ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಮುಂದಿನ ವರ್ಷದಲ್ಲಿ ಬಿಡುಗಡೆಗೊಳ್ಳಲ್ಲು ಸಜ್ಜುಗೊಂಡಿರುವ ಹ್ಯುಂಡೈ ಐ30 ಕಾರು ಮಾದರಿಗಳು ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಳ್ಳುತ್ತಿದ್ದು, ಹೊಸ ವಿನ್ಯಾಸಗಳೊಂದಿಗೆ ಬೃಹತ್ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಹ್ಯುಂಡೈ ಇಂಡಿಯಾ ಸಂಸ್ಥೆಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಿವಿಧ ಕಾರು ಮಾದರಿಗಳಿಂದಾಗಿ ಭಾರೀ ಜನಪ್ರಿಯತೆಯನ್ನು ಕಂಡಿದ್ದು, ಸ್ಯಾಂಟ್ರೋ, ಐ10 ಐ20 ಎಂಬ ಹ್ಯಾಚ್‍ಬ್ಯಾಕ್ ಕಾರುಗಳನ್ನು ಮಧ್ಯಮ ವರ್ಗದ ಜನರು ಕೂಡಾ ಕಾರು ಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಸಧ್ಯಕ್ಕೆ ಹ್ಯುಂಡೈ ಐ30 ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಕಾರು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, 1.6ಡಿ ಬ್ಯಾಡಿಂಜ್ ಅನ್ನು ನೀಡಲಾಗಿದೆ. ಅಂದರೇ ಈ ಕಾರು ಕೂಡಾ ಹ್ಯುಂಡೈ ಕ್ರೆಟಾ ಮತ್ತು ವೆರ್ನಾ ಕಾರುಗಳಲ್ಲಿ ಬಳಸಲಾದ 1.6 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುವ ಅವಕಾಶಗಳಿವೆ ಎನ್ನಲಾಗಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು ಹ್ಕ್ಸಾಗನಲ್ ಗ್ರಿ, ಎಲ್ಇಡಿ ಡಿಆರ್‍ಎಲ್‍‍ನೊಂದಿಗೆ ಹೊಸ ಹೆಡ್‍‍ಲ್ಯಾಂಪ್, ಪ್ರಿಜೆಕ್ಟರ್ ಯೂನಿಟ್ ಮತ್ತು ಅಡ್ಡಗೆರೆಯ ಸ್ಪ್ಲಿಟ್ ಎಲ್ಇಡಿ ಟೈಲ್‍‍ಲೈಟ್ ಅನ್ನು ಪಡೆದುಕೊಂಡಿದೆ. ಪ್ರಸ್ತುತ ಐ30 ಕಾರಿನ ಬೆಲೆಯ ಬಗ್ಗೆ ಯಾವುದೇ ರೀತಿಯ ಮಾಹಿಗಳು ದೊರೆತಿಲ್ಲವಾದರೂ, ಸಂಸ್ಥೆಯ ಕಡೆಯಿಂದ ಅಧಿಕೃತ ಮಾಹಿತಿಗಾಗಿ ಕಾಯ್ದು ನೋಡಬೇಕಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಹ್ಯುಂಡೈ ಸಂಸ್ಥೆಯು ಐ30 ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಹ್ಯುಂಡೈ ಎಲಾಂಟ್ರಾ ಕಾರಿನ ವಿನ್ಯಾಸವನ್ನು ಆಧರಿಸಲಿದೆ ಎನ್ನಲಾಗಿದೆ. ಐ30 ಕಾರು ಹ್ಯುಂಡೈ ಐ20 ಕಾರಿನ ಮುಂದಿನ ಬದಲಾವಣೆಯ ಕಾರಾಗಿದ್ದು ಫೋಕ್ಸ್‌ವ್ಯಾಗನ್ ಗೊಲ್ಫ್ ಹಾಗು ಹೋಂಡಾ ಸಿವಿಕ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಇನ್ನು ಹೊಸ ಐ30 ಕಾರು 1.6 ಲೀಟರ್ ಡೀಸೆಲ್ ಎಂಜಿನ್ ಪಡೆದಿರಲಿದೆ ಎಂದು ಹೇಳಲಾಗಿದ್ದು, ಅಂತರರಾಷ್ಟ್ರೀಯ ಮಾದರಿಯಾದ ಐ 30 ಕಾರು ರಾಡರ್ ಗೈಡೆಡ್ ಕ್ರೂಸರ್ ಕಂಟ್ರೋಲ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಹಾಗು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಗಳನ್ನು ಒಳಗೊಂಡತಹ 8.0 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿರಲಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಹೊಸ ಹ್ಯುಂಡೈ ಐ30 ಪ್ರೀಮಿಯಮ್ ಹ್ಯಾಚ್‍‍ಬ್ಯಾಕ್ ಕಾರು 4340ಎಮ್ಎಮ್ ಉದ್ದ, 1795ಎಮ್ಎಮ್ ಅಗಲ, 1455ಎಮ್ಎಮ್ ಎತ್ತರವನ್ನು ಪಡೆದಿದ್ದು, ಹ್ಯುಂಡೈ ಎಲೈಟ್ ಐ20 ಮತ್ತು ಕ್ರೆಟಾ ಕಾರುಗಳ ಮಧ್ಯ ಸ್ಥಾನವನ್ನು ಪಡೆದಿರಲಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಇದ್ದು, 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕೂಡಾ ಲಭ್ಯವಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. 1,316ಕೆಜಿ ತೂಕವಿರುವ ಈ ಕಾರು 16 ಇಂಚಿನ ಅಲಾಯ್ ಚಕ್ರಗಳನ್ನು ಕೂಡಾ ಪಡೆದುಕೊಂಡಿದೆ.

ಚೆನ್ನೈನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಐ30 ಕಾರು

ಹೊಸ ಮಾದರಿಯ ಹ್ಯುಂಡೈ ಐ30 ಆವೃತ್ತಿಗೆ ಸ್ಪೋರ್ಟ್ಸ್ ಆವೃತ್ತಿಯ ಟಚ್ ನೀಡಲಾಗಿದ್ದು, ಎಕ್ಸಾಸ್ಟ್ ಕೊಳಗೆ ವಿಶೇಷ ವಿನ್ಯಾಸ ಹೊಂದಿದೆ. ಆದರೆ ಐ30 ಹ್ಯಾಚ್‍ಬ್ಯಾಕ್ ಕಾರು 4 ಮೀಟರ್ ಉದ್ದವನ್ನು ಹೊಂದಿದ್ದು, ಮಧ್ಯಮ ಗಾತ್ರದ ಎಸ್‍ಯುವಿ ಕಾರಿನ ಬೆಲೆಯನ್ನು ಪಡೆಯಲಿದೆ ಎನ್ನಲಾಗಿದೆ.

ಚೆನ್ನೈ ನಗರದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ಮಾಡುವಾಗ ಕಾಣಿಸಿಕೊಂಡ ಹ್ಯುಂಡೈ ಐ30 ಕಾರಿನ ವಿಡಿಯೋ ಇಲ್ಲಿದೆ ನೋಡಿ..

Source:Review, Race and Recipe

Most Read Articles

Kannada
English summary
New Hyundai i30 spied testing in Chennai near company plant – Video.
Story first published: Monday, November 26, 2018, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X