'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

By Praveen Sannamani

ಬಿಎಂಡಬ್ಲ್ಯು ಅಂಗಸಂಸ್ಥೆಯಾಗಿರುವ ಮಿನಿ ಸಂಸ್ಥೆಯು ಐಷಾರಾಮಿ ಸೌಲಭ್ಯವುಳ್ಳ ಸಣ್ಣ ಕಾರುಗಳ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಮಿನಿ ಸಂಸ್ಥೆಯು ಗ್ರಾಹಕರ ಆಕರ್ಷಣೆಗಾಗಿ ವಿಶೇಷ ಡ್ರೈವ್ ಕಾರ್ಯಾಗರ ಹಮ್ಮಿಕೊಳ್ಳುತ್ತಿದೆ.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಮಿನಿ ಇಂಡಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಉತ್ಪನ್ನ ಎಂಜಿನ್ ಕಾರ್ಯಕ್ಷಮತೆಯನ್ನ ಪ್ರದರ್ಶನ ನಡೆಸಲು ದೇಶಾದ್ಯಂತ ಅರ್ಬನ್ ಡ್ರೈವ್ ಎನ್ನುವ ವಿಶೇಷ ಕಾರ್ಯಗಾರವನ್ನು ನಡೆಸುತ್ತಿದ್ದು, ನಮ್ಮ ಬೆಂಗಳೂರಿನಲ್ಲೂ ಇದೇ ತಿಂಗಳು 18 ಮತ್ತು 19ರಂದು ನಡೆದ ಅರ್ಬನ್ ಡ್ರೈವ್ ಕಾರ್ಯಕ್ರಮದ ಹೈಲೈಟ್ಸ್‌ಗಳನ್ನು ಇಲ್ಲಿ ಚರ್ಚಿಸಲಾಗಿದೆ.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಮಿನಿ ಸಂಸ್ಥೆಯ ಆಹ್ವಾನ ಮೇರೆಗೆ ಅರ್ಬನ್ ಡ್ರೈವ್ ಕಾರ್ಯಗಾರದಲ್ಲಿ ಭಾಗಿಯಾಗಿದ್ದ ಡ್ರೈವ್‌ಸ್ಪಾರ್ಕ್ ತಂಡವು ಸಹ ಹೊಸ ಉತ್ಪನ್ನಗಳ ಕುರಿತು ವಿಶೇಷ ಚಾಲನೆ ಮಾಡಿದ್ದಲ್ಲೇ ಹೊಸ ಉತ್ಪನ್ನಗಳ ಕುರಿತಾಗಿ ಸಮಗ್ರ ಮಾಹಿತಿಯನ್ನ ಸಂಗ್ರಹಿಸಿರುವುದು ಆಟೋ ಪ್ರಿಯರ ಆಕರ್ಷಣೆಗೆ ಕಾರಣವಾಯ್ತು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಬೆಂಗಳೂರಿನ ಚಿಕ್ಕಜಾಲದ ಬಳಿ ಸಿದ್ದಗೊಂಡಿರುವ ಮೆಕೊ ಕಾರ್ಟೋಪಿಯಾ ಗೋ-ಕಾರ್ಟಿಂಗ್ ಸರ್ಕ್ಯೂಟ್‌ನಲ್ಲಿ ಮಿನಿ ಅರ್ಬನ್ ಡ್ರೈವ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದಲ್ಲದೇ, ಗೋ-ಕಾರ್ಟ್ ರೈಡ್ ಅನುಭವ ನೀಡಿದ ಮಿನಿ ಕಾರುಗಳು ಪರ್ಫಾಮೆನ್ಸ್ ಕಾರು ಪ್ರಿಯರ ಆಕರ್ಷಣೆ ಮಾಡಿದವು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಮಿನಿ ಅರ್ಬನ್ ಡ್ರೈವ್‌ನಲ್ಲಿ ಭಾಗಿಯಾಗಿದ್ದ ಕಾರುಗಳು:

ಗರಿಷ್ಠ ವೇಗದ ಮಿತಿ ಹೊಂದಲು ಸಹಕಾರಿಯಾಗುವಂತೆ ನಿರ್ಮಾಣವಾಗಿರುವ ಗೋ-ಕಾರ್ಟಿಂಗ್ ಸರ್ಕ್ಯೂಟ್‌ನಲ್ಲಿ ಮಿನಿ ನಿರ್ಮಾಣದ ತ್ರಿ ಡೋರ್ ಹ್ಯಾಚ್‌ಬ್ಯಾಕ್, ಮಿನಿ ಕನ್ವರ್ಟ್‌ಬಲ್, ಫ್ಲ್ಯಾಗ್‌ಶಿಫ್ ಮಿನಿ ಕಂಟ್ರಿಮ್ಯಾನ್ ಕಾರುಗಳು ಅರ್ಬನ್ ಡ್ರೈವ್‌ನಲ್ಲಿ ಭಾಗಿಯಾಗಿದ್ದವು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಭಾಗಿಯಾಗಿದ್ದ ಮಿನಿ ಕೂಪರ್ ಕಾರುಗಳಲ್ಲಿ ಕೆಲವು ಡಿಸೇಲ್ ವೆರಿಯೆಂಟ್‌ಗಳಾಗಿದ್ದರೇ ಇನ್ನು ಕೆಲವು ಪೆಟ್ರೋಲ್ ವರ್ಷನ್‌ಗಳು ಭಾಗಿಯಾಗಿದ್ದಲ್ಲದೇ, "ಫುಲ್ ಥ್ರೊಟಲ್" ಮತ್ತು "ಬ್ರೇಕ್ ಹಾರ್ಡ್" ಎನ್ನುವ ಚಾಲನಾ ಧ್ಯೇಯದೊಂದಿಗೆ ಈ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿತ್ತು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಅಂದರೇ, ಈ ಚಾಲನಾ ಕಾರ್ಯಗಾರದ ಉದ್ದೇಶವೇ ಸುರಕ್ಷತೆಯೊಂದಿಗೆ ಪರ್ಫಾಮೆನ್ಸ್ ಕೌಶಲ್ಯ ಪ್ರದರ್ಶಿಸುವ ಬಗ್ಗೆ ಜಾಗೃತಿ ಅಭಿಯಾನ ಮಾಡುತ್ತಿದ್ದು, ಜನಪ್ರಿಯ ರೇಸಿಂಗ್ ತತ್ವಶಾಸ್ತ್ರದ ಮುಖ್ಯ ಸೂಚಕವಾದ ಸ್ಟೀರಿಂಗ್ ಸಮತೋಲನದೊಂದಿಗೆ ನಿಖರವಾದ ಚಾಲನೆ ಮಾಡುವುದಾಗಿದೆ.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಹೀಗಾಗಿ ಗೋ-ಕಾರ್ಟ್ ಸರ್ಕ್ಯೂಟ್ ಆಯ್ಕೆ ಮಾಡಿದ್ದ ಮಿನಿ ಸಂಸ್ಥೆಯು ಕಾರು ಚಾಲನೆ ಮಾಡುವವರಿಗೆ ಗರಿಷ್ಠ ಸುರಕ್ಷಾ ಕ್ರಮಗಳನ್ನ ಕೈಗೊಂಡಿದ್ದಲ್ಲದೇ ಗರಿಷ್ಠ ಪ್ರಮಾಣದ ಪರ್ಫಾಮೆನ್ಸ್ ಕೌಶಲ್ಯ ಪ್ರದರ್ಶನಕ್ಕೆ ಅನುಕೂಲಕತೆ ಮಾಡಿಕೊಟ್ಟಿತ್ತು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಗಮನ ಸೆಳೆದ ಕಂಟ್ರಿಮ್ಯಾನ್

ಮಿನಿ ಸಂಸ್ಥೆಯು ಅರ್ಬನ್ ಡ್ರೈವ್ ಕೈಗೊಂಡಿದ್ದ ಮತ್ತೊಂದು ಉದ್ದೇಶವೇ ಹೊಸ ಕಾರುಗಳಲ್ಲಿ ಅಳವಡಿಸಿಲಾಗಿರುವ ಪ್ರಸಕ್ತ ಗ್ರಾಹಕರ ಬೇಡಿಕೆಯ ತಂತ್ರಜ್ಞಾನ ಸೌಲಭ್ಯಗಳನ್ನು ಪರಿಚಯಿಸುವುದಾಗಿತ್ತು. ಹೀಗಾಗಿ ವಿವಿಧ ವಿಭಾಗಗಳಲ್ಲಿ ನಡೆದ ಡ್ರೈವ್ ಕಾರ್ಯಗಾರವು ತುರ್ತು ಪರಿಸ್ಥಿತಿಯಲ್ಲಿ ಚಾಲನೆ ಹೇಗೆ ಎನ್ನುವ ಅತ್ಯುತ್ತಮ ಸಲಹೆ ನೀಡಿದ್ದು ವಿಶೇಷವಾಗಿತ್ತು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಬ್ರೇಕಿಂಗ್ ಸೌಲಭ್ಯದ ಪರೀಕ್ಷೆಗಾಗಿ ಲೈನ್ ಅಪ್ ಕಾರು ಮಾದರಿಯಾದ ಕಂಟ್ರಿಮ್ಯಾನ್ ಆಯ್ಕೆ ಮಾಡಿದ್ದ ಮಿನಿ ಸಂಸ್ಥೆಯು ರಸ್ತೆ ತಿರುವುಗಳಲ್ಲಿ ಬ್ರೇಕಿಂಗ್ ಸಿಸ್ಟಂ ಕಾರ್ಯನಿರ್ವಹಿಸುವ ಬಗೆಯನ್ನು ಹೇಳಿದ್ದಲ್ಲದೇ, ಗರಿಷ್ಠ ವೇಗದಲ್ಲಿ ಎಬಿಎಸ್‌ನೊಂದಿಗೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಬಗೆಗೆ ಸಲಹೆ ನೀಡಿತು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಡ್ರೈವ್‌ನಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ಹೊಸ ಕಾರುಗಳ ಚಾಲನೆ ಅವಕಾಶ ಮಾಡಿಕೊಟ್ಟ ಮಿನಿ ಸಂಸ್ಥೆಯು ಸುರಕ್ಷಿತ ಕಾರು ಚಾಲನೆಯಲ್ಲಿ ಅನುಸರಿಸಬೇಕಾದ ತಂತ್ರಗಳು ಕುರಿತು ಪಾಠಮಾಡಿದ್ದಲ್ಲೇ ತನ್ನ ಉತ್ಪನ್ನ ಮಹತ್ವ ತಿಳಿಸಿದ್ದು ಪ್ರತಿ ಕಾರು ಪ್ರೇಮಿಗೂ ಮನಮುಟ್ಟುವಂತಿತ್ತು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಅರ್ಬನ್ ಡ್ರೈವ್‌ನಲ್ಲಿ ಭಾಗಿಯಾಗಿದ್ದ ಬಹುತೇಕರು ಸುರಕ್ಷತೆಯಿಂದಲೇ ಕಾರು ಚಾಲನೆ ಮಾಡಿದ್ದೇ ಆದರೂ ನಿಗದಿತ ಅವಧಿಯಲ್ಲಿ ಗುರಿ ತಲುಪುವಲ್ಲಿ ಕೆಲವೇ ಕೆಲವು ಚಾಲಕರು ಸಫಲರಾದರು. ಇದಕ್ಕೆ ಕಾರಣ, ರಸ್ತೆ ತಿರುವುಗಳಲ್ಲಿ ಮಲ್ಟಿ ಡ್ರೈವ್ ಮೂಡ್ ಪ್ರಯೋಗಿಸಿ ಗುರಿತಲುಪುದು ಇಲ್ಲಿ ಸವಾಲಿನ ಚಾಲನೆಯಾಗಿತ್ತು. ಹೀಗಾಗಿ ಇದೊಂದು ಅರ್ಥಪೂರ್ಣ ಬ್ರಾಂಡ್ ಪ್ರಮೋಷನ್ ಎಂದ್ರೆ ತಪ್ಪಾಗಲಾರದು.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಮಿನಿ ಸಂಸ್ಥೆಯು ದೇಶದಲ್ಲಿ ತನ್ನ ವಿಸ್ತಾರವಾದ ಮಾರಾಟ ಜಾಲದೊಂದಿಗೆ ಉತ್ತಮ ಮಾರಾಟ ಪ್ರಕ್ರಿಯೆಯನ್ನ ದಾಖಲಿಸುತ್ತಿದ್ದು, ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಮಿನಿ ಕಾರುಗಳ ಬೆಲೆ ಮಾಹಿತಿ ಇಲ್ಲಿದೆ ನೋಡಿ.

ಮಿನಿ ಕೂಪರ್ - ರೂ. 29.70 ಲಕ್ಷ

ಮಿನಿ ಕೂಪರ್ ಕನ್ವರ್ಟ್‌ಬಲ್ - ರೂ. 37.10 ಲಕ್ಷ

ಮಿನಿ ಕಂಟ್ರಿಮ್ಯಾನ್ - ರೂ. 34.9 ಲಕ್ಷ

ಮಿನಿ ಕ್ಲಬ್‌ಮ್ಯಾನ್ - ರೂ. 40.30 ಲಕ್ಷ

(ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ನಿಗದಿಗೊಳಿಸಲಾಗಿರುತ್ತದೆ)

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಮುಂದಿನ ಬದಲಾವಣೆ

ಮಿನಿ ಸಂಸ್ಥೆಯು ಸದ್ಯ ಬೆಂಗಳೂರಿನಲ್ಲೇ ಮೊದಲ ಬಾರಿಗೆ ಅರ್ಬನ್ ಡ್ರೈವ್ ಕಾರ್ಯಗಾರಕ್ಕೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಹೈದ್ರಾಬಾದ್, ಚೆನ್ನೈ, ಮುಂಬೈ, ಪುಣೆ, ಚಂಡಿಗಢ್ ಮತ್ತು ಕೊನೆಯ ಹಂತವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅರ್ಬನ್ ಡ್ರೈವ್ ಕಾರ್ಯಾಗಾರ ನಡೆಸಲು ಸಿದ್ದತೆ ನಡೆಸಿದೆ.

'ಗೋ-ಕಾರ್ಟ್' ರೈಡ್ ಅನುಭವ ನೀಡಿದ ಮಿನಿ ಅರ್ಬನ್ ಡ್ರೈವ್..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹಲವು ಹೊಸತನಗಳಿಗೆ ಕಾರಣವಾಗಿದ್ದ ಮಿನಿ ಸಂಸ್ಥೆಯ ಅರ್ಬನ್ ಡ್ರೈವ್ ಕಾರ್ಯಗಾರವು ಸುರಕ್ಷಿತ ಚಾಲನೆ ಜೊತೆಗೆ ಪರ್ಫಾಮೆನ್ಸ್ ಡ್ರೈವ್ ಹೇಗಿರಬೇಕು ಎನ್ನುವ ಬಗ್ಗೆ ಮಹತ್ವದ ಅರಿವು ಮೂಡಿಸಿದ್ದಲ್ಲದೇ ಹೊಸ ಕಾರುಗಳ ಕುರಿತು ಗ್ರಾಹಕರನ್ನು ಆಕರ್ಷಣೆ ಮಾಡಿದ್ದು ಈ ಕಾರ್ಯಕ್ರಮದ ಯಶಸ್ವಿ ಎನ್ನಬಹುದು.

Most Read Articles

Kannada
Read more on mini ಮಿನಿ
English summary
MINI Urban Drive Bangalore 2018 — Get. Set. Go-Kart!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X