ಆಟೋ ಎಕ್ಸ್ ಪೋ 2018: ವಿನೂತನ ಸ್ವಿಫ್ಟ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ದೇಶದ ಅಗ್ರ ಪ್ರಯಾಣಿಕ ಕಾರು ನಿರ್ಮಾಣ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ತನ್ನ ಅತಿ ನೂತನ ಸ್ವಿಫ್ಟ್ ಕಾರನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರಿಗೆ ಬಿಗ್ ಧಮಾಕಾ ನೀಡಿದೆ.

By Praveen

ಗ್ರಾಹಕರ ನೀರಿಕ್ಷೆಯಂತೆ 2018ರ ಸ್ವಿಫ್ಟ್ ಕಾರಿನ ಬೆಲೆಗಳನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯನ್ನು ರೂ. 4.99 ಲಕ್ಷಕ್ಕೆ ಮತ್ತು ಟಾಪ್ ಕಾರು ಮಾದರಿಯನ್ನು ರೂ. 8.39 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಸುಧಾರಿತ ತಂತ್ರಜ್ಞಾನಗಳ ತಳಹದಿಯಲ್ಲಿ ನಿರ್ಮಾಣವಾಗಿರುವ 2018 ಸ್ವಿಫ್ಟ್ ಕಾರುಗಳು ಭಾರತೀಯ ಕಾರು ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಲಿದ್ದು, ಯುವ ಹಾಗೂ ಹಿರಿಯ ವಾಹನ ಪ್ರೇಮಿಗಳು ಒಂದೇ ರೀತಿಯಲ್ಲಿ ಇಷ್ಟಪಡುವ ಕಾರು ಇದಾಗಿದೆ.

Recommended Video

New Maruti Swift Launch: Price; Mileage; Specifications; Features; Changes
ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಐದನೇ ತಲೆಮಾರಿನ ಹರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಹೀಗಾಗಿಯೇ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ 6 ಮತ್ತು ಡೀಸೆಲ್ ಆವೃತ್ತಿಗಳಲ್ಲಿ ವಿವಿಧ 6 ವಿಭಿನ್ನ ಕಾರು ಶೈಲಿಗಳನ್ನು ನಿರ್ಮಾಣ ಮಾಡಲಾಗಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಸ್ವಿಫ್ಟ್ ಪೆಟ್ರೋಲ್ ಆವೃತ್ತಿಗಳು

ಕಾರು ಮಾದರಿಗಳು ಬೆಲೆ (ದಹೆಲಿ ಎಕ್ಸ್ ಶೋರಂ ಪ್ರಕಾರ)
ಎಲ್ಎಕ್ಸ್ಐ ರೂ. 4.99 ಲಕ್ಷ
ವಿಎಕ್ಸ್ಐ ರೂ. 5.87 ಲಕ್ಷ
ವಿಎಕ್ಸ್ಐ (ಎಎಂಟಿ) ರೂ. 6.34 ಲಕ್ಷ
ಝೆಡ್ಎಕ್ಸ್ಐ ರೂ. 6.49 ಲಕ್ಷ
ಝೆಡ್ಎಕ್ಸ್ಐ (ಎಎಂಟಿ) ರೂ. 6.96 lakh
ಝೆಡ್ಎಕ್ಸ್ಐ ಪ್ಲಸ್ ರೂ. 7.39 lakh

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಸ್ವಿಫ್ಟ್ ಡೀಸೆಲ್ ಆವೃತ್ತಿಗಳು

ಕಾರು ಮಾದರಿಗಳು ಬೆಲೆ (ದೆಹಲಿ ಎಕ್ಸ್ ಶೋರಂ ಪ್ರಕಾರ)
ಎಲ್‌ಡಿಐ ರೂ. 5.99 ಲಕ್ಷ
ವಿಡಿಐ ರೂ. 6.87 ಲಕ್ಷ
ವಿಡಿಐ (ಎಎಂಟಿ) ರೂ. 7.34 ಲಕ್ಷ
ಝೆಡ್‌ಡಿಐ ರೂ. 7.49 ಲಕ್ಷ
ಝೆಡ್‌ಡಿಐ (ಎಎಂಟಿ) ರೂ. 7.96 ಲಕ್ಷ
ಝೆಡ್‌ಡಿಐ ಪ್ಲಸ್ ರೂ. 8.29 ಲಕ್ಷ

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬಿಡುಗಡೆಯಾಗಿರುವ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಕಾರಿನ ಒಳ ಮತ್ತು ಹೊರ ವಿನ್ಯಾಸ

ಸ್ಪೋರ್ಟಿ ಇಂಟಿರಿಯರ್ ಲುಕ್ ಪಡೆದಿರುವ ಹೊಸ ಸ್ವಿಫ್ಟ್ ಕಾರುಗಳು ಅತ್ಯಾರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಇನ್ನು ಸ್ಮಾರ್ಟ್ ಕನೆಕ್ಟಿವಿಟಿಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಮಿರರ್ ಲೀಂಕ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸಿಸ್ಟಂ ಒದಗಿಸಲಾಗಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಸುರಕ್ಷಾ ಸಾಧನಗಳು

ಎಂಜಿನ್ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಬಟನ್ ಒದಗಿಸಲಾಗಿದ್ದು, ಆಟೋ ಹೆಡ್‌ಲ್ಯಾಂಪ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಆಪರೇಟಿಂಗ್ ರಿರ್ ವ್ಯೂವ್ ಮಿರರ್, ಎಬಿಎಸ್ ಸೇರಿದಂತೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವಿದೆ.

ಆಟೋ ಎಕ್ಸ್ ಪೋ 2018: ವಿನೂತನ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರರೂಪಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10, ಫೋರ್ಕ್ಸ್‌ವ್ಯಾಗನ್ ಪೊಲೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ತ್ರೀವ ಹೊಡೆತ ನೀಡುವ ಬಗ್ಗೆ ಸುಳಿವು ನೀಡಿದೆ.

Most Read Articles

Kannada
English summary
Auto Expo 2018: New Maruti Swift 2018 Launched At Rs 4.99 Lakh - Price, Specs, Mileage, Colours.
Story first published: Thursday, February 8, 2018, 14:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X