ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯೂ ತಮ್ಮ ಎಕ್ಸ್-ರೇಂಜ್ ಕಾರಿನ ಪಟ್ಟಿಯಲ್ಲಿ ಮತ್ತೊಂದು ಮಾಡಲ್ ಅನ್ನು ಸೇರಿಸಲಿದ್ದು, ಎಕ್ಸ್7 ಕಾರು ಇನ್ನಿತರೆ ಎಕ್ಸ್-ರೇಂಜ್ ಕಾರುಗಳ ವಿನ್ಯಾಸವನ್ನೇ ಹೋಲಲಿದೆ. ಆದ್ರೆ ಇದು ಬಿಎಂಡಬ್ಲ್ಯೂ ಸಂಸ್ಥೆಯಲ್ಲಿ ಮೊದಲ 7 ಆಸನವುಳ್ಳ ಎಸ್‍‍ಉವಿ ಎಂದು ಹೇಳಲಾಗುತ್ತಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಹೊಸ ಬಿಎಂಡಬ್ಲ್ಯೂ ಎಸ್‍ಯುವಿ ಕಾರು 5151ಎಂಎಂ ಉದ್ದ, 1805ಎಂಎಂ ಎತ್ತರ, 2000ಎಂಎಂ ಅಗಲ ಮತ್ತು 3105ಎಂಎಂನ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದೆ. ಈ ಕಾರು ಎಕ್ಸ್6 ಕಾರಿಗಿಂತಾ 9ಎಎಂ ಹೆಚ್ಚಿನ ಉದ್ದ ಮಾತ್ತು 3 ಇಂಚಿನ ಕಡಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿರಲಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಕಾರಿನ ವಿನ್ಯಾಸ

ಬಿಎಂಡಬ್ಲ್ಯೂ ಎಸ್‍ಯುವಿ ಕಾರು ಮುಂಭಾಗದಲ್ಲಿ ಚೌಕಾಕಾರದ ಮತ್ತು ಉದ್ದನೆಯ ಸಿಗ್ನೇಚರ್ ಗ್ರಿಲ್ ಅನ್ನು ಪಡೆದುಕೊಂಡಿರಲಿದ್ದು, ಈ ಸಂಸ್ಥೆಯಲ್ಲಿ ಬೇರಾವ ಕಾರಿಗು ನೀಡಲಾಗದ ಗ್ರಿಲ್ ಅನ್ನು ಇದಕ್ಕೆ ಅಳವಡಿಸಲಾಗಿದೆ. ಮತ್ತು ಎಲ್ಇಡಿ ಹೆಡ್‍ಲ್ಯಾಂಪ್‍ಗಳನ್ನು ಒದಗಿಸಲಾಗಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಪ್ರಸ್ತುತ ಬಿಎಂಡಬ್ಲ್ಯೂ ಎಕ್ಸ್7 ಕಾರಿಗೆ ಎಲ್ಇಡಿ ಹೆಡ್‍‍ಲ್ಯಾಂಪ್‍ಗಳನ್ನು ನೀಡಲಗಿದ್ದು, ಭವಿಷ್ಯದಲ್ಲಿ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳನ್ನು ಆಯ್ಕೆಯಾಗಿ ನೀಡಲಾಗುವುದು ಎನ್ನಲಾಗಿದೆ. ಈ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳು ಸಾಧಾರಣ ಎಲ್ಇಡಿ ಹೆಡ್‍ಲ್ಯಾಂಪ್‍ಗಳಿಗಿಂತಾ ಎರಡು ಪಟ್ಟು ಅಧಿಕವಾದ ಬೆಳಕನ್ನು ನೀಡುತ್ತದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಇನ್ನು ಈ ಕಾರಿನ ಹಿಂಭಾಗದಲ್ಲಿ 2 ಸೆಕ್ಷನ್ ವಿಭಜಿತ ಟೈಲ್‍ಗೇಟ್ ವಿನ್ಯಾಸವನ್ನು ನೀಡಲಾಗಿದ್ದು, 326 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಇದು ಪಡೆದುಕೊಳ್ಳಲಿದೆ. ಇದಲ್ಲದೇ ಎರಡನೆಯ ಮತ್ತು ಮೂರನೆಯ ಸೀಟ್ ಅನ್ನು ಮಡಚಿದರೆ ಸುಮಾರು 2120 ಲೀಟರ್‍‍ನಷ್ಟು ಸ್ಥಳವನ್ನು ಪಡೆದುಕೊಳ್ಳಬಹುದಾಗಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಕಾರಿನ ಒಳವಿನ್ಯಾಸ

ಬಿಎಂಡಬ್ಲ್ಯೂ ಎಕ್ಸ್7 ಸಂಸ್ಥೆಯಲ್ಲಿನ ಮೊದಲ 7 ಆಸನವುಳ್ಳ ಎಸ್‍ಯುವಿ ಕಾರಾಗಿದ್ದು, ಪ್ರಯಾಣಿಕರಿಗೆ ಸೌಕರ್ಯವಾಗುವಂತೆ ಮಧ್ಯದಲ್ಲಿರುವ ಸೀಟ್‍‍ಗಳನ್ನು ಕೊಂಚ ದೊಡ್ಡದಾಗಿಯೆ ನೀಡಲಾಗಿದೆ. ಜೊತೆಗೆ ಈ ಕಾರು 4 ಜೋನ್ ಕ್ಲೈಮೇಟ್ ಕಂಟ್ರೋಲ್, ಏಂಬಿಯಂಟ್ ಲೈಟ್ನಿಂಗ್, 3 ಸೆಕ್ಷನ್ ಪ್ಯಾನರಾಮಿಕ್ ಗ್ಲಾಸ್ ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, 12ಇಂಚಿನ ಟ್ವಿನ್ ಸ್ಕ್ರೀನ್‍ಗಳನ್ನು ಸಹ ಒದಗಿಸಲಾಗಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಇಷ್ಟು ಮಾತ್ರವಲ್ಲದೇ ಪ್ಯಾನರಾಮಿಕ್ ಗ್ಲಾಸ್ ರೂಫ್ ಸ್ಕೈ ಲಾನ್, 5 ಜೋನ್ ಕ್ಲೈಮೇಟ್ ಕಂಟ್ರೋಲ್, ಬೋವರ್ಸ್ ಮತ್ತು ವಿಲ್ಕಿಂನ್ಸ್ ಡೈಮಂಡ್-ಸರೌಂಡ್ ಸಿಸ್ಟಂ, ರಿರಯ್ ಸೀಟ್ ಎಂಟರ್‍‍ಟೈನೆಂಟ್ ಮತ್ತು ಗ್ಲಾಸ್ ಅಪ್ಲಿಕೇಶನ್ ಕಂಟ್ರೋಲ್‍ಗಳನ್ನು ಅಳವಡಿಸಲಾಗಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಎಂಜಿನ್ ಸಾಮರ್ಥ್ಯ

ಹೊಸ ಬಿಎಂಡಬ್ಲ್ಯೂ ಎಕ್ಸ್7 ಕಾರು ಎರಡು ಪೆಟ್ರೋಲ್ ಹಾಗು ಒಂದು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಭವಿಷ್ಯದಲ್ಲಿ ಎರಡು ಪೆಟ್ರೋಲ್ ಹಾಗು ಎರಡು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಪೆಟ್ರೊಲ್ ಆಧಾರಿತ ಕಾರುಗಳು 3.0 ಲೀಟರ್ ಇನ್‍ಲೈನ್ 6 ಸಿಲೆಂಡರ್ ಮತ್ತು 4.4 ಟ್ವಿನ್ ಟರ್ಬೋ ವಿ8 ಎಂಜಿನ್‍ಗಳನ್ನು ಪಡೆಯಲಿದೆ. ಇನ್‍ಲೈನ್ 6ಸೆಲೆಂಡರ್ ಎಂಜಿನ್ 335ಬಿಹೆಚ್‍ಪಿ ಮತ್ತು ವಿ8 ಎಂಜಿನ್ 456ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸುತ್ತದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಡೀಸೆಲ್ ಅಧಾರಿತ ಎಕ್ಸ್7 ಕಾರು 3.0 ಲೀಟರ್ ಇನ್‍ಲೈನ್ 6 ಸಿಲೆಂಡರ್ ಎಂಜಿನ್ ಸಹಾಯದಿಂದ 265ಬಿಹೆಚ್‍ಪಿ ಶಕ್ತಿಯನ್ನು ಉತ್ಪಾದಿಸಲಿದ್ದು, ಎಲ್ಲಾ ಎಂಜಿನ್‍ಗಳನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಎಂಡಬ್ಲ್ಯೂ ಸಂಸ್ಥೆಯ ಮೊದಲ 7 ಸೀಟರ್ ಎಸ್‍‍ಯುವಿ ಕಾರು ಹೇಗಿರಲಿದೆ ಗೊತ್ತಾ.?

ಈ ಕಾರು ದಕ್ಷಿಣ ಕೆರೊಲಿನಲ್ಲಿನ ಪ್ಲ್ಯಾಂಟ್‍ನಲ್ಲಿ ಉತ್ಪಾದನೆಯಾಗಲಿದ್ದು, ಪ್ರಸ್ಥುತ ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಒಮ್ಮೆ ಬಿಡುಗಡೆಗೊಂಡರೆ ಸುಮಾರು ರೂ.1 ಕೋಟಿಯ ಮಾರಾಟದ ಬೆಲೆಯನ್ನು ಪಡೆಯಲಿದೆ ಎನ್ನಲಾಗುತ್ತಿದೆ.

Most Read Articles

Kannada
Read more on bmw luxury car suv
English summary
BMW Unveils Their All-New X7 SUV — The First Seven-Seater BMW In History
Story first published: Friday, October 19, 2018, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X