ರೆನಾಲ್ಟ್ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು..

ರೆನಾಲ್ಟ್ ಸಂಸ್ಥೆಯು ತಮ್ಮ ಜನಪ್ರಿಯ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ತಯಾರಿಸುವ ಯೋಜನೆಯಲ್ಲಿದ್ದು, ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯ ಕ್ವಿಡ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದ ಸಂಖ್ಯೆಯನ್ನು ಅಧಿಕಗೊಳ್ಳಲು ಸಹಕರಿಸುವುದರ

By Rahul Ts

ರೆನಾಲ್ಟ್ ಸಂಸ್ಥೆಯು ತಮ್ಮ ಜನಪ್ರಿಯ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ತಯಾರಿಸುವ ಯೋಜನೆಯಲ್ಲಿದ್ದು, ಫ್ರೆಂಚ್ ಮೂಲದ ವಾಹನ ತಯಾರಕ ಸಂಸ್ಥೆಯ ಕ್ವಿಡ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದ ಸಂಖ್ಯೆಯನ್ನು ಅಧಿಕಗೊಳ್ಳಲು ಸಹಕರಿಸುವುದರ ಜೊತೆಯಾಗಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಂಸ್ಥೆಯಲ್ಲಿನ ಸ್ಮಾಲ್ ಕಾರ್ ಸೆಗ್ಮೆಂಟ್‍‍‍ನಲ್ಲಿರುವ ವಾಹನಗಳಿಗೆ ಪೈಪೋಟಿ ನೀಡುತ್ತಿದೆ.

ರೆನಾಲ್ಟ್ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು..

ಈ ನಿಟ್ಟಿನಲ್ಲಿ ರೆನಾಲ್ಟ್ ಸಂಸ್ಥೆಯು ತಮ್ಮ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ತಯಾರಿಸಲು ಯೋಜನೆಯನ್ನು ನಡೆಸುತ್ತಿದ್ದು, ಈ ಕಾರು ಬಿಡುಗಡೆಗೊಂಡಲ್ಲಿ ಮಹೀಂದ್ರಾ ಸಂಸ್ಥೆಯ ಎ2ಒ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ.

ರೆನಾಲ್ಟ್ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು..

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಸುಮಾರು ರೂ 6 ಲಕ್ಷ ಇರಬಹುದೆಂದು ಅಂದಾಜಿಸಲಾಗುತ್ತಿದೆ. ಈಗಾಗಲೆ ಭಾರತದಲ್ಲಿ ಕ್ವಿಡ್ ಕಾರನ್ನು ತಯಾರು ಮಾಡುತ್ತಿರುವ ಇಂಜಿನಿಯರ್‍‍ಗಳು ಚೀನಾ ದೇಶಕ್ಕೆ ಎಲೆಕ್ಟ್ರಿಕ್ ಕಾರಿನ ಅಭಿವೃದ್ಧಿಗೊಳಿಸಲು ಸಹಾಯಕಾಗಿ ಭೇಟಿ ನೀಡಿದ್ದಾರೆ.

ರೆನಾಲ್ಟ್ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು..

ಪ್ರಸ್ಥುತ ರೆನಾಲ್ಟ್ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತಿ ಕಡಿಮೆ ಬೆಲೆಯ ಕಾರಾಗಿದ್ದು, 800ಸಿಸಿ ಮತ್ತು 1.0 ಲೀಟರ್ ಪವರ್ ಯೂನಿಟ್‍‍ನಲ್ಲಿ ಲಭ್ಯವಿದೆ. ಎರಡೂ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, 1.0 ಲೀಟರ್ ವೇರಿಯಂಟ್ ಕೂಡಾ ಎಎಮ್‍‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸುಜುಕಿ 2020ರಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದ್ದು, ಇದೇ ಅವಧಿಯಲ್ಲಿ ರೆನಾಲ್ಟ್ ಕೂಡಾ ಎಲೆಕ್ಟ್ರಿಕ್ ಆವೃತ್ತಿಯ ಕ್ವಿಡ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ರೆನಾಲ್ಟ್ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು..

ಸುಮಾರು ಇನ್ನು 15 ರಿಂಡ 18 ತಿಂಗಳುಗಳೊಳಗೆ ರೆನಾಲ್ಟ್ ತಮ್ಮ ಎಲೆಕ್ಟ್ರಿಕ್ ಮಾದರಿಯ ಕ್ವಿಡ್ ಕಾರನ್ನು ಬಿಡಗಡೆಗೊಳಿಸುವ ನಿರೀಕ್ಷೆಯಲ್ಲಿದ್ದು, ಈ ಕಾರಿನ ಕುರಿತಾದ ಇನ್ನು ಹೆಚ್ಚಿನ ಮಾಹಿತಿ ದೊರೆತಿಲ್ಲ.

ರೆನಾಲ್ಟ್ ಸಂಸ್ಥೆಯಿಂದ ಮಾರುಕಟ್ಟೆಗೆ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2020ರ ನಂತರ ರಸ್ತೆಗಳಲ್ಲಿ ಬಹುತೇಕ ಎಲೆಕ್ಟ್ರಿಕ್ ವಾಹನಗಳೆ ಓಡಾಡಲಿದ್ದು, ಈ ನಿಟ್ಟನಲ್ಲಿ ಎಲ್ಲಾ ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಾರ್ಯದಲಿದ್ದಾರೆ. ಈಗಾಗಲೆ ಕಲವಾರು ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ರೆನಾಲ್ಟ್ ತಮ್ಮ ಕ್ವಿಡ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗೊಳಿಸಿದ ನಂತರ ಮಾರುಕಟ್ಟೆಯಲ್ಲಿ ಯಾವ ರೀತಿ ಸ್ಪರ್ಧಿಸಲಿದೆ ಎಂದು ಕಾಯ್ದು ನೋಡಬೇಕಿದೆ.

Most Read Articles

Kannada
English summary
Renault Is Working on Introducing An Electric Version Of The Kwid In India.
Story first published: Friday, August 24, 2018, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X