ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತಮ್ಮ ಹೊಸ ಸಿಆರ್-ವಿ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 28.15ಲಕ್ಷದ ಪ್ರಾರಂಭಿಕ ಬೆಲೆಗೆ ನಿಗದಿ ಮಾಡಲಾಗಿದೆ. ಈ ಬಾರಿ ಹೋಂಡಾ ಸಿಆರ್‍-ವಿ ಕಾರು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದಿದ್ದು, ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಿರಿ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ವೇರಿಯಂಟ್‍‍ಗಳು ಮತ್ತು ಅವುಗಳ ಬೆಲೆ

ಬಿಡುಗಡೆಗೊಂಡ ಹೊಸ ಹೋಂಡ ಸಿಆರ್-ವಿ ಕಾರು ಪೆಟ್ರೋಲ್ 2ಡಬ್ಲ್ಯೂಡಿ (ರೂ.28.15 ಲಕ್ಷ), ಡೀಸೆಲ್ 2ಡಬ್ಲ್ಯೂಡಿ (ರೂ.30.65 ಲಕ್ಷ) ಮತ್ತು ಡೀಸೆಲ್ ಎಡಬ್ಲ್ಯೂಡಿ (ರೂ.32.75 ಲಕ್ಷ) ಎಂಬ ಮೂರು ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಹೊಸ ಕಾರಿನ ವಿನ್ಯಾಸ

ಹೊಸ ಹೋಂಡಾ ಸಿಆರ್-ವಿ ಕಾರು ಈ ಬಾರಿ ಶಾರ್ಪ್ ಹಾಗು ಆಂಗ್ಯುಲರ್ ವಿನ್ಯಾಸವನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲಿ ಫ್ರಂಟ್‍ ಗ್ರಿಲ್‍ನ ಮೇಲೆ ಕ್ರೋಮ್ ಬಾರ್, ಡೇ-ಟೈಮ್ ರನ್ನಿಂಗ್ ಲೈಟ್ಸ್ ನೊಂದಿಗೆ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಫಾಗ್ ಲ್ಯಾಂಪ್ಸ್, ಸಿಲ್ವರ್ ಸ್ಕಿಡ್ ಪ್ಲೇಟ್ ಹಾಗು ಧೃಢವಾದ ಬಂಪರ್ ಅನ್ನು ಒದಗಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಕಾರಿನ ಬದಿಯಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಡೈಮಂಡ್ ಕಟ್, 3 ಸ್ಪೋಕ್ 18 ಇಂಚಿನ ಅಲಾಯ್ ವ್ಹೀಲ್‍ಗಳನ್ನು ನೀಡಲಾಗಿದ್ದು, ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‍ಲೈಟ್ ಕ್ಲಸ್ಟರ್, ಕ್ರೋಮ್ ಬಾರ್, ಶಾರ್ಕ್ ಫಿನ್ ಆಂಟೆನಾ ಮತ್ತು ಸ್ಕಿಡ್ ಪ್ಲೇಟ್ ಅನ್ನು ಅಳವಡಿಸಲಾಗಿದೆ. ಇದಲ್ಲದೆ ಆಕರ್ಷಕ ವಿನ್ಯಾಸಕ್ಕಾಗಿ ರೂಫ್ ರೈಲ್‍‍ಗಳನ್ನು ಸಹ ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಕಾರಿನ ಒಳಾಂಗಣ ವಿನ್ಯಾಸ

ಹೋಂಡಾ ಸಿಆರ್-ವಿ ಕಾರಿನ ಒಳಭಾಗದಲ್ಲಿ ಪ್ರೀಮಿಯಮ್ ಲುಕ್ ಹಾಗು ಹಲವಾರು ಬಗೆಯೆ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ. ಆಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ. ಟಿಎಫ್‍‍ಟಿ ಎಲ್‍ಸಿಡಿ ಇಂಸ್ಟ್ರೂಮೆಂಟ್ ಕ್ಲಸ್ಟರ್, ಯುಎಸ್‍ಬಿ ಪೋರ್ಟ್, ಹೆಚ್‍‍ಡಿಎಂಐ ಪೋರ್ಟ್ ಮತ್ತು 8 ಸ್ಪೀಕರ್ ಆಡಿಯೋ ಸಿಸ್ಟಂ ಎಂಬ ಫೀಚರ್‍‍ಗಳನ್ನು ಒದಗಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಇದಲ್ಲದೆ ಈ ಕಾರಿನಲ್ಲಿ ಲೆಧರ್‍‍ನಿಂದ ಸಜ್ಜುಗೊಂಡ ಸೀಟ್‍‍ಗಳು, ಡ್ಯುಯಲ್ ಟೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ವೇರಿಯಂಟ್‍‍ನಲ್ಲಿ ಪ್ಯಾಡಲ್ ಶಿಫ್ಟರ್, ರಿಯರ್ ಎಸಿ ವೆಂಟ್ಸ್, ತರ್ಡ್ ರೋ ಎಸಿ, ಎಂಟು ಮಾದರಿಯಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಡ್ಯಾಶ್‍ಬೋರ್ಡ್ ಹಾಗು ಡೋರ್ ಟ್ರಿಮ್ ಅನ್ನು ಪ್ರೀಮಿಯಂ ವುಡ್ ಫಿನಿಷ್‍‍ನಿಂದ ಸಜ್ಜುಗೊಳಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಹೋಂಡಾ ಸಿಆರ್‍-ವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಐಎಸ್ಓ ಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಅಗಿಲ್ ಹ್ಯಾಂಡ್ಲಿಂಗ್ ಅಸಿಸ್ಟ್, ಹಿಲ್-ಸ್ಟಾರ್ಟ್ ಅಸಿಸ್ಟ್, ಕ್ಯಾಮೆರಾದೊಂದಿಗೆ ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಲೇನ್‍ವಾಚ್ ಕ್ಯಾಮೆರಾ ಎಂಬ ಹಲವಾರು ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ವೇರಿಯಂಟ್‍ನ ಹೋಂಡಾ ಸಿಆರ್-ವಿ ಕಾರು 2 ಲೀಟರ್ 4 ಸಿಲೆಂಡರ್ ಐ-ವಿಟೆಕ್ ಎಂಜಿನ್ ಸಹಾಯದಿಂದ 151ಬಿಹೆಚ್‍ಪಿ ಮತ್ತು 189 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಇನ್ನು ಡೀಸೆಲ್ ವೇರಿಯಂಟ್‍ನ ಹೋಂಡಾ ಸಿಆರ್-ವಿ ಕಾರು ಹೊಸ 1.6 ಲೀಟರ್ 4 ಸಿಲೆಂಡರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಗಿದೆ. ಡೀಸೆಲ್ ಎಂಜಿನ್ ಹೋಂಡಾ ಸಿಆರ್-ವಿ ಕಾರುಗಳು ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಎಂಬ ಆಯ್ಕೆಯನ್ನು ಕೂಡಾ ಪಡೆದುಕೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಮೈಲೇಜ್

ಪೆಟ್ರೋಲ್ ವೇರಿಯಂಟ್ ಹೋಂಡಾ ಸಿಆರ್-ವಿ ಕಾರು ಪ್ರತೀ ಲೀಟರ್‍‍ಗೆ 14.4 ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಇನು ಡೀಸೆಲ್ ಮಾದರಿಯ ಹೋಂಡಾ ಸಿಆರ್-ವಿ ಕಾರು ಪ್ರತೀ ಲೀಟರ್‍‍ಗೆ 19.5 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಲಭ್ಯವಿರುವ ಬಣ್ಣಗಳು

ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು ವೈಟ್ ಆರ್ಚಿಡ್ ಪರ್ಲ್, ರೇಡಿಯಂಟ್ ರೆಡ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್ ಹಾಗು ಲೂನಾರ್ ಸಿಲ್ವರ್ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೋಂಡಾ ಸಿಆರ್-ವಿ ಕಾರು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಸಂಸ್ಥೆಯು ಸಾಕಷ್ಟು ನವೀಕರಣಗಳೊಂದಿಗೆ ತಮ್ಮ ಜನಪ್ರಿಯ ಸಿಆರ್-ವಿ ಎಸ್‍ಯುವಿ ಕಾರನ್ನು ಇಂದು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಈ ಕಾರು ಪ್ರಸ್ಥುತ ಮಾರುಕಟ್ಟೆಯಲ್ಲಿರುವ ಸ್ಕೋಡಾ ಕೋಡಿಯಾಕ್, ವೋಲ್ಕ್ಸ್ ವ್ಯಾಗನ್ ಟೈಗೌನ್, ಫೋರ್ಡ್ ಎಂಡೀವರ್ ಮತ್ತು ಟೋಯೋಟಾ ಫಾರ್ಚ್ಯೂನಾರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
Read more on new launches new car suv
English summary
2018 Honda CR-V Launched In India.
Story first published: Tuesday, October 9, 2018, 14:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X