ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಂದು ಕೂಡಾ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ದೇಶದ ಪ್ರಮುಖ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆಯು ರೂ.91ಕ್ಕೆ ತಲುಪಿದೆ. ಇದೇ ರೀತಿಯಾಗಿ ಏರಿಕೆಯಾಗಿದ್ದಲ್ಲಿ ತಿಂಗಳಾಂತ್ಯಕ್ಕೆ ಇಂಧನ ಬೆಲೆಯು ನೂರರ ಗಡಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದಿನಂಪ್ರತಿ ಪ್ರತಿ ಲೀಟರ್‌ಗೆ ಕನಿಷ್ಠ 25 ರಿಂದ 35 ಪೈಸೆ ಹೆಚ್ಚಳ ಮಾಡುತ್ತಲೇ ಇದ್ದು, ಇದು ವಾಹನ ಸವಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇಂದು ಕೂಡಾ ಪೆಟ್ರೋಲ್ ಬೆಲೆಯಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಕರ್ನಾಟಕವನ್ನು ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆಯಲ್ಲಿ ಏರಿಕೆಯ ಹಾದಿಯಲ್ಲಿದ್ದು, ಸಿಎಂ ಕುಮಾರಸ್ವಾಮಿಯವರು ತೆಗೆದುಕೊಂಡ ಮಹತ್ವದ ನಿರ್ಧಾರದಿಂದಾಗಿ ರಾಜ್ಯದಲ್ಲಿನ ಇಂಧನ ಬೆಲೆಗಳು ಇಳಿಮುಖವಾಗಿರುವುದು ವಾಹನ ಸವಾರರಿಗೆ ಖುಷಿಯ ವಿಚಾರ ಎನ್ನಬಹುದು.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್‌ ದರದಲ್ಲಿ ಪ್ರತಿ ಲೀಟರ್‌ಗೆ ರೂ. 1.92 ಪೈಸೆ ಇಳಿಕೆಯಾಗಿದ್ದಲ್ಲಿ ಡೀಸೆಲ್‌ ಬೆಲೆಯು ಲೀಟರ್‌ಗೆ ರೂ.1.92 ಪೈಸೆ ಇಳಿಕೆಯಾಗಿದ್ದು, ಕ್ರಮವಾಗಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 82.82 ಪೈಸೆ ಹಾಗೂ ಡೀಸೆಲ್ ಬೆಲೆ ರೂ.74.20 ಪೈಸೆ ಬೆಲೆ ನಿಗದಿ ಮಾಡಲಾಗಿದೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಸತತ 2 ತಿಂಗಳಿನಿಂದ ಏರಿಕೆಯಾಗುತ್ತಿರುವ ಇಂಧನ ಬೆಲೆಗಳಲ್ಲಿ ಇಂದು ಇಳಿಕೆಯಾದ ಬೆಲೆಯೇ ಗರಿಷ್ಠ ಇಳಿಕೆಯಾಗಿದ್ದು, ಕರ್ನಾಟಕವನ್ನು ಹೊರತುಪಡಿಸಿ ದೇಶದ ಪ್ರಮುಖ 12 ನಗರಗಳಲ್ಲಿ ಪೆಟ್ರೋಲ್ ಬೆಲೆ ಇಂದು ರೂ. 91ಕ್ಕೆ ದಾಟಿರುವುದು ವಾಹನ ಸವಾರರು ಕಂಗಾಲಾಗಿದ್ದಾರೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಅದೇ ರೀತಿಯಾಗಿ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ರೂ.82.16 ಪೈಸೆ ಹಾಗೂ ಡೀಸೆಲ್‌ ದರ ರೂ. 73.87 ಪೈಸೆಗಳಿಗೆ ಪರಿಷ್ಕೃತವಾಗಿದ್ದು, ಇದರೊಂದಿಗೆ ಡೀಸೆಲ್‌ ದರ ದಾಖಲೆಯ ಗರಿಷ್ಠ ಮಟ್ಟ ಹಾಗೂ ಪೆಟ್ರೋಲ್‌ 56 ತಿಂಗಳಿನಲ್ಲಿಯೇ ಗರಿಷ್ಠ ದರ ದಾಖಲಿಸಿದೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಇಂದಿನ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ರೂ.89.54 ಪೈಸೆ ಮತ್ತು ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ ರೂ. 78.42 ಪೈಸೆ ನಿಗದಿಗೊಳಿಸಲಾಗಿದ್ದು, ನಿನ್ನೆಯ ಬೆಲೆಗಳಿಗಳಿಗೆ ಹೋಲಿಕೆ ಮಾಡಿದಲ್ಲಿ ಪೆಟ್ರೋಲ್ ಬೆಲೆಯು 10 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 09 ಪೈಸೆ ಹೆಚ್ಚಳವಾಗಿದೆ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಬೆಲೆ

ದೇಶದಲ್ಲೇ ಅತಿಹೆಚ್ಚು ಪೆಟ್ರೋಲ್ ಬೆಲೆ ಹೊಂದಿರುವ ಮಹಾರಾಷ್ಟ್ರದ ಔರಂಗಬಾದ್‌ದಲ್ಲಿ ಇಂದಿನ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ ರೂ.90.59 ಪೈಸೆ ಬೆಲೆ ಹೊಂದಿದ್ದು, ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ರೂ. 79.48 ಪೈಸೆ ಬೆಲೆ ಹೊಂದಿದೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಹಾಗೆಯೇ ನಾಂದೇಡ್ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 90.93 ಪೈಸೆ ಮತ್ತು ಡೀಸೆಲ್ ಬೆಲೆಯು ರೂ.78.59 ಪೈಸೆಗೆ ಬೆಲೆ ನಿಗದಿ ಮಾಡಲಾಗಿದ್ದು, ಇದು ನಿನ್ನೆಯ ಇಂಧನ ಬೆಲೆಗಳಿಗೆ ಹೋಲಿಕೆ ಮಾಡಿದಾಗ ಪೆಟ್ರೋಲ್‌ ಬೆಲೆಯಲ್ಲಿ ರೂ.1.26 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ ರೂ. 1.19 ಪೈಸೆ ಇಳಿಕೆ ಮಾಡಲಾಗಿದೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಇನ್ನುಳಿದಂತೆ ರತ್ನಗಿರಿ ಮತ್ತು ಪರಬಾನಿ ನಗರಗಳಲ್ಲಿ ಪೆಟ್ರೋಲ್ ಬೆಲೆಯು ರೂ.90 ಕ್ಕಿಂತೂ ಹೆಚ್ಚಿನ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿರುವುದೇ ಬೆಲೆ ಏರಿಕೆಯ ಮೂಲ ಕಾರಣವಾಗಿದೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಕಚ್ಚಾ ತೈಲಗಳಿಗೆ ಸರ್ಕಾರವು ಮರುಪಾವತಿ ಮಾಡುವಾಗ ಯುಎಸ್ಎ ಡಾಲರ್ ಎದುರು ರೂಪಾಯಿ ಮೌಲ್ಯ 72.51ಕ್ಕೆ ಕುಸಿತ ಕಂಡಿದ್ದು, ರೂಪಾಯಿ ಮೌಲ್ಯ ಚೇತರಿಕೆ ಕಾಣದ ಹೊರತು ಇಂಧನ ಬೆಲೆಗಳು ಏರಿಕೆಯಾಗುತ್ತಲೇ ಇರುತ್ತವೆ ಎನ್ನಬಹುದು.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಈ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಕುರಿತಂತೆ ಹಲವು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದು, ಯೋಗ ಗುರು ಬಾಬಾ ರಾಮ್ ದೇವ್‌ರ ಪತಂಜಲಿ ಸಂಸ್ಥೆಯ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ ಅನ್ನು ರೂ. 35ರಿಂದ ರೂ.40ಕ್ಕೆ ಮಾರಾಟ ಮಾಡಲು ಸಿದ್ಧವಿರುವುದಾಗಿ ಹೇಳಿಕೆ ನೀಡಿರುವುದು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇಂಧನಗಳ ಬೆಲೆಯಿಂದಾಗಿ ಜನಸಾಮಾನ್ಯರು ಕಷ್ಟ ಪಡುತ್ತಿರುವಾಗ ಬಾಬಾ ರಾಮ್ ದೇವ್ ಹೇಳಿಕೆ ಸಂಚಲನ ಸೃಷ್ಠಿಸಿದ್ದು, ಅಗ್ಗದ ಬೆಲೆಗೆ ಪೆಟ್ರೋಲ್ ನೀಡಲು ತಾವು ಸಿದ್ದವಿರುವುದಾಗಿ ಹೇಳಿಕೊಂಡಿದ್ದಾರೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಏರಿಕೆಯಾಗುತ್ತಿರುವ ಇಂಧನದ ಬೆಲೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಹೊಸ ಆಲೋಚನೆಗಳನ್ನು ಮಾಡಲು ಮುಂದಾಗಿದ್ದು, ಕೆಲವರು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ತಮ್ಮ ರಾಜ್ಯ ಸರ್ಕಾರಗಳಿಗೆ ಮನವಿಯನ್ನು ಮಾಡುತ್ತಿದ್ದಾರೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಈ ವೇಳೆ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮ್‍‍ ದೇವ್ ಅವರು ಕೇಂದ್ರ ಸರ್ಕಾರವು ನಮಗೆ ಸಹಕರಿಸುವ ಮೂಲಕ ತೆರಿಗೆಯಲ್ಲಿ ಕೆಲವು ವಿನಾಯ್ತಿಗಳನ್ನು ನೀಡಿದ್ದೆ ಆದಲ್ಲಿ ನಾನು ಒಂದು ಲೀಟರ್ ಪೆಟ್ರೋಲ್ ಅನ್ನು ಕೇವಲ ರೂ.35 ರಿಂದ 40ಕ್ಕೆ ಮಾರಾಟ ಮಾಡಲು ಸಿದ್ಧ ಎಂದು ಎನ್‍‍ಡಿಟಿವಿ ಯೂತ್ ಕಾಂಕ್ಲೇವ್ ಟುಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಬಾಬಾ ರಾಮ್‍‍ದೇವ್ ಅವರು ಈ ಸಂಚಲನಾತ್ಮಕ ಹೇಳಿಕೆಯು ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜೊತೆಗೆ ಮೋದಿಯವರು ಜನಸಾಮಾನ್ಯರಿಗೆ ಉಪಯುಕ್ತವಾದ ಎಷ್ಟೊ ಯೋಜನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದ್ರೆ ಮೂರು ತಿಂಗಳಿನಿಂದ ಏರುತ್ತಿರುವ ಇಂಧನದ ಬೆಲೆಯಿಂದಾಗಿ ಜನರು ಗೊಂದಲಕ್ಕೆ ಒಳಗಾಗುತ್ತಿದ್ದರೂ, ಇದುವರೆಗೂ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದಿರುವುದು ಆಶ್ಚರ್ಯಕರ ಎಂದಿದ್ದಾರೆ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಇಷ್ಟೆ ಅಲ್ಲದೆ, ಇಂಧನಗಳ ಮೇಲೆ ಈಗಿರುವ ತೆರಿಗೆಯನ್ನು ತೊಲಗಿಸಿ ಜಿಎಸ್‍‍‍ಟಿ ವ್ಯಾಪ್ತಿಗೆ ತರುವ ಅವಶ್ಯಕತೆ ಎಂದು ಪ್ರತಿಪಾದಿಸಿರುವ ಬಾಬಾ ರಾಮ್‌ದೇವ್ ಅವರು ಕೇಂದ್ರಕ್ಕೆ ಹೊಸದೊಂದು ಮನವಿ ಮಾಡಿದ್ದು, ಯಾವ ಮಾರ್ಗದ ಮೂಲಕ ಅವರು ಕಡಿಮೆ ಬೆಲೆಗಳಲ್ಲಿ ಅಗ್ಗದ ಬೆಲೆಗೆ ಪೆಟ್ರೋಲ್ ಮಾರಾಟ ಮಾಡುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

ಇಂಧನ ಬೆಲೆ ಏರಿಕೆಗೆ ಇಲ್ಲ ಬ್ರೇಕ್- ದೇಶದ 12 ನಗರಗಳಲ್ಲಿ ರೂ. 91ಕ್ಕೆ ದಾಟಿದ ಪೆಟ್ರೋಲ್ ಬೆಲೆ.!

ಈ ಬಗ್ಗೆ ಸಾಕಷ್ಟು ಪರ-ವಿರೋಧ ಕಮೆಂಟ್‌ಗಳು ಕೇಳಿಬರುತ್ತಿದ್ದು, ಒಂದು ವೇಳೆ ರಾಮ್‌ದೇವ್ ಅವರು ರೂ.40ಕ್ಕೆ ಪೆಟ್ರೋಲ್ ಮಾಡಿದ್ದೆ ಆದಲ್ಲಿ ಅದೊಂದು ಅದ್ಭುತ ಎಂದೇ ಹೇಳಬೇಕಾಗುತ್ತೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ

ಇಂದಿನ ಪೆಟ್ರೋಲ್ ಬೆಲೆಗಳು

ಇಂದಿನ ಡೀಸೆಲ್ ಬೆಲೆಗಳು

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಚಿಂತೆ ಯಾಕೆ? ಇಲ್ಲಿದೆ ನೋಡಿ ಒಂದು ಬಾರಿ ಫುಲ್ ಚಾರ್ಜ್ ಮಾಡಿದ್ದಲ್ಲಿ ಬರೋಬ್ಬರಿ 350ಕಿ.ಮಿ ಮೈಲೇಜ್ ನೀಡಬಲ್ಲ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಹೇಗಿದೆ ಅಂತಾ..!

Most Read Articles

Kannada
English summary
Petrol Prices Hit Record High In Maharashtra — 12 Cities Top With Rs 91 Per Litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X