ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಏರಿಕೆ.?

ಕಳೆದ ಎರಡು ದಿನಗಳ ಹಿಂದಷ್ಟೇ ಪಂಚ ರಾಜ್ಯಗಳ ವಿದಾನಸಭೆಯ ಚುನಾವಣೆ ಮುಗಿದು ಫಲಿತಾಂಶವೂ ಕೂಡಾ ಹೊರಬಿದ್ದಿದೆ. ಸ್ಪಷ್ಟ ಬಹುಮತ ಇಲ್ಲದ್ದಿದ್ದರೂ ಬಹುತೇಕ ಕಡೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ಖಚಿತವಾಗಿದ್ದು, ಹೀಗಿರುವಾಗಲೇ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಶಾಕಿಂಗ್ ಸುದ್ದಿ ನೀಡುತ್ತಿದೆ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದಿಂದ ಗೆಲ್ಲದಿದ್ದರೂ ಸಹ ಕರ್ನಾಟಕದ ಮಾದರಿಯಲ್ಲಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದು, ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಭಾರೀ ಹಿನ್ನಡೆಯಾದಂತಾಗಿದೆ. ಹೀಗಾಗಿ ಇಂಧನ ಬೆಲೆಗಳ ಏರಿಳಿಕೆಯ ವಿಚಾರವಾಗಿ ಇಷ್ಟು ದಿನ ನೆಮ್ಮದಿಯಾಗಿದ್ದ ವಾಹನ ಸವಾರರಿಗೆ ಚುನಾವಣೆ ಮುಗಿಯುತ್ತಿದ್ದಂತೆ ಇಂಧನಗಳ ಬೆಲೆ ಏರಿಕೆಯ ತಲೆಬಿಸಿ ಮತ್ತೆ ಶುರುವಾಗಿದೆ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಇಂಧನಗಳ ಬೆಲೆಯಲ್ಲಿ ಮತ್ತೆ ಏರಿಕೆ!

ಕೆಲವು ದಿನಗಳ ಹಿಂದೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಧನ ಬೆಲೆಗಳು ಗಗನಕ್ಕೆ ಏರಿದ್ದವು. ಹೀಗೆ ಆಗಿದ್ದು ಮೋದಿಯವರ ಆಡಳಿತದಲ್ಲಿ ಎಂದು ಕೆಲವರು ಹೇಳುತ್ತಿದ್ದಲ್ಲದೇ ಇದೀಗ ಅದು ಬಿಜೆಪಿಯ ಸೋಲಿಗೂ ಪ್ರಮುಖ ಕಾರಣವಾಗಿದೆ ಎನ್ನಬಹುದು.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಈ ಹಿಂದೆ ಇಂಧನ ಬೆಲೆಗಳಲ್ಲಿ 15 ದಿನಗಳಿಗೆ ಒಂದು ಬಾರಿ ಇಂಧನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿತ್ತು. ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದ ಕಾರಣ ಇವುಗಳು ಜನಸಾಮಾನ್ಯರಿಗೆ ದೊಡ್ದ ಸಮಸ್ಯೆ ಎಂದು ತಿಳಿಯದಿರಲಿಲ್ಲ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಆದ್ರೆ ದೇಶದಲ್ಲಿ ಬಿಜೆಪಿ ಸರ್ಕಾರ ತನ್ನ ಆಡಳಿತವನ್ನು ಪ್ರಾರಂಭಿಸಿತೋ ಅಂದಿನಿಂದ ಇಂಧನಗಳ ಬೆಲೆಯಲ್ಲಿ ಏರಿಳಿಕೆಯಾಗುವುದು ಶುರುವಾಯಿತು. ಯಾಕೆಂದ್ರೆ 15 ದಿನಗಳಿಗೊಮ್ಮೆ ಬದಲಾಗುತ್ತಿದ್ದ ಇಂಧನ ಬೆಲೆಗಳು ದಿನಕ್ಕೊಮ್ಮೆ ಬದಲಾಗುವ ಹಾಗೆ ಮಾಡಿದ್ದು ಇದೇ ಎನ್‌ಡಿಎ ಸರ್ಕಾರ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ದಿನಕ್ಕೊಮ್ಮೆ ಇಂಧನ ಬೆಲೆ ತೀರ್ಮಾನಿಸಲು 2017ರ ಜೂನ್ ತಿಂಗಳಿನಲ್ಲಿ ನೀಡಿದ ಆದೇಶದ ನಂತರ ಮೊದಲ ಕೆಲವು ದಿನಗಳು ಕೇವಲ ಪೈಸೆ ಲೆಕ್ಕದಲ್ಲಿ ಏರಿಕೆಯನ್ನು ಕಾಣುತ್ತಿದ್ದವು. ಆದರೆ ಈ ಹೊಸ ಆದೇಶವು ಅನುಷ್ಠಾನಗೊಂಡ ನಂತರ ಇಂಧನ ಬೆಲೆಗಳಿಂದ ಆದ ಪರಿಣಾಮ ಎಲ್ಲರಿಗೂ ತಿಳಿದೆ ಇದೆ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಪೈಸೆ ಲೆಕ್ಕದಲ್ಲಿ ಏರಿಸಲು ಪ್ರಾರಭಿಸಿದರೂ, ಜನಸಾಮಾನ್ಯರಿಗೆ ಇದು ಅಷ್ಟು ದೊಡ್ಡ ತಲೆನೋವಾಗಲಿಲ್ಲ. ತದನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಂಡು ಜನರು ಕೇಂದ್ರ ಸರ್ಕಾರವನ್ನು ದೂಷಿಸಲು ಶುರು ಮಾಡಿದರು.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಏರಿಕೆ.?

ಭಾರತ ದೇಶದಲ್ಲಿ ಹಲವಾರು ಕುಟುಂಬಗಳು ಮಧ್ಯಮ ವರ್ಗದವರೇ ಆಗಿದ್ದು, ಅವರಿಂದ ಈ ಬೆಲೆ ಏರಿಳಿಕೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುವುದಾಗಿ ಹೇಳಿಕೊಂಡಿದ್ದ ಕೇಂದ್ರ ಸರ್ಕಾರವು ಆನಂತರ ಈ ಬಗ್ಗೆ ಮಾತೇ ಆಡಲಿಲ್ಲ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಹೀಗೆ ಬಿಸಿತುಪ್ಪವಾಗಿ ಪರಿಣಮಿಸುತ್ತಾ ಹೋದ ಇಂಧನ ಬೆಲೆಗಳು ಸೆಪ್ಟೆಂಬರ್ 2018ರಲ್ಲಿ ಜನರು ಎಂದೂ ಕಾಣದ ಮಟ್ಟಿಗೆ ಇಂಧನ ಬೆಲೆಗಳು ಏರಿಕೆಯಾದವು. ಇನ್ನೇನು ಲೀಟರ್ ಪೆಟ್ರೋಲ್ 100ರ ಗಡಿದಾಟುಂತೆ ಎಂದುಕೊಂಡಿದ್ದವರಿಗೆ ಕೇಂದ್ರ ಸರ್ಕಾರ ಮತ್ತೆ ಬೆಲೆ ಇಳಿಕೆಯ ತಂತ್ರ ರೂಪಿಸಿತು.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಸಾಮಾನ್ಯವಾಗಿ ಒಂದು ಲೀಟರ್‍‍ನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಡುವೆ ಸುಮಾರು ರೂ.5 ಆದ್ರು ವ್ಯತ್ಯಾಸ ಇರುತ್ತದೆ. ಆದರೆ ವಿಪರ್ಯಾಸ ಅಂದ್ರೆ ಒಡಿಶಾ ರಾಜ್ಯದಲ್ಲಂತೂ ಪೆಟ್ರೋಲ್ ಮತ್ತು ಡೀಸೆಲ್‍ನ ಬೆಲೆಯು ಆಸುಪಾಸು ಒಂದೇ ಬೆಲೆಗೆ ಮಾರಾಟವಾಗಿದ್ದು ಸಹ ಇತಿಹಾಸವೇ ಸರಿ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಇದೇ ತರಹ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಹೊಸ ತಂತ್ರಗಾರಿಕೆ ರೂಪಿಸಿದ್ದ ಕೇಂದ್ರವು ಎಲೆಕ್ಷನ್‌ಗೂ ಮುನ್ನ ಇಂಧನ ಬೆಲೆಗಳ ಮೇಲೆ ತಟಸ್ಥ ನೀತಿ ಅನುಸರಿಸಿತ್ತು. ಆದ್ರೆ ಯಾವಾಗ ಮೈತ್ರಿ ಸರ್ಕಾರವು ಆಡಳಿತಕ್ಕೆ ಬಂತೋ ಅಂದಿನಿಂದಲೇ ಬೆಲೆ ಏರಿಕೆಯ ಆಟ ಶುರುವಾಯ್ತು.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ತದನಂತರ ಇರಾನ್ ಮತ್ತು ಇನ್ನಿತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲ ಹೆಚ್ಚಳದಿಂದ ದೇಶದಲ್ಲಿ ಇಂಧನಗಳ ಬೆಲೆಯು ಕಡಿಮೆಯಾಗಲು ಶುರುವಾಯಿತು. ಆದರೂ ಸಹ ಬೇರೆ ರಾಷ್ಟ್ರಗಳು ಬಳಸುತ್ತಿರುವ ಕಚ್ಚಾ ತೈಲದ ಬೆಲೆಗೆ ಹೋಲಿಸಿದರೆ ಇಲ್ಲಿ ಮಾರಾಟವಾಗುತ್ತಿರುವ ಕಚ್ಚಾ ತೈಲದ ಮಾರಾಟದ ಬೆಲೆ ಜಾಸ್ತಿಯೆ ಇತ್ತು.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಒಂದು ಹಂತದಲ್ಲಿ ಇಂಧನ ಬೆಲೆಗಳಿಂದ ರೊಸಿಹೊಗಿದ್ದ ವಾಹನ ಸವಾರರಿಗೆ ಪಂಚರಾಜ್ಯ ಚುನಾವಣೆಯು ಕೊಂಚ ನೆಮ್ಮದಿ ಕೊಟ್ಟಿತ್ತು. ಚುನಾವಣೆ ಹಿನ್ನೆಲೆ ಬೆಲೆ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರವು ಇದೀಗ ಹೀನಾಯ ಸೋಲು ಅನುಭವಿಸಿದ ಬಳಿಕ ಮತ್ತೆ ವಾಹನ ಸವಾರರಿಗೆ ಬೆಲೆ ಏರಿಕೆಯ ಶಾಕ್ ನೀಡಿದ್ದು, ಫಲಿತಾಂಶದ ಮರುದಿನದಿಂದಲೇ ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲಗಳ ಬೆಲೆಗಳ ಮೇಲೆ ಈ ದಿನದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ನಿರ್ಧಾರವಾದರೂ ಕೂಡಾ ಕಳೆದ ಒಂದೂವರೆ ತಿಂಗಳಿನಿಂದ ಯಾವುದೇ ಬದಲಾವಣೆ ಇಲ್ಲದ ತೈಲ ಬೆಲೆ ಏಕಾಏಕಿ ಫಲಿತಾಂಶದಲ್ಲಿ ಹಿನ್ನಡೆಯಾದ ತಕ್ಷಣವೇ ಬೆಲೆ ಬದಲಾದ್ರೆ ಇದರ ಹಿಂದೆ ಮೋದಿ ಲೆಕ್ಕಾಚಾರವನ್ನು ಅಲ್ಲಗಳೆಯುವಂತಿಲ್ಲ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ವಾಹನಗಳ ಬೆಲೆಯಲ್ಲೂ ಏರಿಕೆ

ಇಂಧನ ಬೆಲೆಗಳ ಏರಿಕೆಯ ಪರಿಣಾಮ ಕೇವಲ ವಾಹನ ಸವಾರಿಗೆ ಮಾತ್ರವಲ್ಲದೇ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಹೊಸ ವಾಹನ ಖರೀದಿ ಮಾಡುವವರ ಮೇಲೆ ಸಹ ಪರಿಣಮ ಬೀರಿದೆ. ಯಾಕೆಂದ್ರೆ 2019ರ ಜನವರಿ1 ರಿಂದಲೇ ಬಹುತೇಕ ವಾಹನ ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದ್ದಾರೆ.

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಕಳೆದ ಕೆಲ ದಿನಗಳ ಹಿಂದೆಯೇ ಬೆಲೆ ಏರಿಕೆಗೆ ಮುಂದಾಗಿದ್ದ ವಾಹನ ಉತ್ಪಾದನಾ ಸಂಸ್ಥೆಗಳ ಕ್ರಮಕ್ಕೆ ಕೇಂದ್ರ ಸರ್ಕಾರವು ತಡೆ ಹಿಡಿದಿತ್ತು. ಇದಕ್ಕೆ ಕಾರಣ ಇದೇ ಪಂಚ ರಾಜ್ಯಗಳ ಚುನಾವಣೆ. ಬೆಲೆ ಏರಿಕೆ ಮಾಡದಂತೆ ತಡೆಹಿಡಿದ್ದ ಕೇಂದ್ರವು ಇದೀಗ ವಾಹನ ಸಂಸ್ಥೆಗಳಿಗೆ ಬೆಲೆ ಏರಿಕೆಯ ಅನುಮೊದನೆ ನೀಡಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಚುನಾವಣೆ ಮುಗಿತು- ಇಂಧನ ಬೆಲೆಗಳಲ್ಲಿ ಮತ್ತೆ ಮೋದಿ ಲೆಕ್ಕಾಚಾರ ಶುರುವಾಯ್ತು..!

ಒಟ್ಟಿನಲ್ಲಿ ಚುನಾವಣೆ ಸಂದರ್ಭಗಳಿಗೆ ಅನುಗುಣವಾಗಿ ಇಂಧನ ಬೆಲೆಗಳ ಏರಿಕೆರಿಕೆಯನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರು ತಿರುಗಿಬಿದ್ದಿದ್ದು, ಇದು ಚುನಾವಣೆಗಳ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತೆ. ಒಂದು ವೇಳೆ ಇದು ಹೀಗೆ ಮುಂದುವರಿದಲ್ಲಿ ಮುಂದಿನ ಲೋಕಸಭಾ ಚುನಾವಣೆಯು ಸಹ ಮೋದಿ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟುಮಾಡುವುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
Petrol, Diesel And Vehicle Price Hike: Reasons For BJP's Defeat In 5 State Assembly Election. Read In Kannada

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more