ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

By Praveen Sannamani

ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಗೊಳ್ಳಲಿರುವ ಹ್ಯುಂಡೈ ಇಂಡಿಯಾ ನಿರ್ಮಾಣದ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರುಗಳು ಆವೃತ್ತಿಯನ್ನು ವಿನೂತನ ಡಿಸೈನ್ ಆಧರಿಸಿ ಬಿಡುಗಡೆಗೊಳ್ಳುವ ಸುಳಿವು ನೀಡಿದ್ದು, ಇದೀಗ ಕಾರಿನ ಎಂಜಿನ್ ಆಯ್ಕೆ ಕುರಿತಾದ ಮಹತ್ವದ ಮಾಹಿತಿ ಲಭ್ಯವಾಗಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರು ಆವೃತ್ತಿಯನ್ನು ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಹ್ಯುಂಡೈ ಸಂಸ್ಥೆಯು ಎಂಜಿನ್ ಕಾರ್ಯಕ್ಷಮತೆ ಬಗೆಗೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದ್ದು, ಈ ನಡುವೆ ಹೊಸ ಕಾರಿನ ಹೊರಭಾಗದ ವಿನ್ಯಾಸಗಳು ಸೇರಿದಂತೆ ಎಂಜಿನ್ ಆಯ್ಕೆಗಳ ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿರುವುದು ಹೊಸ ಕಾರಿನ ಆಯ್ಕೆಯ ಮೌಲ್ಯವನ್ನ ಹೆಚ್ಚಿಸುವ ಸುಳಿವು ನೀಡಿವೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಶಾರ್ಪ್ ಡಿಸೈನ್ ಹೊಂದಿರುವ ಹೊಸ ಸ್ಯಾಂಟ್ರೊ ಕಾರುಗಳು ವಿನೂತನವಾದ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದ್ದು, ಹೊಸ ಕಾರಿನ ಹೆಸರನ್ನು ಮುಂದಿನ ಅಕ್ಟೋಬರ್ 4ರಂದು ಬಹಿರಂಗಗೊಳಿಸಲು ಹ್ಯುಂಡೈ ಸಂಸ್ಥೆಯು ಸಜ್ಜುಗೊಳ್ಳುತ್ತಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಇದಕ್ಕಾಗಿಯೇ ಕಾರು ಪ್ರಿಯರಿಂದ ಹೊಸ ಕಾರಿಗೆ ಅಂದದ ಹೆಸರು ನೀಡಿ ಕಾರು ಗೆಲ್ಲುವ ಅವಕಾಶ ನೀಡಿದ್ದು, "ಹ್ಯುಂಡೈ ನಾಮಕರಣ" ಎಂಬ ಅಭಿಯಾನ ಆರಂಭಿಸುವ ಮೂಲಕ ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಇನ್ನು ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ ಎಂಬ ಮಾಹಿತಿ ದೊರೆತಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಆದ್ರೆ ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಂಡ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಮೇಲೆ ಭಾರೀ ಪ್ರಮಾಣದ ಮುಸುಕು ಹಾಕಿದ್ದರ ಪರಿಣಾಮ ವಿನ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಾಧ್ಯವಾಗಿಲ್ಲ ಎನ್ನಬಹುದು.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಆದರೂ ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಎಂಜಿನ್ ಪಡೆದುಕೊಳ್ಳುವುದರ ಜೊತೆ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಜೊತೆಗೆ ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಪ್ರಯಾಣಿಕ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ (ಅಂದಾಜು)

ಸ್ಯಾಂಟ್ರೊ ಹೊಸ ಕಾರುಗಳನ್ನ ದೀಪಾವಳಿ ಹೊತ್ತಿಗೆ ಬಿಡುಗೊಳಿಸುವ ಬಗ್ಗೆ ಮಾಹಿತಿಗಳಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3.90 ಲಕ್ಷದಿಂದ 4.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಸಿಎನ್‌ಜಿ ಎಂಜಿನ್ ಆಯ್ಕೆಯನ್ನ ಪಡೆಯಲಿದೆಯೆಂತೆ ಹ್ಯುಂಡೈ ಹೊಸ ಸ್ಯಾಂಟ್ರೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಆವೃತ್ತಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಮಾರುತಿ ಸುಜುಕಿ ಸೆಲೆರಿಯೊ, ಟಾಟಾ ಟಿಯಾಗೋ ಮತ್ತು ರೆನಾಲ್ಟ್ ಕ್ವಿಡ್‌ಗೆ ತೀವ್ರ ಸ್ಪರ್ಧಿಯಾಗಲಿದೆ.

Most Read Articles

Kannada
Read more on hyundai santro
English summary
New Hyundai Santro To Get CNG Variant — More Details Revealed.
Story first published: Tuesday, August 21, 2018, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X