ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಮಿಟ್ಸುಬಿಸಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ತನ್ನ ವಿನೂತನ ಔಟ್‌ಲ್ಯಾಂಡರ್ ಕಾರುಗಳನ್ನು ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಸಿಬಿಯು ಯನಿಟ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ ಎಂಬ ಮಾಹಿತಿ ಲಭ

By Praveen Sannamani

ಮಿಟ್ಸುಬಿಸಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ತನ್ನ ವಿನೂತನ ಔಟ್‌ಲ್ಯಾಂಡರ್ ಕಾರುಗಳನ್ನು ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಸಿಬಿಯು ಯನಿಟ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಸದ್ಯ ವಿನೂತನ ವಿನ್ಯಾಸಗಳು ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರು ಸಂಪೂರ್ಣವಾಗಿ ಸಿ.ಕೆ.ಡಿ ಮಾರ್ಗದ ಮೂಲಕ ಆಮದು ಮಾಡಿಕೊಳ್ಳಲಿರುವ ಮಿಟ್ಸುಬಿಸಿ ಇಂಡಿಯಾ ಸಂಸ್ಥೆಯು ಹೊಸ ಕ್ರಾಸ್‌ಒವರ್ ಎಸ್‌ಯುವಿಯ ಬೆಲೆಯನ್ನು ರೂ. 30 ಲಕ್ಷಕ್ಕೆ ನಿಗದಿಪಡಿಸುವ ಸಾಧ್ಯತೆಗಳಿವೆ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಇದು ಕಾರಿನ ಎಂಜಿನ್ ಕಾರ್ಯಕ್ಷಮತೆ ಹಾಗೂ ಇಂಧನ ಕಾರ್ಯಕ್ಷಮತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲಿದ್ದು, ಪ್ರಮುಖ ಎರಡು ಮೋಟಾರ್ ಸಹಾಯದೊಂದಿಗೆ 203-ಬಿಎಚ್‌ಪಿ ಉತ್ಪಾದನಾ ಕೌಶಲ್ಯ ಪಡೆಯಲಿವೆ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಇದೀಗ ಮಾರಾಟಕ್ಕೆ ಸಿದ್ದವಾಗಿ ಸಾಮಾನ್ಯ ಔಟ್‌ಲ್ಯಾಂಡರ್ ಕಾರುಗಳು ಏಳು ಆಸನಗಳ ವಿನ್ಯಾಸವನ್ನು ಹೊಂದಿರುವುದಲ್ಲದೇ ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಭಾರತದಲ್ಲಿ 7 ಸ್ಥಾನಗಳನ್ನು ಹೊಂದಿರುವ ಹೊಸ ಹೋಂಡಾ ಸಿಆರ್ ವಿ ಕಾರಿನ ಜೊತೆ ಸ್ಪರ್ಧಿಸಲು ಅಣಿಯಾಗುತ್ತಿದೆ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಅಂತೆಯೇ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಔಟ್‌ಲ್ಯಾಂಡರ್ ಕಾರುಗಳು ಭಾರತೀಯ ಮಾರುಕಟ್ಟೆಗೆ ಬಂದಿದ್ದೇ ಆದಲ್ಲಿ ಇನ್ನು ಹಲವು ಐಷಾರಾಮಿ ಕಾರುಗಳನ್ನು ಹಿಂದಿಕ್ಕಲಿದ್ದು, ಇದರಲ್ಲಿ 12kW ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಿರುವುದು ಪ್ರಮುಖ ವಿಚಾರ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

12kW ಲೀಥಿಯಂ ಅಯಾನ್ ಬ್ಯಾಟರಿ ಪೂರ್ಣಪ್ರಮಾಣದ ಚಾರ್ಜ್ ಆಗಲು ಆರು ಗಂಟೆ ತೆಗೆದುಕೊಳ್ಳಲಿದ್ದರೇ ಶೇ.80ರಷ್ಟು ಬ್ಯಾಟರಿ ರೀಚಾರ್ಜ್ ಆಗಲು ಕೇವಲ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಅಂದ್ರೆ ನಂಬಲೇಬೇಕು. ಜೊತೆಗೆ ಕಾರು ಚಾಲನೆ ವೇಳೆ ಸಂದರ್ಭಕ್ಕೆ ಅನುಗುಣವಾಗಿ ಆಲ್ ಎಲೆಕ್ಟ್ರಿಕ್, ಸೀರಿಸ್ ಹೈಬ್ರಿಡ್ ಮತ್ತು ಪ್ಯಾರಾಲಲ್ ಹೈಬ್ರಿಡ್ ಎಂಬ ಡ್ರೈವಿಂಗ್ ಮೂಡ್‌ಗಳನ್ನು ಬಳಕೆ ಮಾಡಬಹುದು.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಇದರಲ್ಲಿ ಆಲ್ ಎಲೆಕ್ಟ್ರಿಕ್ ಡ್ರೈವಿಂಗ್ ಮೂಡ್ ಬಳಕೆ ಮಾಡಿ 120ಕಿ.ಮೀ ವೇಗವಾಗಿ ಚಾಲನೆ ಮಾಡಿದ್ದಲ್ಲಿ ಪ್ರತಿ ಚಾರ್ಜ್‌ಗೆ 50 ಕಿ.ಮೀ ಮೈಲೇಜ್ ಪೆಡಯಬಹುದಾಗಿದ್ದು, ಅದೇ ರೀತಿಯಾಗಿ ಪ್ಯಾರಾಲಲ್ ಹೈಬ್ರಿಡ್ ಮೂಡ್‌ನಲ್ಲಿ ಕಾರು ಚಾಲನೆ ಮಾಡಿದ್ದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 58ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ ಎಂದು ಮಿಟ್ಸುಬಿಸಿ ಹೇಳಿಕೊಂಡಿದೆ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಇನ್ನು ಕಾರಿನ ವಿನ್ಯಾಸಗಳು ಬಹುತೇಕವಾಗಿ ಸಾಮಾನ್ಯ ಔಟ್‌ಲ್ಯಾಂಡರ್‌ನಂತೆಯೇ ಇದ್ದರೂ ಕಾರಿನ ತೂಕವು 260 ಕೆ.ಜಿ ಹೆಚ್ಚಿದ್ದು, ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಸುಧಾರಿತ ತಂತ್ರಜ್ಞಾನ ಪ್ರೇರಣೆ ಪಡೆದಿವೆ.

ಭಾರತಕ್ಕೂ ಬರಲಿದೆ ಮಿಟ್ಸುಬಿಸಿ ಹೈಬ್ರಿಡ್ ಔಟ್‌ಲ್ಯಾಂಡರ್ ಎಸ್‌ಯುವಿ

ಹೀಗಾಗಿ ಕಾರಿನ ಬೆಲೆಗಳು ಸಹ ಪ್ರಮುಖವಾಗಿ ಚರ್ಚೆಗೆ ಕಾರಣವಾಗಿದ್ದು, ಸಾಮಾನ್ಯ ಔಟ್‌ಲ್ಯಾಂಡರ್ ಕಾರುಗಳು ರೂ.30 ಲಕ್ಷಕ್ಕೆ ನಿಗದಿಯಾಗುತ್ತಿದ್ದು, ಅದರಂತೆಯೇ ಹೈಬ್ರಿಡ್ ಎಂಜಿನ್ ಕಾರುಗಳ ಬೆಲೆಯು ಸಾಮಾನ್ಯ ಕಾರಿಗಿಂತ 4 ಲಕ್ಷದಿಂದ 5 ಲಕ್ಷ ಹೆಚ್ಚುವರಿಯಾಗಬಹುದು ಎನ್ನಲಾಗಿದೆ.

Most Read Articles

Kannada
Read more on mitsubishi electric cars
English summary
Mitsubishi Outlander PHEV Might Come To India Soon.
Story first published: Wednesday, May 23, 2018, 20:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X