ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ಸ್ಕಾನಿಯಾ ಸಂಸ್ಥೆಯು ತನ್ನ ಬಸ್ ಕವಚ ನಿರ್ಮಾಣ ಘಟಕವನ್ನೇ ಸ್ಥಗಿತಗೊಳಿಸಿದೆ.

By Praveen Sannamani

2013ರಲ್ಲಿ ಬೆಂಗಳೂರಿನ ಹೊರವಯಲದಲ್ಲಿರುವ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಟ್ರಕ್ ಘಟಕ ತೆರೆದುಕೊಂಡಿದ್ದ ಸ್ವೀಡನ್‌ನ ದೈತ್ಯ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಸ್ಕಾನಿಯಾ ಕಮರ್ಷಿಯಲ್ ವೆಹಿಕಲ್ಸ್ ವಿಭಾಗವು 2015ರಲ್ಲಿ ಬಸ್ ಕವಚ ನಿರ್ಮಾಣ ಪ್ರಕ್ರಿಯೆಗೂ ಚಾಲನೆ ನೀಡಿತ್ತು. ಆದ್ರೆ ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ತನ್ನ ಬಸ್ ಕವಚ ನಿರ್ಮಾಣ ಘಟಕವನ್ನೇ ಸ್ಥಗಿತಗೊಳಿಸಿದೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಕಳೆದ ಮೂರು ವರ್ಷಗಳ ಹಿಂದಷ್ಟೇ ಬರೋಬ್ಬರಿ 3 ಬಿಲಿಯನ್ ಅಮೆರಕನ್ ಡಾಲರ್ ಬಂಡವಾಳದೊಂದಿಗೆ ತನ್ನ ಹೊಸ ಬಸ್ ಕವಚ ನಿರ್ಮಾಣ ಘಟಕವನ್ನು ಆರಂಭಿಸಿದ್ದ ಸ್ಕಾನಿಯಾ ಸಂಸ್ಥೆಯು ಬೇಡಿಕೆ ತಗ್ಗಿದ ಕಾರಣಕ್ಕೆ ತನ್ನ ಬಸ್ ಕವಚ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿದ್ದು, ಇದನ್ನೇ ತಮ್ಮ ಜೀವನಾಧಾರ ಮಾಡಿಕೊಂಡಿದ್ದ ಬರೋಬ್ಬರಿ 1,200 ಸಿಬ್ಬಂದಿಗೆ ದಿಕ್ಕುತೋಚದಂತಾಗಿದೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಸ್ಕಾನಿಯಾ ಬಸ್ ಕವಚಗಳು ಇತರೆ ಸಂಸ್ಥೆಗಳ ಬಿಡಿಭಾಗಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಈ ಹಿನ್ನೆಲೆಯಲ್ಲಿ ಬಸ್ ಕವಚಗಳಿಗೆ ಆರಂಭದಲ್ಲಿ ಇದ್ದ ಬೇಡಿಕೆಗೆ ಇತ್ತೀಚೆಗೆ ಗಣನೀಯ ಪ್ರಮಾಣದಲ್ಲಿ ತಗ್ಗಿತ್ತು.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಅದರಲ್ಲೂ ಕಳೆದ 3 ತಿಂಗಳಿಂದ ಬೆರಳೆಣಿಕೆಯಷ್ಟು ಬಸ್ ಕವಚ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದ್ದವು. ಇದರಿಂದ ನಷ್ಟ ಅನುಭವಿಸಿದ್ದ ಸ್ಕಾನಿಯಾ ಸಂಸ್ಥೆಯು ಕೊನೆಗೂ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಬಸ್ ಕವಚ ಉತ್ಪಾದನೆಗೆ ಗುಡ್ ಬೈ ಹೇಳಿದೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಹೀಗಾಗಿ ಇದನ್ನೇ ನಂಬಿಕೊಂಡಿದ್ದ 1,200 ಸಿಬ್ಬಂದಿಗಳಲ್ಲಿ ಆತಂಕ ಶುರುವಾಗಿದ್ದು, ಈ ಬಗ್ಗೆ ಮಾತನಾಡಿರುವ ಸ್ಕಾನಿಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಆರ್ಥಿಕ ತೊಂದರೆ ಆಗದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಇನ್ನು ನರಸಾಪುರದಲ್ಲಿ ಘಟಕದಲ್ಲಿ ವಾರ್ಷಿಕವಾಗಿ 2,500 ಟ್ರಕ್ಸ್ ಹಾಗೂ 1000ದಷ್ಟು ಬಸ್ಸುಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದ್ದು, ಹೀಗಿರುವಾಗ ಬೆರಳೆಣಿಕೆಯಷ್ಟು ಬಸ್ ಕವಚ ನಿರ್ಮಾಣಕ್ಕಾಗಿ ಬೇಡಿಕೆ ಬರುತ್ತಿರುವುದು ಸ್ಕಾನಿಯಾ ಸಂಸ್ಥೆಗೆ ಆರ್ಥಿಕ ಹೊರೆ ಬೀಳುತ್ತಿದೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಕೇವಲ ದೇಶಿಯವಾಗಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ತನ್ನ ಬಸ್ ಉತ್ಪನ್ನಗಳನ್ನು ನಿರ್ಮಾಣ ಮಾಡಿ ರಫ್ತು ಮಾಡುತ್ತಿದ್ದ ಸ್ಕಾನಿಯಾ ಸಂಸ್ಥೆಯು ಏಷ್ಯಾ ಪ್ರಮುಖ ರಾಷ್ಟ್ರಗಳು, ಮಧ್ಯ ಪೂರ್ವ ಹಾಗೂ ಆಫ್ರಿಕಾ ರಾಷ್ಟ್ರಗಳಿಗೆ ಐಷಾರಾಮಿ ಬಸ್ಸುಗಳನ್ನು ವಿತರಣೆ ಮಾಡುತ್ತಿದೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಸದ್ಯದ ಮಾಹಿತಿ ಪ್ರಕಾರ, ಬಸ್ ಕವಚ ನಿರ್ಮಾಣವನ್ನು ಮಾತ್ರ ಸ್ಥಗಿತಗೊಳಿಸಲಿರುವ ಸ್ಕಾನಿಯಾ ಸಂಸ್ಥೆಯು ಟ್ರಕ್ ಉತ್ಪಾದನೆಯನ್ನು ಮುಂದುವರೆಸಲಿದ್ದು, ಇದರ ಜೊತೆಗೆ ಇದೇ ಘಟಕದಿಂದಲೇ ಜೈವಿಕ ಅನಿಲ ಉತ್ಪಾದನೆಯನ್ನು ಆರಂಭಿಸಿ ಈ ಮೂಲಕ ಸ್ಥಳೀಯವಾಗಿ ಎಥನಾಲ್ ಅನಿಲ ಬಸ್ಸುಗಳನ್ನು ಜೋಡಣೆ ಮಾಡಲಿದೆಯೆಂತೆ.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಸ್ಕಾನಿಯಾ

2007ರಲ್ಲಿ ಲಾರ್ಸೆಲ್ ಆಂಡ್ ಟರ್ಬೊ ಜೊತೆ ಪಾಲುದಾರಿಕೆ ಹಂಚಿಕೊಂಡಿದ್ದ ಸ್ಕಾನಿಯಾ ಸಂಸ್ಥೆಯು ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ದೇಶದಲ್ಲಿ ಮಾರಾಟ ವೃದ್ಧಿಸುವ ನಿಟ್ಟಿನಲ್ಲಿ 2011ರಲ್ಲಿ ಸ್ಕಾನಿಯಾ ಕರ್ಮಿಷಿಯಲ್ ವೆಹಿಕಲ್ಸ್ ಇಂಡಿಯಾಕ್ಕೆ ರೂಪು ನೀಡಲಾಗಿತ್ತು.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಅಷ್ಟೇ ಅಲ್ಲದೆ ಭಾರತಕ್ಕಾಗಿ R 500 6×4, G 460 6×4 ಮತ್ತು P 410 6×2 ಭಾರ ಎಳೆಯುವ ಟ್ರಕ್ಕುಗಳನ್ನು ಪರಿಚಿಸಿತ್ತು. ಈ ಪೈಕಿ P 410 8×4 ಗಣಿಗಾರಿಕೆ ಟಿಪ್ಪರನ್ನು 2012ರ ವರ್ಷಾಂತ್ಯದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಹೀಗೆ ವಾಹನ ಉತ್ಪಾದನೆಯಲ್ಲಿ ಹಲವು ಆಯಾಮಗಳನ್ನು ಕಂಡಿರುವ ಸ್ಕಾನಿಯಾ ಸಂಸ್ಥೆಯು ಸದ್ಯ ಬದಲಾದ ಮಾರುಕಟ್ಟೆಯ ಸನ್ನಿವೇಶಗಳಲ್ಲಿ ಬಸ್ ಕವಚ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿಬ್ಬಂದಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದು ಸವಾಲಾಗಿ ಪರಿಣಮಿಸಿದೆ.

Most Read Articles

Kannada
Read more on scania auto news
English summary
Scania shuts down bus body manufacturing unit on low demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X