ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ದೇಶಾದ್ಯಂತ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಸವಾರರು ಕಂಗೆಟ್ಟು ಹೋಗಿದ್ದಾರೆ. ಆದ್ರೆ ಭಾರತದಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿನ ಕಾರುಗಳ ಮಾರಾಟ ಪ್ರಮಾಣವನ್ನು ಗಮನಿಸಿದ್ದಲ್ಲಿ ನಿಮಗೆ ಶಾಕ್ ಆಗದೆ ಇರಲಾರದು. ಕಾರಣ, ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದಿರುವ ಗ್ರಾಹಕರ ಸಂಖ್ಯೆ ಅಧಿಕವಾಗಿರುವುದು.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹೌದು, ನಾವೆಲ್ಲಾ ಇಂದು ಪೆಟ್ರೋಲ್ ಬೆಲೆಗಳು ಗಗನಮುಖಿಯಾಗುತ್ತಿವೆ ಎಂಬ ಆತಂಕದಲ್ಲಿದ್ದರೂ ವಾಸ್ತಂಶವನ್ನು ಗಮಿಸಿದ್ದಲ್ಲಿ ಅದು ಬೇರೆಯದ್ದೆ ಮಾಹಿತಿಯನ್ನು ಹೊರಹಾಕುತ್ತಿದೆ. ಯಾವ ಕಾರಣಕ್ಕಾಗಿ ನಾವಿಂದು ಹೊಸ ವಾಹನಗಳ ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದಿಯೋ ಅದೇ ಪೆಟ್ರೋಲ್ ಎಂಜಿನ್ ಪ್ರೇರಿತ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದನ್ನು ಅಂಕಿಅಂಶಗಳ ಸಮೇತ ನೀವಿಲ್ಲಿ ಗಮನಿಸಬಹುದು.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಡೀಸೆಲ್ ಕಾರುಗಳಿಂತ ಪೆಟ್ರೋಲ್ ಎಂಜಿನ್ ಪ್ರೇರಿತ ಕಾರುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಟೂರಿಸ್ಟ್ ಮತ್ತು ವಾಣಿಜ್ಯ ಬಳಕೆಗಾಗಿ ಹೊರತು ಪಡಿಸಿ ಶೇ. 90ರಷ್ಟು ಗ್ರಾಹಕರು ಪೆಟ್ರೋಲ್ ಕಾರುಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಸದ್ಯ ದೇಶದಲ್ಲಿ ಮಾರಾಟವಾಗುತ್ತಿರುವ ನೂರು ಕಾರುಗಳಲ್ಲಿ 61ರಷ್ಟು ಕಾರುಗಳು ಪೆಟ್ರೋಲ್ ಎಂಜಿನ್ ಪಡೆದಿದ್ದರೆ 39ರಷ್ಟು ಕಾರುಗಳು ಡೀಸೆಲ್ ಎಂಜಿನ್ ಪ್ರೇರಣೆ ಹೊಂದಿರುವುದನ್ನು ಇಲ್ಲಿ ನೀಡಲಾಗಿರುವ ದತ್ತಾಂಶದಲ್ಲಿ ನೋಡಬಹುದಾಗಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ದೇಶದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಪೆಟ್ರೋಲ್ ಕಾರುಗಳ ಮೇಲೆಯೇ ಹೆಚ್ಚಿನ ಗಮನಹರಿಸುತ್ತಿದ್ದು, ಮೇಲೆ ಹೇಳಿದ ಹಾಗೆ ವಾಣಿಜ್ಯ ಬಳಕೆಯಾಗಿ ಹೊರತುಪಡಿಸಿ ಸ್ವಂತ ಬಳಕೆಗಾಗಿ ಕಾರು ಖರೀದಿಸುವ ಗ್ರಾಹಕರು ಬಹುಪಾಲು ಪೆಟ್ರೋಲ್ ಕಾರುಗಳ ಮೇಲೆ ಹೆಚ್ಚಿನ ಒಲವು ಹೊಂದಿದ್ದಾರೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಬದಲಾದ ಗ್ರಾಹಕರ ಆದ್ಯತೆ..!

ಎಲ್ಲರಿಗೂ ಇಲ್ಲಿ ಮೂಡಬಹುದು ಒಂದು ಪ್ರಶ್ನೆ ಏನೆಂದರೆ, ಡಿಸೇಲ್‌ಗಿಂತಲೂ ಪೆಟ್ರೋಲ್ ಕಾರುಗಳ ಖರ್ಚು ಹೆಚ್ಚಿದ್ದರೂ ಪೆಟ್ರೋಲ್ ಕಾರುಗಳನ್ನೇ ಯಾಕೆ ಗ್ರಾಹಕರು ಆಯ್ಕೆ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಹುತೇಕ ಕಾಡದೇ ಇರದು.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಇದಕ್ಕೆ ಕಾರಣ, ಡೀಸೆಲ್ ಕಾರುಗಳಿಂತ ಪೆಟ್ರೋಲ್ ಎಂಜಿನ್ ಪ್ರೇರಿತ ಕಾರುಗಳ ಬೆಲೆ ತುಸು ಕಡಿಮೆ ಇರುತ್ತೆ ಎಂದು ಹೇಳಬಹುದು. ಆದ್ರೆ ಪೆಟ್ರೋಲ್ ಕಾರುಗಳು ಡೀಸೆಲ್ ಕಾರುಗಳಿಂತ ಕಡಿಮೆ ಮೈಲೇಜ್ ಹೊಂದಿದ್ದರೂ ಸಹ ಪೆಟ್ರೋಲ್ ಕಾರುಗಳಿಗೆಯೇ ಹೆಚ್ಚಿನ ಗ್ರಾಹಕರು ಆದ್ಯತೆ ನೀಡುವುದು ಇಂದಿಗೂ ಅರ್ಥವಾಗದ ವಿಚಾರ.

MOST READ: ಜಾಗ್ವಾರ್ ಕಾರು ಖರೀದಿಸಿದ ರೈತನ ಅಸಲಿ ಕಥೆ ಏನು.?

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಇದರಲ್ಲಿ ಕೇವಲ ಒಂದೇ ಒಂದು ಪ್ರಮುಖ ಕಾರಣ ಎನ್ನಿಸುವ ಕಾರಿನ ಬೆಲೆಯು ಡೀಸೆಲ್ ಎಂಜಿನ್‌ಗಿಂತ ಪೆಟ್ರೋಲ್ ಕಾರುಗಳ ಆಯ್ಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಗಮನಿಸಬಹುದಾಗಿದ್ದು, ಕೆಲವು ಗ್ರಾಹಕರ ಅಭಿಪ್ರಾಯದಂತೆ ಡೀಸೆಲ್ ಕಾರುಗಳ ನಿರ್ವಹಣೆ ಪೆಟ್ರೋಲ್ ಕಾರುಗಳಿಂತ ಹೆಚ್ಚು ಎನ್ನುವುದು.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹಾಗಾದ್ರೆ ಇವುಗಳಲ್ಲಿ ಯಾವುದು ಬೆಸ್ಟ್?

ಈ ಬಗ್ಗೆ ವಿಶ್ಲೇಷಕರನ್ನು ಸಮೀಪಿಸಿದಾಗ ಬರುವ ಉತ್ತರವೇ ಬೇರೆ. ಪೆಟ್ರೋಲ್ ಕಾರುಗಳಿಂತ ಡೀಸೆಲ್ ಎಂಜಿನ್ ಕಾರುಗಳೇ ಶ್ರೇಷ್ಠ ಎಂಬ ಮಾತು ಕೇಳಿಬರುತ್ತೆ. ಅದು ಏಕೆ ಅಂತೀರಾ? ಇದರ ಹಿಂದಿರುವ ವೈಜ್ಞಾನಿಕ ಕಾರಣವಾದರೂ ಏನು ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗೆ ಕೊಟ್ಟಿರುವ ಚಿತ್ರ ಸಂಪುಟದತ್ತ ಮುಂದುವರಿಯಿರಿ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ದೀರ್ಘ ಪಯಣ

ನಿಜವಾಗ್ಲೂ ನಿಮ್ಮ ದೈನಂದಿನ ಪಯಣದಲ್ಲಿ ಅಧಿಕ ದೂರ ಪಯಣಿಸುವುದಾದ್ದಲ್ಲಿ ನಿಸ್ಸಂಶಯವಾಗಿಯೂ ಡೀಸೆಲ್ ಕಾರನ್ನು ಖರೀದಿ ಮಾಡುವುದು ಹೆಚ್ಚು ಸೂಕ್ತ. ಅಂದರೆ ದೈನಂದಿನ 70ರಿಂದ 90 ಕೀ.ಮೀ. ಅಥವಾ ಅದಕ್ಕಿಂತಲೂ ಹೆಚ್ಚು ಪಯಣಿಸುವುದರಲ್ಲಿ ನಿಮಗೆ ಡೀಸೆಲ್ ಕಾರು ಹೆಚ್ಚು ಹೊಂದಿಕೆಯಾದಿತು.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಡೀಸೆಲ್ ಕಾರುಗಳನ್ನು ಪರಿಗಣಿಸಿದಾಗ ಪೆಟ್ರೋಲ್ ಮಾದರಿಗಳು ಹೆಚ್ಚು ಶಕ್ತಿಶಾಲಿ ಎನಿಸಿದರೂ ಕಡಿಮೆ ಮೈಲೇಜ್ ನೀಡುತ್ತದೆ. ಇದರಿಂದಾಗಿ ಹೆಚ್ಚು ಚಾಲನಾ ವೆಚ್ಚ ಖರ್ಚಾಗಲಿದೆ. ಹಾಗಾಗಿ ದೈನಂದಿನ 20ರಿಂದ 25 ಕೀ.ಮೀ ಸಂಚರಿಸುವುದಾದ್ದಲ್ಲಿ ಪೆಟ್ರೋಲ್ ಕಾರು ಹೊಂದಿಕೆಯಾಗಲಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ವಾಣಿಜ್ಯ ಬಳಕೆ

ನಿಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಕಾರನ್ನು ಬಳಸುವುದಾದ್ದಲ್ಲಿ ಪೆಟ್ರೋಲ್ ಕಾರು ಓಕೆ ಎನ್ನಬಹುದು. ಆದರೆ ವಾಣಿಜ್ಯ ಅಥವಾ ವ್ಯಾಪಾರ ಅಗತ್ಯಗಳಿಗಾಗಿ ಡೀಸೆಲ್ ಮಾದರಿ ಆಯ್ಕೆ ಬೆಸ್ಟ್. ಮೇಲೆ ತಿಳಿಸಿದಂತೆಯೇ ಆರ್ಥಿಕತೆಯ ದೃಷ್ಟಿಕೋನದಲ್ಲೂ ಡೀಸೆಲ್ ಕಾರುಗಳು ನಿಮಗೆ ಹೆಚ್ಚು ಇಂಧನ ಕ್ಷಮತೆ ನೀಡುತ್ತದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಹೆಚ್ಚು ಮೈಲೇಜ್

ಈಗಾಗಲೇ ತಿಳಿಸಿರುವಂತೆಯೇ ಪೆಟ್ರೋಲ್‌ಗಿಂತ ಡೀಸೆಲ್ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತದೆ. ಸಣ್ಣ ಕಾರುಗಳಲ್ಲಿ ಇದು ಹೆಚ್ಚು ಭಾಸವಾಗದಿದ್ದರೂ ದೊಡ್ಡ ಕಾರು ಆಯ್ಕೆ ಮಾಡುವಾಗ ಖಂಡಿತವಾಗಿಯೂ ಇದು ನಿಮ್ಮ ಅನುಭವಕ್ಕೆ ಬರಲಿದೆ.

MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ತಜ್ಞರ ಪ್ರಕಾರ, 3 ಲೀಟರ್ ಪೆಟ್ರೋಲ್ ಎಂಜಿನ್ ಕಾರೊಂದು ಪ್ರತಿ ಲೀಟರ್‌ಗೆ 8ರಿಂದ 9 ಕೀ.ಮೀ. ಮೈಲೇಜ್ ನೀಡುವುದಾದರೆ ಡೀಸೆಲ್ ಕಾರುಗಳಲ್ಲಿ ಈ ಪ್ರಮಾಣ 11ರಿಂದ 12ರಷ್ಟು ಕೀ.ಮೀ.ಗಳಷ್ಟು ಆಗಿರಲಿದೆ. ಇದು ಶೇಕಡಾ 15ರಿಂದ 20ರಷ್ಟು ಹೆಚ್ಚಾಗಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಆದರೆ 800ಸಿಸಿಗಳಂತಹ ಸಣ್ಣ ಕಾರುಗಳ ವಿಚಾರಕ್ಕೆ ಬಂದಾಗ ಕಡಿಮೆ ಮಾಲಿಕತ್ವ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಹೊಂದಿರುವ ಪೆಟ್ರೋಲ್ ಕಾರುಗಳು ತನ್ನ ಪ್ರತಿಸ್ಪರ್ಧಿ ಡೀಸೆಲ್ ಕಾರುಗಳನ್ನು ಮೀರಿ ನಿಂತಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಯುರೋಪಿಯನ್ ಬ್ರಾಂಡ್

ಡೀಸೆಲ್ ಕಾರು ಆಯ್ಕೆ ವಿಚಾರದಲ್ಲಿ ಯುರೋಪಿಯನ್ ಬ್ರಾಂಡ್ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಫೋಕ್ಸ್‌ವ್ಯಾಗನ್, ಆಡಿ, ಬಿಎಂಡಬ್ಲ್ಯುಗಳಂತಹ ಯುರೋಪ್‌ನ ವಾಹನ ತಯಾರಕ ಸಂಸ್ಥೆಗಳು ಹೆಚ್ಚೆಚ್ಚು ಡೀಸೆಲ್ ಕಾರುಗಳನ್ನು ಉತ್ಪಾದಿಸುತ್ತಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಇನ್ನೊಂದೆಡೆ ಪೆಟ್ರೋಲ್ ಮೇಲೆ ಅತಿ ಹೆಚ್ಚು ಹೂಡಿಕೆ ಮಾಡುತ್ತಿರುವ ಜಪಾನ್ ಹಾಗೂ ಅಮೆರಿಕದ ವಾಹನ ತಯಾರಕ ಸಂಸ್ಥೆಗಳು ಅತ್ಯುತ್ತಮ ಪೆಟ್ರೋಲ್ ಕಾರುಗಳನ್ನು ಹೊಂದಿದೆ. ನಿಮ್ಮ ಮಾಹಿತಿಗಾಗಿ ಮಾರುತಿ ಸಂಸ್ಥೆಯು ಫಿಯೆಟ್ ಡೀಸೆಲ್ ಎಂಜಿನ್‌ಗಳನ್ನು ಬಳಕೆ ಮಾಡುತ್ತಿದೆ. ಅಷ್ಟೇ ಯಾಕೆ 2013ರ ವರೆಗೂ ಹೋಂಡಾ ಬಳಿ ಡೀಸೆಲ್ ಎಂಜಿನ್ ಇರಲಿಲ್ಲ ಎಂಬುದು ಸಹ ಗಮನಾರ್ಹವೆನಿಸುತ್ತದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ದೀರ್ಘ ಎಂಜಿನ್ ಬಾಳಿಕೆ

ನಿಮಗೆ ಎಂಜಿನ್ ಹೆಚ್ಚು ಬಾಳಿಕೆ ಬರಬೇಕೆಂದರೆ ಡೀಸೆಲ್ ಎಂಜಿನ್‌ಗಳನ್ನು ಆಯ್ಕೆ ಮಾಡಿ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಡೀಸೆಲ್ ಎಂಜಿನ್‌ಗಳು ಕಂಪ್ರೆಷನ್ ಟೈಪ್ ಇಗ್ನಿಷನ್‌ನಿಂದ ಕೆಲಸ ಮಾಡುತ್ತಿದ್ದು, ಇನ್ನೊಂದೆಡೆ ಪೆಟ್ರೋಲ್ ಎಂಜಿನ್ ಸ್ಪಾರ್ಕ್ ಇಗ್ನಿಷನ್ ವ್ಯವಸ್ಥೆ ಹೊಂದಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಇದರಿಂದಾಗಿ ಡೀಸೆಲ್ ಎಂಜಿನ್ ಬಾಳಿಕೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಸರಿಯಾಗಿ ನಿರ್ವಹಣೆ ಮಾಡಿದ ಡೀಸೆಲ್ ಎಂಜಿನ್‌ಗಳು 3ರಿಂದ ಕೆಲವೊಂದು ಬಾರಿ 5 ಲಕ್ಷ ಕೀ.ಮೀ. ವರೆಗೂ ನಿರ್ವಹಣೆ ನೀಡಲಿದೆ. ಇನ್ನೊಂದೆಡೆ ಪೆಟ್ರೋಲ್ ಕಾರು ಒಂದು ಲಕ್ಷ ಕೀ.ಮೀ. ವರೆಗೆ ಮಾತ್ರ ಹೊಂದಿರುತ್ತದೆ. ಸಹಜವಾಗಿಯೇ ಡೀಸೆಲ್ ಕಾರು ನಿರ್ವಹಣೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಮರು ಮಾರಾಟ ಮೌಲ್ಯ

ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ಕಾರುಗಳ ಮರು ಮಾರಾಟ ಮೌಲ್ಯ ಸಹ ಹೆಚ್ಚಿರುತ್ತದೆ. ಅಂದರೆ ದೇಶೀಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಡೀಸೆಲ್ ಕಾರುಗಳ ಮೌಲ್ಯ ಪೆಟ್ರೋಲ್ ಕಾರಿಗಿಂತ ಹೆಚ್ಚಾಗಿದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಉತ್ತಮ ನಿರ್ವಹಣೆ

ಹೆಚ್ಚು ಆರ್‌ಪಿಎಂ ನಿರ್ವಹಿಸಬಲ್ಲ ಪೆಟ್ರೋಲ್ ಎಂಜಿನ್‌ಗಳು ಅತ್ಯುತ್ತಮ ಕ್ಷಮತೆ ಹೊಂದಿವೆ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಸ್ಪಾರ್ಕ್ ಇಗ್ನಿಷನ್ ಹಾಗೂ ಹಗುರ ಭಾರವನ್ನು ಹೊಂದಿರುತ್ತದೆ. ಸಹಜವಾಗಿಯೇ ತಾಂತ್ರಿಕವಾಗಿ ಪೆಟ್ರೋಲ್ ಎಂಜಿನ್‌ಗಳು ಉನ್ನತ ದರ್ಜೆ ಕಾಯ್ದುಕೊಂಡಿದೆ. ಆದರೆ ಹೈ ಟೆಕ್ ಡೀಸೆಲ್ ಎಂಜಿನ್‌ಗಳ ಮುಂದೆ ಇದು ಏನು ಅಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಲ್ಲದೆ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌ಗಳು ನಿರ್ವಹಣೆಗೆ ಉತ್ತೇಜನ ನೀಡುತ್ತದೆ.

ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಅಂದ ಹಾಗೆ ನಿಮ್ಮ ಬಳಿ ಡೀಸೆಲ್ ಅಥವಾ ಪೆಟ್ರೋಲ್ ಕಾರು ಇದೆಯೇ ? ನಿಮ್ಮ ಕಾರಿನ ನಿರ್ವಹಣೆ ಹಾಗೂ ಮೈಲೇಜ್ ಇತ್ಯಾದಿ ವಿಚಾರಗಳ ಬಗ್ಗೆ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿರಿ.

Most Read Articles

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಚಿಂತೆ ಯಾಕೆ? ಇಲ್ಲಿದೆ ನೋಡಿ ಒಂದು ಬಾರಿ ಫುಲ್ ಚಾರ್ಜ್ ಮಾಡಿದ್ದಲ್ಲಿ ಬರೋಬ್ಬರಿ 350ಕಿ.ಮಿ ಮೈಲೇಜ್ ನೀಡಬಲ್ಲ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು..!

Kannada
Read more on auto news petrol diesel
English summary
Petrol Cars Sell More Than Diesel — New Petrol-Diesel Sales Comparison Data Proves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more