ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಹ್ಯುಂಡೈ ಮೋಟಾರ್ಸ್ ಇಂಡಿಯಾ ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ ಸೆಪ್ಟೆಂಬರ್ 23ರಂದು ಸ್ಯಾಂಟ್ರೊ ಕಾರು ಮಾರುಕಟ್ಟೆಗೆ ಎಂಟ್ರಿ ನೀಡಿತ್ತು, ಬಿಡುಗಡೆಗೊಂಡ ಹತ್ತು ವರ್ಷದ ಸಮಯದಲ್ಲಿ ಒಳ್ಳೆ ಪ್ರಮಾಣದ ಮಾರಾಟವನ್ನು ಕಂಡಿತ್ತು.

By Rahul Ts

ಹ್ಯುಂಡೈ ಮೋಟಾರ್ಸ್ ಇಂಡಿಯಾ ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ ಸೆಪ್ಟೆಂಬರ್ 23ರಂದು ಸ್ಯಾಂಟ್ರೊ ಕಾರು ಮಾರುಕಟ್ಟೆಗೆ ಎಂಟ್ರಿ ನೀಡಿತ್ತು, ಬಿಡುಗಡೆಗೊಂಡ ಹತ್ತು ವರ್ಷದ ಸಮಯದಲ್ಲಿ ಒಳ್ಳೆ ಪ್ರಮಾಣದ ಮಾರಾಟವನ್ನು ಕಂಡಿದ್ದು, ನಂತರ ಮಾರುಕಟ್ಟೆಯಲ್ಲಿನ ಎದುರಾಳಿ ಕಾರುಗಳ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಮರೆಯಾಯಿತು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಆದರೆ ಗ್ರಾಹಕರಿಂದ ಬರುತ್ತಿರುವ ಬೇಡಿಕೆಯ ಆಧಾರದ ಅನುಸಾರವಾಗಿ ಸಂಸ್ಥೆಯು ಮತ್ತೆ ಸ್ಯಾಂಟ್ರೊ ಕಾರನ್ನು ಪುನಃ ಬಿಡುಗಡೆಗೊಳಿಸಲಿದೆ. ಈ ನಿಟ್ಟಿನಲ್ಲಿ ಹ್ಯುಂಡೈ ಮೋಟಾರ್ಸ್ ಹೊಸ ತಲೆಮಾರಿನ ಸ್ಯಾಂಟ್ರೊ ಕಾರನ್ನು ಪರೀಕ್ಷಿಸಲು ಮುಂದಾಗಿದ್ದು, ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಹ್ಯುಂಡೈ ಮೋಟಾರ್ಸ್ ಸ್ಯಾಂಟ್ರೊ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 23ರಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ವರ್ಷವು ಕೂಡಾ ಸರಿಯಾಗಿ ಅದೇ ದಿನದಂದು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಮಾರುತಿ ಸುಜುಕಿ ಸೆಲೆರಿಯೊ, ವ್ಯಾಗನ್ ಆರ್ ಮತ್ತು ಟಾಟಾ ಟಿಯಾಗೊ ಕಾರುಗಳಿಂದ ಎದುರಾದ ತೀವ್ರವಾದ ಪೈಪೋಟಿಯಿಂದಾಗಿ ಸುಮಾರು 16 ವರ್ಷಗಳ ನಂತರ 2015ರಲ್ಲಿ ಮರುಕಟ್ಟೆಯಿಂದ ಮರೆಯಾಯಿತು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಪ್ರಸ್ಥುತ ಹೊಸದಾಗಿ ಪರೀಕ್ಷಿಸಲ್ಪಡುತ್ತಿರುವ ನೂತನ ತಲೆಮಾರಿನ ಸ್ಯಾಂಟ್ರೊ ಕಾರಿನ ವಿನ್ಯಾಸದ ಅಂಶಗಳನ್ನು ಗುರುತಿಸಲಾಗದಿರುವ ಹಾಗೆ ಮುಸುಗಿನಿಂದ ಮುಚ್ಚಲ್ಪಟ್ಟು ಪರೀಕ್ಷಿಸಲಾಗುತ್ತಿದೆ. ಸೌಕಾರ್ಯವಾದ ಪ್ಯಾಸೆಂಜರ್ ಸೀಟಿಂಗ್‍‍ಗಾಗಿ ವಿನೂತನ ಬಾಡಿ ವಿನ್ಯಾಸದಲ್ಲಿ ಎಂಟ್ರಿ ಕೊಡಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಹ್ಯುಂಡೈ ಮೋಟಾರ್ಸ್ ಈ ಹ್ಯಾಚ್‍‍ಬ್ಯಾಕ್ ಕಾರನ್ನು ಎಹೆಚ್2 ಎಂಬ ಕೋಡ್ ಹೆಸರಿನಲ್ಲಿ ಪರೀಕ್ಷಿಸಲಾಗುತ್ತಿದೆ. ಕಂಪೆನಿಯ ಫ್ಯುಯಿಡ್ ಸ್ಕಲ್ಪ್ಚರ್ 2.0 ಡಿಸೈನ್ ಆಧಾರದ ಮೇಲೆ ಈ ಕಾರನ್ನು ನಿರ್ಮಿಸಲಾಗಿದೆ. ಇದರಿಂದ ಸ್ಯಾಂಟ್ರೊ ವಿನೂತನ ಹ್ಯುಂಡೈ ಗ್ರಾಂಡ್ ಐ10 ಕಾರುನ ಹಾಗೆ ಕ್ಯಾಸ್ಕೇಡಿಂಗ್ ಗ್ರಿಲ್, ಡ್ಯುಯಲ್ ಟೋನ್ ಇಂಟೀರಿಯರ್ಸ್ ಮತ್ತು ಅಗಲವಾದ ಅನಲಾಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಟಾಕೊ ಮೀಟರ್ ಎಂಬ ವೈಶಿಷ್ಟ್ಯತೆಯನ್ನು ಪಡೆದುಕೊಂಡಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಹ್ಯುಂಡೈ ಸ್ಯಾಂಟ್ರೊ ಕ್ರಾಷ್ ಟೆಸ್ಟಿಂಗ್‍‍ನಲ್ಲಿ ಅತ್ಯುತ್ತಮ ಫಲಿತವನ್ನು ಗಳಿಸಲು ವಿವಿಧ ಸೇಫ್ಟಿ ಸಿಯಮಗಳನ್ನು ಪಾಟಿಸುತ್ತಿದೆ. ಆದಾರಿಂಡ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್‍‍ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಇನ್ನು ವಿವಿಧ ಸೇಫ್ಟಿ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಸ್ಯಾಂಟ್ರೊ..

ಆದರೆ ಇಲ್ಲಿಯವರೆಗು ಸ್ಯಾಂಟ್ರೊ ಕಾರಿನಲ್ಲಿ ಯಾವ ಎಂಜಿನ್ ಅನ್ನು ಅಳವಡಿಸಲಾಗಿದೆ ಎಂಬ ಮಾಹಿತಿಯು ತಿಳಿದುಬಂದಿಲ್ಲ. ಈ ಕಾರಿನಲ್ಲಿ ಬಹುಷಃ 800ಸಿಸಿ ಅಥವಾ 1.0 ಲೀಟರ್ ಎಂಜಿನ್ ಮಾದರಿಗಳಲ್ಲಿ ಬರುವ ಅವಕಾಶಗಳು ಇರಲಿದೆ ಎಂದು ಹೇಳಲಾಗುತ್ತಿದೆ.

Most Read Articles

Kannada
Read more on hyundai santro new car
English summary
New Hyundai santro caught on test.
Story first published: Monday, July 16, 2018, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X