ಜೊತೆಗೆ ಮಾರುತಿ ಸುಜುಕಿಯ ಎಲ್ಲಾ ಕಾರುಗಳನ್ನು ಮಾನ್ಸೂನ್ ಸೀಜನ್‍‍ನಲ್ಲಿ ಚಲಿಸಲು ಸಿದ್ಧವಾಗುವ ಹಾಗೆ ಪರೀಕ್ಷಿಸಲಾಗುತ್ತದೆ.

ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ಸರ್ವೀಸ್ ಚೆಕ್-ಅಪ್‍ನೊಂದಿಗೆ ಸಂಸ್ಥೆಯು ವಿವಿಧ ಬಗೆಯ ಬಿಡಿಭಾಗಗಳನ್ನು ಮತ್ತು ಆಕ್ಸಿಸರಿಗಳ ಮೇಲೆ ರಿಯಾಯಿತಿಯನ್ನು ಕೂಡಾ ನೀಡಲಾಗುತ್ತಿದೆ. ಈ ಮಳೆಗಾಲದಲ್ಲಿ ಚಲಿಸಲು ಮುಂದಾದ ಪ್ರತೀ ಮಾರಿತಿ ಸುಜುಕಿ ಕಾರು ಕೂಡಾ ಉತ್ತಮ ಕಂಡೀಷನ್‍‍ನಲ್ಲಿ ಇರಬೇಕೆಂದು ಮಾರುತಿ ಸುಜುಕಿ ಸಂಸ್ಥೆಯು ಈ ಕಾರ್ಯವನ್ನು ಕೈಗೊಂಡಿದೆ.

ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ಮಾರುತಿ ಸುಜುಕಿ ಭಾರತ ದೇಶದ ಅತಿ ದೊಡ್ಡ ಪ್ಯಾಸ್ಸೆಂಜರ್ ಕಾರುಗಳ ಉತ್ಪಾದಕ ಸಂಸ್ಥೆಯಾಗಿದ್ದು, ಸುಮಾರು ಎಲ್ಲಾ ಸೆಗ್ಮೆಂಟ್‍‍ನಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದೆ. 2018ರ ಜೂನ್ ತಿಂಗಳಿನಲ್ಲಿ 1,44,981 ಯೂನಿಟ್‍‍ಗಳ ಪ್ಯಾಸ್ಸೆಂಜರ್ ಕಾರುಗಳನ್ನು ಸಂಸ್ಥೆಯು ಮಾರಾಟ ಮಾಡಿದೆ.

ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2018ರ ಪ್ರಾರಂಭದಿಂದ ಮಾರುತಿ ಸುಜುಕಿ ಸಂಸ್ಥೆಯು ಇನ್ನಷ್ಟು ಬಲವಾಗಿದ್ದು, ಕಂಪೆನಿಯು ಈ ವರ್ಷವು ಕೂಡಾ ಪ್ರಾರಂಭದಲ್ಲಿ ಹೊಸ ಮಾದರಿಯ ಸ್ವಿಫ್ಟ್ ಹ್ಯಾಚ್‍‍ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರು ಈ ಮಧ್ಯ್ದ ಕಾಲದಲ್ಲಿ ಬೆಸ್ಟ್ ಸೆಲ್ಲಿಂಗ್ ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇದಲ್ಲದೆ ಸಂಸ್ಥೆಯು ತಮ್ಮ ವಿಟಾರಾ ಬ್ರೆಜ್ಜಾ ಕಾರಿನ ಎಎಮ್‍ಟಿ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸಿದೆ.

ದೇಶದಲ್ಲೆಡೆ ಮಾನ್ಸೂನ್ ಸರ್ವಿಸ್ ಕ್ಯಾಂಪ್ ನಿರ್ವಹಿಸುತ್ತಿರುವ ಮಾರುತಿ ಸುಜುಕಿ..

ಮಾರುತಿ ಸುಜುಕಿ ಸಂಸ್ಥೆಯು ಅತೀ ಶೀಘ್ರದಲ್ಲಿ ಮತ್ತೆರಡು ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಫೇಸ್‍‍ಲಿಫ್ಟ್ ಮಾದರಿಯ ಎರ್ಟಿಗಾ ಎಮ್‍ಪಿವಿ ಮತ್ತು ಸಿಜಾಯ್ ಮಿಡ್ ಸೈಜ್ ಸೆಡಾನ್ ಕಾರುಗಳನ್ನು ವರ್ಷದಲ್ಲಿನ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

Most Read Articles

Kannada
English summary
Maruti Suzuki Starts Monsoon Service Camp Across All Its Centres In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X