ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಮಿನಿ ಇಂಡಿಯಾ ತಮ್ಮ ಹೊಸ 2018ರ ಮಿನಿ ಕಂಟ್ರಿಮ್ಯಾನ್ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿಯೆ ತಯಾರಿಸುವುದಾಗಿ ಹೇಳಿಕೊಂಡಿದ್ದು, ಬಿಎಮ್‍‍‍ಡಬ್ಲ್ಯೂ ಗ್ರೂಪ್‍‍ಗೆ ಸೇರಿದ ಚಿಕ್ಕ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಮಿನಿ ಇಂಡಿಯಾ ಇದೀಗ ಮಾರುಕಟ್ಟೆಯ

ಮಿನಿ ಇಂಡಿಯಾ ತಮ್ಮ ಹೊಸ 2018ರ ಮಿನಿ ಕಂಟ್ರಿಮ್ಯಾನ್ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿಯೆ ತಯಾರಿಸುವುದಾಗಿ ಹೇಳಿಕೊಂಡಿದ್ದು, ಬಿಎಮ್‍‍‍ಡಬ್ಲ್ಯೂ ಗ್ರೂಪ್‍‍ಗೆ ಸೇರಿದ ಚಿಕ್ಕ ಐಷಾರಾಮಿ ಕಾರು ತಯಾರಿಕ ಸಂಸ್ಥೆ ಮಿನಿ ಇಂಡಿಯಾ ಇದೀಗ ಮಾರುಕಟ್ಟೆಯಲ್ಲಿ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಮಾಹಿತಿಗಳ ಪ್ರಕಾರ ಚೆನ್ನೈ‍‍ನಲ್ಲಿನ ಬಿಎಮ್‍‍ಡಬ್ಲ್ಯೂ ಪ್ರೊಡಕ್ಷನ್ ಪ್ಲಾಂಟ್‍‍ನಲ್ಲಿ ಮಿನಿ ಕಂಟ್ರಿಮ್ಯಾನ್ ಕಾರುಗಳ ಉತ್ಪಾದನೆಯನ್ನು ಶುರುಮಾಡಿವೆ ಎನ್ನಲಾಗಿದೆ. ವಿದೇಶಿ ಐಷಾರಾಮಿ ಕಾರು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ಅಧಿಕ ಮೊತ್ತದಲ್ಲಿ ಭಾರತೀಯ ರೂಪಾಯಿಗಳು ವಿದೇಶಿ ಕರೆನ್ಸಿ‍‍ಗಳಾಗಿ ಮಾರ್ಪಾಡಾಗುತ್ತಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಇಂತಹ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಹಲವಾರು ಐಷಾರಾಮಿ ಕಾರು ತಯಾರಕ ಸಂಸ್ಥೆಗಳು ಭಾರತದಲ್ಲಿಯೆ ತಮ್ಮ ಉತ್ಪನ್ನಗಳನ್ನು ತಯಾರಿಸಲು ಮುಂದಾಗಿವೆ. ಅಂತಹ ಕಂಪೆನಿಗಳಲ್ಲಿ ಆಡಿ, ಬಿಎಮ್‍‍ಡಬ್ಲ್ಯೂ ಮತ್ತು ಮರ್ಸೆಡಿಜ್ ಬೆಂಜ್ ಕೂಡ ತಮ್ಮ ಪ್ರೊಡಕ್ಷನ್ ಪ್ಲಾಂಟ್‍‍ಗಳನ್ನು ಭಾರತದಲ್ಲಿಯೆ ಕಟ್ಟಿಕೊಂಡಿವೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಮಿನಿ ಇಂಡಿಯಾ ಇತ್ತೀಚೆಗಿನ ದಿನಗಳಲ್ಲಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಅನ್ನು ಸ್ಟಾರ್ಟ್ ಮಾಡಿವೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಪೆಟೋಲ್ ವೇರಿಯಂಟ್ ಎಸ್ ಮತ್ತು ಜೆಸಿಡಬ್ಲ್ಯೂ ಮಾಡಲ್‍‍ಗಳಲ್ಲಿ ಹಾಗು ಡೀಸೆಲ್ ವೇರಯಂಟ್‍‍ಗಳು ಎಸ್‍ಡಿ ಮಾಡಲ್‍‍ನಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಹೊಸ 2018ರ ಮಿನಿ ಕಂಟ್ರಿಮ್ಯಾನ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 34.90 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ,ಬಿಎಮ್‍‍ಡಬ್ಲ್ಯೂ ಎಕ್ಸ್1 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿರುವ ಈ ಕಾರು ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದು ಬಿಡುಗಡೆಗೊಂಡಿವೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

2018ರ ಮಿನಿ ಕಂಟ್ರಿಮ್ಯಾನ್ ಹಿಂದಿನ ತಲೆಮಾರಿನ ಕಾರುಗಳ ಜೊತೆ ಹೋಲಿಸಿಕೊಂಡರೆ 200ಎ‍ಮ್ಎಮ್ ಉದ್ದ ಮತ್ತು 30ಎಮ್ಎಮ್ ಅಗಲವನ್ನು ವಿಸ್ತರಿಸಿಕೊಂಡಿದೆ. ಇದಲ್ಲದೆ ವೀಲ್ ಬೇಸ್ ಕೂಡ 75ಎಮ್ಎಮ್ ವರೆಗೂ ಹೆಚ್ಚು ಪಡೆದಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ವೇರಿಯಂಟ್ ಮಿನಿ ಕಂಟ್ರಿಮ್ಯಾನ್ ಕಾರುಗಳಲ್ಲಿ 190 ಬಿಹೆಚ್‍‍ಪಿ ಮತ್ತು 280ಎನ್ಎಮ್ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿರುವ 2.0 ಲೀಟರ್, 4 ಸಿಲೆಂಡರ್ ಪೆಟ್ರೋಲ್ ಏಂಜಿನ್ ಹೊಂದಿದ್ದು, ಜೊತೆಗೆ ಡೀಸೆಲ್ ವೇರಿಯಂಟ್ ಕಂಟ್ರಿಮ್ಯಾನ್ 180 ಬಿಹೆಚ್‍‍ಪಿ ಪವರ್ ಮತ್ತು 400ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲ 2.0 ಲೀಟರ್, 4 ಸಿಲೆಂಡರ್ ಎಂಜಿನ್ ಅನ್ನು ಪಡೆದುಕೊಂಡಿದ್ದು, ಎರಡು ಎಂಜಿನ್‍‍ಗಳಲ್ಲು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

2018ರ ಮಿನಿ ಕಂಟ್ರಿಮ್ಯಾನ್ ಹೊರಭಾಗದಲ್ಲಿ ಎಲ್‍ಇಡಿ ಹೆಡ್‍‍ಲ್ಯಾಂಪ್ಸ್, ಡೇ ಲೈಟ್ ರನ್ನಿಂಗ್ ಎಲ್‍ಇಡಿ ಲೈಟ್ಸ್, ಫಾಗ್ ಲ್ಯಾಂಪ್ಸ್, ಮರು ವಿನ್ಯಾಸಗೊಳಿಸಲಾದ ಬಂಪರ್‍‍ಘಳು, ಸಿಗ್ನೇಚರ್ ಕ್ರೋಮ್ ಫ್ರಂಟ್ ಗ್ರಿಲ್, ಎಲ್ಇಡಿ ಟೈಲ್‍‍ಲೈಟ್ ಮತ್ತು ಡ್ಯುಯಲ್ ಟೋನ್ ಎಕ್ಸಾಸ್ಟ್ ಪೈಪ್‍‍ಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಇನ್ನು ಕಾರಿನ ಒಳಭಾಗದಲ್ಲಿ 8.8 ಇಂಚಿನ ಸ್ಟೆಪ್-ಆಫ್-ದಿ-ಆರ್ಟ್ ಐಡ್ರೈವ್ ಇನ್ಫೋಟೈನ್ಮೆಂಟ್ ಸಿಸ್ಟಂ, ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಮುಂಭಾಗದಲ್ಲಿ ಸ್ಪೋರ್ಟ್ಸ್ ಸೀಟ್ಸ್ ಮತ್ತು ಡ್ಯುಯಲ್ ಜೋನ್ ಆಟೋಮ್ಯಾತಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಎಂಬ ಫೀ‍‍ಚರ್‍‍ಗಳನ್ನು ಪಡೆದುಕೊಂಡಿರಲಿದೆ.

ಭಾರತದಲ್ಲಿ ಮಿನಿ ಕಂಟ್ರಿಮ್ಯಾನ್ ಪ್ರೊಡಕ್ಷನ್ ಪ್ರಾರಂಭ..

ಹೊಸದಾಗಿ ಬಿಡುಗಡೆಗೊಂಡ ಮಿನಿ ಕಂಟ್ರಿಮ್ಯಾನ್ ಕಾರುಗಳು ಪ್ರಸ್ಥುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರ್ಸಿಡಿಸ್ ಬೆಂಜ್ ಜಿಎಲ್ಎಕ್ಸ್, ಬಿಎಮ್‍‍ಡಬ್ಲ್ಯೂ ಎಕ್ಸ್1 ಮತ್ತು ಆಡಿ ಕ್ಯೂ3 ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
New 2018 Mini Countryman Local Production Begins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X