ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಕಾರ್ಸ್ ತಮ್ಮ ಹೊಸ ಹೋಂಡಾ ಸಿವಿಕ್ ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಿದ್ದು, 2019ರ ಜನವರಿ ತಿಂಗಳಿನಲ್ಲಿ ಪರಿಚಯಿಸಲಿದೆ ಎನ್ನಲಾಗಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಮಾಹಿತಿಗಳ ಪ್ರಕಾರ ಹೋಂಡಾ ಕಾರ್ಸ್ ಸಂಸ್ಥೆಯು ತಮ್ಮ ಹೊಸ ಸಿವಿಕ್ ಫೇಸ್‍ಲಿಫ್ಟ್ ಸೆಡಾನ್ ಕಾರಿನ ಬಿಡಿಭಾಗಗಳನ್ನು ದೆಹಲಿಯಲ್ಲಿರುವ ಉತ್ಪಾದನ ಘಟಕದಲ್ಲಿ ಬಿಡಿಭಾಗಗಳನ್ನು ಒಟ್ಟುಗೂಡಿಸಲಿದೆ ಎನ್ನಲಾಗಿದ್ದು, ದೇಶಕ್ಕೆ ಸಿಕೆಡಿ (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಕಿಟ್‍‍ಗಳ ಮುಖಾಂತರ ಕಾಲಿಡಲಿದೆ. ಮತ್ತು ತನ್ನ ಹಳೆಯ ಸಿವಿಕ್ ಕಾರಿನ ಜೋಡಣಾ ಸಾಲನ್ನು ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಹೋಂಡಾ ಸಂಸ್ಥೆಯು ಈ ಹಿಂದೆ ಸಿವಿಕ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಮೂಲಕ ಹೊಸ ವಿನ್ಯಾಸದ ಸಿವಿಕ್ ಕಾರುಗಳ ಬಿಡುಗಡೆಯ ಸುಳಿವು ನೀಡಿತ್ತು. ಅಂತೆಯೇ ಕಳೆದ ಫೆಬ್ರವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಸಿವಿಕ್ ಕಾರುಗಳನ್ನ ಅನಾವರಣ ಮಾಡಿತ್ತು. ಇದೀಗ 2018ರ ಸಿವಿಕ್ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಕಾರುಗಳನ್ನು ಅನಾವರಣಗೊಳಿಸಿರುವುದಲ್ಲದೇ 2019ರ ಆರಂಭದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಸ್ಪೋರ್ಟಿ ಲುಕ್‌ನೊಂದಿಗೆ ಮಿಂಚಲಲಿರುವ ಸಿವಿಕ್ ಫೇಸ್‌ಲಿಫ್ಟ್ ಕಾರುಗಳಲ್ಲಿ ಹೊಸ ವಿನ್ಯಾಸದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಆಂಗ್ಯುಲರ್ ಬಂಪರ್, ಕ್ರೋಮ್ ಅಸೆಟ್ಸ್ ಮತ್ತು ಎಲ್ಇಡಿ ಡಿಆರ್‌ಎಸ್ ಸೌಲಭ್ಯ ಹೊಂದಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿವಿಕ್ ಫೇಸ್‌ಲಿಫ್ಟ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಸಿವಿಕ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಸಿವಿಕ್ ಆವೃತ್ತಿಗಳನ್ನು ಹೊರತರುವ ಸುಳಿವು ನೀಡಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಮಾಹಿತಿಗಳ ಪ್ರಕಾರ, ಭಾರತೀಯ ಸಿವಿಕ್ ಮಾದರಿಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1. 6- ಡೀಸೆಲ್ ಎಂಜಿನ್ ಹೊಂದಿರಲಿದ್ದು, ಪೆಟ್ರೋಲ್ ವರ್ಷನ್ 154 ಬಿಎಚ್‌ಪಿ, 187 ಎನ್ಎಂ ಟಾರ್ಕ್ ಮತ್ತು ಡೀಸೆಲ್ ವರ್ಷನ್ 118 ಬಿಎಚ್‌ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಜೊತೆಗೆ 10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ವಿಭಾಗದಲ್ಲಿ 6-ಸ್ಪೀಡ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳು ಆಯ್ಕೆ ಮಾಡಬಹುದಾಗಿದ್ದು, ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಇರಲಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಬಿಡುಗಡೆಯಾಗಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ವಿಶೇಷತೆ ಏನು

ಇದರೊಂದಿಗೆ ಮಧ್ಯಮ ಕ್ರಮಾಂಕದ ಸೆಡಾನ್ ಆವೃತ್ತಿಗಳಾದ ಟಯೊಟಾ ಕರೊಲ್ಲಾ, ಸ್ಕೋಡಾ ಒಕ್ಟಿವಿಯಾ ಮತ್ತು ಹ್ಯುಂಡೈ ಎಲಾಂಟ್ರಾ ಕಾರುಗಳಿಗೆ ಸಿವಿಕ್ ಫೇಸ್‌ಲಿಫ್ಟ್ ಕಾರುಗಳು ತ್ರೀವ ಪೈಪೋಟಿ ನೀಡಲಿದ್ದು, ಕಾರಿನ ದರ ನಿಗದಿ ಮೇಲೆ ಹೊಸ ಕಾರಿನ ಭವಿಷ್ಯ ನಿರ್ಧಾರವಾಗಲಿದೆ.

Most Read Articles

Kannada
Read more on new car sedan
English summary
New Honda Civic To Be Assembled In India; Launch In 2019.
Story first published: Saturday, November 3, 2018, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X