ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

Written By: Rahul TS

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ ಎಂ5 ಕಾರಿನ ಕಾಂಪಿಟಿಶನ್ ಎಡಿಶನ್ ಅನ್ನು ಬಹಿರಂಗಗೊಳಿಸಿದೆ. ಬಹಿರಂಗಗೊಂಡ ಹೊಸ ಕಾಂಪಿಟಿಶನ್ ಎಡಿಶನ್ ಎಂ5 ಕಾರಿನ ಆರನೆಯ ತಲೆಮಾರಿನದಾಗಿದ್ದು, ಹಿಂದಿನ ತಲೆಮಾದರಿಯ ಕಾರುಗಳಿಗಿಂತ ನವೀಕರಿಸಲಾಗಿರುವ ಎಂಜಿನ್ ಮತ್ತು ಮತ್ತಷ್ಟು ಫೀಚರ್‍‍ಗಳನ್ನು ಪಡೆದುಕೊಂಡಿರಲಿವೆ.

ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರಿನ ಮುಂಭಾಗದಲ್ಲಿ ಕಿಡ್ನಿ ಗ್ರಿಲ್‍‍ನ ಮೇಲೆ ಕಪ್ಪು ಬಣ್ಣದಿಂದ ಸಜ್ಜುಗೊಂಡಿದ್ದು, ಕಾರಿನ ಹಿಂಭಾಗದಲ್ಲಿ ಸ್ಪೋರ್ಟ್ಸ್ ಗ್ಲೊಸ್ ಕಪ್ಪು ಬಣ್ಣದಿಂದ ಬಂಪರ್‍ಅನ್ನು ಸಜ್ಜುಗೊಳಿಸಲಾಗಿದೆ. ಬಂಪರ್‍‍ನ ಬಣ್ಣವು ಟೈಲ್‍‍ಪೈಪ್ ಅನ್ನು ಹೋಲಲಿದ್ದು, ಈ ಕಾರು ಬೂಟ್ ಲಿಡ್‍ ಮತ್ತು ಸ್ಪಾಯ್ಲರ್‍‍ನ ಮೇಲೆ ಬ್ಯಾಂಡ್‍‍ನ ಲೋಗೊವನ್ನು ಪಡೆದಿದೆ.

ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

ಇನ್ನು ಕಾರಿನ ಒಳಭಾಗದಲ್ಲಿ ಕಪ್ಪು ಪಟ್ಟಿಯ ಬೆಲ್ಟ್ ಗಳನ್ನು ಸ್ಟ್ರಿಪ್ ಮಾದರಿಯಲ್ಲಿ ಹೊಂದಿದ್ದು, ಫೋರ್ ಮ್ಯಾಟ್‍‍ನಲ್ಲಿ ಎಂ5 ಲೋಗೊವನ್ನು ಅಳವಡಿಸಲಾಗಿದೆ. ಹಾಗೆಯೆ ಸೀಟ್‍‍ಗಳನ್ನು ಲೆದರ್‍‍‍ನಿಂದ ಸಜ್ಜುಗೊಳಿಸಲಾಗುತ್ತದೆ.

ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

ಕಾರಿನ ಡ್ಯಾಶ್‍‍ಬೋರ್ಡ್ ಅಲ್ಯೂಮೀನಿಯಂ‍‍ನ ಕಾರ್ಬನ್ ಆಕಾರವನ್ನು ಹೊಂದಿದ್ದು, ಅದನ್ನು ಕತ್ತಲೆಯ ಕ್ರೋಮ್ ಟ್ರಿಮ್ ಮತ್ತು ಇನ್ಸ್ಟ್ರೋಮೆಂತ್ ಕ್ಲಸ್ಟರ್ ಕೂಡ ಎಂ ಕಾಂಪಿಟಿಶನ್ ಗ್ರಾಪಿಕ್ ಅನ್ನು ಪಡೆದುಕೊಂಡಿರಲಿದೆ.

ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು 4.4 ಲೀಟರ್ ವಿ8 ಬಿಎಂಡಬ್ಲ್ಯೂ ಎಂ ಟ್ವಿನ್ ಪವರ್ ಟೆಕ್ನಾಲಜಿ ಎಂಜಿನ್ ಸಹಾಯದಿಂದ 591ಬಿಹೆಚ್‍ಪಿ ಮತ್ತು 750ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು ಎಂ ಎಕ್ಸ್ ಡ್ರೈವ್ ಆಲ್ ವೀಲ್ ಡ್ರೈ ಸಿಸ್ಟಂ ಅನ್ನು ಪಡೆದಿದೆ. ಜೊತೆಗೆ ಕೇವಲ 3.3 ಸೆಕೆಂಡಿಗೆ 0 ರಿಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ಗಂಟೆಗೆ 250 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿದೆ.

ಬಹಿರಂಗಗೊಂಡ ಹೊಸ ಬಿಎಂಡಬ್ಲ್ಯೂ ಎಂ5 ಕಾಂಪಿಟಿಶನ್ ಎಡಿಶನ್ ಕಾರು..

ಇನ್ನು ಈ ಕಾರು 20 ಇಂಚಿನ ವೈ-ಸ್ಪೋಕ್ ಡಿಸೈನ್ ಹೊಂದಿರುವ ಎಂ ಲೈಟ್ ಅಲಾಯ್ ಚಕ್ರಗಳನ್ನು ಹೊಂದಿದ್ದು, ಮುಂಭಾಗದ ಚಕ್ರಗಳಿಗೆ ಇನ್ನರ್ ವೆಂಟೆಡ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಿಗೆ ಸಿಂಗಲ್ ಪಿಸ್ಟನ್ ಇಂಟಿಗ್ರೇಟೆಡ್ ಪಾರ್ಕಿಂಗ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

ಬಹಿರಂಗವಾಯ್ತು ರೋಲ್ಸ್ ರಾಯ್ಸ್ ಮೊದಲ ಐಷಾರಾಮಿ ಎಸ್‌ಯುವಿ ಕುಲ್ಲಿನನ್...

ಭಾರತೀಯ ಸೇನಾಪಡೆಯ ಕಾರ್ಯಾಚರಣೆಗೆ ಮೇಕ್ ಇನ್ ಇಂಡಿಯಾ ಫೋರ್ಸ್...

Read more on bmw luxury car
English summary
2018 BMW M5 Competition Edition Revealed.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark