TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬಿಡುಗಡೆಗೊಂಡ ಹೊಸ ಮಿಟ್ಸುಬಿಸಿ ಔಟ್‌ಲ್ಯಾಂಡರ್ ಎಸ್‍ಯುವಿ ಕಾರು..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿಟ್ಸುಬಿಸಿ ಭಾರತೀಯ ಮಾರುಕಟ್ಟೆಗಾಗಿ ತನ್ನ ವಿನೂತನ ಔಟ್‌ಲ್ಯಾಂಡರ್ ಎಸ್‍ಯುವಿ ಬಿಡುಗಡೆಗೊಳಿಸಿದ್ದು, ಮುಂಬೈನ ಎಕ್ಸ್ ಶೋರಂ ಪ್ರಕಾರ ಈ ಕಾರಿನ ಬೆಲೆಯು ರೂ. 31.95 ಲಕ್ಷಕ್ಕೆ ನಿಗಧಿಪಡಿಸಲಾಗಿದೆ.
ಮಿಟ್ಸುಬಿಸಿ ಇಂಡಿಯಾ ಸಂಸ್ಥೆಯು ವಿನೂತನ ವಿನ್ಯಾಸಗಳು ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ಔಟ್‌ಲ್ಯಾಂಡರ್ ಎಸ್‍ಯುವಿ ಕಾರನ್ನು ಸಂಪೂರ್ಣವಾಗಿ ಸಿ.ಕೆ.ಡಿ ಮಾರ್ಗದ ಮೂಲಕ ಆಮದು ಮಾಡಿಕೊಳ್ಳಲ್ಲಿದೆ.
ಏಳು ಆಸನಗಳ ವಿನ್ಯಾಸವನ್ನು ಹೊಂದಿರುವ ಈ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹೈಬ್ರೀಡ್ ಕಾರುಗಳನ್ನು ಪರಿಚಯಿಸಲಿವೆ ಎನ್ನಲಾಗಿದೆ. ಭಾರತದಲ್ಲಿ ಬಿಡುಗಡೆಗೊಂಡ 7 ಸ್ಥಾನಗಳನ್ನು ಹೊಂದಿರುವ ಹೊಸ ಹೋಂಡಾ ಸಿಆರ್ ವಿ ಮತ್ತು ಸ್ಕೋಡಾ ಕೊಡಿಯಾಕ್ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.
7 ಆಸನವುಳ್ಳ ಮಿಟ್ಸುಬಿಸಿ ಔಟ್‌ಲ್ಯಾಂಡರ್ ಎಸ್‍ಯುವಿ ಕಾರಿನ ಒಳಭಾಗದಲ್ಲಿನ ಎರಡನೆ ಮತ್ತು ಮೂರನೆಯ ಸಾಲಿನ ಸೀಟ್‍ಗಳನ್ನು ಮಡಿಚಿ ವಸ್ತುಗಳನ್ನು ಇರಿಸಿಕೊಳ್ಳಲು ವಿಶಾಲವಾದ ಜಾಗವನ್ನು ಮಾಡಿಕೊಳ್ಳಬಹುದಾಗಿದೆ.
ಎಂಜಿನ್ ಸಾಮರ್ಥ್ಯ
ಪೆಟ್ರೋಲ್ ಎಂಜಿನ್ ಆಯ್ಕೆಯಮಿಟ್ಸುಬಿಸಿ ಔಟ್‌ಲ್ಯಾಂಡರ್ ಎಸ್‌ಯುವಿ ಕಾರುಗಳು2.4 ಲೀಟರ್ ಎಂಐವಿಸಿ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಈ ಎಂಜಿನ್ 167 ಬಿಎಚ್‌ಪಿ ಅಶ್ವಶಕ್ತಿ ಮತ್ತು 222 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಮತ್ತು 6 ವರ್ಗಾವಣೆಗಳನ್ನು ಹೊಂದಿರುವ ಸಿವಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಾಗುತ್ತದೆ.
ಮಿಟ್ಸುಬಿಸಿ ಔಟ್‌ಲ್ಯಾಂಡರ್ ಎಸ್‍ಯುವಿ ಕಾರು ಬ್ಲಾಕ್ ಪರ್ಲ್, ಕಾಸ್ಮಿಕ್ ಬ್ಲ್ಯೂ, ಓರಿಯಂಟ್ ರೆಡ್, ಕೂಲ್ ಸಿಲ್ವರ್, ವೈಟ್ ಸಾಲಿಡ್, ವೈಟ್ ಪರ್ಲ್ ಮತ್ತು ಟೈಟಾನಿಯಮ್ ಗ್ರೇ ಎಂಬ ಏಳು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಜೊತೆಗೆ ಎಲ್‌ಇಡಿ ಪ್ರೇರಿತ ಹೆಡ್‌ಲ್ಯಾಂಪ್ಸ್, ಡೇ ಟೈಮ್ ರನ್ನಿಂಗ್ ಲೈಟ್, ಟೈಲ್ ಗೇಟ್ ಕ್ಲಸ್ಟರ್, ಫಾಗ್ ಲೈಟ್‌ನೊಂದಿಗೆ 16-ಇಂಚಿನ ಅಲಾಯ್ ಚಕ್ರಗಳು, 6.1-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್, 710ಡಬ್ಲ್ಯು ಸೌಂಡ್ ಸಿಸ್ಟಂ, ಪ್ರಿಮಿಯಂ ಮಾದರಿಯ ಇಂಟಿರಿಯರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅಳವಡಿಸಲಾಗಿದೆ.
ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ 7 ಏರ್‍ಬ್ಯಾಗ್‍ಗಳು, ಇಬಿಡಿಯೊಂದಿಗೆ ಎಬಿಡಿ, ಬ್ರೇಕ್ ಅಸ್ಸಿಸ್ಟ್, ಆಕ್ಟೀವ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಅಆಟೋಮ್ಯಾಟಿಕ್ ಹೆಡ್‍ಲೈಟ್ಸ್ ಮತ್ತು ವೈಪರ್ಸ್ ಹಾಗು ಎಂಜಿನ್ ಇಮ್ಮೊಬಿಲೈಜರ್ ಅನ್ನು ಅಳವಡಿಸಲಾಗಿದೆ.