ಬಿಡುಗಡೆಗೊಂಡ ಹೊಸ ಮಿನಿ ಕಂಟ್ರಿಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

Written By: Rahul TS

ಬ್ರಿಟಿಶ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿನಿ ತಮ್ಮ ಎರಡನೆ ತಲೆಮಾರಿನ ಕಂಟ್ರಿಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರ್ ಅನ್ನು ಬಿಡುಗಡೆಗೊಳಿಸಿದ್ದು, ಮರ್ಸಿಡಿಸ್ ಬೆಂಝ್ ಗಿಎಲ್ಎ, ಆಡಿ ಕ್ಯೂ3, ಬಿಎಂಡಬ್ಲ್ಯೂ ಎಕ್ಸ್1 ಮತ್ತು ವೋಲ್ವೊ ಎಕ್ಸ್ ಸಿ40 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಇನ್ನು ಬಿಡುಗಡೆಗೊಂಡ ಹೊಸ ಮಿನಿ ಕಂಟ್ರಿಮ್ಯಾನ್ ಕಾರು ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಷಿಸಲಗೊಳಿಸಲಾಗಿದ್ದು, ಇದೀಗ ಬಿಡುಗಡೆಗೊಂಡು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 34.9 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಹೊಸ ಮಿನಿ ಕಂಟ್ರಿಮ್ಯಾನ್ ಕಾರುಗಳು ಕೂಪರ್ ಎಸ್, ಕೂಪರ್ ಎಸ್ ಜೆಸಿಡಬ್ಲ್ಯೂ ಮತ್ತು ಕೂಪರ್ ಎಸ್‍ಡಿ ಎಂಬ ಮೂರು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..
Variants Price
Cooper S (Petrol) Rs 34.9 Lakh
Cooper SD (Diesel) Rs 37.4 Lakh
Cooper S JCW Inspired (Petrol) Rs 41.4 Lakh
ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಮಿನಿ ಸಂಸ್ಥೆಯು ಈಗಾಗಲೆ ಕಂಟ್ರಿಮ್ಯಾನ್ ಕಾರುಗಳನ್ನು ಚೆನ್ನೈ‍‍ನ ಪ್ಲಾಂಟ್‍‍ನಲ್ಲಿ ತಯಾರಿಸಲಾಗುತಿದ್ದು, ದೇಶದಲ್ಲಿನ ಮಿನಿ ಸಂಸ್ಥೆಯ ಡೀಲರ್‍‍ಗಳ ಹತ್ತಿರ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಗೊಳಿಸಿದೆ. ಬುಕ್ಕಿಂಗ್ ಮಾಡಿದ ಕಾರುಗಳನ್ನು ಸಂಸ್ಥೆಯು ಜೂನ್ ತಿಂಗಳಿನಲ್ಲಿ ಡೆಲಿವರಿ ಮಾಡಲಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಬಿಡುಗಡೆಗೊಂಡ ಎರಡನೆ ತಲೆಮಾರಿನ ಮಿನಿ ಕಂಟ್ರಿಮ್ಯಾನ್ ಕಾರು ತನ್ನ ಹಳೆಯ ತಲೆಮಾರಿನ ಕಾರುಗಳಿಗಿಂತ 200ಎಂಎಂ ಉದ್ದ, 30ಎಂಎಂ ಅಗಲವನ್ನು ಪಡಿದಿದ್ದು, ಹೊಸ ವಿನ್ಯಾಸ ಹಾಗು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಹೊಸ ಮಿನಿ ಕಂಟ್ರಿಮ್ಯಾನ್ ಕಾರುಗಳು 2669ಎಂಎಂ ವೀಲ್‍‍ಬೇಸ್ ಅನ್ನು ಪಡೆದುಕೊಂಡಿದ್ದು, 75ಎಂಎಂ ಬೂಟ್ ಸ್ಪೇಸ್ ಮತ್ತು ಹಳೆಯ ಮಾದರಿಗಿಂತ ವಿಶಾಲವಾದ ಸ್ಥಳವನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಇದಲ್ಲದೆ ಭಾರತಕ್ಕೆ ಬರಲಿರುವ ಮಿನಿ ಕಂಟ್ರಿಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳು ಪ್ಯಾನೊರಾಮಿಕ್ ಸನ್‍‍ರೂಫ್, ಎಲ್ಇಡಿ ಹೆಡ್‍ಲೈಟ್, ಎಲ್ಇಡಿ ಟೈಲ್‍‍ಲೈಟ್, ಆಟೋಮ್ಯಾಟಿಕ್ ಟೈಲ್‍‍ಗೇಟ್, ಡ್ಯುಯಲ್ ಝೋನ್ ವಾತಾವರಣ ನಿಯಂತಕ, 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಹರ್ಮಾನ್ ಸೌಡ್ ಸಿಸ್ಟಂ‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಎಂಜಿನ್ ಸಾಮರ್ಥ್ಯ

ಮಿನಿ ಕಂಟ್ರಿಮ್ಯಾನ್ ಕಾರಿನ ಡೀಸೆಲ್ ಆವೃತ್ತಿಯ ಕಾರುಗಳು 2.0 ಲೀಟರ್, 4 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 190 ಬಿಹೆಚ್‍ಪಿ ಮತ್ತು 400ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಇನ್ನು ಮಿನಿ ಕಂಟ್ರಿಮ್ಯಾನ್ ಪೆಟ್ರೋಲ್ ಆವೃತ್ತಿಯ ಕಾರುಗಳು 2.0 ಲೀಟರ್, 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 192 ಬಿಹೆಚ್‍‍ಪಿ ಮತ್ತು 280 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಹೊಸ ಮಿನಿ ಕಂಟ್ರೀಮ್ಯಾನ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರು..

ಜೊತೆಗೆ ಡೀಸೆಲ್ ಆವೃತ್ತಿಯ ಕಾರುಗಳು ಪ್ರತೀ ಲೀಟರ್‍‍ಗೆ 14.41 ಕಿಲೋಮೀಟರ್ ಮೈಲೇಜ್ ನೀಡಲಿದ್ದು, ಡೀಸೆಲ್ ಆವೃತ್ತಿಯ ಕಾರುಗಳು ಪ್ರತೀ ಲೀಟರ್‍‍ಗೆ 19.19 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿವೆ.

Read more on mini bmw suv new launch
English summary
2018 Mini Countryman Launched In India At Rs 34.9 Lakh — Rivals The Entry-Level German SUVs.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark