ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಭಾರತದಲ್ಲಿ ಸದ್ಯ ಮಾರುತಿ ಸುಜುಕಿ ಸಂಸ್ಥೆಯು ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿ ಬೆಳೆದುನಿಂತಿದ್ದು, ಹತ್ತಾರು ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಬಹುತೇಕ ಕಾರುಗಳು ಸದ್ಯ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದಿದ್ದು, ಅಷ್ಟೇ ಪ್ರಮಾಣದಲ್ಲಿ ಮಾರುತಿ ಸುಜುಕಿ ನಿರ್ಮಾಣದ ಕಾರುಗಳು ಬೇಡಿಕೆಯಿಲ್ಲದೆ ನೆಲಕಚ್ಚಿವೆ ಅಂದ್ರೆ ನೀವು ನಂಬಲೇಬೇಕು.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಭಾರತೀಯ ವಾಹನ ಉದ್ಯಮವು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳಿಗೆ ಕಂಡುಕೊಳ್ಳುತ್ತಲೇ ಹೊಸತನಕ್ಕೆ ಸಾಕ್ಷಿ ಆಗಿದೆ. ಇದರಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರುಗಳನ್ನು ಹೊರತಂದಿದ್ದರು ಸಹ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಹತ್ತುಕ್ಕೂ ಹೆಚ್ಚು ಕಾರುಗಳು ಇಂದು ಮೂಲೆ ಸೇರಿವೆ.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಪ್ರತಿವರ್ಷ ಬಗೆ ಬಗೆಯ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಆದ್ರೆ ಅದರಲ್ಲಿ ಎಲ್ಲವೂ ಗ್ರಾಹಕನ್ನು ಸೆಳೆಯುವಲ್ಲಿ ಯಶಸ್ವಿಯಾಗುವುದಿಲ್ಲ. ಇದೇ ಕಾರಣಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ನಿರ್ಮಾಣದ ಕೆಲವು ಕಾರುಗಳು ಮಾರುಕಟ್ಟೆಯಲ್ಲಿ ಫ್ಲಾಪ್ ಆಗಿದ್ದರ ಬಗ್ಗೆ ನಾವಿಲ್ಲಿ ಚರ್ಚಿಸಿದ್ದೇವೆ.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ನಿರ್ದಿಷ್ಟ ಕಾರು ಮಾದರಿಯೊಂದರ ಯಶಸ್ಸಿನಲ್ಲಿ ಸಮಯ ಹಾಗೂ ಗುಣಮಟ್ಟತೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗೆಂದ ಮಾತ್ರಕ್ಕೆ ದೇಶದಲ್ಲಿ ಬಿಡುಗಡೆಯಾದ ಪ್ರತಿಯೊಂದು ಕಾರುಗಳು ಯಶ ಸಾಧಿಸಬೇಕೆಂದಿಲ್ಲ. ಇದು ಮಾರುತಿ ಸುಜುಕಿ ಕಾರುಗಳಿಗೂ ಅನ್ವಯಿಸುತ್ತೆ.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಮಾರುತಿ ಎ ಸ್ಟಾರ್

2008ರ ಅವಧಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಬಾರಿಗೆ ಎ ಸ್ಟಾರ್ ಕಾರನ್ನ ಪರಿಚಯಿಸಿತ್ತು. ತದನಂತರ 2012ರಲ್ಲಿ ಹೊಸ ಎ ಸ್ಟಾರ್ ಕಾರುಗಳನ್ನು ಪರಿಷ್ಕರಣೆ ಮಾಡಿದ್ದ ಮಾರುತಿ ಸಂಸ್ಥೆಯು ನಿಗದಿತ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫವಾಯ್ತು.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಸುಮಾರು 5 ವರ್ಷಗಳ ಕಾಲ ಭಾರತೀಯ ಆಟೋ ಉದ್ಯಮದಲ್ಲಿ ಸದ್ದು ಮಾಡಿದ್ದ ಎ ಸ್ಟಾರ್ ಕಾರುಗಳು 2012ರ ನಂತರ ಮಾರಾಟದಲ್ಲಿ ನೆಲಕಚ್ಚಿತು. ಹೀಗಾಗಿ 2013ರ ಆರಂಭದಲ್ಲಿ ಮಹತ್ವದ ನಿರ್ಧಾರ ಬಂದ ಮಾರುತಿ ಸಂಸ್ಥೆಯು ಎ ಸ್ಟಾರ್ ಉತ್ಪಾದನೆಗೆ ಗುಡ್ ಬೈ ಹೇಳಿತು.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಮಾರುತಿ ಬಲೆನೊ ಅಲ್ಟುರಾ

ಮಾರಾಟದ ಅವಧಿ: 1999ರಿಂದ 2007

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 1.6 ಲೀಟರ್, 94 ಅಶ್ವಶಕ್ತಿ, 130 ತಿರುಗುಬಲ, 1020 ಕೆ.ಜಿ

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಆಗಿನ ಕಾಲದಲ್ಲಿ ಲಭ್ಯವಾಗಿದ್ದ ಕೆಲವೇ ಕೆಲವು ಎಸ್ಟೇಟ್ ಕಾರುಗಳಲ್ಲಿ ಅಲ್ಟುರಾ ಒಂದಾಗಿದೆ. ಗರಿಷ್ಠ ಸ್ಥಳಾವಕಾಶ ಹಾಗೂ ನೈಜತೆಯನ್ನು ಹೊಂದಿರುವ ಹೊರತಾಗಿಯೂ ಅಲ್ಟುರಾ ಎಸ್ಟೇಟ್ ಮಾದರಿಗೆ ದೇಶದಲ್ಲಿ ನಿರೀಕ್ಷಿದಷ್ಟು ಬೇಡಿಕೆ ಕಂಡುಬಂದಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಬಲೆನೊ ಅಲ್ಟುರಾ ಸುಜುಕಿ ಮೊದಲ ಸ್ಟೇಷನ್ ವ್ಯಾಗನ್ ಮಾದರಿಯಾಗಿತ್ತು ಎಂಬುದು ಅಷ್ಟೇ ಮುಖ್ಯವೆನಿಸುತ್ತದೆ.

Picture credit: Team BHP

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಸುಜುಕಿ ಕಿಜಾಶಿ

ಮಾರಾಟದ ಅವಧಿ: 2011-2014

ಎಂಜಿನ್ ತಾಂತ್ರಿಕತೆ: ಪೆಟ್ರೋಲ್ 2.4 ಲೀಟರ್, 175 ಅಶ್ವಶಕ್ತಿ, 230 ತಿರುಗುಬಲ, 1460 ಕೆ.ಜಿ

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಕಿಜಾಶಿ ಎಂಬುದು ಲಗ್ಷುರಿ ಸೆಡಾನ್ ವಿಭಾಗಕ್ಕೆ ಎಂಟ್ರಿ ಕೊಡುವ ಮಾರುತಿಯ ಮೊದಲ ಹಾಗೂ ಬಹುಶ: ಕೊನೆಯ ಪ್ರಯತ್ನವಾಗಿರಬಹುದು. ಕಾಲು ಜಾರಿದರೆ ಆನೆಯೂ ಬೀಳುವುದು ಎಂಬುದು ಇಲ್ಲಿ ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ದೇಶದ ನಂ.1 ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹೊರತಾಗಿಯೂ ಮಾರುತಿ ಸುಜುಕಿಯ ಕಿಜಾಶಿ ಭಾರತದಲ್ಲಿ ಯಶ ಕಂಡಿರಲಿಲ್ಲ.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಮಾರುತಿ ಜೆನ್ ಎಸ್ಟಿಲೊ

1999ರ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾರುತಿ ಜೆನ್ ಎಸ್ಟಿಲೊ ಕಾರುಗಳು ಬಹುದಿನಗಳ ತನಕ ಮಾರುಕಟ್ಟೆಯಲ್ಲಿ ಸದ್ದು ಕೆಲವೇ ಕಾರುಗಳ ಪೈಕಿ ಇದು ಕೂಡಾ ಒಂದು. ಆದ್ರೆ ಹ್ಯುಂಡೈ ಕಾರುಗಳ ಸದ್ದು ಶುರುವಾದ ಮೇಲೆ 2014ರಲ್ಲಿ ಜೆನ್ ಎಸ್ಟಿಲೊ ಮೂಲೆ ಸೇರಿತು.

Picture credit: Team BHP

MOST READ: ವಾಹನ ಸವಾರರಿಗೆ ಒಂದು ಸಿಹಿ ಸುದ್ದಿ- ಕೇಂದ್ರ ಸಾರಿಗೆ ಇಲಾಖೆಯಿಂದ ಮಹತ್ವದ ನಿರ್ಧಾರ

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಮಾರುತಿ ಗ್ರ್ಯಾಂಡ್ ವಿಟಾರಾ

2013ರಲ್ಲಿ ಬಿಡುಗಡೆಯಾಗಿದ್ದ ಐಷಾರಾಮಿ ಗುಣಲಕ್ಷಣಗಳನ್ನು ಹೊಂದಿದ್ದ ಗ್ರ್ಯಾಂಡ್ ವಿಟಾರಾ ಕಾರುಗಳು ಬಂದಷ್ಟೇ ವೇಗದಲ್ಲಿ ನೆಲಕಚ್ಚಿದ್ದು ಮಾತ್ರ ಮಾರುತಿ ಸುಜುಕಿಗೆ ಭಾರೀ ಹೊಡೆತ ನೀಡಿತು. ಕೇವಲ ಒಂದೇ ವರ್ಷದಲ್ಲಿ ಮಾರಾಟದಲ್ಲಿ ಶೇ.90 ಬೇಡಿಕೆ ಇಳಿಕೆಯಾಗಿತ್ತು. ಹೀಗಾಗಿ ಈ ಕಾರುನ್ನು 2014ರ ಅಂತ್ಯದಲ್ಲಿ ಬಂದ್ ಮಾಡಲಾಗಿದೆ.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಹೊಸ ವಿಟಾರಾ ಪರಿಚಯಿಸುವ ಯೋಜನಯಲ್ಲಿದೆ.

MOST READ: 5 ಸಾವಿರ ಇಲ್ಲ ಎಂದಿದ್ದ ಈ ನಟ ಈಗ 4 ಕೋಟಿ ಮೌಲ್ಯದ ಕಾರಿನ ಒಡೆಯ!

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಮಾರುತಿ ವೆರ್ಸಾ

ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಉದ್ಯೋಗ್‌ ಲಿಮಿಟೆಡ್‌ ತನ್ನ ಹೊಸ ಉತ್ಪನ್ನ ಬಹುಪಯೋಗಿ ವಾಹನ ವೆರ್ಸಾ(Versa)ವನ್ನು 2001ರಲ್ಲಿ ಬಿಡುಗಡೆ ಮಾಡಿತ್ತು. ಆದ್ರೆ ಇಕೋ ಮತ್ತು ಒಮ್ನಿಯಂತೆ ಸದ್ದು ಮಾಡದ ಈ ವಾಹನವನ್ನು ಕೆಲವೇ ವರ್ಷಗಳಲ್ಲಿ ಬಂದ್ ಮಾಡಲಾಯ್ತು.

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಮಾರುತಿ ಜೆನ್ ಕ್ಲಾಸಿಕ್

ಭಾರತದಲ್ಲಿ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಕಾರುಗಳ ಪಟ್ಟಿಯಲ್ಲಿ ಮಾರುತಿ ಜೆನ್ ಕ್ಲಾಸಿಕ್ ಕೂಡಾ ಒಂದು. ಆದ್ರೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಜೆನ್ ಕ್ಲಾಸಿಕ್ ಕಾರುಗಳನ್ನು 2014ರಲ್ಲೇ ಬಂದ್ ಮಾಡಲಾಗಿದೆ.

Picture credit: Maruti Zen Classic/Facebook

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಭಾರತದಲ್ಲಿ ಅಟ್ಟರ್ ಫ್ಲಾಪ್ ಆದ ಮಾರುತಿ ಸುಜುಕಿ ಕಾರುಗಳು ಯಾವವು ಗೊತ್ತಾ?

ಕೆಲವು ಮಾದರಿಗಳು ಸ್ವಲ್ಪ ಸಮಯ ಉತ್ತಮವೆನಿಸಿಕೊಂಡರೆ ದೀರ್ಘ ದೂರದ ಓಟದಲ್ಲಿ ವೈಫಲ್ಯ ಅನುಭವಿಸುತ್ತದೆ. ಭಾರತದಲ್ಲಿ ಮುಖ್ಯವಾಗಿಯೂ ಮಾರಾಟದ ಆಧಾರದಲ್ಲಿ ಕಾರೊಂದರ ಯಶಸ್ಸು ಹಾಗೂ ವೈಫಲ್ಯವನ್ನು ಮನಗಾನಲಾಗುತ್ತದೆ. ಕಲವೊಂದು ಬಾರಿ ಉತ್ತಮ ಗುಣಮಟ್ಟವನ್ನು ಹೊಂದಿದ್ದರೂ ಕೆಲವು ಮಾದರಿಗಳು ವೈಫಲ್ಯವನ್ನು ಅನುಭವಿಸುತ್ತದೆ

ಇದೇ ತಿಂಗಳು 26ರಂದು ಬಿಡುಗಡೆಯಾಗಿರುವ ಮಹೀಂದ್ರಾ ಮತ್ತು ಸ್ಯಾಂಗ್‌ಯಾಂಗ್ ನಿರ್ಮಾಣದ ಮೊದಲ ಅಲ್ಟುರಾಸ್ ಜಿ4 ಕಾರಿನ ಫೋಟೋ ಗ್ಯಾಲರಿ..!

Kannada
English summary
Maruti Suzuki’s biggest ever flops.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more